ಎರಡು ಟಿಕೆಟ್​ ಖರೀದಿಗೆ 'ಗದರ್​-2' ತಂಡದಿಂದ ಭರ್ಜರಿ ಆಫರ್​: ಡಿಟೇಲ್ಸ್​ ಇಲ್ಲಿದೆ

By Suvarna NewsFirst Published Aug 29, 2023, 7:26 PM IST
Highlights

ಸನ್ನಿ ಡಿಯೋಲ್​ ಅಭಿನಯದ ಗದರ್​-2 ಚಿತ್ರಕ್ಕೆ ಭರ್ಜರಿ ಆಫರ್​ ಬಿಡಲಾಗಿದೆ. ಎರಡು ಟಿಕೆಟ್​ ಕೊಂಡವರಿಗೆ ಈ ಆಫರ್​ ಇರಲಿದೆ. ಏನಿದು ಕೊಡುಗೆ? 
 

ಸನ್ನಿ ಡಿಯೋಲ್ ಅಭಿನಯದ 'ಗದರ್ 2 ಏಕ್​ ಪ್ರೇಮ್​ ಕಥಾ' (Gadar-2) ಚಿತ್ರ ನಾಗಾಲೋಟದಿಂದ ಮುನ್ನುಗ್ಗುತ್ತಿದೆ.  ಕೆಲವೇ ದಿನಗಳಲ್ಲಿ ಈ ಸಿನಿಮಾ 450 ಕೋಟಿಗೂ ಅಧಿಕ ಮೊತ್ತ ಗಳಿಸಿದೆ. 2023ರ ರಕ್ಷಾ ಬಂಧನವನ್ನು ವಿಶಿಷ್ಟ ರೀತಿಯಿಂದ ಆಚರಿಸಲು, ಚಿತ್ರ ತಂಡ ತಯಾರಿ ನಡೆಸಿದೆ. ಇಷ್ಟೆಲ್ಲಾ ಪ್ರೀತಿಯನ್ನು ಹರಿಸುತ್ತಿರುವ ತನ್ನ ಅಭಿಮಾನಿಗಳಿಗೆ ವಿಶೇಷ ಉಡುಗೊರೆಯನ್ನು ನೀಡಲು ತಂಡ ನಿರ್ಧರಿಸಿದೆ.  ಗದರ್ 2 ಚಿತ್ರವನ್ನು ಇದಾಗಲೇ  30 ಮಿಲಿಯನ್ ಜನರು ಥಿಯೇಟರ್‌ಗಳಲ್ಲಿ ವೀಕ್ಷಿಸಿದ್ದಾರೆ. ಇದು ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಯಶಸ್ಸನ್ನು ಕಂಡಿದೆ ಮತ್ತು ಇದು ನಿಧಾನವಾಗುವ ಯಾವುದೇ ಲಕ್ಷಣಗಳಿಲ್ಲ. 

ಇದನ್ನೇ ಗಮನದಲ್ಲಿ ಇಟ್ಟುಕೊಂಡು  ಹೊಚ್ಚ ಹೊಸ ಕೊಡುಗೆಯೊಂದಿಗೆ, ಚಿತ್ರತಂಡ ಬಂದಿದೆ. ಇದು ರಕ್ಷಾಬಂಧನದ ವಿಶೇಷ. ನಾಳೆಯಿಂದ (ಆಗಸ್ಟ್​ 30) ರಕ್ಷಾ ಬಂಧನ (Raksha Bandhan) ಆಚರಿಸಲಾಗುತ್ತದೆ. ಆದರೆ ಕೆಲವೆಡೆ ಇಂದೇ ಇದನ್ನು ಆಚರಿಸುತ್ತಿದ್ದಾರೆ. ಸೋದರತ್ವದ ಸಂಕೇತವಾಗಿರುವ ಈ ರಕ್ಷಾ ಬಂಧನವನ್ನು ಆಚರಿಸಲು ಅಕ್ಕ-ತಂಗಿಯರು ಅಣಿಯಾಗುತ್ತಿದ್ದಾರೆ. ಗದರ್​-2 ಭರ್ಜರಿ ಯಶಸ್ಸಿನ ಹಿನ್ನೆಲೆಯಲ್ಲಿ ನಟ ಸನ್ನಿ ಡಿಯೋಲ್​ ಅವರಿಗೂ ಇದಾಗಲೇ ಸಹಸ್ರಾರು ಮಂದಿ ರಾಖಿ ಕಟ್ಟಲು ಕಾತರರಾಗಿದ್ದಾರೆ. ಇವೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ಚಿತ್ರತಂಡ ಹೊಸ ಕೊಡುಗೆ ನೀಡಿದೆ.

Latest Videos

ಶಿವರಾಜ್​ ಕುಮಾರ್​ ಬಾಲಿವುಡ್​ಗೆ ಎಂಟ್ರಿ? ಖ್ಯಾತ ನಿರ್ದೇಶಕ ಸುದೀಪ್ತೋ ಸೇನ್ ಬುಲಾವು!

  ಭಾರತದಾದ್ಯಂತ ಆಚರಿಸಲಾಗುವ ಸಹೋದರ ಸಹೋದರಿಯರ ನಡುವಿನ ಬಾಂಧವ್ಯದ ಹಬ್ಬವಾದ ರಾಖಿಯನ್ನು  ಹೆಚ್ಚು ವಿಶೇಷವಾಗಿಸಲು, ಗದರ್ 2 ತಯಾರಕರು ರೆಡಿಯಾಗಿದ್ದಾರೆ.  ನೀವು ಎರಡು ಟಿಕೆಟ್‌ಗಳನ್ನು ಖರೀದಿಸಿದರೆ, ಇನ್ನೆರಡು  ಟಿಕೆಟ್‌ಗಳನ್ನು ಉಚಿತವಾಗಿ ಪಡೆಯಲಿದ್ದೀರಿ.  ಈ ಕೊಡುಗೆಯು  ಇದಾಗಲೇ ಆರಂಭವಾಗಿದ್ದು, ಸೆಪ್ಟೆಂಬರ್ 3ರವರೆಗೆ ಮಾತ್ರ ಲಭ್ಯವಿರುತ್ತದೆ.  ಗದರ್ 2 ರಲ್ಲಿ, ಸನ್ನಿ ಡಿಯೋಲ್ (Sunny Deol) ಪಾತ್ರದ ತಾರಾ ಸಿಂಗ್ ತನ್ನ ಮಗ ಜೀತಾನನ್ನು ಉಳಿಸಲು ಪಾಕಿಸ್ತಾನಕ್ಕೆ ಹೋಗುತ್ತಾನೆ ಮತ್ತು  ಶತ್ರುಗಳ ವಿರುದ್ಧ ಹೋರಾಡುತ್ತಾನೆ.  ಅನಿಲ್ ಶರ್ಮಾ ನಿರ್ದೇಶನದ ಮತ್ತು ಝೀ ಸ್ಟುಡಿಯೋಸ್ ನಿರ್ಮಿಸಿದ ಈ ಚಿತ್ರದಲ್ಲಿ ಸನ್ನಿ ಡಿಯೋಲ್ ಮತ್ತು ಅಮೀಶಾ ಪಟೇಲ್ ಮಾತ್ರವಲ್ಲದೆ ಉತ್ಕರ್ಷ್ ಶರ್ಮಾ ಮತ್ತು ಸಿಮ್ರತ್ ಕೌರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಅಂದಹಾಗೆ, ಗದರ್ 2 ಆಗಸ್ಟ್ 11 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.   ಆರಂಭದಲ್ಲಿಯೇ  ಪಠಾಣ್​ ಮತ್ತು ಬಾಹುಬಲಿ ದಾಖಲೆಯನ್ನು ಈ ಚಿತ್ರ ಮುರಿದಿತ್ತು.    ಈ ಪರಿ ಓಪನಿಂಗ್​  ಯಾರೂ ಊಹಿಸಿರಲಿಲ್ಲ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.   ಗಳಿಕೆಯ ದಾಖಲೆ ಮಾಡಿರುವ ಈ ಚಿತ್ರದ ಹೆಸರಿಗೆ ಮತ್ತೊಂದು ಯಶಸ್ಸು ಸೇರ್ಪಡೆಯಾಗಿದೆ. ದೇಶದ ಸಂಸತ್ತಿನ ಹೊಸ ಕಟ್ಟಡದಲ್ಲಿ ಚಿತ್ರದ ವಿಶೇಷ ಪ್ರದರ್ಶನವನ್ನು ಮಾಡಲಾಗಿತ್ತು.  ಸಂಸತ್ ಭವನದಲ್ಲಿ 'ಗದರ್ 2' ವಿಶೇಷ ಪ್ರದರ್ಶನವು ಆಗಸ್ಟ್ 25ರಿಂದ ಮೂರು ದಿನಗಳ ಕಾಲ ನಡೆಯಿತು.  ಸಂಸದರು ಮತ್ತು ಇತರ ಸಂಸತ್ ಸಿಬ್ಬಂದಿ ವಿಶೇಷ ಪ್ರದರ್ಶನದಲ್ಲಿ ಚಲನಚಿತ್ರವನ್ನು ವೀಕ್ಷಿಸಿದರು.

ಕೆಜಿಎಫ್​-2 ದಾಖಲೆಯನ್ನೂ ಪುಡಿ ಮಾಡ್ತು ಪಾಕ್​ ಕಹಾನಿ ಗದರ್-2: ಕಲೆಕ್ಷನ್​ ಎಷ್ಟು ಗೊತ್ತಾ?

ಇನ್ನು ಈ ಚಿತ್ರ ಕೆಜಿಎಫ್-2​ ದಾಖಲೆಯನ್ನೂ ಧೂಳಿಪಟ ಮಾಡಿದೆ.  'ಕೆಜಿಎಫ್-2' (KGF 2) ಇಡೀ ಭಾರತೀಯ ಚಿತ್ರರಂಗದಲ್ಲೇ ಅತಿಹೆಚ್ಚು ಗಳಿಸಿದ ಸಿನಿಮಾಗಳಲ್ಲಿ 3ನೇ ಸ್ಥಾನ ಪಡೆದುಕೊಂಡಿತ್ತು.  1200 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದ್ದ 'ಕೆಜಿಎಫ್-2' ಭಾರತದಲ್ಲೇ ಒಂದು ಸಾವಿರ  ಕೋಟಿ ರೂಪಾಯಿ ಕಲೆಕ್ಷನ್​ ಮಾಡಿತ್ತು. ವಿದೇಶಗಳಲ್ಲಿ  214 ಕೋಟಿಗೂ ಹೆಚ್ಚು ಗಳಿಸಿತ್ತು. ಆದರೆ ಈಗ ಗದರ್​-2 ಈ ದಾಖಲೆಯನ್ನು ಮುಗಿದಿದೆ. ಈಗಾಗಲೇ ಸಿನಿಮಾ 439 ಕೋಟಿ ಕಲೆಕ್ಷನ್ ಮಾಡಿದ್ದು ಈಗ ಕೆಜಿಎಫ್ 2 ಸಿನಿಮಾ ಹಿಂದೆ ದಾಖಲೆಗಳನ್ನು ಬ್ರೇಕ್ ಮಾಡಿದೆ. ಕೆಜಿಎಫ್ 2 ರೆಕಾರ್ಟ್ ಕ್ರಾಸ್ ಮಾಡಲು ಗದರ್ 2 ಸಿನಿಮಾಗೆ 16 ದಿನಗಳಷ್ಟೇ ಸಾಕಾಗಿವೆ.

click me!