ಬಾಕ್ಸ್​ ಆಫೀಸ್​ ಧೂಳೆಬ್ಬಿಸ್ತಿದೆ 'ಗದರ್-2'​: ಶಾರುಖ್ ಖಾನ್ ಚಿತ್ರ ಪಠಾಣ್​ ದಾಖಲೆ ಉಡೀಸ್

By Suvarna News  |  First Published Aug 16, 2023, 11:27 AM IST

ಸನ್ನಿ ಡಿಯೋಲ್​ ನಟನೆಯ 'ಗದರ್-2'​ ಬಾಕ್ಸ್​ ಆಫೀಸ್​ ಧೂಳೆಬ್ಬಿಸ್ತಿದ್ದು, ಪಠಾಣ್​ ದಾಖಲೆ ಉಡೀಸ್​ ಆಗಿದೆ. ಚಿತ್ರ ಗಳಿಸಿದ್ದೆಷ್ಟು?
 


ಸನ್ನಿ ಡಿಯೋಲ್ (Sunny Deol) ಮತ್ತು ಅಮೀಶಾ ಪಟೇಲ್ ಅಭಿನಯದ 'ಗದರ್: ಏಕ್ ಪ್ರೇಮ್ ಕಥಾ' (Gadar: Ek Prem Katha) ಸೀಕ್ವೆಲ್​ ಇದೇ 11 ರಂದು ಬಿಡುಗಡೆಯಾಗಿದ್ದು, ಬಾಕ್ಸ್​ ಆಫೀಸ್​ ಚಿಂದಿ ಉಡಾಯಿಸಿದೆ. ಈ ಚಿತ್ರದ ಮೊದಲ ಭಾಗ  2001ರ ಜೂನ್ 15ರಂದು ಬಿಡುಗಡೆಯಾಗಿತ್ತು. ಆಗಲೂ ಇದೇ ರೀತಿಯ ನಾಗಾಲೋಟದಲ್ಲಿ ಓಡಿದ್ದ ಚಿತ್ರ ಈಗ ಪಾರ್ಟ್​-1 ಬಿಡುಗಡೆಯಾದ ಬರೋಬ್ಬರಿ 21 ವರ್ಷಗಳ ನಂತರ ಪಾರ್ಟ್​-2 ಬಿಡುಗಡೆಯಾದಾಗಲೂ ಭರ್ಜರಿ ಯಶಸ್ಸಿನತ್ತ ಸಾಗುತ್ತಿದೆ.  ಈ ಚಿತ್ರ ಮತ್ತೊಮ್ಮೆ ಬಿಡುಗಡೆಯಾದರೆ ಇಷ್ಟೊಂದು ಹಂಗಾಮ ಸೃಷ್ಟಿಸಬಹುದು ಎಂದು ಖುದ್ದು ನಿರ್ದೇಶಕ ಅನಿಲ್ ಶರ್ಮಾ ಯೋಚಿಸಿರಲಿಲ್ಲ.   ಜನಕ್ಕೆ ಈ ಸಿನಿಮಾ ಇಷ್ಟವಾಗಿದ್ದು ದೇಶದೆಲ್ಲೆಡೆ ಚರ್ಚೆ ಶುರುವಾಗಿದೆ.  ಗಳಿಕೆಯಲ್ಲಿ ಚಿತ್ರ ದಾಖಲೆ ನಿರ್ಮಿಸಿದೆ. ಹೌದು. 19 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ 2001ರಲ್ಲಿ ಬಿಡುಗಡೆಯಾದಾಗ ವಿಶ್ವದಾದ್ಯಂತ 133 ಕೋಟಿ ಗಳಿಸಿತ್ತು. ಇದೀಗ ಪಠಾಣ್​ ದಾಖಲೆಯನ್ನೂ ಉಡೀಸ್​ ಮಾಡಿ ಚಿತ್ರ ಮುನ್ನುಗ್ಗುತ್ತಿದೆ. ಜೊತೆಗೆ ಭರ್ಜರಿ ಯಶಸ್ಸು ಕಂಡಿದ್ದ ಬಾಹುಬಲಿಯ ದಾಖಲೆಯನ್ನೂ ಹಿಂದಿಕ್ಕಿದೆ. 
 
 ಗದರ್ 2 ಆಗಸ್ಟ್ 11 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.  ಇಲ್ಲಿಯವರೆಗೆ ಗದರ್​-2, 173 ಕೋಟಿ ರೂಪಾಯಿಗಳನ್ನು ಗಳಿಸಿದೆ. ಆದರೆ ಇದಾಗಲೇ, ಅಂದರೆ ನಿನ್ನೆಯೇ  135 ಕೋಟಿ ರೂಪಾಯಿ ಗಳಿಸುವ ಮೂಲಕ  ಪಠಾಣ್​, ಬಾಹುಬಲಿ ದಾಖಲೆಯನ್ನು ಮುರಿದಿದೆ.  ವರದಿಯ ಪ್ರಕಾರ, ಬಿಡುಗಡೆಯಾದ ಮೂರನೇ ದಿನದಲ್ಲಿ ಗದರ್ 2 ಭಾರತದಲ್ಲಿ 52 ಕೋಟಿ ರೂ.ಗಳಿಸಿದೆ. ಅನಿಲ್ ಶರ್ಮಾ ನಿರ್ದೇಶನದ ಈ ಚಿತ್ರ ಮೊದಲ ದಿನ 40.10 ಕೋಟಿ ರೂ. ಮತ್ತು ಎರಡನೇ ದಿನ 43.08 ರೂ.ಕೋಟಿ ಗಳಿಸಿದೆ. ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ಚಿತ್ರದ ಒಟ್ಟು ಕಲೆಕ್ಷನ್ ಪ್ರಸ್ತುತ 135.18 ಕೋಟಿ ರೂ.ಆಗಿದೆ. ಮೊದಲ ದಿನ  40.10 ಕೋಟಿ ರೂಪಾಯಿ ಗಳಿಸಿದಾಗಲೇ ಅಚ್ಚರಿ ಕಾದಿತ್ತು.  ಈ ಪರಿ ಓಪನಿಂಗ್​  ಯಾರೂ ಊಹಿಸಿರಲಿಲ್ಲ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.  ಆದರೆ ಎರಡನೇ ಮತ್ತು ಮೂರನೆಯ ದಿನ ನಾಗಾಲೋಟದಿಂದ ಸಾಗಿತು.  ಮೊನ್ನೆ  ಭಾನುವಾರವಂತೂ ‘ಗದರ್​ 2’ ಸಿನಿಮಾದಿಂದ ಗಲ್ಲಾಪೆಟ್ಟಿಗೆ ಶೇಕ್​ ಮಾಡಿ ಪಠಾಣ್​ ದಾಖಲೆಯನ್ನೇ ಅಳಿಸಿ ಹಾಕಿತು.

GADAR-2: ಜಾತಕದಲ್ಲಿ ಗುರು ಸ್ಥಿರ, ಮುಂದೇನು? ಸನ್ನಿ ಡಿಯೋಲ್ ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ!
 
ಇದೇ 11ರಂದೇ ಅಂದರೆ ಗದರ್​-2 ಬಿಡುಗಡೆಯ ದಿನವೇ ಬಹು ವಿವಾದ ಸೃಷ್ಟಿಸಿದ್ದ ಅಕ್ಷಯ್​ ಕುಮಾರ್​ ಅವರ ಓ ಮೈ ಗಾಡ್​-2 ಕೂಡ ಬಿಡುಗಡೆಯಾಗಿತ್ತು. ಆದ್ದರಿಂದ ಎರಡು ಚಿತ್ರಗಳಿಗೆ ಭಾರಿ ಪೈಪೋಟಿ ಇರಬಹುದು ಎಂದು ಊಹಿಸಲಾಗಿತ್ತು. ಇದರ ಹೊರತಾಗಿಯೂ ಎಲ್ಲಾ ಲೆಕ್ಕಾಚಾರ ತಲೆಕೆಳಗಾಗಿದೆ.  ಅಕ್ಷಯ್​ ಕುಮಾರ್​ ನಟನೆಯ ಆ ಚಿತ್ರಕ್ಕೆ ಜನರು ನಿರೀಕ್ಷಿತ ಮಟ್ಟದಲ್ಲಿ ಮೆಚ್ಚುಗೆ ನೀಡಿಲ್ಲ.  

Tap to resize

Latest Videos

ಈ ಮೂಲಕ ಸನ್ನಿ ಡಿಯೋಲ್ ಸಿನಿ ಭವಿಷ್ಯ ನುಡಿಸಿದ್ದ  ಖ್ಯಾತ ಜ್ಯೋತಿಷಿ ಪಂಡಿತ್ ಜಗನ್ನಾಥ್ ಗುರೂಜಿ (Pandith Jagannath Guruji) ಮಾತು ನಿಜವಾಗಿದೆ.  ಬಲವಾದ ಗ್ರಹಗಳಿಂದ ಸನ್ನಿ ಪ್ರಯೋಜನ ಪಡೆಯುತ್ತಾರೆ. ಚಿತ್ರ ಹಿಟ್ ಆಗುವ ಉತ್ತಮ ಅವಕಾಶಗಳಿವೆ ಎಂದು ಗುರೂಜಿ ಚಿತ್ರ ಬಿಡುಗಡೆಗೂ ಮುನ್ನ ಹೇಳಿದ್ದರು.  'ಸನ್ನಿ ಡಿಯೋಲ್ ಅವರ ಜಾತಕದ ಪ್ರಕಾರ, ಅವರ ಗುರುವು ಸ್ಥಿರವಾದ ಮತ್ತು ಬಲವಾದ ರೂಪದಲ್ಲಿರುವಂತೆ ತೋರುತ್ತಿದೆ. ಅದು ಗದರ್ 2 ಬಿಡುಗಡೆಯಾದ ಮೊದಲ ವಾರದಲ್ಲಿ ಅದ್ಭುತಗಳನ್ನು ಮಾಡಬಲ್ಲದು.  ಪ್ರೇಕ್ಷಕರು ಪ್ರೀತಿಸುವ ಚಿತ್ರವಾಗಲಿದೆ ಮತ್ತು ಚಲನಚಿತ್ರದಲ್ಲಿನ ಸನ್ನಿ ಡಿಯೋಲ್‌ನ ಅಭಿನಯವನ್ನು ಮೆಚ್ಚುವ ಮೂಲಕ ಇದು ಸರಾಸರಿ ಹಿಟ್ ಆಗಲಿದೆ ಎಂದಿದ್ದರು. ಇದೀಗ ನಿಜವಾಗಿದೆ. 

ಗದರ್ 2 ನಲ್ಲಿ ಸನ್ನಿ ಡಿಯೋಲ್ ಅಪ್ರತಿಮ ತಾರಾ ಸಿಂಗ್ ಆಗಿ ಪುನರಾಗಮನ ಆಗಲಿದ್ದಾರೆ.  ಅಮಿಷಾ ಪಟೇಲ್ ಸಕೀನಾ ಆಗಿದ್ದಾರೆ. 1971 ರ ಇಂಡೋ-ಪಾಕಿಸ್ತಾನ ಯುದ್ಧದ ಸಮಯದಲ್ಲಿ, ಪಾಕಿಸ್ತಾನದಲ್ಲಿ ಸಿಲುಕಿರುವ ತಮ್ಮ ಮಗನನ್ನು ತಾರಾ ಸಿಂಗ್ ವಾಪಸ್​ ಕರೆತರಲು ಪಾಕಿಸ್ತಾನಕ್ಕೆ ಹಿಂದಿರುಗುವ ಕಥಾವಸ್ತುವನ್ನು ಈ ಚಿತ್ರ ಹೊಂದಿದೆ. ತಾರಾಸಿಂಗ್​ ತನ್ನ ಮಗ ಚರಣಜೀತ್‌ನನ್ನು ಮನೆಗೆ ಕರೆತರಲು ಸಾಧ್ಯವಾಗತ್ತಾ ಎನ್ನುವುದು ಚಿತ್ರದ ಕುತೂಹಲ.

ಸಿನಿಮಾ ಸೇರಲು ಅಪ್ಪ-ಅಮ್ಮನನ್ನು ಕೋರ್ಟ್​ ಕಟಕಟೆಗೆ ಎಳೆತಂದಿದ್ದ ನಟಿ ಅಮಿಷಾ ಪಟೇಲ್​!
 

click me!