ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ ಚಿತ್ರದಲ್ಲಿ 87 ವರ್ಷದ ಧರ್ಮೇಂದ್ರ ಅವರು ಶಬನಾ ಅಜ್ಮಿಯ ಜೊತೆ ಸುದೀರ್ಘ ಲಿಪ್ಲಾಕ್ ದೃಶ್ಯ ಮಾಡಿರುವುದಕ್ಕೆ ಮಗ ಸನ್ನಿ ಡಿಯೋಲ್ ಹೇಳಿದ್ದೇನು?
ಇತ್ತೀಚೆಗೆ ತೆರೆ ಕಂಡ ಕರಣ್ ಜೋಹರ್ ಅವರ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ (Rocky aur Rani ki Prem Kahani) ಸಕತ್ ಸದ್ದು ಮಾಡುತ್ತಿದೆ. ಚಿತ್ರದಲ್ಲಿ ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ನಟಿಸಿದ್ದು, ಧರ್ಮೇಂದ್ರ, ಶಬಾನಾ ಅಜ್ಮಿ ಮತ್ತು ಜಯಾ ಬಚ್ಚನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಪ್ರಮುಖ ಜೋಡಿಗಳಾದ ರಣವೀರ್ ಮತ್ತು ಆಲಿಯಾ ನಡುವಿನ ಕೆಮೆಸ್ಟ್ರಿ ಹೊರತಾಗಿ, ಪ್ರೇಕ್ಷಕರನ್ನು ಆಶ್ಚರ್ಯದಿಂದ ಸೆಳೆದದ್ದು ಹಿರಿಯ ನಟರಾದ ಧರ್ಮೇಂದ್ರ ಮತ್ತು ಶಬಾನಾ ಅಜ್ಮಿ ನಡುವಿನ ಲಿಪ್-ಲಾಕ್ ಸರಣಿ. ಒಂದು ನಿರ್ದಿಷ್ಟ ದೃಶ್ಯದಲ್ಲಿ, ಈ ಇಬ್ಬರು ಪ್ರೇಮಿಗಳು ವರ್ಷಗಳ ಪ್ರತ್ಯೇಕತೆಯ ನಂತರ ಭೇಟಿಯಾಗುತ್ತಾರೆ. ದೃಶ್ಯದಲ್ಲಿ, ಧರ್ಮೇಂದ್ರ ಜನಪ್ರಿಯ ರೆಟ್ರೊ ಹಾಡು 'ಅಭಿ ನ ಜಾವೋ ಛೋಡ್ ಕರ್' ಹಾಡುತ್ತಿದ್ದಂತೆ ನಟಿ ಶಬನಾ ಜೊತೆ ಭಾವೋದ್ರಿಕ್ತರಾಗಿ ಚುಂಬನದಲ್ಲಿ ತೊಡಗಿಕೊಂಡಿರುವ ದೃಶ್ಯವಿದೆ. ಇದೀಗ ಸಕತ್ ಸದ್ದು ಮಾಡುತ್ತಿದೆ.
ಚಿತ್ರಗಳಲ್ಲಿ ಇವೆಲ್ಲವೂ ಮಾಮೂಲಾಗಿದ್ದರೂ, ಈ ವಯಸ್ಸಿನಲ್ಲಿ ಇಂಥದ್ದೊಂದು ದೃಶ್ಯ ಮಾಡುತ್ತಿರುವುದಕ್ಕೆ ಹಲವು ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಧರ್ಮೇಂದ್ರ ಅವರಿಗೆ ಈಗ 87 ವರ್ಷ ಹಾಗೂ ನಟಿ ಶಬನಾ ಅಜ್ಮಿ (Shabana Azmi) ಅವರಿಗೆ 72 ವರ್ಷ ವಯಸ್ಸು. ಈ ವಯಸ್ಸಿನಲ್ಲಿ ಇವರ ಕೆಮೆಸ್ಟ್ರಿಯನ್ನೂ (Chemistry) ಜನ ಮೆಚ್ಚಿಕೊಂಡಿದ್ದಾರೆ. ಈ ಚುಂಬದನ ಕುರಿತು ನಟ ಧರ್ಮೇಂದ್ರ ಮಾಹಿತಿ ಹಂಚಿಕೊಂಡಿದ್ದಾರೆ. ಶಬಾನಾ ಅಜ್ಮಿ ಮತ್ತು ನಾನು ಚುಂಬನದ ದೃಶ್ಯದಲ್ಲಿ ಪ್ರೇಕ್ಷಕರನ್ನು ಅಚ್ಚರಿಗೊಳಿಸಿದ್ದೇವೆ ಎಂದು ಹಲವರು ಹೇಳುತ್ತಿದ್ದಾರೆ. ನಮ್ಮ ಫ್ಯಾನ್ಸ್ ಈ ಕುರಿತು ಶ್ಲಾಘನೆ ವ್ಯಕ್ತಪಡಿಸಿದ್ದಾರೆ ಎಂದು ಖುದ್ದು ಧರ್ಮೇಂದ್ರ ಕೂಡ ಹೇಳಿದ್ದಾರೆ. ಇಷ್ಟೊಂದು ಪ್ರೀತಿ ಜನರಿಗೆ ಸಿಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ನಾನು ಕೊನೆಯ ಬಾರಿ ನಫೀಸಾ ಅಲಿಯೊಂದಿಗೆ ಲೈಫ್ ಇನ್ ಎ ಮೆಟ್ರೋದಲ್ಲಿ ಚುಂಬನದ ದೃಶ್ಯವನ್ನು ಮಾಡಿದ್ದೇನೆ ಮತ್ತು ಆ ಸಮಯದಲ್ಲಿ ಜನರು ಅದನ್ನು ಮೆಚ್ಚಿದ್ದರು. ಈಗ ಇದನ್ನು ಕೂಡ ಜನ ಮೆಚ್ಚಿಕೊಂಡಿರುವುದು ಅಚ್ಚರಿಯಾಗುತ್ತಿದೆ, ಎಂದು ಧರ್ಮೇಂದ್ರ ಹೇಳಿದ್ದರು. ಇದೀಗ ಲಿಪ್ಲಾಕ್ ಕುರಿತು ಧರ್ಮೇಂದ್ರ ಅವರ ಮಗ ಸನ್ನಿ ಡಿಯೋಲ್ ಅವರಿಗೂ ಕೇಳಲಾಯಿತು.
RRPK: ಶಬನಾ ಅಜ್ಮಿ- ಧರ್ಮೇಂದ್ರ ಸುದೀರ್ಘ ಚುಂಬನ: ಪತ್ನಿ ಹೇಮಾಮಾಲಿನಿ ಪ್ರತಿಕ್ರಿಯೆ ಏನು?
ಅಷ್ಟಕ್ಕೂ ಸನ್ನಿ ಡಿಯೋಲ್ ಅವರು ಧರ್ಮೇಂದ್ರ ಅವರ ಮೊದಲ ಪತ್ನಿಯಿಂದ ಹುಟ್ಟಿದ ಮಗ. 1953 ರಲ್ಲಿ ಪ್ರಕಾಶ್ ಕೌರ್ ಅವರೊಂದಿಗೆ ಧರ್ಮೇಂದ್ರ ಅವರ ಮೊದಲ ವಿವಾಹವಾಗಿತ್ತು. ಆಗ ಅವರಿನ್ನೂ ಬಾಲಿವುಡ್‌ಗೆ ಪದಾರ್ಪಣೆ ಮಾಡಿರಲಿಲ್ಲ. ಈ ಸಂಬಂಧದಿಂದ ಅವರಿಗೆ ಪುತ್ರರಾದ ಬಾಬಿ ಮತ್ತು ಸನ್ನಿ ಅವರಲ್ಲದೆ, ವಿಜೇತಾ ಮತ್ತು ಅಜೀತಾ ಎಂಬ ಪುತ್ರಿಯರಿದ್ದಾರೆ. ಅದಾದ ಬಳಿಕ ಚಿತ್ರ ಮಾಡುವ ಸಮಯದಲ್ಲಿ ಹೇಮಾ ಮಾಲಿನಿ ಅವರೊಂದಿಗೆ ಲವ್ ಆಗಿ 1980 ರಲ್ಲಿ ಮದುವೆಯಾದರು. ಅವರಿಗೆ ಈಶಾ ಮತ್ತು ಅಹಾನಾ ಎಂಬ ಹೆಣ್ಣು ಮಕ್ಕಳಿದ್ದಾರೆ. ಇದೀಗ ಅಪ್ಪ ಧರ್ಮೇಂದ್ರ ಅವರ ಲಿಪ್ಲಾಕ್ ಕುರಿತು ಸನ್ನಿ ಡಿಯೋಲ್ ಅವರಿಗೆ ಪ್ರಶ್ನೆ ಕೇಳಲಾಯಿತು. ಪತ್ರಿಕಾಗೋಷ್ಠಿಯೊಂದರಲ್ಲಿ ಈ ಪ್ರಶ್ನೆಯನ್ನು ಸನ್ನಿ ಅವರಿಗೆ ಕೇಳಲಾಯಿತು.
ಅದಕ್ಕೆ ಜೋರಾಗಿ ನಗುತ್ತಾ ಸನ್ನಿ, ತುಂಬಾ ಚೆನ್ನಾಗಿದೆ. ನನ್ನ ಅಪ್ಪ, ಅಜ್ಜ, ಮುತ್ತಜ್ಜ ಎಲ್ಲರಿಗೂ ಜೀನ್ಸ್ನಲ್ಲಿಯೇ ಇದು ಇದೆ. ಲವ್ ಸೀನ್ ತುಂಬಾ ಚೆನ್ನಾಗಿದೆ ಎಂದು ಜೋರಾಗಿ ನಕ್ಕರು. ಇದಕ್ಕೂ ಮೊದಲು ಅವರಿಗೆ ಫಿಟ್ನೆಸ್ ರಹಸ್ಯದ ಕುರಿತು ಕೇಳಲಾಯಿತು. ವಯಸ್ಸು 66 ಆದರೂ ಫಿಟ್ ಆಗಿರುವುದು ಹೇಗೆ ಎಂದು ಕೇಳಲಾಯಿತು. ಅದಕ್ಕೆ ಸನ್ನಿ ಅವರು, ಇದು ನಮ್ಮ ಜೀನ್ನಲ್ಲಿದೆ. ಎಲ್ಲರೂ ಫಿಟ್ ಆಗಿದ್ದೇವೆ ಎಂದು ಹೇಳುತ್ತಾ, ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿಯಲ್ಲಿ ಅಪ್ಪನ ಪ್ರಣಯ ದೃಶ್ಯವನ್ನು ನೋಡಲಿಲ್ಲವೆ, ಎಲ್ಲವೂ ನಮ್ಮ ಜೀನ್ಸ್ ಪ್ರಭಾವ ಎಂದು ನಕ್ಕರು.
RRPK: 72 ವರ್ಷದ ಶಬನಾ ಜೊತೆ ಲಿಪ್ಲಾಕ್ ಅನುಭವ ಹಂಚಿಕೊಂಡ ಧರ್ಮೇಂದ್ರ, ರೊಮ್ಯಾನ್ಸ್‌ಗೆಲ್ಲಿಯ ವಯಸ್ಸು?