Athiya Shetty: ಚಿತ್ರರಂಗ ತೊರೆದ ನಟಿ ಅಥಿಯಾ ಶೆಟ್ಟಿ: ಕಠಿಣ ನಿರ್ಧಾರದ ಕಾರಣ ಅಪ್ಪ ಸುನಿಲ್ ಶೆಟ್ಟಿ ರಿವೀಲ್​

Published : May 22, 2025, 12:35 PM ISTUpdated : May 22, 2025, 12:39 PM IST
Athiya Shetty: ಚಿತ್ರರಂಗ ತೊರೆದ ನಟಿ ಅಥಿಯಾ ಶೆಟ್ಟಿ: ಕಠಿಣ ನಿರ್ಧಾರದ ಕಾರಣ ಅಪ್ಪ ಸುನಿಲ್ ಶೆಟ್ಟಿ ರಿವೀಲ್​

ಸಾರಾಂಶ

ಸಿನಿಮಾರಂಗದಲ್ಲಿ ಸ್ಟಾರ್​ ಕಿಡ್​ ಆಗಿ ಅಥಿಯಾ ಶೆಟ್ಟಿ ಪ್ರವೇಶಿಸಿದರೂ, ಚಿತ್ರಗಳು ವಿಫಲವಾದವು. ನಟನೆಯ ಹೊರತಾಗಿ ತಾಯ್ತನದತ್ತ ಮುಖ ಮಾಡಿದ ಅವರು, ಚಿತ್ರರಂಗಕ್ಕೆ ವಿದಾಯ ಹೇಳಿದ್ದಾರೆ. ತಂದೆ ಸುನಿಲ್ ಶೆಟ್ಟಿ ಅವರ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದಾರೆ. ಮದುವೆ, ಮಗುವಿನ ಜನನದ ನಂತರ ಅಥಿಯಾ ವೈಯಕ್ತಿಕ ಜೀವನದಲ್ಲಿ ಸಂತೃಪ್ತರಾಗಿದ್ದಾರೆ.

ಸ್ಟಾರ್​ ಕಿಡ್​ಗಳಿಗೆ ಚಿತ್ರರಂಗದಲ್ಲಿ ಅವಕಾಶ ಸುಲಭ ಎನ್ನುವ ಮಾತು ನಿಜವಾದರೂ, ಸಿನಿಮಾಕ್ಕೆ ಎಂಟ್ರಿ ಕೊಟ್ಟ ಮೇಲೆ ಅವರ ಭವಿಷ್ಯವನ್ನು ಅವರೇ  ರೂಪಿಸಿಕೊಳ್ಳಬೇಕು, ಆಗ ಅಪ್ಪ-ಅಮ್ಮ ಎಲ್ಲಾ ಲೆಕ್ಕಕ್ಕೆ ಬರುವುದಿಲ್ಲ ಎನ್ನುವುದೂ ಅಷ್ಟೇ ನಿಜ. ಸರಿಯಾದ ನಟನೆ, ಮಾತು ಏನೂ ಬರದಿದ್ದರೂ ಕೆಲವೇ ಕೆಲವು ನಟರು ತಮ್ಮ ಜೀವನದುದ್ದಕ್ಕೂ ಅಪ್ಪ- ಅಮ್ಮನ ಹೆಸರಿನಿಂದಲೇ ಖ್ಯಾತಿ ಪಡೆಯುತ್ತಿರುವ ಉದಾಹರಣೆಗಳೂ ನಮ್ಮ ಕಣ್ಣೆದುರಿಗೇ ಇರುವುದು ನಿಜವಾದರೂ, ಎಲ್ಲರಿಗೂ ಆ ಭಾಗ್ಯ ಲಭಿಸುವುದಿಲ್ಲ. ನೋಡಲು ಸುಂದರವಾಗಿದ್ದು, ನಟನೆಯಲ್ಲಿ ಪಳಗಿದ್ದರೂ ಹಣೆಬರಹ ಸರಿಯಿಲ್ಲದಿದ್ದರೆ ಅವರಿಗೆ ಯಾವ ರಂಗವೂ ಒಲಿಯುವುದಿಲ್ಲ. ಇದೀಗ ಒಂದು ಕಾಲದಲ್ಲಿ ಬಾಲಿವುಡ್‌ನಲ್ಲಿ ಬಹಳ ಜನಪ್ರಿಯರಾಗಿದ್ದ ಸುನಿಲ್ ಶೆಟ್ಟಿ  ಅವರ ಮಗಳು ಅಥಿಯಾ ಶೆಟ್ಟಿಗೂ ಅದೇ ರೀತಿಯಾಗಿದೆ. ನೋಡಲು ಸುಂದರವಾಗಿದ್ದರೂ, ನಟನೆ ಗೊತ್ತಿದ್ದರೂ ಅಥಿಯಾ ಅವರ ಬಹುತೇಕ  ಚಲನಚಿತ್ರಗಳನ್ನು ಪ್ರೇಕ್ಷಕರು ತಿರಸ್ಕರಿಸಿದ್ದಾರೆ ಮತ್ತು  ಅವರ ನಟನೆಗೂ ಪ್ರೇಕ್ಷಕರು ಅಷ್ಟೊಂದು ಉತ್ಸಾಹ ತೋರಲಿಲ್ಲ.  

ಇದರ ನಡುವೆಯೇ, ಅಥಿಯಾ ಬಹುದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾರೆ. ಬಾಲಿವುಡ್​ ಮಾತ್ರವಲ್ಲದೇ ಚಿತ್ರರಂಗಕ್ಕೂ ಗುಡ್​ಬೈ ಹೇಳಿದ್ದಾರೆ. ಈ ಕುರಿತು ಅವರ ತಂದೆ ಸುನಿಲ್​ ಶೆಟ್ಟಿ ಸಂದರ್ಶನವೊಂದರಲ್ಲಿ ರಿವೀಲ್​ ಮಾಡಿದ್ದಾರೆ. ಅಥಿಯಾಗೆ ಇನ್ನು ಮುಂದೆ ಸಿನಿಮಾಗಳಲ್ಲಿ ಆಸಕ್ತಿ ಇಲ್ಲ. ಆಕೆ ನನ್ನ ಬಳಿ ಇದನ್ನು ಹೇಳಿದ್ದಳು. ಸಿನಿಮಾ  ಮಾಡಲು  ನಾನು  ಬಯಸುವುದಿಲ್ಲ ಎಂದು ಹೇಳಿದ್ದಳು. ಹಾಗೆಯೇ ಆಕೆ  ಬಾಲಿವುಡ್ ತೊರೆದಿದ್ದಾಳೆ.  ಈ ನಿರ್ಧಾರಕ್ಕೆ ನಾನು ಆಕೆಯನ್ನು ಅಭಿನಂದಿಸುತ್ತೇನೆ ಎಂದಿದ್ದಾರೆ.  'ಮೋತಿಚೂರ್ ಚಕ್ನಾಚೂರ್' ನಂತರ, ಅಥಿಯಾಗೆ ಬಹಳಷ್ಟು ಆಫರ್‌ಗಳು ಬಂದವು, ಆದರೆ ಆಕೆ ನನಗೆ ಚಲನಚಿತ್ರಗಳಲ್ಲಿ ಆಸಕ್ತಿ ಇಲ್ಲ ಎಂದಳು. ನಾನು ಅವಳ ಭಾವನೆಗೆ ಗೌರವಿಸಿದ್ದೇನೆ ಎಂದಿದ್ದಾರೆ.

Manisha Koirala: ಆಗ ಒಂದೇ ಬಾರಿ 12 ಮಂದಿ ಜೊತೆ ಡೇಟಿಂಗ್: ಈಗ 54ರ ಹರೆಯದಲ್ಲಿಯೂ ಗಂಡಿಗಾಗಿ ಹಂಬಲ!
 
 ಮಗಳು ಅಥಿಯಾ ಸದ್ಯ ತನ್ನ ಜೀವನದ ಅತಿ ದೊಡ್ಡ ಮತ್ತು ಪ್ರಮುಖ ಪಾತ್ರದ ಮೇಲೆ ಕೇಂದ್ರೀಕರಿಸುತ್ತಿದ್ದಾಳೆ. ಅವಳಿಗೆ ತನ್ನ ಜೀವನದ ಅತ್ಯುತ್ತಮ ಪಾತ್ರ ಸಿಕ್ಕಿದೆ. ಅದೇ ಅವಳ ವೈಯಕ್ತಿಕ ಜೀವನ. ಸದ್ಯ ಅಥಿಯಾ ನಿಜ ಜೀವನದಲ್ಲಿ ತಾಯಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾಳೆ ಮತ್ತು ಅವಳು ಅದನ್ನು ಪೂರ್ಣವಾಗಿ ಆನಂದಿಸುತ್ತಿದ್ದಾಳೆ. ಅದನ್ನೇ  ಮುಂದುವರೆಸಲು ಬಯಸಿದ್ದಾಳೆ ಎಂದು ಸುನಿಲ್​ ಶೆಟ್ಟಿ ಹೇಳಿದರು. ಅಥಿಯಾ ಜನವರಿ 2023 ರಲ್ಲಿ ಕ್ರಿಕೆಟಿಗ ಕೆ.ಎಲ್. ರಾಹುಲ್ ಅವರನ್ನು ವಿವಾಹವಾದರು. ಇಬ್ಬರೂ ಖಂಡಾಲಾದಲ್ಲಿರುವ ಸುನಿಲ್ ಅವರ ಬಂಗಲೆಯಲ್ಲಿ ವಿವಾಹವಾದರು.  ಅವರ ವಿವಾಹವು ಮಂಗಳೂರಿನ ಪದ್ಧತಿಗಳ ಪ್ರಕಾರ ನಡೆದಿತ್ತು.  ಈ ವರ್ಷದ ಮಾರ್ಚ್‌ನಲ್ಲಿ ಅಥಿಯಾ ತಾಯಿಯಾದರು ಮತ್ತು ಅಂದಿನಿಂದ, ಅವರು ತಮ್ಮ ಮಗಳನ್ನು ಬೆಳೆಸುವಲ್ಲಿ ನಿರತರಾಗಿದ್ದಾರೆ, ಆಕೆಗೆ ಇವಾರಾ ಎಂದು ಹೆಸರಿಸಿದ್ದಾರೆ. ಏಪ್ರಿಲ್‌ನಲ್ಲಿ ತನ್ನ ಮಗಳ ಮೊದಲ ನೋಟವನ್ನು ನೀಡುವಾಗ, ಅಥಿಯಾ ತನ್ನ ಪುಟ್ಟ ದೇವತೆಯ ಹೆಸರನ್ನು ಸಹ ಬಹಿರಂಗಪಡಿಸಿದರು.

ಅಥಿಯಾ ಅವರ ಕೊನೆಯ ಚಿತ್ರ 'ಮೋತಿಚೂರ್ ಚಕ್ನಾಚೂರ್' 2019 ರಲ್ಲಿ ಬಿಡುಗಡೆಯಾಯಿತು, ಇದರಲ್ಲಿ ಅವರು ನವಾಜುದ್ದೀನ್ ಸಿದ್ದಿಕಿ ಅವರೊಂದಿಗೆ ಜೋಡಿಯಾಗಿ ನಟಿಸಿದ್ದರು. ಅಥಿಯಾ ತಮ್ಮ ವೃತ್ತಿಜೀವನದಲ್ಲಿ ಒಟ್ಟು 3 ಚಿತ್ರಗಳನ್ನು ಮಾಡಿದ್ದಾರೆ. ಅವರು 2015 ರಲ್ಲಿ ಸಲ್ಮಾನ್ ಖಾನ್ ನಿರ್ಮಾಣದ ಸೂರಜ್ ಪಾಂಚೋಲಿ ಅವರ ನಿರ್ಮಾಣದ 'ಹೀರೋ' ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. ಆ ಚಿತ್ರ ದೊಡ್ಡ ಫ್ಲಾಪ್ ಆಗಿತ್ತು. ನಂತರ ಅವರು 2017 ರಲ್ಲಿ 'ಮುಬಾರಕನ್' ಚಿತ್ರದಲ್ಲಿ ಕಾಣಿಸಿಕೊಂಡರು. ಈ ಚಿತ್ರದಲ್ಲಿ ಅರ್ಜುನ್ ಕಪೂರ್ ಪ್ರಮುಖ ಪಾತ್ರದಲ್ಲಿದ್ದರು. ಅವರ ಈ ಚಿತ್ರವೂ ಚೆನ್ನಾಗಿ ಗಳಿಸಲಿಲ್ಲ. ಅವರ  ಮೂರನೇ ಚಿತ್ರ 'ಮೋತಿಚೂರ್ ಚಕ್ನಾಚೂರ್' ಮತ್ತು ಅದು ಕೂಡ ವಿಫಲವಾಯಿತು. ನಿರಂತರ ವೈಫಲ್ಯದಿಂದ ಅಥಿಯಾ ತುಂಬಾ ನಿರಾಶೆಗೊಂಡರು. ಅಪ್ಪನ ಹೆಸರು ಕೂಡ ಅವರ ಕೈಹಿಡಿಯಲಿಲ್ಲ. ಆದ್ದರಿಂದಲೇ ಈ ಬಹುದೊಡ್ಡ ನಿರ್ಧಾರ ಎಂದೇ ತಿಳಿದುಬರುತ್ತಿದೆ. 

Madhuri Gupta: 52ರ ವಯಸ್ಸಲ್ಲಿ 30ರ ಪಾಕಿ ಬಲೆಗೆ: ಭಾರತದ ಮಾಹಿತಿ ಸೋರಿಕೆ ಮಾಡಿ ಸಿಕ್ಕಿಬಿದ್ದ ಐಎಫ್​ಎಸ್​ ಅಧಿಕಾರಿ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?