
ಬಣ್ಣದ ಲೋಕ ಹೊರಗೆ ಮಾತ್ರ ಸುಂದರ, ಒಳಗೆ ಅಷ್ಟೇ ಹುಳುಕು. ಅದರಲ್ಲಿಯೂ ಸೂಪರ್ಸ್ಟಾರ್ ಎನ್ನಿಸಿಕೊಂಡಿರುವ ಅದೆಷ್ಟೋ ನಾಯಕ, ನಾಯಕಿಯರ ವೈಯಕ್ತಿಯ ಬದುಕಂತೂ ಘನಘೋರ. ಅಂಥವರಲ್ಲಿ ಒಬ್ಬರು ಒಂದು ಕಾಲ ಬಾಲಿವುಡ್ ಆಳಿದ್ದ ಮನಿಷಾ ಕೊಯಿರಾಲಾ. ಇವರ ಬದುಕು ಮಾತ್ರ ನರಕ. ಕ್ಯಾನ್ಸರ್ನಂಥ ಭೀಕರ ಕಾಯಿಲೆಗೆ ಗುರಿಯಾಗಿದ್ದೂ ಅಲ್ಲದೇ ಜೀವನದುದ್ದಕ್ಕೂ ನೋವಿನ ಸರಮಾಲೆಯನ್ನೇ ಅನುಭವಿಸಿದವರು ಮನಿಷಾ. ಇವರು ತಮ್ಮ ಐಕಾನಿಕ್ ಚಿತ್ರಗಳ ಮೂಲಕ ಪ್ರೇಕ್ಷಕರ ದೊಡ್ಡ ವರ್ಗವನ್ನು ಆಕರ್ಷಿಸಿದ್ದವರು. ಅವರ ಸೌಂದರ್ಯಕ್ಕೆ ಮಾರು ಹೋದವರು, ಈಕೆಯನ್ನು ಒಮ್ಮೆಯಾದರೂ ಭೇಟಿಯಾಗಬೇಕು ಎಂದುಕೊಂಡವರು, ಒಮ್ಮೆಯಾದರೂ ಈಕೆಯನ್ನು ಬದುಕಬೇಕು ಎಂದವರು, ನನ್ನ ಬಾಳಸಂಗಾತಿಯಾಗಿ ಈಕೆಯೇ ಬರಬಾರದೇ ಎಂದುಕೊಂಡವರಿಗೆ ಲೆಕ್ಕವೇ ಇಲ್ಲ. ಆದರೆ ಮನಿಷಾ ಕೊಯಿರಾಲಾ ಅವರ ಬದುಕು ದುರಂತಗಳ ಸರಮಾಲೆ. ಬಹುತೇಕ ಎಲ್ಲಾ ಚಿತ್ರ ತಾರೆಯರ ಬಾಳೂ ಇದೇ ರೀತಿ ಇರುತ್ತದೆ. ಆದರೆ ಬಣ್ಣದ ಲೋಕದ ಈ ಬಣ್ಣದ ಬದುಕು ಮೇಕಪ್ ಕಳಚಿದ ಮೇಲೆ ಮರೆಯಾಗುತ್ತದೆ. ಒಂದಷ್ಟು ವರ್ಷ ತೆರೆ ಮೇಲೆ ಕಾಣಿಸಿಕೊಳ್ಳಲಿಲ್ಲ ಎಂದ ತಕ್ಷಣ, ಅವರನ್ನು ಹಾಡಿ ಹೊಗಳಿದವರೇ ಕಾಲ ಕಸಕ್ಕಿಂತಲೂ ನೋಡಿರುವ ಎಷ್ಟೋ ಉದಾಹರಣೆಗಳಿವೆ.
ಪ್ರಸ್ತುತ, ಇವರಿಗೆ 54 ವರ್ಷ ವಯಸ್ಸು. ಇವರು ಫೇಮಸ್ ಆಗಿದ್ದೇ ಒಂದು ಕಾಲದಲ್ಲಿ 12 ಪುರುಷರೊಂದಿಗೆ ಡೇಟಿಂಗ್ ಮಾಡಿದ್ದರು ಎನ್ನುವ ಕಾರಣಕ್ಕೆ. ಆದರೆ ಈಗ 54ನೇ ವಯಸ್ಸಿನಲ್ಲಿ ಎಲ್ಲರೂ ದೂರವಾಗಿ ಒಂಟಿಯಾಗಿ ಬಾಳುತ್ತಿದ್ದಾರೆ ನಟಿ. ಆದರೂ ಈ ವಯಸ್ಸಿನಲ್ಲಿಯೂ ಮದುವೆಯ ಆಸೆಯನ್ನು ಅವರ ಬಿಟ್ಟಿಲ್ಲ. ಕಾಲ ಕೂಡಿ ಬಂದರೆ ಉತ್ತಮ ಸಂಗಾತಿ ಸಿಕ್ಕೇ ಸಿಗುತ್ತಾನೆ ಎಂದು ಆಶಾಭಾವನೆ ಹೊಂದಿದ್ದಾರೆ ನಟಿ. ಮನಿಷಾ ಕೊಯಿರಾಲಾ 33 ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರೂ ಇವರ ಬಾಳಲ್ಲಿ ಬಿರುಗಾಳಿಗಳು ಹಲವಾರು ಎದ್ದಿವೆ. ಇವರು ನೇಪಾಳಿ ಉದ್ಯಮಿ ಸಾಮ್ರಾಟ್ ದಹಲ್ ಅವರನ್ನು 2010 ರಲ್ಲಿ ವಿವಾಹವಾದರು. ಆದರೆ ಕಾರಣಾಂತಗಳಿಂದ 2 ವರ್ಷಗಳಲ್ಲಿ ವಿಚ್ಛೇದನ ಪಡೆದರು.
Madhuri Gupta: 52ರ ವಯಸ್ಸಲ್ಲಿ 30ರ ಪಾಕಿ ಬಲೆಗೆ: ಭಾರತದ ಮಾಹಿತಿ ಸೋರಿಕೆ ಮಾಡಿ ಸಿಕ್ಕಿಬಿದ್ದ ಐಎಫ್ಎಸ್ ಅಧಿಕಾರಿ!
ವೈಯಕ್ತಿಕ ಬದುಕಿನ ಕುರಿತು ಹೆಚ್ಚಿಗೆ ಹೇಳಲು ಬಯಸದ ನಟಿ, ಇದೇ ಮೊದಲ ಬಾರಿಗೆ ಅದರ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಜೂಮ್‌ಗೆ ನೀಡಿದ ಸಂದರ್ಶನದಲ್ಲಿ, “ಕೆಲವರು ಅದೃಷ್ಟವಂತರು. ಆದರೆ ಹಲವರಿಗೆ ಈ ಅದೃಷ್ಟ ಇರುವುದಿಲ್ಲ. ನಾನು ನನ್ನ ಜೀವನದಲ್ಲಿ ಕಹಿ- ಸಿಹಿಗಳ ಅನುಭವಗಳ ದೊಡ್ಡ ಸಮ್ಮಿಲನವನ್ನು ಹೊಂದಿದ್ದೇನೆ. ಒಂದು ರೀತಿಯಲ್ಲಿ ಸಿಹಿಯೇ ನನಗೆ ಸಿಕ್ಕಿದೆ. ನಾನು ಅದೃಷ್ಟಶಾಲಿ. ಜೀವನದಲ್ಲಿ ಎಷ್ಟೇ ಕಹಿ ಬಂದರೂ, ನನ್ನ ಜೀವನದ ಬಗ್ಗೆ ನನ್ನ ದೃಷ್ಟಿಕೋನವು ಕಹಿಯಾಗಿಲ್ಲ ಎಂದಿದ್ದಾರೆ. ಈ ಡಿವೋರ್ಸ್ ಬೆನ್ನಲ್ಲೇ ಕ್ಯಾನ್ಸರ್ ಇವರಿಗೆ ಅಂಟಿಕೊಂಡಿತು. ನಂತರ ಅದನ್ನು ಜಯಿಸಿ ಬಂದರು ನಟಿ ಮನಿಷಾ. ಜೀವನದೊಂದಿಗೆ ಹೋರಾಡುವ ಗುಣ ಕ್ಯಾನ್ಸರ್ ಕಲಿಸಿಕೊಟ್ಟಿದೆ ಎಂದು ಸಂದರ್ಶನದಲ್ಲಿ ಅವರು ಹೇಳಿದ್ದಾರೆ.
ಇನ್ನು ಮದುವೆಯ ಕುರಿತು ಮಾತನಾಡಿರುವ ನಟಿ, ನಾನು ಯಾವಾಗಲೂ ಆಶಾವಾದಿ. ನಾನು ಗಾಜಿನ ಖಾಲಿಯಾದ ಅರ್ಧ ಭಾಗ ನೋಡುವುದಿಲ್ಲ. ತುಂಬಿರುವ ಅರ್ಧಭಾಗ ನೋಡುತ್ತೇನೆ. ಜೀವನ ಹಲವಾರು ರೀತಿಯ ಪೆಟ್ಟು ಕೊಟ್ಟಿವೆ. ಅದರಿಂದ ಸಾಕಷ್ಟು ಕಲಿತಿದ್ದೇನೆ. ಇಂಥ ಆಘಾತಗಳಿಂದಲೇ ಅನುಭವಗಳ ಶ್ರೀಮಂತಿಕೆಯನ್ನು ಪಡೆದುಕೊಂಡಿದ್ದೇನೆ ಎಂದಿದ್ದಾರೆ ಮನಿಷಾ. ಜೀವನದಲ್ಲಿ ಹಲವಾರು ಬಾರಿ ಅಸುರಕ್ಷಿತನಾಗಿದ್ದೇನೆ ಎನ್ನಿಸಿದ್ದು ಉಂಟು, ಖಿನ್ನತೆಗೂ ಜಾರಿದ್ದೇನೆ. ಆದರೆ ಪ್ರತಿ ಸಲವೂ ಎದ್ದು ಬಂದಿದ್ದೇನೆ. ನನ್ನನ್ನು ನಾನೇ ಸಮಾಧಾನ ಪಡಿಸಿಕೊಳ್ಳಲೇಬೇಕಾಗಿತ್ತು. ಅದನ್ನು ಜಯಿಸಿದ್ದೇನೆ ಎಂದಿದ್ದಾರೆ.
Cannes Film Festival: ಊರ್ವಶಿ ರೌಟೇಲಾ 61 ಲಕ್ಷ ರೂ. ಡ್ರೆಸ್ ಒಳಗಿಂದ ಇಣುಕಿದ್ದೇನು? ಫ್ಯಾನ್ಸ್ ಕಕ್ಕಾಬಿಕ್ಕಿ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.