ವಿಜಯ್ ದೇವರಕೊಂಡ ಜೊತೆ ಡೇಟ್ ಮಾಡಬೇಕೆಂದ ಸಾರಾ; ಅರ್ಜುನ್ ರೆಡ್ಡಿ ಸ್ಟಾರ್ ರಿಯಾಕ್ಷನ್ ಹೀಗಿತ್ತು

By Shruiti G Krishna  |  First Published Jul 13, 2022, 8:52 AM IST

 ಸಾರಾ ಮತ್ತು ಜಾನ್ವಿ ಇಬ್ಬರು ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಶೋನಲ್ಲಿ ಭಾಗಿಯಾಗಿದ್ದರು. ಸದ್ಯ ಎರಡನೇ ಎಪಿಸೋಡ್ ನ ಪ್ರೋಮೋ ಬಿಡುಗಡೆಯಾಗಿದ್ದು ಸಾರಾ ಅಲಿ ಖಾನ್ ಮತ್ತು ಜಾನ್ವಿ ಕಪೂರ್ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಕರಣ್ ಜೋಹರ್ ಮುಂದೆ ಸಾರಾ, ದೋವರಕೊಂಡ ಬಗ್ಗೆ ಮಾತನಾಡಿದ್ದಾರೆ. ಕರಣ್ ಜೋಹರ್ ಯಾರ ಜೊತೆ ಡೇಟ್ ಮಾಡಲು ಬಯಸುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಸಾರಾ ಅಲಿ ಖಾನ್ ಲೈಗರ್ ಸ್ಟಾರ್ ಜೊತೆ ಡೇಟ್ ಮಾಡುವುದಾಗಿ ಹೇಳಿದ್ದಾರೆ.  


ತೆಲುಗು ಸ್ಟಾರ್, ಅರ್ಜುನ್ ರೆಡ್ಡಿ ಸಿನಿಮಾ ಮೂಲಕ ಸ್ಟಾರ್ ಆಗಿ ಹೊರಹೊಮ್ಮಿರುವ ವಿಜಯ್ ದೇವರಕೊಂಡ ಅಪಾರ  ಸಂಖ್ಯೆಯ ಅಭಿಮಾನಿ ಬಳಗ ಹೊಂದಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿರುವ ನಟ ವಿಜಯ್‌ ದೇವರಕೊಂಡಗೆ ಬಾಲಿವುಡ್ ನಲ್ಲೂ ಅಪಾರ ಸಂಖ್ಯೆಯ ಅಭಿಮಾನಿ ಗಳಗವಿದೆ. ಅಂದಹಾಗೆ ಸಾಮಾನ್ಯ ಜಜನರು ಮಾತ್ರವಲ್ಲದೇ ಬಾಲಿವುಡ್ ಸ್ಟಾರ್ ನಟಿಯರು ಸಹ ವಿಜಯ್ ದೇವರಕೊಂಡ ಅವರ ದೊಡ್ಡ ಫ್ಯಾನ್ಸ್. ಹೌದು, ಬಾಲಿವುಡ್ ಖ್ಯಾನ ನಟಿಯರಾದ ಸಾರಾ ಅಲಿ ಖಾನ್ ಮತ್ತು ಜಾನ್ವಿ ಕಪೂರ್ ಇಬ್ಬರಿಗೂ ವಿಜಯ್ ದೇವರಕೊಂಡ ಎಂದರೆ ತುಂಬಾ ಇಷ್ಟ. ತೆಲುಗು ಸ್ಟಾರ್ ಮೇಲಿನ ಪ್ಯಾರ್‌ಅನ್ನು ವ್ಯಕ್ತ ಪಡಿಸುತ್ತಿರುತ್ತಾರೆ. ಇದೀಗ ಮತ್ತೆ ಸಾರಾ ಅಲಿ ಖಾನ್ ಮತ್ತು ಜಾನ್ವಿ ಕಪೂರ್ ವಿಜಯ್ ದೇವರಕೊಂಡ ಬಗ್ಗೆ ಮಾತನಾಡಿದ್ದಾರೆ. 

ಅಂದಹಾಗೆ ಸಾರಾ ಮತ್ತು ಜಾನ್ವಿ ಇಬ್ಬರು ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಶೋನಲ್ಲಿ ಭಾಗಿಯಾಗಿದ್ದರು. ಕಾಫಿ ವಿತ್ ಕರಣ್ ಸೀಸನ 7 ಆರಂಭವಾಗುತ್ತಿದೆ. ಈಗಾಗಲೇ ಪ್ರೋಮೋ ರಿಲೀಸ್ ಆಗಿದ್ದು ಸುಕ್ಕಾಪಟ್ಟೆ ವೈರಲ್ ಆಗಿದೆ. ಸದ್ಯ ಎರಡನೇ ಎಪಿಸೋಡ್ ನ ಪ್ರೋಮೋ ಬಿಡುಗಡೆಯಾಗಿದ್ದು ಸಾರಾ ಅಲಿ ಖಾನ್ ಮತ್ತು ಜಾನ್ವಿ ಕಪೂರ್ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಕರಣ್ ಜೋಹರ್ ಮುಂದೆ ಸಾರಾ, ದೋವರಕೊಂಡ ಬಗ್ಗೆ ಮಾತನಾಡಿದ್ದಾರೆ. ಕರಣ್ ಜೋಹರ್ ಯಾರ ಜೊತೆ ಡೇಟ್ ಮಾಡಲು ಬಯಸುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಸಾರಾ ಅಲಿ ಖಾನ್ ಲೈಗರ್ ಸ್ಟಾರ್ ಜೊತೆ ಡೇಟ್ ಮಾಡುವುದಾಗಿ ಹೇಳಿದ್ದಾರೆ.  

ವಿಜಯ್ ದೇವರಕೊಂಡ ಬೆತ್ತಲೆ ಪೋಸ್ಟರ್‍‌ಗೆ 'ಸ್ಫೂರ್ತಿ' ಎಂದ ರಶ್ಮಿಕಾ ಮಂದಣ್ಣ

Tap to resize

Latest Videos

ಈ ವಿಡಿಯೋವನ್ನು ವಿಜಯ್ ದೇವರಕೊಂಡ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಇನ್ಸ್ಟಾಗ್ರಾಮ್ ಸ್ಟೇಟನ್ ನಲ್ಲಿ ಪ್ರೋಮೋ ಶೇರ್ ಮಾಡಿರುವ ವಿಜಯ್ ದೇವರಕೊಂಡ ಸಾರಾ ಅಲಿ ಖಾನ್ ಗೆ ಪ್ರತಿಕ್ರಿಯೆ ನೀಡಿದ್ದಾರೆ. 'ನೀವು ದೇವರಕೊಂಡ ಎಂದು ಹೇಗೆ ಹೇಳುತ್ತೀರಿ ನನಗೆ ತುಂಬಾ ಇಷ್ಟ ಆಯಿತು. ನಿಮಗೆ ನನ್ಮ ಬಿಗ್ ಹಗ್' ಎಂದು ಬರೆದು ಹಾರ್ಟ್ ಇಮೋಜಿ ಹಾಕಿದ್ದಾರೆ. 

ಕಾರ್ತಿಕ್ ಜೊತೆಗಿನ ಸಂಬಂಧದ ಬಗ್ಗೆ ಬಹಿರಂಗವಾಗಿ ಮಾತಾಡಿದ ಕರಣ್ ಮೇಲೆ ಸಾರಾ ಅಸಮಾಧಾನ

ಅಂದಹಾಗೆ ಕಾಫಿ ವಿತ್ ಕರಣ್ ಶೋನಲ್ಲಿ ಸಾರಾ ಭಾಗಿಯಾಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಅಂದರೆ 2018ರಲ್ಲೂ ಸಾರಾ ಅಲಿ ಖಾನ್, ಕರಣ್ ಜೋಹರ್ ಶೋಗೆ ಹಾಜರಾಗಿದ್ದರು. ಆಗ ಸಾರಾಗೆ ಇದೇ ಪ್ರಶ್ನೆ ಎದುರಾಗಿತ್ತು. ಆ ಸಮಯದಲ್ಲಿ ಸೈಫ್ ಪುತ್ರಿ ಕಾರ್ತಿಕ್ ಆರ್ಯನ್ ಹೆಸರು ಹೇಳಿದ್ದರು. ಬಳಿಕ ಸಾರಾ ಮತ್ತು ಕಾರ್ತಿಕ್ ಆರ್ಯನ್ ನಡುವೆ ಡೇಟಿಂಗ್ ವದಂತಿ ಜೋರಾಗಿತ್ತು. ಇಬ್ಬರು ಡೇಟ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಆದರೆ ಕೆಲವೇ ಸಮಯದಲ್ಲಿ ಇಬ್ಬರು ಬ್ರೇಕಪ್ ಮಾಡಿಕೊಂಡು ದೂರ ದೂರ ಆದರು. ಈ ಬಗ್ಗೆ ಸದ್ಯ ಪ್ರಸಾರವಾಗುತ್ತಿರುವ ಕಾಫ್ ವಿತ್ ಕರಣ್ ಶೋನಲ್ಲಿ ಮಾತನಾಡಿದ್ದಾರೆ ಎನ್ನಲಾಗಿದೆ. ಏನೆಲ್ಲ ಹೇಳಿದ್ದಾರೆ ಎನ್ನುವುದು ಪ್ರಸಾರವಾದ ಬಳಿಕ ಗೊತ್ತಾಗಲಿದೆ. 

click me!