ಪ್ರಿಯಾಂಕಾ ಜೊತೆ ನಟಿಸಲ್ಲ ಎಂದು ನಿರ್ಧರಿಸಿದ್ದೇಕೆ ಅಕ್ಷಯ್ ಕುಮಾರ್; ಇಬ್ಬರ ನಡುವೆ ನಡೆದಿದ್ದೇನು?

Published : Nov 23, 2022, 03:26 PM IST
ಪ್ರಿಯಾಂಕಾ ಜೊತೆ ನಟಿಸಲ್ಲ ಎಂದು ನಿರ್ಧರಿಸಿದ್ದೇಕೆ ಅಕ್ಷಯ್ ಕುಮಾರ್; ಇಬ್ಬರ ನಡುವೆ ನಡೆದಿದ್ದೇನು?

ಸಾರಾಂಶ

ನಟಿ ಪ್ರಿಯಾಂಕಾ ಚೋಪ್ರಾ ಜೊತೆ ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್ ಸಿನಿಮಾ ಮಾಡಲ್ಲ ಎಂದು ನಿರ್ಧರಿಸಿದ್ದ ಬಗ್ಗೆ ನಿರ್ದೇಶಕ ಸುನಿಲ್ ದರ್ಶನ್ ಬಹಿರಂಗ ಪಡಿಸಿದರು.

ನಟಿ ಪ್ರಿಯಾಂಕಾ ಚೋಪ್ರಾ ಜೊತೆ ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್ ಸಿನಿಮಾ ಮಾಡಲ್ಲ ಎಂದು ನಿರ್ಧರಿಸಿದ್ದ ಬಗ್ಗೆ ನಿರ್ದೇಶಕ ಸುನಿಲ್ ದರ್ಶನ್ ಬಹಿರಂಗ ಪಡಿಸಿದರು. ಪತ್ನಿ ಟ್ವಿಂಕಲ್ ಖನ್ನಾ ಕಾರಣದಿಂದ ಅಕ್ಷಯ್ ಕುಮಾರ್, ಪ್ರಿಯಾಂಕಾ ಜೊತೆ ನಟಿಸಿವುದನ್ನೇ ನಿಲ್ಲಿಸಿದರು ಎಂದು ಹೇಳಿದ್ದಾರೆ. ಬರ್ಸಾತ್ ಸಿನಿಮಾ ನಿರ್ದೇಶನ ಮಾಡಿದ್ದ ಸುನಿಲ್ ಈ ಸಿನಿಮಾಗೆ ಮೊದಲು ಅಕ್ಷಯ್ ಕುಮಾರ್ ಆಯ್ಕೆಯಾಗಿದ್ದರು. ಆದರೆ ಪ್ರಿಯಾಂಕಾ ಚೋಪ್ರಾ ನಾಯಕಿ ಎನ್ನುವ ಕಾರಣಕ್ಕೆ ಅಕ್ಷಯ್ ಸಿನಿಮಾದಿಂದ ಹೊರ ನಡೆದರು ಎಂದು ಹೇಳಿದ್ದಾರೆ. ಬರ್ಸಾತ್ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಜೊತೆ ಶೂಟಿಂಗ್ ಕೂಡ ಪ್ರಾರಂಭ ಮಾಡಲಾಗಿತ್ತು. ಒಂದು ಹಾಡಿನ ಚಿತ್ರೀಕರಣ ಕೂಡ ಮುಗಿದಿತ್ತು. ಆದರೆ  ಟ್ವಿಂಕಲ್ ಖನ್ನಾ ಕಾರಣಕ್ಕೆ ಅಕ್ಷಯ್ ಕುಮಾರ್ ಸಿನಿಮಾದಿಂದ ಹೊರ ನಡೆದರು ಎಂದು ಸುನಿಲ್ ಬಹಿರಂಗ ಪಡಿಸಿದ್ದಾರೆ. 

ಅಂದಹಾಗೆ ಪ್ರಿಯಾಂಕಾ ಚೋಪ್ರಾ ಮತ್ತು ಅಕ್ಷಯ್ ಕುಮಾರ್ 2003 ರಿಂದ 2005ರ ವರೆಗೂ ಇಬ್ಬರೂ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.  ಅಂದಾಜ್, ಮುಜ್ ಶಾದಿ ಕರೋಗಿ, ಐತ್ರಾಜ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ 2005 ಬಳಿಕ ಅಕ್ಷಯ್ ಕುಮಾರ್ ಪ್ರಿಯಾಂಕಾ ಜೊತೆ ನಟಿಸಿಲ್ಲ. 

ಪ್ರಿಯಾಂಕಾ-ಅಕ್ಷಯ್ ಕುಮಾರ್ ಇಬ್ಬರೂ ದೂರ ಆದ ಬಗ್ಗೆ ನಿರ್ದೇಶಕ ಸುನಿಲ್ ಬಾಲಿವುಡ್ ಹಂಗಾಮಾಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. 'ಅಕ್ಷಯ್ ಕುಮಾರ್ ಮತ್ತು ಪ್ರಿಯಾಂಕಾ ಚೋಪ್ರಾ ಉತ್ತಮ ಜೋಡಿ, ಅವರ ವೈಯಕ್ತಿಕ ಗುಣಲಕ್ಷಣಗಳ ವಿಷಯದಲ್ಲೂ ತುಂಬಾ ಹೋಲುತ್ತದೆ. ತೆರೆಮೇಲೆ ಅದ್ಭುತ ಕೆಮಿಸ್ಟ್ರಿ ಹೊಂದಿದ್ದರು. ಇಬ್ಬರ ಹಾಡು ತುಂಬಾ ಸುಂದರವಾಗಿ ಮೂಡಿಬರಲಿದೆ ಅಂತ ಅಂದುಕೊಂಡಿದ್ದೆ.  ನಂತರ ಪ್ರಿಯಾಂಕಾ ವಿದೇಶಿ ಪ್ರವಾಸಕ್ಕೆ ಹೋಗಿದ್ದರು. ಆದರೆ ಅವರು ಪಾವಾಸ್ ಬರುವಾಗ ಏನಾಯಿತು ಎಂದು ಗೊತ್ತಿಲ್ಲ' ಎಂದು ಹೇಳಿದರು. 

ಕೊನೆಗೂ ಮಗಳ ಮುಖ ರಿವೀಲ್ ಮಾಡಿದ ಪ್ರಿಯಾಂಕಾ; ಮಗು ತುಟಿಗೆ ನೆಟ್ಟಿಗರ ರಿಯಾಕ್ಷನ್ ಹೀಗಿದೆ

'ಬಳಿಕ ನನಗೆ ಗೊತ್ತಾಯಿತು ಇಬ್ಬರೂ ಒಟ್ಟಿಗೆ ನಟಿಸುವುದು ಟ್ವಿಂಕಲ್ ಖನ್ನಾ ಅವರಿಗೆ ಇಷ್ಟವಿರಲಿಲ್ಲ, ಅಕ್ಷೇಪ ವ್ಯಕ್ತಪಡಿಸಿದ್ದರು. ಆಗ ಅಕ್ಷಯ್ ಮತ್ತು ಟ್ವಿಂಕಲ್ ನಡುವೆ ಸಮಸ್ಯೆ ಕೂಡ ಎದುರಾಗಿತ್ತು. ಪ್ರಿಯಾಂಕಾ ಮತ್ತು ಟ್ವಿಂಕಲ್ ಖನ್ನಾ ನಡುವೆ ಸಮಸ್ಯೆ ಇತ್ತು ಎನ್ನುವುದು ಕೂಡ ಗೊತ್ತಾಯಿತು. ಇದರಿಂದ ನಮ್ಮ ವೃತ್ತಿ ತುಂಬಾ ಅಪಾಯದಿಂದ ಹೊಂದಿದೆ. ಹೀಗೆ ಮಾಡುವುದರಿಂದ ಸಿನಿಮಾ ನಿರ್ಮಾಪಕರು ತುಂಬಾ ನಷ್ಟ ಅನುಭವಿಸಬೇಕಾಗುತ್ತದೆ' ಎಂದು ಹೇಳಿದರು.  

90 ಕೋಟಿ ರೂ. ಸಂಭಾವನೆ ಕೇಳಿ ಸಿನಿಮಾದಿಂದ ಕಿಕ್ ಔಟ್ ಆದ್ರಾ ಅಕ್ಷಯ್ ಕುಮಾರ್? ಇಲ್ಲಿದೆ ಮಾಹಿತಿ

ಬರ್ಸಾತ್ ಸಿನಿಮಾದಿಂದ ಹೊರಬಂದ ಬಳಿಕ ಅಕ್ಷಯ್ ಮತ್ತು ಪ್ರಿಯಾಂಕಾ ಇಬ್ಬರೂ ಮತ್ತೆ ಒಟ್ಟಿಗೆ ನಟಿಸಿಲ್ಲ. ಆದರೆ ಪ್ರತ್ಯೇಕವಾಗಿ ಇಬ್ಬರೂ ಸಿನಿಮಾರಂಗದಲ್ಲಿ ಯಶಸ್ವಿ ಹೊಂದಿರು. ಟ್ವಿಂಕಲ್ ಮತ್ತು ಅಕ್ಷಯ್ ಮದುವೆಯಾಗಿ 20 ವರ್ಷಗಳಾಗಿವೆ ಮತ್ತು ಇಬ್ಬರು ಮಕ್ಕಳಿದ್ದಾರೆ. ಅಕ್ಷಯ್ ಬಾಲಿವುಡ್ ನಲ್ಲಿ ಖ್ಯಾತಿಸಿದ್ದಾರೆ. ಪ್ರಿಯಾಂಕಾ ಬಾಲಿವುಡ್ ಜೊತೆಗೆ ಹಾಲಿವುಡ್ ನಲ್ಲೂ ಫೇಮಸ್ ಆಗಿದ್ದಾರೆ. 


 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Katrina Kaif: ತಾಯಿಯಾದ ಬಳಿಕ ಮೊದಲ ಹೋಳಿ: ಪತಿ ವಿಕ್ಕಿ ಜೊತೆ ಬಣ್ಣದೋಕುಳಿ ಆಡಿದ ಕತ್ರಿನಾ ಕೈಫ್
Thalapathy Vijay ಎಂದೆಂದೂ ನನ್ನವನೇ ಎಂದಾಕೆ ನಟಿ ತ್ರಿಷಾ ಅಲ್ವೇ ಅಲ್ಲಾ! ಏನಿದು ವೈರಲ್​ ಪೋಸ್ಟ್​ ಗಲಾಟೆ?