ಜವಾನ್ ಡೈರೆಕ್ಟರ್ ಮುಂದಿನ ಸಿನಿಮಾಗೆ ಟಾಲಿವುಡ್ ಸ್ಟೈಲಿಶ್ ಸ್ಟಾರ್; ಪುಷ್ಪಾ 2 ಕಥೆ ಏನಾಯ್ತು?

By Shriram Bhat  |  First Published Dec 28, 2023, 12:17 PM IST

ಅಲ್ಲು ಅರ್ಜುನ್ ರೇಂಜ್ ಈಗ ಪ್ಯಾನ್ ಇಂಡಿಯಾದಲ್ಲಿ. ಅದೇ ತರ ಡೈರೆಕ್ಟರ್ ಅಟ್ಲಿ ರೇಂಜ್ ಕೂಡ ಪ್ಯಾನ್ ಇಂಡಿಯಾ ತುಂಬಾ ಹಬ್ಬಿದೆ. ಶಾರುಖ್ ಖಾನ್ ನಟನೆಯ ಜವಾನ್ ಸಿನಿಮಾದಿಂದ ಅಟ್ಲಿ ರೇಂಜ್ ಬದಲಾಗಿದೆ.


ಟಾಲಿವುಡ್​​ನ ಪುಷ್ಪರಾಜ್ ಅಲ್ಲು ಅರ್ಜುನ್ಗೆ ಆಕ್ಷನ್​ ಕಟ್ ಹೇಳೋಕೆ ಡೈರೆಕ್ಟರ್​​ಗಳ ಕ್ಯೂ ಇದೆ. ಆದ್ರೆ ಅಲ್ಲು ಮಾತ್ರ ಅಳೆದು ತೂಗಿ ನಿರ್ದೇಶಕರಿಗೆ ಅವಕಾಶ ಕೊಡ್ತಿದ್ದಾರೆ. ಹೀಗಾಗೆ ಅಲ್ಲು ಅರ್ಜುನ್​ ಕಡೆಯಿಂದ ಪುಷ್ಪ ಅನ್ನೋ ಅದ್ಭುತ ಸಿನಿಮಾ ಬಂದಿದ್ದು. ಈಗ ಪುಷ್ಪ 2 ಸಿನಿಮಾ ಬಿಡುಗಡೆ ದಿನ ಎಣಿಸುತ್ತಿದೆ. ಈ ಟೈಂನಲ್ಲೇ ಸ್ಟೈಲೀಶ್ ಸ್ಟಾರ್​ ಬಗ್ಗೆ ಹೊಸ ಸುದ್ದಿಯೊಂದು ಹೊರ ಬಂದಿದೆ. ಅದೇನು ಅಂತ ನೋಡೋಣ ಬನ್ನಿ.. 

ಐಕಾನ್ ಸ್ಟಾರ್ ಅಲ್ಲು ಅರ್ಜುನ್​ ಪುಷ್ಪ2 ಸಿನಿಮಾ ನೋಡೋಕೆ ಇನ್ನೂ ಅರ್ಧ ವರ್ಷ ಕಾಯ್ಬೇಕು. ಮುಂದಿನ ವರ್ಷ ಆಗಸ್ಟ್ 15ಕ್ಕೆ ಪುಷ್ಪ2 ಸಿನಿಮಾ ವರ್ಲ್ಡ್ ವೈಡ್ ರಿಲೀಸ್ ಆಗುತ್ತೆ. ಆದ್ರೆ ಪುಷ್ಪ2 ಬಿಡುಗಡೆ ಮೊದಲೇ ಅಲ್ಲು ಅರ್ಜುನ್ ಮತ್ತೊಂದು ಸಿನಿಮಾಗೆ ಕಮೀಟ್ ಆಗಿದ್ದಾರೆ ಅನ್ನೋ ಸುದ್ದಿ ಟಾಲಿವುಡ್​ ಅಂಗಳದಿಂದ ಬಂದಿದೆ. ಅಲ್ಲು ಅರ್ಜುನ್‌ಗೆ ಜವಾನ್ ಡೈರೆಕ್ಟರ್ ಆ್ಯಕ್ಷನ್ ಕಟ್ ಹೇಳ್ತಾರಂತೆ. 

Tap to resize

Latest Videos

ಆಸ್ಕರ್‌ ಪ್ರಶಸ್ತಿ ವಿಜೇತ ನಟನ ಅನುಮಾನಾಸ್ಪದ ಸಾವು; ವಿಚಿತ್ರ ಕೇಸಿನಲ್ಲಿ ಸಿಕ್ಕಿಹಾಕಿಕೊಂಡಿದ್ರಂತೆ!

ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಆಯ್ಕೆ ಮಾಡೋ ಸಿನಿಮಾಗಳು ಪ್ಯಾನ್​ ಇಂಡಿಯಾದಲ್ಲಿ ಸೌಂಡ್ ಮಾಡ್ಬೇಕು. ಹೀಗಾಗಿ ಅಂತಹ ಸಿನಿಮಾಗಳನ್ನ ಮಾಡೋ ಡೈರೆಕ್ಟರ್​ಗಳನ್ನೇ ಅಲ್ಲು ಅರ್ಜುನ್ ತನ್ನ ಸಿನಿಮಾಗೆ ಆಯ್ಕೆ ಮಾಡ್ಕೊಳ್ಳಬೇಕು. ಇಂಡಿಯನ್ ಸಿನಿಮಾ ಜಗತ್ತಿನಲ್ಲಿ ಅಂತಹ ಪ್ಯಾನ್ ಇಂಡಿಯಾ ಸಿನಿಮಾ ಮಾಡೋ ಟ್ಯಾಲೆಂಟ್ ಇರೋ ಡೈರೆಕ್ಟರ್ ಇರೋದು ಬೆರಳೆಣಿಕೆಯಷ್ಟು. ಆ ನಿರ್ದೇಶಕರಲ್ಲಿ ಈ ವರ್ಷ 1000 ಕೋಟಿ ಕಲೆಕ್ಷನ್ ಮಾಡಿದ ಜವಾನ್ ಸಿನಿಮಾದ ಡೈರೆಕ್ಟರ್​ ಅಟ್ಲಿ ಕೂಡ ಒಬ್ರು. ಈಗ ಇದೇ ಅಟ್ಲಿ ಅಲ್ಲು ಅರ್ಜುನ್​​​ಗೆ ಆಕ್ಷನ್ ಕಟ್ ಹೇಳ್ತಾರಂತೆ.. 

ಗುಟ್ಟಾಗಿ ಮದುವೆಯಾದ್ರು ಶ್ರುತಿ ಹಾಸನ್; ಎಲ್ಲವನ್ನೂ ಹಂಚಿಕೊಳ್ಳುವ ಹುಡುಗಿ ಯಾಕೆ ಹೀಗೆ ಮಾಡಿದ್ರು!

ಅಲ್ಲು ಅರ್ಜುನ್ ರೇಂಜ್ ಈಗ ಪ್ಯಾನ್ ಇಂಡಿಯಾದಲ್ಲಿ. ಅದೇ ತರ ಡೈರೆಕ್ಟರ್ ಅಟ್ಲಿ ರೇಂಜ್ ಕೂಡ ಪ್ಯಾನ್ ಇಂಡಿಯಾ ತುಂಬಾ ಹಬ್ಬಿದೆ. ಶಾರುಖ್ ಖಾನ್ ನಟನೆಯ ಜವಾನ್ ಸಿನಿಮಾದಿಂದ ಅಟ್ಲಿ ರೇಂಜ್ ಬದಲಾಗಿದೆ. ಇದನ್ನ ಗಮನಿಸಿರೋ ಅಲ್ಲು ಅರ್ಜುನ್ ನಿರ್ದೇಶಕ ಅಟ್ಲಿ ಒಪ್ಪಿಸಿದ್ದ ಕತೆ ಕೇಳಿ ಸಿನಿಮಾ ಮಾಡೋಕೆ ಒಕೆ ಎಂದಿದ್ದಾರಂತೆ. ಹೈದರಾಬಾದ್​ನಲ್ಲಿ ನಿರ್ದೇಶಕ ಅಟ್ಲೀ ಹಾಗು ಅಲ್ಲು ಅರ್ಜುನ್ ಭೇಟಿಯಾಗಿದ್ದು, ಸ್ಟೋರಿ ಒಕೆ ಮಾಡಿಕೊಂಡಿದ್ದಾರೆ ಅಂತ ಹೇಳಲಾಗ್ತಿದೆ. 

ಐಶ್ವರ್ಯ ರೈ ಬೇರೆ ವಾಸವಿದ್ರೂ ಅಭಿಷೇಕ್ ಡೀವೋರ್ಸ್ ಕೊಡುತ್ತಿಲ್ಲ; ಸೀಕ್ರೆಟ್‌ ಬಿಚ್ಚಿಟ್ಟ ನೆಟ್ಟಿಗರು!

ಅಲ್ಲು ಅರ್ಜುನ್ ಫ್ಯಾನ್ಸ್​ ಅಷ್ಟೆ ಅಲ್ಲ ಇಡೀ ಭಾರತೀಯ ಸಿನಿ ಜಗತ್ತಿನ ಕಣ್ಣು ಈಗ ಅಲ್ಲು ಅರ್ಜು್ನ್​​​ರ ಪಷ್ಪ2 ಮೇಲೆ ಬಿದ್ದಿದೆ. ಈ ಸಿನಿಮಾ ರಿಲೀಸ್ ಆಗೋದು ಆಗಸ್ಟ್ 15ಕ್ಕೆ ಅನ್ನೋದು ಗುಟ್ಟಾಗೇನು ಉಳಿದಿಲ್ಲ. ಪುಷ್ಪ2 ಕೆಲಸ ಕೊನೆ ಹಂತಕ್ಕೆ ಬಂದಿದೆ. ಹೀಗಾಗಿ ಪುಷ್ಪ2 ರಿಲೀಸ್ ಮೊದಲೇ ಅಟ್ಲೀ ಡೈರೆಕ್ಷನ್​ನ ಸಿನಿಮಾ ಶೂಟಿಂಗ್​​ ಸೆಟ್​ಗೆ ಅಲ್ಲು ಅರ್ಜುನ್ ಎಂಟ್ರಿ ಕೊಡ್ತಾರಂತೆ. ಹೀಗಾಗಿ ಈ ಸ್ಟಾರ್ ಜೋಡಿ ಒಂದಾಗಿ ಮಾಡೋ ಸಿನಿಮಾ ಬಗ್ಗೆ ಟಾಲಿವುಡ್​ ಜಗತ್ತಿನಲ್ಲಿ ಈಗಲೇ ದೊಡ್ಡ ಟಾಕ್ ಕ್ರಿಯೆಟ್ ಆಗ್ತಿದೆ.

click me!