ಪೊಲೀಸರ ಕೈಗೆ ಸಿಗದೇ ತಲೆಮರೆಸಿಕೊಂಡಿದ್ದಾರೆ ನಟಿ ಜಯಪ್ರದಾ! ಎಲ್ಲೆಡೆ ಭಾರಿ ಶೋಧ- ಆಗಿದ್ದೇನು?

By Suvarna News  |  First Published Dec 28, 2023, 11:17 AM IST

ಎರಡು ಕೇಸ್​ಗಳಲ್ಲಿ ಪೊಲೀಸರಿಗೆ ಬೇಕಾಗಿರುವ ನಟಿ ಜಯಪ್ರದಾ ಪೊಲೀಸರ ಕೈಗೆ ಸಿಗದೇ ತಲೆಮರೆಸಿಕೊಂಡಿದ್ದಾರೆ! ಅಷ್ಟಕ್ಕೂ ಆಗಿದ್ದೇನು?
 


ಎರಡು ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿದ್ದಾರೆ ಬಾಲಿವುಡ್​​ ಬ್ಯೂಟಿ ಎಂದೇ ಖ್ಯಾತಿ ಪಡೆದಿದ್ದ ಬಹುಭಾಷಾ ತಾರೆ ಜಯಪ್ರದಾ. ಎರಡೂ ಪ್ರಕರಣಗಳಲ್ಲಿ ಮಧ್ಯಪ್ರದೇಶ ಕೋರ್ಟ್ ಜಯಪ್ರದಾ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು. ಇದರೊಂದಿಗೆ ಜಯಪ್ರದಾ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಪೊಲೀಸ್ ವರಿಷ್ಠಾಧಿಕಾರಿಗೆ ನ್ಯಾಯಾಲಯ ಆದೇಶಿಸಿದೆ. ಆದರೆ ಸದ್ಯ ಯಾರ ಕೈಗೂ ಸಿಗದೇ ನಟಿ ತಲೆ ಮರೆಸಿಕೊಂಡಿದ್ದಾರೆ. ಇದಕ್ಕಾಗಿ ನಟಿಯನ್ನು ಪೊಲೀಸರು ಹುಡುಕುತ್ತಿದ್ದಾರೆ. ಶಹಜಾದ್‌ನಗರದಲ್ಲಿರುವ ಜಯಪ್ರದಾ ಅವರ ನೀಲವೇಣಿ ಕೃಷ್ಣ ಸ್ಕೂಲ್ ಆಫ್ ನರ್ಸಿಂಗ್‌ನ ಮೇಲೂ ತಂಡ ದಾಳಿ ನಡೆಸಿದೆ. ಆದರೆ ನಟಿ ಅಲ್ಲಿ ಇರಲಿಲ್ಲ. ಇದೀಗ ತಂಡ ದೆಹಲಿ ಮತ್ತು ಮುಂಬೈನಲ್ಲಿ  ಹುಡುಕಾಟ ನಡೆಸುತ್ತಿದೆ. ಕೋರ್ಟ್​ ಆದೇಶದ ಅನ್ವಯ ಜನವರಿ 10ರೊಳಗೆ  ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿದೆ.  

ಅಂದಹಾಗೆ ಈ ಎರಡೂ ಪ್ರಕರಣಗಳು  2019ರ ಲೋಕಸಭೆ ಚುನಾವಣೆಗೆ ಸಂಬಂಧಿಸಿವೆ. ಆಗ ಜಯಪ್ರದಾ ಅವರು ಬಿಜೆಪಿ ಟಿಕೆಟ್‌ನಲ್ಲಿ ರಾಂಪುರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಇವರ ವಿರುದ್ಧ ಸ್ವರ್ ಪೊಲೀಸ್ ಠಾಣೆಯಲ್ಲಿ ಪ್ರಕರಣವಿದೆ. ಇದರಲ್ಲಿ ನೂರಪುರ ಗ್ರಾಮದಲ್ಲಿ ಅ.19ರಂದು ನೀತಿ ಸಂಹಿತೆ ಇದ್ದರೂ ರಸ್ತೆ ಉದ್ಘಾಟನೆ ಮಾಡಿದ ಆರೋಪವಿದೆ. ಎರಡನೇ ಪ್ರಕರಣವು ಕೆಮ್ರಿ ಪೊಲೀಸ್ ಠಾಣೆಯದ್ದಾಗಿದ್ದು, ಪಿಪ್ಲಿಯಾ ಮಿಶ್ರಾ ಗ್ರಾಮದಲ್ಲಿ ಆಯೋಜಿಸಲಾದ ಸಾರ್ವಜನಿಕ ಸಭೆಯಲ್ಲಿ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ ಆರೋಪ ನಟಿಯ ಮೇಲಿದೆ.

Tap to resize

Latest Videos

ನಟಿ ಜಾಕ್ವೆಲಿನ್‌-ಸುಕೇಶ್‌ ಕೇಸ್​ಗೆ ಭಾರಿ ಟ್ವಿಸ್ಟ್‌! ಜೈಲಿಂದ ಪತ್ರ ಬರೆದಿದ್ದು ಈತ ಅಲ್ವೇ ಅಲ್ವಂತೆ, ಹಾಗಿದ್ರೆ ಯಾರು?

ಮಧ್ಯಪ್ರದೇಶ ಕೋರ್ಟ್ ಜಯಪ್ರದಾ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು. ಇದರೊಂದಿಗೆ ಜಯಪ್ರದಾ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಪೊಲೀಸ್ ವರಿಷ್ಠಾಧಿಕಾರಿಗೆ ನ್ಯಾಯಾಲಯ ಆದೇಶಿಸಿದೆ.  ಜಯಪ್ರದಾ ಅವರು ರಾಜಕೀಯ ವಿಷಯಕ್ಕೆ ಬರುವುದಾದರೆ, ಆಂತರಿಕ ಭಿನ್ನಾಭಿಪ್ರಾಯದಿಂದಾಗಿ ಅವರು TDP ತೊರೆದು SP ಸೇರಿದರು. ಅವರು 2004 ರಿಂದ 2014 ರವರೆಗೆ ಉತ್ತರ ಪ್ರದೇಶದ ರಾಮ್‌ಪುರ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದರು. ಅಂತಿಮವಾಗಿ, ಜಯಪ್ರದಾ 2019 ರಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರಿದರು.


ಇದಾಗಲೇ ನಟಿಯ ವಿರುದ್ಧ ನೌಕರರ ರಾಜ್ಯ ವಿಮೆ (ಇಎಸ್‌ಐ) ನಿಧಿಯ ಪ್ರಕರಣವೂ ನಡೆಯುತ್ತಿದೆ.  ಥಿಯೇಟರ್ ಕಾಂಪ್ಲೆಕ್ಸ್‌ನ ಕಾರ್ಮಿಕರಿಂದ ಹಣ ವಸೂಲಿ ಮಾಡಿದರೂ ನೌಕರರ ರಾಜ್ಯ ವಿಮೆ (ಇಎಸ್‌ಐ) ನಿಧಿಯ ಪಾಲನ್ನು ಪಾವತಿಸದ ನಟಿಗೆ   ಆರು ತಿಂಗಳ  ವಿಧಿಸಲಾಗಿದೆ.  ಚೆನ್ನೈನ ಜನರಲ್ ಪ್ಯಾಟರ್ಸ್ ರಸ್ತೆಯಲ್ಲಿ ಜಯಪ್ರದಾ ತಮ್ಮದೇ ಹೆಸರಿನ ಚಿತ್ರಮಂದಿರವನ್ನು ಹೊಂದಿದ್ದರು. ಇದನ್ನು ಚೆನ್ನೈಗೆ ಸೇರಿದ ರಾಮ್ ಕುಮಾರ್ ಮತ್ತು ರಾಜಾ ಬಾಬು ನಡೆಸುತ್ತಿದ್ದರು. ಆ ಚಿತ್ರಮಂದಿರ ಕಾಲಾಂತರದಲ್ಲಿ ಬಾಗಿಲು ಹಾಕಿತು. ಆದರೆ ಚಿತ್ರಮಂದಿರದಲ್ಲಿ ಕೆಲಸ ಮಾಡುತ್ತಿದ್ದ ನೌಕರರ ಇಎಸ್​ಐ ಅನ್ನು ನಿಯಮದಂತೆ ವರ್ಗಾವಣೆ ಮಾಡಿರಲಿಲ್ಲ. ರಂಗಭೂಮಿ ನೌಕರರ ಇಎಸ್‌ಐ ಪಾವತಿಸಲು ಆಡಳಿತ ಮಂಡಳಿ ವಿಫಲವಾಗಿದ್ದರಿಂದ ಸಮಸ್ಯೆ ಆರಂಭವಾಗಿದ್ದು, ನ್ಯಾಯಾಲಯದ ಮೆಟ್ಟಿಲೇರಿದ್ದರು.  ಅದರನ್ವಯ ಎಂಪ್ಲಾಯಿಸ್ ಸ್ಟೇಟ್ ಇನ್ಶುರೆನ್ಸ್ ಕಾರ್ಪೊರೇಷನ್ ಸಂಸ್ಥೆಯು, ಜಯಪ್ರದಾ ಹಾಗೂ ಅವರ ಪಾಲುದಾರರಾಗಿದ್ದ ರಾಮ್ ಕುಮಾರ್ ಹಾಗೂ ರಾಜಾ ಬಾಬು ವಿರುದ್ಧ ಪ್ರಕರಣ ಹೂಡಿತ್ತು.

ಪುರುಷರು ವಿಷಕಾರಿಗಳೆ? ಇಂದಿನ ಸಿನಿಮಾ, ರಿಯಾಲಿಟಿ ಷೋಗಳು ಹೀಗೇಕೆ? ಶುರುವಾಗಿದೆ ಭಾರಿ ಚರ್ಚೆ!

click me!