ಮೋಹನ್‌ಲಾಲ್‌ ಬಳಿ ಇರೋ ಲೇಡಿ ಬೌನ್ಸರ್‌ ನೋಡಿದಿರಾ?

ಮೋಹನ್ ಲಾಲ್ ಅವರ ರಕ್ಷಣೆಗಾಗಿ ನೇಮಕಗೊಂಡಿರುವ ಅನು ಕುಂಜುಮನ್ ಕೇರಳದ ಪ್ರಸಿದ್ಧ ಮಹಿಳಾ ಬೌನ್ಸರ್. ಪುರುಷ ಪ್ರಾಬಲ್ಯದ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅವರ ಜೀವನ, ವೃತ್ತಿ ಮತ್ತು ಸವಾಲುಗಳ ಬಗ್ಗೆ ಇಲ್ಲಿದೆ ನೋಡಿ.

story of lady bouncer Anu kunjuman who is with actor Mohanlal bni

ಮಲಯಾಳಂ ನಟ ಮೋಹನ್ ಲಾಲ್ ಅವರು ಪಬ್ಲಿಕ್‌ನಲ್ಲಿ ಹೋಗುವಾಗ ಅವರ ಜೊತೆಗೆ ಇರುವ ಒಬ್ಬ ಗಟ್ಟಿಮುಟ್ಟಾದ ಲೇಡಿಯನ್ನು ನೀವು ಗಮನಿಸಬಹುದು. ಆಕೆ ಬೇರೆ ಯಾರೂ ಅಲ್ಲ, ಮೋಹನ್‌ಲಾಲ್‌ ಅವರ ರಕ್ಷಣೆಗಾಗಿ ನೇಮಿಸಲಾದ ಬೌನ್ಸರ್.‌ ಅರೆ, ಗಂಡಸರನ್ನು ಬೌನ್ಸರ್‌ಗಳನ್ನಾಗಿ, ಸೆಕ್ಯುರಿಟಿಯಾಗಿ ಇಟ್ಟುಕೊಳ್ಳುತ್ತಾರೆ, ಇದ್ಯಾಕೆ ಹೆಂಗಸನ್ನು ನೇಮಿಸಿಕೊಂಡಿದ್ದಾರೆ ಎಂದು ಕೇಳುತ್ತೀರಾ? ಬನ್ನಿ ಇವರ ಬಗ್ಗೆ ತಿಳಿಯೋಣ. 

ಇವರೇ ಕೇರಳದ ಪ್ರಸಿದ್ಧ ಮಹಿಳಾ ಬೌನ್ಸರ್ ಅನು ಕುಂಜುಮನ್. ಅನೇಕ ವರ್ಷಗಳಿಂದ ಈಕೆ ಬೌನ್ಸರ್‌ ಕೆಲಸ ನಿರ್ವಹಿಸುತ್ತಿದ್ದಾರೆ. ಉನ್ನತ ಮಟ್ಟದ ಕಾರ್ಯಕ್ರಮಗಳಲ್ಲಿ ಜನಸಂದಣಿಯನ್ನು ನಿರ್ವಹಿಸುವುದು, ಸೆಲೆಬ್ರಿಟಿಗಳಿಗೆ ಭದ್ರತೆ ಒದಗಿಸುವುದು, ಪಬ್‌ಗಳು ಮತ್ತು ಪಾರ್ಟಿಗಳಲ್ಲಿ ಕಿರುಕುಳ ತಡೆಯುವುದರಲ್ಲಿ ಪರಿಣತಿ. ಈ ವೃತ್ತಿಯು ಸಾಂಪ್ರದಾಯಿಕವಾಗಿ ಪುರುಷರದೇ ಪ್ರಾಬಲ್ಯ ಹೊಂದಿದೆ. ಆದರೂ ಇತ್ತೀಚೆಗೆ ಕೆಲವು ಮಹಿಳಾಮಣಿಯರು ಇದಕ್ಕೆ ಕಾಲಿಡುತ್ತಿದ್ದಾರೆ. ತಮ್ಮ ದೈಹಿಕ ಸದೃಢತೆ ಮತ್ತು ಮಾನಸಿಕ ಬಲದಲ್ಲಿ ವಿಶ್ವಾಸ ಹೊಂದಿರುವವರು ಇದಕ್ಕೆ ಆಗಬೇಕು. ಹೀಗೆ ಈ ಅಸಾಂಪ್ರದಾಯಿಕ ಪಾತ್ರಕ್ಕೆ ಕಾಲಿಟ್ಟವರು ಅನು ಕುಂಜುಮನ್.

Latest Videos

ಕಪ್ಪು ಟಿ-ಶರ್ಟ್ ಮತ್ತು ಜೀನ್ಸ್ ಧರಿಸಿ ಅವರು ಆತ್ಮವಿಶ್ವಾಸದಿಂದ ಬರುತ್ತಿದ್ದರೆ, ಗದ್ದಲದ ಜನಸಂದಣಿಯೂ ದಾರಿ ಬಿಟ್ಟುಕೊಡುತ್ತದೆ. ಸೂಪರ್‌ಸ್ಟಾರ್ ಮೋಹನ್ ಲಾಲ್‌ಗೆ ಸಲೀಸಾಗಿ ಇವರು ದಾರಿ ತೆರವುಗೊಳಿಸುತ್ತಾರೆ. ಇತ್ತೀಚೆಗೆ ಕೊಚ್ಚಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭದ್ರತೆಯನ್ನು ನಿರ್ವಹಿಸುವಾಗ ಅವರ ದೃಢ ನಿಲುವು ಮತ್ತು ಆಜ್ಞಾಪಿಸುವ ಸನ್ನೆಗಳು ಎದ್ದು ಕಾಣುತ್ತಿದ್ದವು. ಕೇರಳದಲ್ಲಿ ವೃತ್ತಿಪರ ಬೌನ್ಸರ್‌ಳಾಗಿ ತನ್ನ ಛಾಪು ಮೂಡಿಸುತ್ತಿರುವ ಅನು ಕುಂಜುಮನ್ ಪುರುಷ ಸ್ಟೀರಿಯೊಟೈಪ್‌ಗಳನ್ನು ಮುರಿದಿದ್ದಾರೆ. 

37 ವರ್ಷದ ಅನು ಕುಂಜುಮೋನ್ ಅವರ ಬೌನ್ಸರ್ ಆಗುವ ನಿರ್ಧಾರ ಅವರ ವೈಯಕ್ತಿಕ ಅನುಭವಗಳಿಂದ ಹುಟ್ಟಿಕೊಂಡಿತು. ಬೆಳೆಯುವಾಗ ಅವರು ಹಲವಾರು ಸವಾಲುಗಳನ್ನು ಎದುರಿಸಿದ್ದರು. ಗೌರವಯುತ ಜೀವನಕ್ಕಾಗಿ ಶ್ರಮಿಸುತ್ತಾ ಅವರು ತಮ್ಮ ತಾಯಿ ಮತ್ತು ಸಹೋದರಿಯ ಜವಾಬ್ದಾರಿಯನ್ನು ವಹಿಸಿಕೊಂಡರು. ಮಾನಸಿಕ ಗಟ್ಟಿತನ ಮತ್ತು ದೈಹಿಕ ಶಕ್ತಿ ಅವರ ಬದುಕಿನ ಆಧಾರಸ್ತಂಭಗಳಾದವು. 

ಮೂಲತಃ ವೃತ್ತಿಯಲ್ಲಿ ಛಾಯಾಗ್ರಾಹಕಿಯಾಗಿದ್ದ ಅವರು ಚಲನಚಿತ್ರ ಪ್ರಚಾರ ಕಾರ್ಯಕ್ರಮಗಳು ಮತ್ತು ಸೆಲೆಬ್ರಿಟಿಗಳ ಪಾರ್ಟಿಗಳನ್ನು ವರದಿ ಮಾಡುತ್ತಿದ್ದರು. ಅಂತಹ ಒಂದು ಕಾರ್ಯಕ್ರಮದಲ್ಲಿ ಅಲ್ಲಿದ್ದ ಪುರುಷ ಬೌನ್ಸರ್ ಜೊತೆ ವಾಗ್ವಾದ ಹುಟ್ಟಿಕೊಂಡಿತು. ಇದು ಅಂತಿಮವಾಗಿ ಅವರು ಇದೇ ಕ್ಷೇತ್ರಕ್ಕೆ ಪ್ರವೇಶಿಸುವ ಬಗ್ಗೆ ಯೋಚಿಸಲು ಕಾರಣವಾಯಿತು. ಭದ್ರತೆಗೆ ಮಹಿಳೆಯರನ್ನು ಏಕೆ ನೇಮಿಸಿಕೊಳ್ಳಬಾರದು ಎಂದು ಅವರು ಪ್ರಶ್ನಿಸಿದರು. ಬೌನ್ಸರ್ ಆಗುವ ಬಗ್ಗೆ ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸಿದರು. ಈ ನಿರ್ಧಾರವು ಅವರನ್ನು ಹೊಸ ಹಾದಿಗೆ ಕರೆದೊಯ್ದು ನಿಲ್ಲಿಸಿತು.

23ರ ಹರೆಯದಲ್ಲೇ 250 ಕೋಟಿ ಆಸ್ತಿ, ಸ್ಟಾರ್ ನಟಿಯರಿಗೂ ಶಾಕ್ ಕೊಟ್ಟ ಹೀರೋಯಿನ್ ಯಾರು?

ಇಷ್ಟು ವರ್ಷಗಳಲ್ಲಿ ಕುಂಜುಮನ್ ಸೆಲೆಬ್ರಿಟಿ ಸಮಾರಂಭಗಳಿಂದ ಹಿಡಿದು ಹೈ-ಎನರ್ಜಿ ಪಬ್ ಪಾರ್ಟಿಗಳವರೆಗೆ ವಿವಿಧ ಕಾರ್ಯಕ್ರಮಗಳಲ್ಲಿ ಕೆಲಸ ಮಾಡಿದ್ದಾರೆ. ಮಹಿಳಾ ಸೆಲೆಬ್ರಿಟಿಗಳು ಮತ್ತು ವ್ಯಾಪಾರ ವೃತ್ತಿಪರರಿಗೆ ಬೆಂಗಾವಲು ನೀಡಿದ್ದಾರೆ. ಜನಸಂದಣಿಯನ್ನು ನಿಭಾಯಿಸುವ ಅಗತ್ಯವಿರುವ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದರೂ, ಅವರ ಲಿಂಗವನ್ನು ಲೆಕ್ಕಿಸದೆ ಜನರನ್ನು ನಿಭಾಯಿಸುತ್ತಾರೆ. ಸಂಭಾವ್ಯ ಅಪಾಯಗಳ ಹೊರತಾಗಿಯೂ ವೃತ್ತಿಯಲ್ಲಿ ಮಹಿಳೆಯಾಗಿ ಅವರು ಎಂದಿಗೂ ನಕಾರಾತ್ಮಕ ಅನುಭವಗಳನ್ನು ಎದುರಿಸಿಲ್ಲ. ಅವರ ಯಶಸ್ಸಿಗೆ ಅವರ ಆತ್ಮವಿಶ್ವಾಸ ಮತ್ತು ನಿಯಂತ್ರಿಸುವ ಸಾಮರ್ಥ್ಯ ಕಾರಣ.

ಪ್ರಶಸ್ತಿ ಸಮಾರಂಭಗಳು, ಸೆಲೆಬ್ರಿಟಿ ಪಾರ್ಟಿಗಳು ಮತ್ತು ನೈಟ್‌ ಲೈಫ್‌ ತಾಣಗಳಿಗೆ ಮಹಿಳಾ ಬೌನ್ಸರ್‌ಗಳಿಗೆ ಹೆಚ್ಚಿನ ಬೇಡಿಕೆಯಿದೆ. ಇವರು ಇತ್ತೀಚೆಗೆ ಪುರುಷ ಬೌನ್ಸರ್‌ಗಳಿಗೆ ಸಮಾನವಾಗಿ ವೇತನವನ್ನು ಪಡೆಯುತ್ತಿದ್ದಾರೆ. ಆದರೆ ಈ ಕ್ಷೇತ್ರದಲ್ಲಿ ಹೆಚ್ಚಿನ ಮಹಿಳೆಯರಿಗೆ ಔಪಚಾರಿಕ ತರಬೇತಿಯ ಕೊರತೆಯಿದೆಯಂತೆ.

ಐಶ್ವರ್ಯಾ ರೈ ಕಾರ್‌ ಆಕ್ಸಿಡೆಂಟ್‌, 5050 ನಂಬರ್ ಪ್ಲೇಟ್‌ನಿಂದ ಗೊತ್ತಾಯ್ತು ಸತ್ಯ!
 

vuukle one pixel image
click me!