ಬಾಲಿವುಡ್‌ನ ಅನೇಕ ಸ್ಟಾರ್ ಮಕ್ಕಳು ತಮ್ಮ ಪೋಷಕರ ಸ್ಟಾರ್‌ಡಮ್‌ನಿಂದ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಉತ್ತಮಾ ಸಿನಿಮಾಗಳಲ್ಲಿ ಅವಕಾಶವನ್ನು ಪಡೆಯುತ್ತಿದ್ದಾರೆ. ಆದರೆ ಲಕ್ ಎಲ್ಲರ ಪಾಲಿಗೆ ಒಂದೇ ಆಗಿರುವುದಿಲ್ಲ. ಅಂಥವರಲ್ಲಿ ಒಬ್ಬರು ಈ ಸ್ಟಾರ್ ಕಿಡ್. ಹಲವಾರು ಚಲನಚಿತ್ರಗಳಲ್ಲಿ ನಟಿಸಿದರೂ ಯಶಸ್ವೀ ನಟನಾಗಲು ಸಾಧ್ಯವಾಗಲ್ಲಿಲ್ಲ.
ಬಾಲಿವುಡ್‌ನ ಅನೇಕ ಸ್ಟಾರ್ ಮಕ್ಕಳು ತಮ್ಮ ಪೋಷಕರ ಸ್ಟಾರ್‌ಡಮ್‌ನಿಂದ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಉತ್ತಮಾ ಸಿನಿಮಾಗಳಲ್ಲಿ ಅವಕಾಶವನ್ನು ಪಡೆಯುತ್ತಿದ್ದಾರೆ. ಆದರೆ ಲಕ್ ಎಲ್ಲರ ಪಾಲಿಗೆ ಒಂದೇ ಆಗಿರುವುದಿಲ್ಲ. ಅಂಥವರಲ್ಲಿ ಒಬ್ಬರು ಹಿರಿಯ ನಟ ಮನೋಜ್ ಕುಮಾರ್ ಅವರ ಮಗ ಕುನಾಲ್ ಗೋಸ್ವಾಮಿ. ಹಲವಾರು ಚಲನಚಿತ್ರಗಳಲ್ಲಿ ನಟಿಸಿದರೂ ಕುನಾಲ್ ಯಶಸ್ವೀ ನಟನಾಗಲು ಸಾಧ್ಯವಾಗಲ್ಲಿಲ್ಲ.
ಮನೋಜ್ ಕುಮಾರ್ ಅವರ ಪುತ್ರ ಕುನಾಲ್ ಗೋಸ್ವಾಮಿ ಅವರು 'ಕ್ರಾಂತಿ' (1981) ಚಿತ್ರದ ಮೂಲಕ ಬಾಲ ಕಲಾವಿದರಾಗಿ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಆದರೆ, ನಾಯಕನಾಗಿ 1983ರಲ್ಲಿ ಶ್ರೀದೇವಿ ಎದುರು 'ಕಲಾಕಾರ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದು ಅವರ ಮೊದಲ ಚಿತ್ರವಾಗಿದ್ದು, ಇದರಲ್ಲಿ ಶ್ರೀದೇವಿಯಂತಹ ಟಾಪ್ ನಟಿಯೊಂದಿಗೆ ನಟಿಸಿದ್ದರೂ ಕುನಾಲ್‌ಗೆ ಹೆಚ್ಚು ಅವಕಾಶಗಳು ಸಿಗಲ್ಲಿಲ್ಲ. ಈ ಚಿತ್ರದಲ್ಲಿ ಕಿಶೋರ್ ಕುಮಾರ್ ಹಾಡಿದ ನೀಲೆ-ನೀಲೆ ಅಂಬರ್ ಪರ್ ಹಾಡು ಸಾಕಷ್ಟು ಜನಪ್ರಿಯವಾಯಿತು, ಆದರೆ ಇದರ ಹೊರತಾಗಿಯೂ, ಕುನಾಲ್ ಗೋಸ್ವಾಮಿ ಅವರ ವೃತ್ತಿಜೀವನದಲ್ಲಿ ಯಾವುದೇ ಬದಲಾವಣೆಯಾಗಲ್ಲಿಲ್ಲ.
ಗೆಲುವೇ ಕಾಣದ ಅಣ್ಣ-ತಂಗಿ, ಗಂಟು ಮೂಟೆ ಕಟ್ಟಿ ಸಿನಿಮಾ ಲೋಕದಿಂದಲೇ ದೂರ, ಅಪ್ಪ ಮಾತ್ರ ಸೂಪರ್‌ಸ್ಟಾರ್!
ಮಗ ಸಹ ತಮ್ಮಂತೆಯೇ ಸೂಪರ್‌ಸ್ಟಾರ್ ಆಗಬೇಕು ಎಂದುಕೊಂಡಿದ್ದ ಮನೋಜ್ ಕುಮಾರ್
'ಕಲಾಕರ್' ಚಿತ್ರದ ನಂತರ, ಕುನಾಲ್ ಗೋಸ್ವಾಮಿ 'ಘುಂಗ್ರು' (1983), 'ದೋ ಗುಲಾಬ್' (1983), ಮತ್ತು 'ಪಾಪ್ ಕಿ ಕಾಮಿ' (1990) ಚಿತ್ರಗಳನ್ನು ಮಾಡಿದರು, ಆದರೆ ಇವುಗಳು ಸಹ ಥಿಯೇಟರ್‌ನಲ್ಲಿ ನೆಲ ಕಚ್ಚಿದವು. ಇದರ ನಂತರ, ಅವರು 1989ರಲ್ಲಿ ನಟ ಗೋವಿಂದ ಅವರೊಂದಿಗೆ 'ಆಖ್ರಿ ಬಾಜಿ' ಚಿತ್ರದಲ್ಲಿ ನಟಿಸಿದರು. ಈ ಸಿನಿಮಾ ಸಹ ಸೋತು ಹೋಯಿತು.
ಮನೋಜ್ ಕುಮಾರ್ ತಮ್ಮಂತೆಯೇ ಮಗ ಸಹ ಸೂಪರ್‌ಸ್ಟಾರ್ ಆಗಬೇಕು ಎಂದು ಅಂದುಕೊಂಡಿದ್ದರು. ಆದರೆ ನಿರಂತರವಾಗಿ ನಟಿಸಿದ ಚಿತ್ರಗಳೆಲ್ಲವೂ ಫ್ಲಾಪ್ ಆದ ಮೇಲೆ ಕುನಾಲ್ ಗೋಸ್ವಾಮಿಗೆ ಹೆಚ್ಚು ಅವಕಾಶ ಸಿಗಲ್ಲಿಲ್ಲ. ಮಗನ ವೃತ್ತಿ ಉಳಿಸಲು ಸ್ವತಃ ಮನೋಜ್ ಕುಮಾರ್ ಅವರೇ ಮುಂದೆ ಬಂದರು. 1999ರಲ್ಲಿ, ಮನೋಜ್ ಕುಮಾರ್ ಅವರು ತಮ್ಮ ಸ್ವಂತ ನಿರ್ಮಾಣ ಸಂಸ್ಥೆಯ ಜೈ ಹಿಂದ್ ಚಲನಚಿತ್ರದೊಂದಿಗೆ ಕುನಾಲ್ ಗೋಸ್ವಾಮಿಯನ್ನು ಸಿನಿಮಾದಲ್ಲಿ ಮತ್ತೆ ಕಾಣಿಸಿಕೊಳ್ಳುವಂತೆ ಮಾಡಿದರು. ಈ ಚಿತ್ರದಲ್ಲಿ ರಿಷಿ ಕಪೂರ್ ಮತ್ತು ಶಿಲ್ಪಾ ಶಿರೋಡ್ಕರ್ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆದರೆ ಈ ಚಿತ್ರವೂ ವಿಫಲವಾಯಿತು. ನಂತರ ಕೆಲವು ಕಾರಣಗಳಿಂದ ಈ ಅವಧಿಯಲ್ಲಿ ಮನೋಜ್ ಕುಮಾರ್ ಅವರ ನಿರ್ಮಾಣ ಸಂಸ್ಥೆಯೂ ಮುಚ್ಚಲ್ಪಟ್ಟಿತು.
ಬಚ್ಚನ್ ಕುಟುಂಬದ ಮತ್ತೊಂದು ಕುಡಿ ಬಾಲಿವುಡ್‌ಗೆ: ತಾತ, ಮಾವಂಗೆ ಸಡ್ಡು ಹೊಡೀತಾನಾ ಅಗಸ್ತ್ಯ?
ಈ ಚಿತ್ರದ ಫ್ಲಾಪ್ ನಂತರ, ಕುನಾಲ್ ಗೋಸ್ವಾಮಿ ಅವರ ಚಲನಚಿತ್ರ ವೃತ್ತಿಜೀವನವು ಸಂಪೂರ್ಣವಾಗಿ ಕೊನೆಗೊಂಡಿತು. ನಂತರ ಅವರು ಟಿವಿ ಜಗತ್ತಿನಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸಿದರು. ಚಲನಚಿತ್ರಗಳ ಹೊರತಾಗಿ, ಕುನಾಲ್ ಗೋಸ್ವಾಮಿ ಟಿವಿ ಧಾರಾವಾಹಿಗಳಾದ 'ಭಾರತ್ ಕೆ ಶಾಹೀದ್', 'ಕಿಟ್ಟಿ ಪಾರ್ಟಿ' ಮತ್ತು 'ಪರಂಪರಾ'ಗಳಲ್ಲಿ ಕೆಲಸ ಮಾಡಿದರು ಆದರೆ ಅಲ್ಲಿಯೂ ಹೆಚ್ಚು ಗುರುತಿಸಿಕೊಳ್ಳಲ್ಲಿಲ್ಲ. ಕುನಾಲ್ ಗೋಸ್ವಾಮಿ ಅವರ ವೃತ್ತಿಜೀವನ ಮುಗಿದ ನಂತರ ಯಾವುದೇ ಚಲನಚಿತ್ರ ಅಥವಾ ಟಿವಿ ಶೋಗಳಲ್ಲಿ ಕಾಣಿಸಿಕೊಂಡಿಲ್ಲ. ಅವರು ಈಗ ಏನು ಮಾಡುತ್ತಿದ್ದಾರೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ.