ಐಶ್ವರ್ಯ ರೈ ಅಭಿಷೇಕ್ ಬಚ್ಚನ್ ಡಿವೋರ್ಸ್ ಸುದ್ದಿ ಬೆನ್ನಲ್ಲೇ ಸೊಸೆಯನ್ನು ಅನ್ಫಾಲೋ ಮಾಡಿದ್ರಾ ಅಮಿತಾಭ್ ಬಚ್ಚನ್? ಏನಿದರ ಅಸಲಿಯತ್ತು?
ಸದ್ಯ ಬಿ-ಟೌನ್ನಲ್ಲಿ ಹರಿದಾಡುತ್ತಿರುವ ಸುದ್ದಿಯೆಂದರೆ, ನಟಿ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ವಿಚ್ಛೇದನದ ಸುದ್ದಿ. ಅಭಿಷೇಕ್ ಬಚ್ಚನ್ ತಮ್ಮ ಮದುವೆಯ ಉಂಗುರವನ್ನು ಧರಿಸದೆ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದೇ ಇಷ್ಟೆಲ್ಲಾ ಊಹಾಪೋಹಕ್ಕೆ ಕಾರಣವಾಗಿದೆ. ರೆಡ್ಡಿಟ್ ಬಳಕೆದಾರರಲ್ಲಿ ಒಬ್ಬರು ಇದಕ್ಕೆ ಸಂಬಂಧಿಸಿದ ಫೋಟೋವನ್ನು ಹಂಚಿಕೊಂಡಿದ್ದಾರೆ. 'ಅಭಿಷೇಕ್ ಅವರು ತಮ್ಮ ಇತ್ತೀಚಿನ ಸಂದರ್ಶನಗಳಲ್ಲಿ ತಮ್ಮ ಮದುವೆಯ ಉಂಗುರವನ್ನು ಧರಿಸುತ್ತಿಲ್ಲ, ಇಲ್ಲಿಯವರೆಗೆ ಅವರು ಯಾವಾಗಲೂ ಅದನ್ನು ಧರಿಸುತ್ತಿದ್ದರು. ಹೀಗಾಗಿ ಅಭಿಷೇಕ್ ಹಾಗೂ ಐಶ್ವರ್ಯಾ ಸಪರೇಟ್ ಆಗುತ್ತಾರೆ ಎಂಬುದು ನಿಜವೆಂದು ತೋರುತ್ತಿದೆ' ಎಂದು ಬರೆದುಕೊಂಡಿದ್ದಾರೆ. ಇದರಿಂದಾಗಿಯೇ ಇಬ್ಬರೂ ಪ್ರತ್ಯೇಕ ಆಗುತ್ತಿದ್ದಾರೆ ಎನ್ನುವ ಸುದ್ದಿ ಸಕತ್ ಸದ್ದು ಮಾಡುತ್ತಿದೆ.
ರ್ಸನಲ್ ಲೈಫ್ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಅಭೀಷೇಕ್ ಹಾಗೂ ಐಶ್ವರ್ಯಾ ಇಬ್ಬರೂ ತಮ್ಮ ಲೈಫ್ ಕುರಿತು ಹೆಚ್ಚಿನ ಅಪ್ಡೇಟ್ ಬಿಟ್ಟುಕೊಡುವುದಿಲ್ಲ. ಆದರೆ ಇದೀಗ ಉಂಗುರದಿಂದಾಗಿ ಜನರೇ ಊಹಾಪೋಹ ಶುರುವಿಟ್ಟುಕೊಂಡಿದ್ದಾರೆ. ಆದರೆ ಮದುವೆ ಉಂಗುರ ಧರಿಸದೇ ಇರಲು ಹಲವು ಕಾರಣ ಇರಬಹುದು ಎನ್ನುವುದು ಫ್ಯಾನ್ಸ್ ಸಮಜಾಯಿಷಿ. ಇದರ ಫೋಟೋ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ಇದಕ್ಕೆ ನಾನಾ ಈತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಅವರಲ್ಲಿ ಒಬ್ಬರು, 'ಉಂಗುರ ಹಾಕಿಲ್ಲ ಎಂದ ಮಾತ್ರಕ್ಕೆ ಅವರು ಬೇರೆಯಾಗುತ್ತಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ' ಎಂದಿದ್ದಾರೆ. ಮತ್ತೊಬ್ಬರು, 'ಬಚ್ಚನ್ ಫ್ಯಾಮಿಲಿಯಲ್ಲಿ ವಿಚ್ಛೇದನ ಅಸಾಧ್ಯ ಎಂದು ನಾನು ಯಾವಾಗಲೂ ಭಾವಿಸುತ್ತೇನೆ' ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, 'ಅಮಿತಾಭ್ ಬದುಕಿರುವವರೆಗೆ ಅವರು ಹೀಗಾಗಲು ಬಿಡುವುದಿಲ್ಲ' ಎಂದು ಹೇಳಿದ್ದಾರೆ.
ಅಭಿಷೇಕ್ ಜೊತೆ ವಿಚ್ಛೇದನ ಸುದ್ದಿ ಬೆನ್ನಲ್ಲೇ ಮಗಳ ಜೊತೆ ಐಶ್ವರ್ಯ ರೈ ಡ್ಯಾನ್ಸ್ ವೈರಲ್!
ಆದರೆ ಇದರ ನಡುವೆಯೇ, ಇನ್ನೊಂದು ಸುದ್ದಿ ಸಕತ್ ವೈರಲ್ ಆಗುತ್ತಿದೆ. ಅದೇನೆಂದರೆ ಅಮಿತಾಭ್ ಬಚ್ಚನ್ ಅವರು, ಸೊಸೆ ಐಶ್ವರ್ಯ ರೈ ಅವರನ್ನು ಇನ್ಸ್ಟಾಗ್ರಾಮ್ನಲ್ಲಿ ಅನ್ಫಾಲೋ ಮಾಡಿದ್ದಾರೆ ಎನ್ನುವ ವಿಷಯವದು. ಸೋಷಿಯಲ್ ಮೀಡಿಯಾದಲ್ಲಿ ಅಮಿತಾಭ್ ಬಚ್ಚನ್ ಸಕತ್ ಆ್ಯಕ್ಟೀವ್ ಆಗಿದ್ದಾರೆ. ಆಗ್ಗಾಗ್ಗೆ ಹಲವು ವಿಷಯಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ತಮ್ಮ ಎಕ್ಸ್ ಖಾತೆಯಲ್ಲಿಯೂ ಇವರು ಹಲವು ವಿಷಯ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಇದರ ನಡುವೆಯೇ ಐಶ್-ಅಭಿಷೇಕ್ ಡಿವೋರ್ಸ್ ಸುದ್ದಿ ಸಾಕಷ್ಟು ಚರ್ಚೆಗೆ ಗ್ರಾಸವಾದ ಹಿನ್ನೆಲೆಯಲ್ಲಿ ಕೆಲವು ನೆಟ್ಟಿಗರು ಅಮಿತಾಭ್ ಅವರ ಇನ್ಸ್ಟಾಗ್ರಾಮ್ ಖಾತೆಯನ್ನು ನೋಡಿದ್ದಾರೆ. ಅದರಲ್ಲಿ ಐಶ್ವರ್ಯ ರೈ ಹೆಸರು ಕಾಣಿಸಲಿಲ್ಲ. ಇದೇ ಕಾರಣಕ್ಕೆ ಅಮಿತಾಭ್ ಐಶ್ವರ್ಯ ರೈ ಅವರನ್ನು ಅನ್ಫಾಲೋ ಮಾಡಿದ್ದಾರೆ ಎನ್ನುವ ಸುದ್ದಿಯಾಗಿದ್ದು, ಇದು ವಿಚ್ಛೇದನದ ಸುದ್ದಿಗೆ ಇನ್ನಷ್ಟು ಪುಷ್ಟಿ ಕೊಡುವಂತಿದೆ.
ಇನ್‌ಸ್ಟಾಗ್ರಾಂನಲ್ಲಿ ಅಮಿತಾಭ್ ಬಚ್ಚನ್ 74 ಮಂದಿಯನ್ನು ಫಾಲೋ ಮಾಡುತ್ತಿದ್ದಾರೆ. ಇವರಲ್ಲಿ ಪುತ್ರ ಅಭಿಷೇಕ್ ಬಚ್ಚನ್, ಅಜಯ್ ದೇವಗನ್, ಆಲಿಯಾ ಭಟ್, ಅನನ್ಯಾ ಪಾಂಡೆ ಸೇರಿದಂತೆ ಹಲವರನ್ನು ಬಿಗ್ ಬಿ ಫಾಲೋ ಮಾಡುತ್ತಿದ್ದಾರೆ. ಆದರೆ, ಸೊಸೆ ಐಶ್ವರ್ಯಾ ರೈ ಬಚ್ಚನ್ ಹೆಸರು ಇಲ್ಲ. ಅದೇ ಇನ್ನೊಂದೆಡೆ, ಐಶ್ವರ್ಯಾ ರೈ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪತಿ ಅಭಿಷೇಕ್ ಬಚ್ಚನ್ ಅವರನ್ನು ಮಾತ್ರ ಫಾಲೋ ಮಾಡ್ತಿದ್ದಾರೆ. ಮಾವ ಅಮಿತಾಭ್ ಬಚ್ಚನ್ ಅವರ ಹೆಸರು ಫಾಲೋ ಲಿಸ್ಟ್ನಲ್ಲಿ ಇಲ್ಲ ಎನ್ನುವುದು ಸುದ್ದಿಗೆ ಇನ್ನಷ್ಟು ಬಲ ಕೊಟ್ಟಿದೆ.
ಬೆತ್ತಲೆ ಸೀನ್ ವೇಳೆ ನಾಲ್ವರು ಇದ್ವಿ, ರಣಬೀರ್ ನರ್ವಸ್ ಆಗಿದ್ರು: ಶೂಟಿಂಗ್ ಸಮಯದ ಘಟನೆ ವಿವರಿಸಿದ ನಟಿ ತೃಪ್ತಿ
ಆದರೆ ಇನ್ನು ಕೆಲವರು ಹೇಳುತ್ತಿರುವುದೇ ಬೇರೆ. ಅದೇನೆಂದರೆ ಹಲವು ಸೆಲೆಬ್ರಿಟಿಗಳು ತಾವು ಯಾರನ್ನು ಫಾಲೋ ಮಾಡುತ್ತಿದ್ದೇವೆ ಎನ್ನುವುದನ್ನು ಇನ್ಸ್ಟಾಗ್ರಾಮ್ ಸೆಟ್ಟಿಂಗ್ನಲ್ಲಿ ಪ್ರೈವೇಟ್ ಲಿಸ್ಟ್ಗೆ ಸೇರಿಸಿ ಇಟ್ಟಿರುತ್ತಾರೆ. ಆದ್ದರಿಂದ ಅದು ಜನರಿಗೆ ಕಾಣಿಸುವುದಿಲ್ಲ. ಅಮಿತಾಭ್ ಅವರು ಕೂಡ ಹಾಗೆ ಮಾಡಿರಲಿಕ್ಕೆ ಸಾಕು. ಅಷ್ಟಕ್ಕೂ ಅಮಿತಾಭ್ ಆಗ್ಲಿ, ಐಶ್ವರ್ಯ ರೈ ಅವರಾಗಲೀ ಮೊದಲಿನಿಂದಲೂ ಪರಸ್ಪರ ಫಾಲೋ ಮಾಡುತ್ತಿದ್ದರಾ ಅಥವಾ ಅದು ಪಬ್ಲಿಕ್ ಆಗಿ ಕಾಣಿಸುತ್ತಿತ್ತಾ ಎನ್ನುವುದು ಗೊತ್ತಿಲ್ಲದೇ ಈ ರೀತಿ ಸುದ್ದಿ ಹರಡಿಸುವುದು ತಪ್ಪು ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಸದ್ಯ ಸಿನಿ ಪ್ರೇಮಿಗಳ ಬಾಯಲ್ಲಿ ಅಮಿತಾಭ್ ಕುಟುಂಬದ್ದೇ ಸುದ್ದಿ.