
ಫೆಬ್ರವರಿ 19ರಂದು ದೃಶ್ಯಂ 2 ಸಿನಿಮಾ ರಿಲೀಸ್ ಆದಾಗಿನಿಂದ ಭಾರೀ ಸುದ್ದಿ ಮಾಡಿದೆ. ಪರಭಾಷೆಯ ಜನರೂ ಆಸಕ್ತಿಯಿಂದ ಕಾಯುತ್ತಿದ್ದ ಬಹುನಿರೀಕ್ಷಿತ ಸೀಕ್ವೆಲ್ ಆಗಿತ್ತು ದೃಶ್ಯಂ 2. ಇದೀಗ ಈ ಸಿನಿಮಾಗೆ ಬಾಹುಬಲಿ ನಿರ್ದೇಶಕ ರಾಜಮೌಳಿ ಅವರು ಪ್ರತಿಕ್ರಿಯಿಸಿದ್ದಾರೆ.
ಜಿತು ಜೋಸೆಫ್ ಸಿನಿಮಾ ಬಗ್ಗೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗ್ತಿದೆ. ಎಸ್ಎಸ್ ರಾಜಮೌಳಿ ಅವರು ಜಿತು ಜೋಸೆಫ್ ಅವರಿಗೆ ಸಿನಿಮಾ ಮೆಚ್ಚಿ ಬರೆದಿದ್ದಾರೆ. ಈ ಸಂದೇಶದ ಸ್ಕ್ರೀನ್ ಶಾಟ್ಗಳನ್ನು ಶೇರ್ ಮಾಡಿದ ದೃಶ್ಯಂ ಡೈರೆಕ್ಟರ್ ಬಾಹುಬಲಿ ನಿರ್ದೇಶಕರ ಮೆಚ್ಚುಗೆ ಮಾತಿಗೆ ಧನ್ಯವಾದ ತಿಳಿಸಿದ್ದಾರೆ.
ಬಾಹುಬಲಿ ನಟಿಯ ಪೂಲ್ ಫೋಟೋಸ್..! ಜೊತೆಗೊಂದು ಮೆಸೇಜ್
ಧನ್ಯವಾದಗಳು ರಾಜಮೌಳಿ ಸರ್.. ನನ್ನ ಈ ಸಿನ ಸುಂದರವಾಗಿಸಿದಿರಿ ಎಂದು ಕ್ಯಾಪ್ಶನ್ ಕೊಟ್ಟು ಪೋಸ್ಟ್ ಶೇರ್ ಮಾಡಿದ್ದಾರೆ.
ದೃಶ್ಯಂ 2 ಒಂದು ವರ್ಲ್ಡ್ ಕ್ಲಾಸ್ ಸಿನಿಮಾ ಎಂದು ಹೊಗಳಿದ್ದಾರೆ ರಾಜಮೌಳಿ. ಹಾಯ್ ಜಿತು, ಇದು ರಾಜಮೌಳಿ. ಸಿನಿಮಾ ನಿರ್ದೇಶಕ. ಕೆಲವು ದಿನಗಳ ಹಿಂದೆ ದೃಶ್ಯಂ 2 ನೋಡಿದೆ. ನಾನು ದೃಶ್ಯಂ ಮೊದಲ ಸಿನಿಮಾ ನೋಡಿದೆ, ನಿರ್ದೇಶನ, ಚಿತ್ರಕಥೆ, ಎಡಿಟಿಂಗ್, ನಟನೆ ಪ್ರತಿಯೊಂದು ಅದ್ಭುತವಾಗಿದೆ ಎಂದಿದ್ದಾರೆ.
ಬರವಣಿಗೆ ನಿಜಕ್ಕೂ ಒಂದು ರೀತಿ ಭಿನ್ನವಾದದ್ದು, ಅದು ವಲ್ರ್ಡ್ ಸ್ಟಾಂಡರ್ಡ್. ಮೊದಲ ಭಾಗವೇ ಒಂದು ಮಾಸ್ಟರ್ ಪೀಸ್. ಎರಡನೇ ಭಾಗ ಸುಂದರವಾಗಿ ಮೊದಲ ಭಾಗದ ಜೊತೆ ಮರ್ಜ್ ಆಗಿದೆ. ನಿಮ್ಮಿಂದ ಇನ್ನಷ್ಟು ಮಾಸ್ಟರ್ ಪೀಸ್ ನಿರೀಕ್ಷಿಸುತ್ತೇನೆ ಎಂದಿದ್ದಾರೆ.
ಬಾಹುಬಲಿ ನಿರ್ದೇಶನ ಸಿನಿಮಾದಲ್ಲಿ ಸೀತೆಯಾಗಿ ಆಲಿಯಾ..!
ದೃಶ್ಯಂ 2 ಸಿನಿಮಾದಲ್ಲಿ ಮೋಹನ್ ಲಾಲ್, ಮೀನಾ, ಎಸ್ತರ್ ಅನಿಲ್, ಅನ್ಸಿಬಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನಟಿ ಆಶಾ ಶರತ್, ಮರಳಿ ಗೋಪಿ, ಕೆಬಿ ಗಣೇಶ್ ಕುಮಾರ್ ಅವರು ಸಪೋರ್ಟಿಂಗ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.