ಕೊನೆಯ ಪೋಸ್ಟ್ ಹಾಕಿ ಸೋಶಿಯಲ್ ಮೀಡಿಯಾಗೆ ಗುಡ್ ಬೈ ಹೇಳಿದ ಆಮೀರ್ ಖಾನ್!

Published : Mar 15, 2021, 08:47 PM IST
ಕೊನೆಯ ಪೋಸ್ಟ್ ಹಾಕಿ ಸೋಶಿಯಲ್ ಮೀಡಿಯಾಗೆ ಗುಡ್ ಬೈ ಹೇಳಿದ ಆಮೀರ್ ಖಾನ್!

ಸಾರಾಂಶ

ಅವಾರ್ಡ್ ಸಮಾರಂಭಗಳಿಂದ ದೂರ ಉಳಿದಿರುವ ಬಾಲಿವುಡ್ ನಟ ಆಮಿರ್ ಖಾನ್ ಇದೀಗ ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಆಮೀರ್ ಖಾನ್ ಸೋಶಿಯಲ್ ಮೀಡಿಯಾಗೆ ಗುಡ್‌ಬೈ ಹೇಳಿದ್ದಾರೆ.

ಮುಂಬೈ(ಮಾ.15): ಫೇಸ್‌ಬುಕ್, ಟ್ವಿಟರ್, ಇನ್ಸ್‌ಸ್ಟಾಗ್ರಾಂಗಳಿಂದ ಬಾಲಿವುಡ್ ನಟ ಆಮಿರ್ ಖಾನ್ ದೂರ ಸರಿದಿದ್ದಾರೆ. ಹೌದು, ಆಮೀರ್ ಖಾನ್ ಇದೀಗ ಸೋಶಿಯಲ್ ಮೀಡಿಯಾಗೆ ಗುಡ್ ಬೈ ಹೇಳಿದ್ದಾರೆ. ಇನ್ನು ಮುಂದೆ ಸಾಮಾಜಿಕ ಜಾಲತಾಣದಲ್ಲಿ ಯಾವು ಇರುವುದಿಲ್ಲ ಎಂದು ಕೊನೆಯ ಪೋಸ್ಟ್ ಮಾಡಿದ್ದಾರೆ.

150 ಕೋಟಿ ಬೆಲೆಯ 3 ಬಂಗಲೆ, ಜಮೀನು, ಲಕ್ಷುರಿಯಸ್‌ ಕಾರುಗಳ ಒಡೆಯ ಆಮೀರ್ ಖಾನ್!

ಸಿನಿಮಾ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಲು ಹಾಗೂ ತಮ್ಮ ಪಾತ್ರಗಳ ಕುರಿತು ಹೆಚ್ಚಿನ ಗಮನ ಹರಿಸಲು ಸಾಮಾಜಿಕ ಜಾಲತಾಣದಿಂದ ಹೊರಗುಳಿಯುತ್ತಿರುವುದಾಗಿ ಆಮೀರ್ ಖಾನ್ ಹೇಳಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ರೀತಿ ಪೋಸ್ಟ್ ಮಾಡಿ ಗುಡ್ ಬೈ ಹೇಳಿದ್ದಾರೆ.

 

ಆಮೀರ್ ಖಾನ್ ನಿರ್ಮಾಣ ಸಂಸ್ಥೆಯ ಅಧೀಕೃತ ಸಾಮಾಜಿಕ ಜಾಲತಾಣದ ಖಾತೆಗಳಿಂದ ಮುಂದಿನ ಚಿತ್ರ ಹಾಗೂ ಆಮೀರ್ ಖಾನ್ ಪ್ರಾಜೆಕ್ಟ್ ಕುರಿತ ಮಾಹಿತಿ ಲಭ್ಯವಾಗಲಿದೆ ಎಂದು ಆಮೀರ್ ಹೇಳಿದ್ದಾರೆ. ಹುಟ್ಟು ಹಬ್ಬದ ಮರುದಿನವೇ ಆಮೀರ್ ಸೋಶಿಯಲ್ ಮೀಡಿಯಾಗೆ ಗುಡ್ ಬೈ ಹೇಳಿದ್ದಾರೆ.

ಇತ್ತ ಅಮೀರ್ ಖಾನ್ ಸಾಮಾಜಿಕ ಜಾಲತಾಣ ಖಾತೆಗಳಿಗೆ ಗುಡ್‌ಬೈ ಹೇಳಲು ಕಮೆಂಟ್‌ಗಳ ಭಯ ಎಂದು ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಹಲವರು ಆಮೀರ್ ನಿರ್ಧಾರವನ್ನು ಸ್ವಾಗತಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ
ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?