Oscar 2023; ಆಸ್ಕರ್ ಗೆದ್ದ ಬಳಿಕ ರಾಮ್ ಚರಣ್, ಜೂ.ಎನ್‌ಟಿಆರ್ ಮತ್ತು ಇಡೀ ಆರ್ ಆರ್ ಆರ್ ತಂಡದ ರಿಯಾಕ್ಷನ್ ವಿಡಿಯೋ ವೈರಲ್ ಆಗಿದೆ.
RRR ಸಿನಿಮಾದ ನಾಟು ನಾಟು.. ಹಾಡು 2023ನೇ ಸಾಲಿನ ಆಸ್ಕರ್ ಪ್ರಶಸ್ತಿ ಗೆದ್ದುಕೊಂಡಿದೆ. ಇದು ನಿಜಕ್ಕೂ ಭಾರತೀಯರಿಗೆ ಹೆಮ್ಮೆಯ ಕ್ಷಣವಾದೆ. ನಾಟು ನಾಟು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ವಿನ್ ಆಗಿದೆ. ಆರ್ ಆರ್ ಆರ್ ತಂಡಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. 2023 ರ ಆಸ್ಕರ್ ಪ್ರಶಸ್ತಿ ವಿಜೇತರನ್ನು ಘೋಷಿಸುತ್ತಿದ್ದಂತೆ ನಿರ್ದೇಶಕ ಎಸ್‌ಎಸ್ ರಾಜಮೌಳಿ, ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಸಂತೋಷ, ಕಣ್ಣೀರು ಮತ್ತು ಅಪ್ಪುಗೆಯಿಂದ ಸಂಭ್ರಮಿಸಿದರು, ಭಾವುಕರಾದರು. ಆಸ್ಕರ್ ಗೆದ್ದ ಬಳಿಕ ಆರ್ ಆರ್ ಆರ್ ತಂಡದ ರಿಯಾಕ್ಷನ್ ವಿಡಿಯೋ ವೈರಲ್ ಆಗಿದೆ.
ಆಸ್ಕರ್ ಗೆದ್ದ ಬಳಿಕ ರಾಜಮೌಳಿ ಮತ್ತು ಅವರ ಕುಟುಂಬ ಹಾಗೂ ಆರ್ ಆರ್ ಆರ್ ತಂಡದ ಪ್ರತಿಕ್ರಿಯೆಯ ವಿಡಿಯೋಗಳು ಎಲ್ಲಾ ಕಡೆ ಹರಿದಾಡುತ್ತಿದ್ದು ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪ್ರಶಸ್ತಿ ಘೋಷಣೆ ಮಾಡುತ್ತಿದ್ದಂತೆ ರಾಮ್ ಚರಣ್ ಪತ್ನಿ ಉಪಾಸನ ಅವರನ್ನು ತಬ್ಬಿಕೊಂಡರು. ಇಡೀ ತಂಡದ ಸಂಭ್ರಮ ಮುಗಿಲು ಮುಟ್ಟಿತ್ತು, ಭಾವುಕರಾದರು. ರಾಮ್ ಚರಣ್ ಪತ್ನಿ ಉಪಾಸನಾ ಈ ಬಗ್ಗೆ ಪ್ರತಿಕ್ರಿಯೆ ನೀಡಿ ನಾವು ಗೆದ್ದವು ಎಂದು ಕ್ಯಾಪ್ಷನ್ ನೀಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದರು.
ರಾಮ್ ಚರಣ್ ಪ್ರತಿಕ್ರಿಯೆ
ರಾಮ್ ಚರಣ್ ಸಾಮಾಜಿಕ ಜಾಲತಾಣದಲ್ಲಿ ಆಸ್ಕರ್ ಪ್ರಶಸ್ತಿ ಮನೆಗೆ ಬರ್ತಿದೆ ಎಂದು ಹೇಳಿದ್ದಾರೆ. 'ನಾವು ಗೆದ್ದಿದ್ದೇವೆ. ನಾವು ಭಾರತೀಯ ಚಿತ್ರರಂಗವಾಗಿ ಗೆದ್ದಿದ್ದೇವೆ. ನಾವೇ ಗೆದ್ದೆವು. ಆಸ್ಕರ್ ಪ್ರಶಸ್ತಿಗಳು ಮನೆಗೆ ಬರುತ್ತಿವೆ' ಎಂದು ಪೋಸ್ಟ್ ಮಾಡಿದ್ದಾರೆ.
OSCAR ವೇದಿಕೆಯಲ್ಲಿ ದೀಪಿಕಾ ಪಡುಕೋಣೆ: ಹಾಡಿ ಹೊಗಳಿದ ಕಂಗನಾ ರಣಾವತ್
ಎಂಎಂ ಕೀರವಾಣಿ ಪ್ರತಿಕ್ರಿಯೆ
ಆಸ್ಕರ್ ಗೆದ್ದು ಬೀಗಿರುವ ಎಂ ಎಂ ಕೀರವಾಣಿ ಪ್ರತಿಕ್ರಿಯೆ ನೀಡಿ 'ಇದು ಎಲ್ಲದರ ಆರಂಭ ಅಷ್ಟೆ' ಎಂದು ಹೇಳಿದರು. 'ಜಗತ್ತಿಗೆ, ಅದರಲ್ಲೂ ಪಾಶ್ಚಿಮಾತ್ಯ ಪ್ರಪಂಚಕ್ಕೆ ಭಾರತೀಯ ಮತ್ತು ಏಷ್ಯನ್ ಸಂಗೀತದ ಮೇಲೆ ಹೆಚ್ಚು ಒಲವು ತೋರುತ್ತಾರೆ. ಇದು ಬಹಳ ಸಮಯವಾದೆ. ಜಗತ್ತು ನಮ್ಮ ಸಂಸ್ಕೃತಿಯನ್ನು ಸ್ವೀಕರಿಸುತ್ತಿರುವುದು ನನಗೆ ತುಂಬಾ ಸಂತೋಷವಾಗಿದೆ' ಎಂದು ಹೇಳಿದರು.
Oscar 2023: ಪ್ರಧಾನಿ ಮೋದಿ, ಸಿಎಂ ಬೊಮ್ಮಾಯಿ ಸೇರಿದಂತೆ RRRಗೆ ಅಭಿನಂದನೆಗಳ ಮಹಾಪೂರ
ಸಾಹಿತಿ ಚಂದ್ರಬೋಸ್
ನಾಟು ನಾಟು...ಹಾಡಿನ ಸಾಹಿತಿ ಚಂದ್ರಬೋಸ್ ಪ್ರತಿಕ್ರಿಯೆ ನೀಡಿ, 'ನಮ್ಮ ಭಾಷೆಯಲ್ಲಿ ಸಾಕಷ್ಟು ಪದಗಳು, ಅಭಿವ್ಯಕ್ತಿಗಳು, ಬಹಳಷ್ಟು ಭಾವನೆಗಳಿವೆ' ಎಂದು ಹೇಳಿದರು. 'ಅತ್ಯಂತ ಶ್ರೇಷ್ಠ ಭಾಷೆ ಮತ್ತು ಸಾಹಿತ್ಯಿಕ ಭಾಷೆ. ತುಂಬಾ ಸಂಗೀತಮಯ ಭಾಷೆ. ನೀವು ಎಲ್ಲವನ್ನೂ ಬರೆದರೆ ಅದು ಸಂಗೀತದಂತೆ ಧ್ವನಿಸುತ್ತದೆ. ನಿಮ್ಮಂತಹ ಜನರು ಹಾಡನ್ನು ಪ್ರೀತಿಸುತ್ತಿರುವುದರಿಂದ, ಈ ರೀತಿಯ ಸಂಗೀತ ಮತ್ತು ಧ್ವನಿ ಸಾಧ್ಯಾಗುತ್ತದೆ' ಎಂದು ಹೇಳಿದರು.