'ನಾನು ಮತ್ತು ಲಕ್ಷ್ಮೀ ಬಹಳಷ್ಟು ಸಿನಿಮಾಗಳಲ್ಲಿ ಒಟ್ಟಿಗೇ ನಟಿಸಿದ್ದೇವೆ. ಆದರೆ. ಲಕ್ಷ್ಮಿ ನನ್ನನ್ನು ಇಷ್ಟಪಟ್ಟಿದ್ದಾಳೆ ಎಂಬುದು ನನಗೆ ಗೊತ್ತಿರಲಿಲ್ಲ. ಅದೊಂದು ದಿನ ನೀವು ನನ್ನ ಜತೆಗೆ ಶಾಪಿಂಗ್ ಮಾಡಲು ಬರುತ್ತೀರಾ ಎಂದು ಲಕ್ಷ್ಮೀ ಕೇಳಿದರು..
ಹಿರಿಯ ನಟಿ, ಪಂಚಭಾಷಾ ತಾರೆ ಲಕ್ಷ್ಮೀ (Lakshmi) ಬಗ್ಗೆ ಅವರ ಮಾಜಿ ಪತಿ ಮೋಹನ್ ಶರ್ಮಾ (Mohan Sharma) ಮಾತನಾಡಿದ್ದಾರೆ. 1975ರಲ್ಲಿ ನಟಿ ಲಕ್ಷ್ಮೀ ಹಾಗೂ ಮೋಹನ್ ಶರ್ಮಾ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಅವರಿಬ್ಬರ ಸಂಸಾರದಲ್ಲಿ ವೈಮನಸ್ಯ ಮೂಡಿದೆ. ಯಾವಾಗ ತಾವಿಬ್ಬರೂ ಒಟ್ಟಿಗೇ ಇರಲು ಸಾಧ್ಯವೇ ಇಲ್ಲ ಎನ್ನಿಸಿತೋ ಆಗ ಅವರಿಬ್ಬರೂ ಬೇರೆಯಾಗುವ ನಿರ್ಧಾರಕ್ಕೆ ಬಂದರು. 1980ರಲ್ಲಿ ಮೋಹನ್ ಶರ್ಮಾ ಹಾಗು ನಟಿ ಜೂಲಿ ಲಕ್ಷ್ಮೀ ಅವರಿಬ್ಬರೂ ವಿಚ್ಛೇದನದ ಮೂಲಕ ಬೇರೆಬೇರೆಯಾದರು.
ಡಿವೋರ್ಸ್ ಬಳಿಕ ನಟಿ ಲಕ್ಷ್ಮೀಯವರು ನಟ ಹಾಗೂ ನಿರ್ದೇಶಕ ಶಿವಚಂದ್ರನ್ (Shivachadran) ಅವರನ್ನು ಪ್ರೀತಿಸಿ ಎರಡನೇ ಮದುವೆಯಾದರು. ಬಳಿಕ, ಲಕ್ಷ್ಮೀ ಆಗಲಿ ಮೋಹನ್ ಶರ್ಮಾ ಯಾವ ಹೇಳಿಕೆಯನ್ನೂ ಕೊಟ್ಟು ಸಂಚಲನ ಸೃಷ್ಟಿಸಿರಲಿಲ್ಲ. ಇದೀಗ ನಟಿ ಲಕ್ಷ್ಮೀ ಬಗ್ಗೆ ಮಾಜಿ ಪತಿ ಮೋಹನ್ ಶರ್ಮಾ ಶಾಕಿಂಗ್ ಹೇಳಿಕೆ ಕೊಟ್ಟು ಅಚ್ಚರಿ ಮೂಡಿಸಿದ್ದಾರೆ. ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಮೋಹನ್ ಶರ್ಮಾ ಅವರು ತಮ್ಮಿಬ್ಬರ ಹಳೆಯ ಪ್ರೀತಿ, ಮದುವೆ ಮತ್ತು ವಿಚ್ಛೇದನದ ಬಗ್ಗೆ ಮಾತನಾಡಿದ್ದಾರೆ.
ಗಲ್ಲಿಗೇರಬೇಕಾದವನು ಕಣ್ಣು ಮಿಟುಕಿಸಿ, ಮ್ಮು..ಎಂದನಂತೆ! ಜ್ಯೂಲಿ ಲಕ್ಷ್ಮೀ ಹೇಳಿದ ಕೈದಿ ಕಥೆ
'ನಾನು ಮತ್ತು ಲಕ್ಷ್ಮೀ ಬಹಳಷ್ಟು ಸಿನಿಮಾಗಳಲ್ಲಿ ಒಟ್ಟಿಗೇ ನಟಿಸಿದ್ದೇವೆ. ಆದರೆ. ಲಕ್ಷ್ಮಿ ನನ್ನನ್ನು ಇಷ್ಟಪಟ್ಟಿದ್ದಾಳೆ ಎಂಬುದು ನನಗೆ ಗೊತ್ತಿರಲಿಲ್ಲ. ಅದೊಂದು ದಿನ ನೀವು ನನ್ನ ಜತೆಗೆ ಶಾಪಿಂಗ್ ಮಾಡಲು ಬರುತ್ತೀರಾ ಎಂದು ಲಕ್ಷ್ಮೀ ನಟ ಮೋಹನ್ ಅವರಿಗೆ ಕೇಳಿದರಂತೆ. ಅವರು ಹೇಳಿದ ಕಡೆಯೆಲ್ಲ ಕರೆದುಕೊಂಡು ಹೋಗಿ ಶಾಪಿಂಗ್ ಮಾಡಿಸಿದೆ. ಆಗ ನಾನು ಒಂದು ಅಂಗಡಿಯಲ್ಲಿನ ಸೆಂಟ್ ಬಾಟಲ್ ಒಂದನ್ನು ಖರೀದಿಸಲು ಮುಂದಾದೆ. ಅದರ ಬೆಲೆ ಆಗ 500 ರೂಪಾಯಿ ಇತ್ತು. ಬಳಿಕ, ದರ ಜಾಸ್ತಿ ಇದೆ, ಬೇಡವೆಂದು ಸುಮ್ಮನಾದೆ.
ಮದುವೆಗಾಗಿ ಧರ್ಮವನ್ನೇ ಬಿಟ್ರು, ಆದ್ರೆ ಡಿವೋರ್ಸ್ ಆಯ್ತು; ಸ್ಟಾರ್ ನಟಿ ಬದುಕು ದುರಂತದಲ್ಲಿ ಕೊನೆಯಾಯ್ತು!
ಬಳಿಕ ಕಾರ್‌ನಲ್ಲಿ ನಾನು ನೋಡಿದ್ದ ಸೆಂಟ್ ಬಾಟಲ್ ಅನ್ನು ಲಕ್ಷ್ಮೀ ನನಗೆ ಉಡುಗೊರೆಯಾಗಿ ನೀಡಿದರು. ಅಲ್ಲೇ 'ನನಗೆ ನೀನೆಂದರೆ ತುಂಬ ಇಷ್ಟ. ನಿಮ್ಮ ಜೀವನದಲ್ಲಿ ನನಗೂ ಅವಕಾಶ ನೀಡಿದರೆ, ನಿಮ್ಮ ನಾಯಿಯಂತೆ ಇರುತ್ತೇನೆ' ಎಂದು ಲಕ್ಷ್ಮೀ ಹೇಳಿದರು' ಎಂದಿದ್ದಾರೆ ಮೋಹನ್ ಶರ್ಮಾ. ಲಕ್ಷ್ಮೀ ಹೇಳಿದ ಮಾತುಗಳನ್ನು ಕೇಳಿ ನಾನು ಶಾಕ್‌ಗೆ ಒಳಗಾದೆ. ತಕ್ಷಣಕ್ಕೆ ಏನು ಉತ್ತರ ನೀಡಬೇಕೆಂಬುದೇ ನನಗೆ ಗೊತ್ತಾಗಲಿಲ್ಲ. ಅದೇ ಮೊದಲ ಸಲ ಒಬ್ಬ ಹುಡುಗಿ, ನನಗೆ ಪ್ರೇಮ ನಿವೇದನೆ ಮಾಡಿದ್ದಳು.
ಮಹೇಶ್ ಬಾಬು ಜತೆ ಕಿಸ್ ಮಾಡಿದ್ದೀರಾ ಎಂದ ಫ್ಯಾನ್ಸ್‌ಗೆ ರಶ್ಮಿಕಾ ಮಂದಣ್ಣ ಏನಂದ್ರು ನೋಡಿ!
ಆದರೆ, ಲಕ್ಷ್ಮೀಯ ಮಾತನ್ನು ನಾನು ಅಂದೇ ಬಹಳ ಗಂಭೀರವಾಗಿ ತೆಗೆದುಕೊಂಡೆ. ಆವತ್ತು ರಾತ್ರಿ ನನಗೆ ನಿಜವಾಗಿಯೂ ನಿದ್ದೆಯೇ ಬರಲಿಲ್ಲ. ಮರುದಿನ ಕರೆ ಮಾಡಿದ ಲಕ್ಷ್ಮೀ ರೂಮಿಗೆ ಬಾ ಎಂದರು. ಅಲ್ಲಿ ಏನು ನಡೆಯಬಹುದು ಎಂದು ನಾನು ಊಹಿಸಿದ್ದೆ. ನೇರವಾಗಿ ಹೊಟೇಲ್ ರೂಮಿಗೆ ಹೋದೆ. ನಾವಿಬ್ಬರೂ ಮದುವೆಯಾಗೋಣವೇ? ಎಂದು ಕೇಳಿದರು ಲಕ್ಷ್ಮಿ. ಸದ್ಯ ನನಗೆ ನನ್ನ ವೃತ್ತಿ ಕಡೆ ಗಮನಹರಿಸಬೇಕು. ಮದುವೆ ಬಗ್ಗೆ ಯೋಚನೆ ಇಲ್ಲ ಎಂದು ನಾನು ಹೇಳಿದ್ದೆ.
ಸದ್ಯದಲ್ಲೇ ತೆರೆಗೆ ಸತೀಶ್-ರಚಿತಾ ನಟನೆಯ ಮ್ಯಾಟ್ನಿ; ಮತ್ತೆ ಕಮಾಲ್ ಮಾಡಲಿದ್ಯಾ ಅಯೋಗ್ಯ ಜೋಡಿ?
ನಾನು ಗೌರವಾನ್ವಿತ ಕುಟುಂಬದಿಂದ ಬಂದವನು. ಮದುವೆ ಆಗದ ಹೊರತು ನಾನು ಏನನ್ನೂ ಮಾಡಲು ಇಷ್ಟಪಡಲಿಲ್ಲ. ಲಕ್ಷ್ಮೀ ಮದುವೆ ಬಗ್ಗೆ ಪ್ರಸ್ತಾಪಿಸುತ್ತಿದ್ದಂತೆ, ಆಕೆ ಬಳಿಯೇ ಕುಂಕುಮ ಪಡೆದು, ಅವಳ ಹಣೆಗೆ ಹಚ್ಚಿದೆ. ಆ ರಾತ್ರಿಯೇ ನಾವಿಬ್ಬರೂ ಗಂಡ ಹೆಂಡತಿಯಾದೆವು. ಚೆನ್ನೈಗೆ ಬಂದು, ವಕೀಲರ ಮೂಲಕ ಮಾಧ್ಯಮಗಳಿಗೆ ನಮ್ಮ ಮದುವೆ ವಿಚಾರ ತಿಳಿಸಿದೆವು' ಎಂದು ಈಗ್ ಲಕ್ಷ್ಮೀ (Julie Laksmi) ಮಾಜಿ ಪತಿ ಎನಿಸಿಕೊಂಡಿರುವ ಮೋಹನ್ ಶರ್ಮಾ ಯೂಟ್ಯೂಬ್ ಚಾನೆಲ್ ಇಂಟರ್‌ವ್ಯೂ ದಲ್ಲಿ ಹೇಳಿದ್ದಾರೆ. ಲಕ್ಷ್ಮೀ ಬಗೆಗಿನ ಅವರ ಹೇಳಿಕೆ ಸದ್ಯ ಭಾರೀ ವೈರಲ್ ಆಗುತ್ತಿದ್ದು, ಹಳೆಯ ಕಥೆಯೊಂದು ಹೊಸ ಸಂಗತಿಯಾಗಿ ಈಗ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡತೊಡಗಿದೆ.