
ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮಗಳಲ್ಲಿ ಮಜಾ ಟಾಕೀಸ್(Majaa Talkies) ಕೂಡ ಒಂದು. ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್(Srujan Lokesh) ನಡೆಸಿಕೊಡುತ್ತಿದ್ದ ಮಜಾ ಟಾಕೀಸ್ ಶೋ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಮನರಂಜನೆ ಜೊತೆಗೆ ಸಿನಿಮಾ ಪ್ರಚಾರದ ಕೆಲಸ ಮಾಡುತ್ತಿದ್ದ ಈ ಶೋ ಕಿರುತೆರೆ ಪ್ರೇಕ್ಷಕರ ನೆಚ್ಚಿನ ಕಾರ್ಯಕ್ರಮವಾಗಿತ್ತು. ಸೃಜನ್ ಲೋಕೇಶ್ ವೃತ್ತಿ ಜೀವನಕ್ಕೆ ದೊಡ್ಡ ತಿರುವು ನೀಡಿದ ಕಾರ್ಯಕ್ರಮವಿದು. ಈ ಶೋ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡುತ್ತಿದ್ದ ಸೃಜಾ ಈ ಶೋಗೆ ಬ್ರೇಕ್ ಹಾಕಿ ಅನೇಕ ತಿಂಗಳುಗಳೇ ಕಳೆಯಿತು. ಅಪಾರ ಸಂಖ್ಯೆಯ ಅಭಿಮಾನಿಗಳು ಈ ಶೋ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಯಾವಾಗ ವಾಪಾಸ್ ಆಗಲಿದೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಸೃಜನ್ ಸದ್ಯ ಬೇರೆ ಬೇರೆ ರಿಯಾಲಿಟಿ ಶೋಗಳನ್ನು ನಡೆಸುತ್ತಿದ್ದಾರೆ. ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ನಡುವೆ ಸೂಪರ್ ಹಿಟ್ ಮಜಾ ಟಾಕೀಸ್ ಯಾವಾಗ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. ಇದಕ್ಕೆ ಸೃಜ ಪ್ರತಿಕ್ರಿಯೆ ನೀಡಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿರವ ಸೃಜಾ ಮಾಜಾ ಟಾಕೀಸ್ ಯಾವಾಗ ಬರಲಿದೆ ಎನ್ನುವ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಚಿತ್ರೋದ್ಯಾಮ ಮತ್ತೆ ಟ್ರ್ಯಾಕ್ ಗೆ ಮರಳಿದ ಬಳಿಕ ಮಜಾ ಟಾಕೀಸ್ ಮತ್ತೆ ಬರಲಿದೆ ಎಂದಿದ್ದಾರೆ.
'ಚಿತ್ರರಂಗ ಮೊದಲಿನ ಹಾಗೆ ಸಹಜ ಸ್ಥಿತಿಗೆ ಬಂದ ಬಳಿಕ ಸಣ್ಣ ಪರದೆ ಮೇಲೆ ಮಜಾ ಟಾಕೀಸ್ ಬರಲಿದೆ. ಸದ್ಯ ಚಿತ್ರರಂಗ ಬಿಕ್ಕಟ್ಟು ಎದುರಿಸುತ್ತಿದೆ. ಮಜಾ ಟಾಕೀಸ್ ಹೊಸ ಸಿನಿಮಾಗಳ ಪ್ರಚಾರದ ಒಂದು ಭಾಗವಾಗಿದೆ. ಅದೇ ಮುಖ್ಯ ಕೇಂದ್ರ ಬಿಂದು. ಹಾಗಾಗಿ ಸಿನಿಮಾರಂಗ ಸಹಜ ಸ್ಥಿತಿಗೆ ಬರಬೇಕು' ಎಂದಿದ್ದಾರೆ.
'ಸೆಲೆಬ್ರಿಟಿಗಳನ್ನು ಆಸ್ಮಿಕವಾಗಿ ಕರೆದು ಅಥವಾ ಸಹಜವಾಗಿ ಕರೆದು ಕಾರ್ಯಕ್ರಮ ಮಾಡುವುದು ಮಜಾ ಟಾಕೀಸ್ ಸಿದ್ಧಾಂತವಲ್ಲ. ಸಿನಿಮಾತಂಡದ ಪ್ರಚಾರಕ್ಕಾಗಿ ಮಾತ್ರ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಹಾಗಾಗಿ ಕನ್ನಡ ಸಿನಿಮಾರಂಗ ಮತ್ತೆ ಟ್ರ್ಯಾಕ್ ಗೆ ಮರಳಿದಾಗ ಮಜಾ ಟಾಕೀಸ್ ಖಂಡಿತಾ ಮತ್ತೆ ಬರುತ್ತೆ. ಆ ಸಮಯ ಬರುವವರೆಗೂ ನಾವು ಕಾಯಲೇಬೇಕು ಅಷ್ಟೆ' ಎಂದು ಹೇಳಿದ್ದಾರೆ.
ಗಿಚ್ಚಿ ಗಿಲಿಗಿಲಿ ಶೋಗೆ ರೀಲ್ಸ್ ಮಾಡುವವರ ಎಂಟ್ರಿ ಆಗಿದೆ, ಶ್ರುತಿ ಅವರೇ ಆಫ್ ಸ್ಕ್ರೀನ್ ತರ್ಲೆ: ಸೃಜನ್ ಲೋಕೇಶ್
ಮಜಾ ಟಾಕೀಸ್ ನಲ್ಲಿ ಸುಮಾರು 500 ಕ್ಕೂ ಸಿನಿಮಾಗಳನ್ನು ಪ್ರಚಾರ ಮಾಡಿದ್ದು ಒಂದು ಪೈಸೆಯನ್ನು ಪಡೆದಿಲ್ಲ ಎಂದಿದ್ದಾರೆ. 'ಮಜಾ ಟಾಕೀಸ್ ನಲ್ಲಿ ಹಣ ಪಡೆಯದೆ ಸುಮಾರು 500ಕ್ಕೂ ಅಧಿಕ ಸಿನಿಮಾಗಳನ್ನು ಪ್ರಚಾರ ಮಾಡಲಾಗಿದೆ. ಅಲ್ಲದೆ ಅಲ್ಲಿರುವ ಹಲವಾರು ಪ್ರತಿಭೆಗಳಿಗೆ ಅವಕಾಶ ನೀಡಿದೆ. ಹಲವಾರು ಹೊಸ ಪ್ರತಿಭೆಗಳನ್ನು ಪರಿಚಯಿಸಿದೆ ಎಂದು ಸೃಜಯ ಹೇಳಿದರು. ಸಿನಿಮಾ ಪ್ರಚಾರದ ಜೊತೆಗೆ ಮಜಾ ಟಾಕೀಸ್ ಅನೇಕ ಯುವ ಪ್ರತಿಭೆಗಳಿಗೆ ವೇದಿಕೆ ನೀಡಿರುವುದು ಹೆಮ್ಮೆ ಎನಿಸುತ್ತದೆ' ಎಂದರು.
'ಮಜಾ ಟಾಕೀಸ್ ನಲ್ಲಿ ಗಣ್ಯರು ಅಥವಾ ಸೆಲೆಬ್ರಿಟಿಗಳು ಮಾತ್ರವಲ್ಲದೆ ಪ್ರೇಕ್ಷಕರು ಉತ್ತಮ ಮನ್ನಣೆ ಗಳಿಸಿದ್ದಾರೆ. ಮಜಾ ಟಾಕೀಸ್ ನಲ್ಲಿ ತನ್ನ ಪ್ರತಿಭೆ ತೋರಿಸುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿದ್ದಾರೆ. ಮಜಾ ಟಾಕೀಸ್ ಬಹಳಷ್ಟು ವಿಷಯಗಳನ್ನು ಮತ್ತು ಯುವ ಪ್ರತಿಭೆಗಳನ್ನು ಬೆಳಕಿಗೆ ತರುವ ದೊಡ್ಡ ಜವಾಬ್ದಾರಿಯನ್ನು ಹೊಂದಿದೆ ಎಂದು ಭಾವಿಸುತ್ತೇನೆ. ಅದೆ ಜವಾಬ್ದಾರಿ ಮತ್ತು ಮನರಂಜನೆಯೊಂದಿಗೆ ಮಜಾ ಟಾಕೀಸ್ ಶೀಘ್ರದಲ್ಲೇ ಹಿಂತಿರುಗಲಿದೆ' ಎಂದು ಸೃಜನ್ ಮಾಹಿತಿ ನೀಡಿದ್ದಾರೆ.
Master Anand daughter: ಪಟಾಕಿ ಹುಟ್ಟಿಸಿಬಿಟ್ಯಲ್ಲೋ ಆನಂದ! ಸೃಜನ್ ಲೋಕೇಶ್ ಮಾಸ್ಟರ್ ಆನಂದ್ ಗೆ ಹೀಗಂದಿದ್ಯಾಕೆ ಗೊತ್ತಾ?
ಅಂದಹಾಗೆ ಮಜಾ ಟಾಕೀಸ್ ನಲ್ಲಿ ಸೃಜನ್ ಲೋಕೇಶ್ ನಲ್ಲಿ ಶ್ವೇತಾ ಚಂಗಪ್ಪ, ಅಪರ್ಣ, ಮಂಡ್ಯ ರಮೇಶ್ ಮಿಮಿಕ್ರಿ ದಯಾನಂದ್, ಕುರಿ ಪ್ರತಾಪ್ ಸೇರಿದಂತೆ ಅನೇಕ ಕಲಾವಿದರು ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡುತ್ತಿದ್ದರು. ಸಿನಿಮಾ ಪ್ರಚಾರದ ಜೊತೆಗೆ ಪ್ರೇಕ್ಷಕರಿಗೆ ಮನರಂಜನೆ ನೀಡುವ ಮಜಾ ಟಾಕೀಸ್ ಶೀಘ್ರದಲ್ಲೇ ಸಣ್ಣ ಪರದೆ ಮೇಲೆ ಬರಲಿ ಎಂದು ಕಾಯುತ್ತಿದ್ದಾರೆ. ಅಂದಹಾಗೆ ಸೃಜನ್ ಲೋಕೇಶ್ ಸದ್ಯ ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.