ಅನಂತ್‌ ಅಂಬಾನಿ ಮದ್ವೆಯಲ್ಲಿ ರಾಮ್‌ಚರಣ್‌ಗೆ ಶಾರುಖ್‌ ಖಾನ್‌ ಇದೆಂಥ ಇನ್‌ಸಲ್ಟ್‌? ಫ್ಯಾನ್ಸ್‌ ಕಿಡಿಕಿಡಿ

By Suvarna News  |  First Published Mar 5, 2024, 4:26 PM IST

ನಾಟು ನಾಟು ಡ್ಯಾನ್ಸ್‌ ಮಾಡಲು ಬರದೇ ಟ್ರೋಲ್‌ಗೆ ಒಳಗಾಗಿದ್ದ ಶಾರುಖ್‌ ಖಾನ್‌ರಿಂದ  ರಾಮ್‌ಚರಣ್‌ಗೆ  ಇದೆಂಥ ಇನ್‌ಸಲ್ಟ್‌? ಫ್ಯಾನ್ಸ್‌ ಕಿಡಿಕಿಡಿ
 


ಈಗ ಎಲ್ಲೆಲ್ಲೂ ಮುಕೇಶ್‌ ಅಂಬಾನಿ ಅವರ ಪುತ್ರ ಅನಂತ್‌ ಮತ್ತು ರಾಧಿಕಾ ಮರ್ಚೆಂಟ್‌ ಅವರ ಮದುವೆಯದ್ದೇ ಚರ್ಚೆ. ಮದ್ವೆ ಸಮಾರಂಭದ ಹಿನ್ನೆಲೆಯಲ್ಲಿ ಕೆಲ ದಿನಗಳಿಂದ ಹಲವಾರು ವಿಧದ ಕಾರ್ಯಕ್ರಮಗಳು ನಡೆಯುತ್ತಿದ್ದು, ದೇಶ ವಿದೇಶಗಳಿಂದ ಗಣ್ಯಾತಿಗಣ್ಯರು ಆಗಮಿಸುತ್ತಿದ್ದಾರೆ. ಬಾಲಿವುಡ್‌ ಸೆಲೆಬ್ರಿಟಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಇದಾಗಲೇ ಹಲವಾರು ಗಣ್ಯರು ಆಗಮಿಸಿ ಭರ್ಜರಿ ಕಾರ್ಯಕ್ರಮಗಳನ್ನೂ ನೀಡಿದ್ದಾರೆ, ನೀಡುತ್ತಲಿದ್ದಾರೆ. 

ಇದರ ನಡುವೆಯೇ, ದಕ್ಷಿಣ ಭಾರತದಿಂದ ರಾಮ್‌ ಚರಣ್‌ ಒಬ್ಬರೇ ಆಹ್ವಾನಿತರಾದವರು. ಆದರೆ ಬಾಲಿವುಡ್‌ ನಟ ಶಾರುಖ್‌ ಖಾನ್‌, ರಾಮ್‌ ಚರಣ್‌ ಅವರನ್ನು ಇನ್‌ಸಲ್ಟ್‌ ಮಾಡಿರುವ ವಿಷಯ ಬಹಿರಂಗಗೊಂಡಿದೆ. ರಾಮ್‌ ಚರಣ್‌ ಅವರ ಆಸ್ಕರ್‌ ಅವಾರ್ಡ್‌ ಗೆದ್ದಿರುವ ನಾಟು ನಾಟು ಹಾಡಿಗೆ ಖಾನ್‌ ತ್ರಯರು ಡ್ಯಾನ್ಸ್‌ ಮಾಡಲು ಹೋಗಿ ಟ್ರೋಲ್‌ಗೆ ಒಳಗಾಗಿ ಸಾಕಷ್ಟು ಅಪಹಾಸ್ಯಕ್ಕೀಡಾಗಿದ್ದಾರೆ. ಇದರ ಬೆನ್ನಲ್ಲೇ, ನಾಟು ನಾಟು ಹಾಡಿನಿಂದ ಜಗತ್ಪ್ರಸಿದ್ಧ ಹೊಂದಿರುವ ರಾಮ್‌ ಚರಣ್‌ ಅವರನ್ನು ಇನ್‌ಸಲ್ಟ್‌ ಮಾಡಿದ್ದಾರೆ ಎನ್ನಲಾಗಿದೆ. ರಾಮ್‌ಚರಣ್‌ ಅವರನ್ನು  ‘ಇಡ್ಲಿ ವಡಾ’ ರಾಮ್ ಚರಣ್ ಎಂದು ಸಂಬೋಧಿಸುವ ಮೂಲಕ ರಾಮ್‌ಚರಣ್‌ ಅವರ ಅಭಿಮಾನಿಗಳ ಕೆಂಗಣ್ಣಿಗೆ ಶಾರುಖ್‌ ಖಾನ್‌ ಗುರಿಯಾಗಿದ್ದಾರೆ.

Tap to resize

Latest Videos

ನಿಮ್ಮ ಚಡ್ಡಿ, ಬನಿಯನ್‌ ಮಾರಿದ್ರೂ ಮೂರು ಖಾನ್‌ರನ್ನು ಸೇರಿಸಲು ಸಾಧ್ಯವಿಲ್ಲ ಎಂದಿದ್ದ ಶಾರುಖ್‌: ಈಗ?
 
 ಅಷ್ಟಕ್ಕೂ ಇದು ಆಗಿರುವುದು ನಾಟು ನಾಟು ಹಾಡಿನ ಡ್ಯಾನ್ಸ್‌ ಸಂದರ್ಭದಲ್ಲಿ.  ಶಾರುಖ್ ಖಾನ್, ಆಮಿರ್ ಖಾನ್ ಹಾಗೂ ಸಲ್ಮಾನ್ ಖಾನ್ ಅವರು  ಒಟ್ಟಾಗಿ  ನಾಟು ನಾಟು ಹಾಡಿಗೆ ಹೆಜ್ಜೆ ಹಾಕಲು ನೋಡಿದರು. ಆದರೆ ಅದು ಸಾಧ್ಯವಾಗಲಿಲ್ಲ. ಆ ಸಮಯದಲ್ಲಿ ಶಾರುಖ್‌ ಅವರು  ರಾಮ್​ ಚರಣ್ ಅವರನ್ನು ಕರೆದಿದ್ದಾರೆ. ಆದರೆ ಕರೆಯುವ ಸಂದರ್ಭದಲ್ಲಿ  ಶಾರುಖ್ ಖಾನ್ ಅವರು ತಮಿಳಿನಲ್ಲಿ ಏನೇನೋ ಮಾತನಾಡಿದಂತೆ ಆ್ಯಕ್ಟ್ ಮಾಡಿ ‘ಇಡ್ಲಿ ವಡಾ ರಾಮ್​ ಚರಣ್​ ಎಲ್ಲಿದ್ದೀರಿ’ ಎಂದು ಕೂಗಿದ್ದಾರೆ. ಇದೀಗ ಬಹಳ ಟೀಕೆಗೆ ಒಳಗಾಗಿದ್ದಾರೆ. ರಾಮ್ ಚರಣ್ ಪತ್ನಿ ಉಪಾಸನಾ ಅವರ ಮೇಕಪರ್ ಆರ್ಟಿಸ್ಟ್​ ಜೆಬಾ ಹಸನ್ ಅವರು ಈ ವಿಚಾರವನ್ನು ಖಂಡಿಸಿ ಸೋಷಿಯಲ್‌ ಮೀಡಿಯಾದಲ್ಲಿ  ಬರೆದುಕೊಂಡಿದ್ದಾರೆ. ಈ ಘಟನೆಯ ನಂತರ  ನಂತರ ನಾನು ಹೊರನಡೆದೆ. ರಾಮ್ ಚರಣ್‌ನಂಥ ಸ್ಟಾರ್‌ಗೆ ತುಂಬಾ ಅಗೌರವ ಮಾಡಿರುವುದನ್ನು ಸಹಿಸಿಕೊಳ್ಳಲು ನನಗೆ ಆಗಲಿಲ್ಲ ಎಂದಿದ್ದಾರೆ.
 
ಬಿರಿಯಾನಿ ಶಾರುಖ್ ಖಾನ್ ಎಂದರೆ ಶಾರುಖ್‌ ಸುಮ್ಮನೆ ಇರ್ತಾರೆಯೇ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ನಾಟು ನಾಟು ಹಾಡಿಗೆ ಡ್ಯಾನ್ಸ್‌ ಮಾಡಲು ಬರದ ಬಾಲಿವುಡ್‌ ಬಾದ್‌ಶಾಹ್‌ ಎನಿಸಿಕೊಂಡಿರುವ ಶಾರುಖ್‌, ಈ ರೀತಿ ಇನ್‌ಸಲ್ಟ್‌ ಮಾಡುವುದು ಎಷ್ಟು ಸರಿ ಎನ್ನುತ್ತಿದ್ದಾರೆ. ಮೂರು ಖಾನ್‌ಗಳನ್ನು ಒಟ್ಟಿಗೇ ಸೇರಿಸಲು ಸಾಧ್ಯವಾಗುವುದಿಲ್ಲ ಎಂದು ಅಹಂನಿಂದ ನುಡಿದಿದ್ದ ಶಾರುಖ್‌ ಅವರ ಗರ್ವ ಇದಾಗಲೇ ಇಳಿದುಹೋಗಿದೆ. ಇಷ್ಟು ಇನ್‌ಸಲ್ಟ್‌ ಸಾಲದು ಎಂದು ಈಗ ಹೀಗೆ ಮಾಡಿದ್ದಾರೆ ಎನ್ನುತ್ತಿದ್ದಾರೆ ಹಲವರು. ಕೆಲವು ಚಿತ್ರಗಳು ಹಿಟ್‌ ಆದ ಬೆನ್ನಲ್ಲೇ ಕೀರ್ತಿಯ ಮದವೇರಿದೆ ಎಂದು ಇನ್ನು ಹಲವರು ಟೀಕಿಸುತ್ತಿದ್ದಾರೆ. 

ಲಕ್ಷ ಕೋಟಿ ಒಡತಿಯಾದ್ರೂ ನೃತ್ಯದ ಸಾಂಗತ್ಯ ಬಿಡದ ನೀತಾ: ಪುತ್ರನ ಮದುವೆಯಲ್ಲಿ ಮಂತ್ರಮುಗ್ಧ ಪ್ರದರ್ಶನ

click me!