ಅನೇಕ ಮಕ್ಕಳ ಆಸೆ ಹೊಂದಿರೋ ಪರಿಣಿತಿ ಚೋಪ್ರಾ ಗರ್ಭಿಣಿ? ಐದು ತಿಂಗಳಿಗೇ ಕೊಟ್ರಾ ಗುಡ್​ ನ್ಯೂಸ್​?

By Suvarna News  |  First Published Mar 4, 2024, 9:53 PM IST

ಅನೇಕ ಮಕ್ಕಳು ಬೇಕು ಎಂದು ಈ ಹಿಂದೆ ಹೇಳಿದ್ದ ಬಾಲಿವುಡ್​ ನಟಿ ಪರಿಣಿತಿ ಚೋಪ್ರಾ ಗರ್ಭಿಣಿಯಾಗಿದ್ದಾರೆಯೆ? ವೈರಲ್​ ವಿಡಿಯೋದಲ್ಲಿ ಏನಿದೆ? 
 


ಬಾಲಿವುಡ್​ ನಟಿ ಪರಿಣಿತಿ ಚೋಪ್ರಾ ಮತ್ತು ಆಮ್​  ಆದ್ಮಿ ಪಕ್ಷದ ನಾಯಕ, ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ (Raghav Chadha) ಮದುವೆ ಲೈಫ್​ ಎಂಜಾಯ್​ ಮಾಡುತ್ತಿದ್ದಾರೆ.  ಕಳೆದ ಸೆಪ್ಟೆಂಬರ್​ನಲ್ಲಿ  ಲೀಲಾ ಪ್ಯಾಲೇಸ್ ಮತ್ತು ದಿ ಒಬೆರಾಯ್ ಉದಯವಿಲಾಸ್‌ನಲ್ಲಿ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.  ಸರೋವರದ ಮೇಲೆ ನಿರ್ಮಿಸಲಾದ ಐಷಾರಾಮಿ ಹೋಟೆಲ್‌ನಲ್ಲಿ  ಮದುವೆ ನಡೆದಿದೆ.   ಕಳೆದ ಮೇ 13 ರಂದು ದೆಹಲಿಯಲ್ಲಿ ನಿಶ್ಚಿತಾರ್ಥ (Engagement) ಮಾಡಿಕೊಂಡಿದ್ದ ಈ ಜೋಡಿಯ  ಮದುವೆಗಾಗಿ ಫ್ಯಾನ್ಸ್​ ಕಾತರದಿಂದ ಕಾಯುತ್ತಿದ್ದರು.  ಎಂಗೇಜ್​ಮೆಂಟ್​ಗೂ ಮೊದಲು ಈ ಪ್ರೇಮ ಪಕ್ಷಿಗಳು ಸ್ವಲ್ಪ ಸಮಯದವರೆಗೆ ಪರಸ್ಪರ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಹಲವು ತಿಂಗಳುಗಳಿಂದ ಸುದ್ದಿಯಾಗಿದ್ದರೂ,  ಜೋಡಿ ಮಾತ್ರ   ಇದರ ಬಗ್ಗೆ ತುಟಿಕ್​ ಪಿಟಿಕ್​ ಎಂದಿರಲಿಲ್ಲ.  ನಂತರ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಎಲ್ಲರ ಕುತೂಹಲಕ್ಕೆ ತೆರೆ ಎಳೆದಿದ್ದರು. ಇದೀಗ ಮದುವೆಯನ್ನೂ ಆಗಿದ್ದು, ಲೈಫ್​ ಎಂಜಾಯ್​ ಮಾಡುತ್ತಿದ್ದಾರೆ.
 
ಇದರ ನಡುವೆಯೇ ಇದೀಗ ವಿಶೇಷ ವರದಿಯೊಂದು ಸದ್ದು ಮಾಡುತ್ತಿದೆ. ಅದೇನೆಂದರೆ ನಟಿ ಪರಿಣಿತಿ ಮದುವೆಯಾದ ಐದು ತಿಂಗಳಿಗೆ ಗುಡ್​​ ನ್ಯೂಸ್​ ಕೊಡುತ್ತಿದ್ದಾರೆ ಎನ್ನುವುದು. ಅಷ್ಟಕ್ಕೂ ನಟಿ ಈ ರೀತಿ ಸುದ್ದಿಯಾಗಲು ಕಾರಣ, ವಿಮಾನ ನಿಲ್ದಾಣದಿಂದ ಅವರು ಬರುತ್ತಿರುವ ವಿಡಿಯೋ ವೈರಲ್​ ಆಗಿದ್ದು, ಅದರಲ್ಲಿ ಪರಿಣಿತಿ ಗರ್ಭಿಣಿಯಂತೆ ಕಾಣುತ್ತಿದ್ದಾರೆ ಎನ್ನುವುದು ಅಭಿಮಾನಿಗಳ ಅಭಿಮತ. ಈ ಹಿಂದೆ ಡಿಸೆಂಬರ್​ನಲ್ಲಿ ಕೂಡ ಪರಿಣಿತಿ ಗರ್ಭಿಣಿ ಎನ್ನುವ ಸುದ್ದಿ ಹರಿದಾಡಿತ್ತು. ಆದರೆ ಆ ಸುದ್ದಿಯನ್ನು ನಟಿ ತಳ್ಳಿಹಾಕಿದ್ದರು. ಇದೀಗ ದೀಪಿಕಾ ಪಡುಕೋಣೆ ಗರ್ಭಿಣಿ ಎನ್ನುವ ಸುದ್ದಿ ತಿಳಿಯುತ್ತಲೇ ಪರಿಣಿತಿಯ ಬಗ್ಗೆ ಅವರ ಫ್ಯಾನ್ಸ್​ ತಲೆಕೆಡಿಸಿಕೊಳ್ಳುತ್ತಿದ್ದು, ಇದರ ನಡುವೆ ಈ ವಿಡಿಯೋ ಸಕತ್​ ಸದ್ದು ಮಾಡುತ್ತಿದೆ. 

ಮಾಣಿಕ್ಯ ಬ್ಯೂಟಿ ಮದ್ವೆಯಾಗುತ್ತಿರುವುದು ವಯಸ್ಸಿಗೆ ಬಂದ ಇಬ್ಬರು ಮಕ್ಕಳ ತಂದೆಯನ್ನು! ಫ್ಯಾನ್ಸ್‌ ಬೇಸರ

Parineeti Chopra Arrived from the Airport ✨♥️ pic.twitter.com/72Ny8bYTcf

— Viral Bhayani (@viralbhayani77)

Tap to resize

Latest Videos

 ಕೆಲ ತಿಂಗಳ ಹಿಂದೆ ನಟಿ  ಅಮ್ಮನಾಗುವ ವಿಷಯದ ಕುರಿತು ಬಹಿರಂಗವಾಗಿ ಮಾತನಾಡಿದ್ದರು. ತಮಗೆ ಮಗುವನ್ನು ಹೆರುವುದಕ್ಕಿಂತಲೂ ದತ್ತು ತೆಗೆದುಕೊಳ್ಳಬೇಕು ಎನ್ನುವ ಆಸೆಯಿದೆ ಎಂದು ಹೇಳಿದ್ದರು. ಒಂದಲ್ಲ, ಎರಡಲ್ಲ ಅನೇಕ ಮಕ್ಕಳನ್ನು ದತ್ತಕಕ್ಕೆ ಪಡೆಯುವ ಆಸೆಯನ್ನು ನಟಿ ಬಿಚ್ಚಿಟ್ಟಿದ್ದರು. ನಾನು ಮಗುವನ್ನು ದತ್ತು ತೆಗೆದುಕೊಳ್ಳಲು ಬಯಸುವೆ, ಒಂದಲ್ಲ ಹಲವು ಮಕ್ಕಳನ್ನು ದತ್ತು ತೆಗೆದುಕೊಳ್ಳಲು ಬಯಸುವೆ ಎಂದು ಫಿಲ್ಮ್‌ಫೇರ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದರು. ನನಗೆ ಮಗುವನ್ನು ದತ್ತು ತೆಗೆದುಕೊಳ್ಳುವುದು ಇಷ್ಟ. ನನಗೆ ಸಾಕಷ್ಟು ಮಕ್ಕಳು ಬೇಕು. ನನಗೆ ಎಲ್ಲಾ ಮಕ್ಕಳನ್ನು ಹೆರುವುದು ಕಷ್ಟವಾಗಬಹುದು. ಅದಕ್ಕಾಗಿ ನಾನು ದತ್ತು ತೆಗೆದುಕೊಳ್ಳಲು ಬಯಸುವೆ ಎಂದು ಅವರು ಹೇಳಿದ್ದರು. 

ಇದೇ ಸಂದರ್ಭದಲ್ಲಿ ತಮ್ಮ ಗಂಡ ಹೇಗಿರಬೇಕು ಎಂದು ಅವರು ಹೇಳಿದ್ದ ಹಳೆಯ ವಿಡಿಯೋ ವೈರಲ್​ ಆಗಿದೆ. ತಾವೆಂದೂ ರಾಜಕಾರಣಿಯನ್ನು ಮದ್ವೆಯಾಗಲ್ಲ ಎಂದಿದ್ದ ನಟಿ, ತಮ್ಮ ಗಂಡನಾಗುವವ ತಮ್ಮ ಮೂರು ಅಗತ್ಯಗಳನ್ನು ಪೂರೈಸಬೇಕು ಎಂಬ ಬಗ್ಗೆ ಹೇಳಿಕೊಂಡಿದ್ದರು. ನನ್ನನ್ನು ಮೊದಲು ಆಕರ್ಷಿಸುವ ವಿಷಯ ಹಾಸ್ಯಪ್ರಜ್ಞೆ. ನಾನು ಉತ್ತಮ ಹಾಸ್ಯ ಪ್ರಜ್ಞೆ ಹೊಂದಿದ್ದೇನೆ. ಅವನು ನನ್ನನ್ನು ನಗಿಸಿದರೆ ನಾನು ಅವನ್ನತ್ತ ಆಕರ್ಷಿತಳಾಗುವೆ. ಎರಡನೆಯಾಗಿ, ನಾನು ನಾನಾಗಿರಲು ಬಿಡಬೇಕು. ಜನರು ನನಗೆ ಏನು ಮಾಡಬೇಕು ಎಂದು ಹೇಳುವುದು ಇಷ್ಟವಾಗುವುದಿಲ್ಲ. ನಾನು ಹೇಗಿರಬೇಕು, ಹೇಗೆ ಕುಳಿತುಕೊಳ್ಳಬೇಕು, ಏನು ಧರಿಸಬೇಕು ಎಂದು ಯಾರಾದರೂ ಹೇಳುವಂತಿಲ್ಲ ಎಂದಿರೋ ನಟಿ,  ಮೂರನೆಯದಾಗಿ ಆತ ತುಂಬ ಉತ್ತಮ ಸ್ಮೈಲ್‌ ಹೊಂದಿರಬೇಕು. ಆತ, ಉತ್ತಮ ಸುಗಂಧ ದ್ರವ್ಯ ಹಾಕದೆ ಇದ್ದರೆ ಆತ ನನ್ನಿಂದ ದೂರ ಹೋಗಬಹುದು ಎಂದಿದ್ದರು. ಈಗ ರಾಘವ್​ ಚಡ್ಡಾ ಅವರು ಹೇಗಿದ್ದಾರೆ ಎಂದು ಫ್ಯಾನ್ಸ್​ ಪ್ರಶ್ನಿಸುತ್ತಿದ್ದಾರೆ. 

ಲಕ್ಷ ಕೋಟಿ ಒಡತಿಯಾದ್ರೂ ನೃತ್ಯದ ಸಾಂಗತ್ಯ ಬಿಡದ ನೀತಾ: ಪುತ್ರನ ಮದುವೆಯಲ್ಲಿ ಮಂತ್ರಮುಗ್ಧ ಪ್ರದರ್ಶನ

click me!