ನಗೀನಾ ಎಂಬುದು ರೊಮ್ಯಾಂಟಿಕ್ ಥ್ರಿಲ್ಲರ್ ಚಿತ್ರವಾಗಿದ್ದು, 1986ರಲ್ಲಿ ಬಿಡುಗಡೆ ಕಂಡಿತ್ತು. ಈ ಚಿತ್ರದಲ್ಲಿ ಶ್ರೀದೇವಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಉಳಿದಂತೆ ರಿಷಿ ಕಪೂರ್ ಹಾಗೂ ವಿಲನ್ ಆಗಿ ಅಮರೀಶ್ ಪುರಿ ಅಬ್ಬರಿಸಿದ್ದಾರೆ...
ಹಿಂದಿಯ 'ನಗೀನಾ' ಅದೆಷ್ಟು ಮೋಡಿ ಮಾಡಿರುವ ಚಿತ್ರ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಈಗ ದಿವಂಗತರಾಗಿರುವ ನಟಿ ಶ್ರೀದೇವಿ ಅಂದು ನಾಗಿಣಿಯಾಗಿ ತೆರೆಯ ಮೇಲೆ ಕಾಣಿಸಿಕೊಂಡು ಜನರನ್ನು ಹುಚ್ಚೆಬ್ಬೆಸಿದ್ದರು. ಇಚ್ಛಾದಾರಿ ನಾಗಿನ್ ರಜ್ನಿ ಪಾತ್ರದಲ್ಲಿ ನಟಿ ಶ್ರೀದೇವಿ ಯಾವ ಮಟ್ಟಿಗೆ ನಟಿಸಿದ್ದರು ಎಂದರೆ ನಾಗಿಣಿ ಎಂದರೆ ಅದು ಶ್ರೀದೇವಿಯೇ ಎಂಬಷ್ಟು ಜನರನ್ನು ಆ ಪಾತ್ರದ ಮೂಲಕ ರಂಜಿಸಿದ್ದರು. ನಾಗಿಣಿ ನೃತ್ಯದಲ್ಲಂತೂ ತಮ್ಮನ್ನು ಮೀರಿಸುವ ಇನ್ನೊಬ್ಬರು ನಟಿ ಹುಟ್ಟಿಲ್ಲ ಎಂಬಷ್ಟು ತನ್ಮಯರಾಗಿ ನಟಿಸಿದ್ದರು ಶ್ರೀದೇವಿ.
ಆದರೆ, ನಗೀನಾ ಚಿತ್ರಕ್ಕೆ ನಿರ್ದೇಶಕರ ಮೊದಲ ಆಯ್ಕೆ ಶ್ರೀದೇವಿ ಆಗಿರಲಿಲ್ಲ. ನಿರ್ದೇಶಕ ಹರ್ಮೇಶ್ ಮಲ್ಹೋತ್ರಾ ಅವರು ಮೊಟ್ಟಮೊದಲು ನಾಗಿಣಿ ಪಾತ್ರಕ್ಕೆ ಆಯ್ಕೆ ಮಾಡಿ ಮಾತುಕತೆ ನಡೆಸಿದ್ದು ನಟಿ ಜಯಪ್ರದಾ ಅವರನ್ನು. ಆದರೆ, ಹಾವುಗಳ ಜತೆ ಶೂಟಿಂಗ್ ಮಾಡಲು ತಮಗೆ ಭಯ, ನನ್ನಿಂದಾಗದು ಎಂದರಂತೆ ಜಯಪ್ರದಾ. ಬಳಿಕ ಹರ್ಮೇಶ್ ಅವರು ನಟಿ ಶ್ರೀದೇವಿ ಅವರನ್ನು ಅಪ್ರೋಚ್ ಮಾಡಿ ಕಥೆ ಹೇಳಲು ಅವರು ಒಪ್ಪಿ ನಟಿಸಿದರಂತೆ. ಆಮೇಲೆ ನಡೆದಿದ್ದು ಇತಿಹಾಸ. ನಗೀನಾ ಚಿತ್ರವು ಸೂಪರ್ ಹಿಟ್ ಆಗಿ ನಟಿ ಶ್ರೀದೇವಿ ಅವರನ್ನು ಇನ್ನೂ ಒಂದು ಹಂತಕ್ಕೆ ಮೇಲೇರಿಸಿಬಿಟ್ಟತು ನಾಗಿಣಿ ಪಾತ್ರ.
ಸದ್ಯದಲ್ಲೇ ಅಧಿಕೃತ ಮಾಹಿತಿ ನೀಡುತ್ತೇವೆ, ಅಲ್ಲಿಯವರೆಗೆ ಯಾವುದನ್ನೂ ನಂಬಬೇಡಿ; 'ಡೆವಿಲ್' ಪ್ರಕಾಶ್ ವೀರ್ ಮನವಿ
ನಗೀನಾ ಎಂಬುದು ರೊಮ್ಯಾಂಟಿಕ್ ಥ್ರಿಲ್ಲರ್ ಚಿತ್ರವಾಗಿದ್ದು, 1986ರಲ್ಲಿ ಬಿಡುಗಡೆ ಕಂಡಿತ್ತು. ಈ ಚಿತ್ರದಲ್ಲಿ ಶ್ರೀದೇವಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಉಳಿದಂತೆ ರಿಷಿ ಕಪೂರ್ ಹಾಗೂ ವಿಲನ್ ಆಗಿ ಅಮರೀಶ್ ಪುರಿ ಅಬ್ಬರಿಸಿದ್ದಾರೆ. ಚಿತ್ರವು ಖುಷಿಯಾಗಿ ವೈವಾಹಿಕ ಜೀವನ ನಡೆಸುತ್ತಿರುವ ರಾಜೀವ್ ಮತ್ತು ರಜನಿ ದಂಪತಿಗಳ ಕಥೆ ಹೊಂದಿದೆ. ಆದರೆ, ಭೈರೋನ್ ನಾಥಾ ಎಂಬ ವಿಲನ್ ಮನೆಗೆ ಬಂದು ರಜನಿ ನಾಗಿಣಿಯಾಗಿಯೂ ರೂಪ ಬದಲಾಯಿಸುತ್ತಾಳೆ ಎಂದು ಹೇಳುವುದರೊಂದಿಗೆ ಕಥೆಯಲ್ಲಿ ಟ್ವಿಸ್ಟ್ ತೆಗೆದುಕೊಳ್ಳುತ್ತದೆ. ಬಳಿಕ, ಏನಾಗುತ್ತದೆ ಎಂಬುದು ನಗೀನಾ ಕಥೆ.
'ಮಲೆನಾಡ ಗೊಂಬೆ'ಗೆ ಮನಸೋತ ಮನೆಹಾಳನಿಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್..!
ಅಂದು ನಾಗಿಣಿ ಪಾತ್ರಕ್ಕೆ ಎರಡನೇ ಆಯ್ಕೆಯಾಗಿ ಯಶಸ್ವಿ ಸಿನಿಮಾ ಕೊಟ್ಟಿದ್ದ ನಟಿ ಶ್ರೀದೇವಿ ಇಂದು ನಮ್ಮೊಂದಿಗೆ ಇಲ್ಲ. ಫೆಬ್ರವರಿ 28, 2018ರಂದು ಸಂಬಂಧಿಕರ ಮದುವೆಗೆಂದು ದುಬೈನಲ್ಲಿದ್ದ ನಟಿ ಶ್ರೀದೇವಿ ಅಲ್ಲಿಯೇ ಆಕಸ್ಮಿಕ ಸಾವು ಕಂಡರು. ಇಂದು ನಗೀನಾದಲ್ಲಿ ನಾಗಿಣಿ ಹಾಗೂ ಶ್ರೀದೇವಿ ಮಾಡಿರುವ ನೂರಾರು ವಿಭಿನ್ನ ಪಾತ್ರಗಳ ಮೂಲಕ ನಾವು ನಟಿ ಶ್ರೀದೇವಿಯನ್ನು ಮತ್ತೆ ಕಣ್ತುಂಬಿಕೊಳ್ಳಬಹುದು ಅಷ್ಟೇ.
ಇದು ಚೀಲದ ವಿಚಾರ ಅಲ್ಲ, ಶೀಲದ ವಿಚಾರ; ಶೃತಿ ಹರಿಹರನ್ ವಿರುದ್ದ ಗುಡುಗಿದ 'ಮಠ' ಗುರುಪ್ರಸಾದ್