Sreeleela: ವಿಮಾನದಲ್ಲಿ ಕಾಲೇಜ್ ನೋಟ್ಸ್ ಬರೆದ ಶ್ರೀಲೀಲಾ… ಸ್ಟಾರ್ ನಟಿಯ ಸಿಂಪ್ಲಿಸಿಟಿಗೆ ಫ್ಯಾನ್ಸ್ ಫಿದಾ

Published : Sep 24, 2026, 02:21 PM IST
Sreeleela

ಸಾರಾಂಶ

ಕನ್ನಡ, ತೆಲುಗು, ತಮಿಳು ಸೇರಿ ಭಾರತೀಯ ಚಿತ್ರರಂಗದಲ್ಲಿ ಮಿಂಚುತ್ತಿರುವ ನಟಿ ಶ್ರೀಲೀಲಾ ಅವರು ವಿಮಾನ ಪ್ರಯಾಣದ ಮಧ್ಯದಲ್ಲಿ ಕಾಲೇಜು ನೋಟ್ಸ್ ಬರೆಯುತ್ತಿರುವ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸ್ಟಾರ್ ನಟಿಯಾಗಿದ್ದರೂ, ಓದಿನ ಕಡೆಗೂ ಗಮನ ಹರಿಸುತ್ತಿರುವ ನಟಿಯ ಸಿಂಪ್ಲಿಸಿಟಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.

ವಿಮಾನದಲ್ಲೂ ಕಾಲೇಜು ನೋಟ್ಸ್ ಬರೆಯುತ್ತಿದ್ದ ಶ್ರೀಲೀಲಾ

ಫಿಲಂ ಇಂಡಷ್ಟ್ರಿಯಲ್ಲಿ ಬ್ಯುಸಿಯಾಗಿರುವ ನಟಿಯರು ತಮ್ಮ ವೃತ್ತಿಜೀವನದ ಜೊತೆಗೆ ವೈಯಕ್ತಿಕ ಜೀವನ ಹಾಗೂ ಶಿಕ್ಷಣಕ್ಕೂ ಸಮಯ ನೀಡುವುದು ಸುಲಭವಲ್ಲ. ಆದರೆ ನಟಿ ಶ್ರೀಲೀಲಾ ಅವರ ಇತ್ತೀಚಿನ ಫೋಟೋವೊಂದು ಅಭಿಮಾನಿಗಳ ಗಮನ ಸೆಳೆದಿದೆ. ನಟಿ ಶ್ರೀಲೀಲಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕಾಲೇಜಿನ ನೋಟ್ಸ್ ಬರೆಯುತ್ತಾ ಓದುತ್ತಿರುವುದು ಕಂಡುಬಂದಿದೆ. ಗ್ಲಾಮರಸ್ ಕಾರ್ಯಕ್ರಮಗಳು, ಸಿನಿಮಾ ಶೂಟಿಂಗ್ ಮತ್ತು ಪ್ರಯಾಣದ ನಡುವೆಯೂ ಓದಿಗೆ ಸಮಯ ಮೀಸಲಿಟ್ಟಿರುವ ಅವರ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನಟಿ ಸಿಂಪ್ಲಿಸಿಟಿಗೆ ಅಭಿಮಾನಿಗಳು ಫಿದಾ

ಶ್ರೀಲೀಲಾ ನಟನೆಯ ಜೊತೆಗೆ ವೈದ್ಯಕೀಯ ಶಿಕ್ಷಣವನ್ನು ಮುಂದುವರಿಸುತ್ತಿದ್ದಾರೆ ಎಂಬುದು ಈಗಾಗಲೇ ಎಲ್ಲರಿಗೂ ಗೊತ್ತಿರುವ ವಿಚಾರ. ಹೀಗಾಗಿ ಪ್ರಯಾಣದ ಸಮಯವನ್ನೂ ವ್ಯರ್ಥ ಮಾಡದೆ, ವಿಮಾನದಲ್ಲೇ ಕುಳಿತು ಕೈಬರಹದ ನೋಟ್ಸ್ ಸಿದ್ಧಪಡಿಸುತ್ತಿರುವುದು ಅವರು ತಮ್ಮ ಎಜುಕೇಶನ್ ಕಡೆಗೆ ಎಷ್ಟೊಂದು ಗಂಭೀರವಾಗಿದ್ದಾರೆ ಎನ್ನುವುದನ್ನು ತೋರಿಸುತ್ತದೆ. ಹೇಳಿ ಕೇಳಿ ಶ್ರೀಲೀಲಾ ಸ್ಟಾರ್ ನಟಿ, ಒಂದೊಂದು ಸಿನಿಮಾ ಹಾಡಿಗೆ 3 ಕೋಟಿ ಪಡೆಯುವಂತಹ ನಟಿ, ಅಂತದ್ದರಲ್ಲಿ, ಓದನ್ನು ಬಿಟ್ಟು ಕೊಡದೇ ಅದಕ್ಕೂ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿರುವ ಈ ಫೋಟೊ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.

ಸಿನಿಮಾ ಮತ್ತು ಶಿಕ್ಷಣ ಎರಡನ್ನೂ ಒಟ್ಟಿಗೆ ನಿರ್ವಹಿಸುತ್ತಿರುವ ಶ್ರೀಲೀಲಾ ಅವರ ಈ ಫೋಟೋಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. “ಬ್ಯುಸಿ ಶೆಡ್ಯೂಲ್ ನಡುವೆಯೂ ಓದಿಗೆ ಇಷ್ಟು ಸಮಯ ಹೇಗೆ ಕೊಡುತ್ತಾರೆ?” ಎಂದು ಕೆಲವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಗ್ಲಾಮರ್ ಜಗತ್ತಿನ ಆಚೆಗೂ ತಮ್ಮ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿರುವ ಶ್ರೀಲೀಲಾ ಅವರ ಈ ಸರಳ ಕ್ಷಣ ಇದೀಗ ಅಭಿಮಾನಿಗಳಲ್ಲಿ ಚರ್ಚೆಯ ವಿಷಯವಾಗಿದೆ.

ಶ್ರೀಲೀಲಾ ಸಿನಿಮಾ ಜರ್ನಿ

‘ಕಿಸ್’ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಶ್ರೀಲೀಲಾ, ‘ಧಮಾಕಾ’ ಸಿನಿಮಾದ ಯಶಸ್ಸಿನ ಬಳಿಕ ಭಾರೀ ಜನಪ್ರಿಯತೆ ಗಳಿಸಿದರು. ‘ಪೆಳ್ಳಿ ಸಂದಡಿ’ ನಂತರ ‘ಸ್ಕಂದ’, ‘ಭಗವಂತ್ ಕೇಸರಿ’, ‘ಗುಂಟೂರು ಕಾರಂ’, ‘ರಾಬಿನ್‌ಹುಡ್’, ‘ಜೂನಿಯರ್’ ಹಾಗೂ ‘ಮಾಸ್ ಜತಾರ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದರು. ಸ್ಟಾರ್ ಹೀರೋಗಳ ಜೊತೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ್ದರೂ ಸಹ, ಇತ್ತೀಚೆಗೆ ಹೆಚ್ಚಿನ ಸಿನಿಮಾಗಳು ಫ್ಲಾಪ್ ಆಗಿವೆ. ಹಾಗಾಗಿ ನಟಿ ಸದ್ಯ ಟಾಲಿವುಡ್ ಬಿಟ್ಟು, ಮುಂಬೈಗೆ ಶಿಫ್ಟ್ ಆಗುವ ಯೋಚನೆಯಲ್ಲಿದಾರೆ. ಬಾಲಿವುಡ್ ಚಿತ್ರರಂಗದಲ್ಲಿ ಅವಕಾಶಗಳು ಹೆಚ್ಚುತ್ತಿರುವುದರಿಂದ ನಟಿ ಮುಂಬೈಗೆ ಶಿಫ್ಟ್ ಆಗಲಿದ್ದಾರೆ ಎನ್ನಲಾಗುತ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ದುಡ್ಡಿಗಾಗಿ ಯುವಜನರ ಹಾದಿ ತಪ್ಪಿಸ್ತಿರೋ ವಿವಾದದ ಮಧ್ಯೆಯೇ ಶಾರುಖ್ ಟಾಪ್​-1 ಶ್ರೀಮಂತ​! ನಂ.2,3,4 ಯಾರು
ದಾಂಪತ್ಯದ ಬಗ್ಗೆ Gen Zಗಳಿಗೆ ಏನ್ ಹೇಳ್ತೀರಾ? ನಟಿ ಸಂಜನಾ ಆನಂದ್​ ಪ್ರಶ್ನೆಗೆ ಶಿವಣ್ಣ ಕೊಟ್ಟ ಉತ್ತರ ವೈರಲ್​