ಸಿಮಿ ಗರೆವಾಲ್ -ಪಟೌಡಿ ರಿಲೇಷನ್‌ ಶಿಪ್‌ಗೆ ಅಡ್ಡಿಯಾಗಿದ್ದ ಶರ್ಮಿಳಾ ಠಾಗೋರ್

By Bhavani Bhat  |  First Published Oct 10, 2024, 8:23 PM IST

ರತನ್ ಟಾಟಾ ಮತ್ತು ಸಿಮಿ ಗರೆವಾಲ್ ಪ್ರಣಯದ ಬಗ್ಗೆ ನಿಮಗೆ ತಿಳಿದಿರಬಹುದು. ಆದರೆ ಸಿಮಿ ಗರೆವಾಲ್, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕನೊಬ್ಬನೊಂದಿಗೆ ಪ್ರಣಯದಲ್ಲಿದ್ದರು ಎಂಬುದು ಬಹುತೇಕರಿಗೆ ತಿಳಿದಿಲ್ಲ. ಇವರಿಬ್ಬರ ಪ್ರಣಯಕ್ಕೆ ಶರ್ಮಿಳಾ ಟ್ಯಾಗೋರ್ ಅಡ್ಡಿಯಾದರು.


ಭಾರತದ ಬಹುದೊಡ್ಡ ಉದ್ಯಮಿ ರತನ್‌ ಟಾಟಾ ತೀರಿಕೊಂಡಿದ್ದಾರೆ. ಅವರು ಅವಿವಾಹಿತ. ಆದರೆ ನಾಲ್ಕು ಮಂದಿಯ ಜೊತೆ ಪ್ರಣಯ ಇತ್ತು ಎಂಬುದನ್ನು ಅವರೇ ಒಪ್ಪಿಕೊಂಡಿದ್ದರು. ಆ ನಾಲ್ಕು ಮಂದಿಯಲ್ಲಿ ಬಾಲಿವುಡ್‌ ತಾರೆಯಾಗಿದ್ದ ಸಿಮಿ ಗರೆವಾಲ್‌ ಕೂಡ ಒಬ್ಬರು. ಈ ಸಿಮಿ ಗರೆವಾಲ್‌ ಕೂಡ ಹಿಂದೆ ಹಲವು ಪ್ರಣಯ ಸಂಬಂಧಗಳನ್ನು ಹೊಂದಿದ್ದವರು. ಅವರಲ್ಲಿ ಭಾರತ ಕಂಡ ಬಹುದೊಡ್ಡ ಕ್ರಿಕೆಟರ್‌ ಕೂಡ ಒಬ್ಬರು  

ಅವರು ಬೇರ್ಯಾರೂ ಅಲ್ಲ, ಇಂಡಿಯನ್‌ ಕ್ರಿಕೆಟ್‌ ಟೀಮ್‌ನ ಕ್ಯಾಪ್ಟನ್‌ ಆಗಿದ್ದ ಮನ್ಸೂರ್‌ ಅಲಿ ಖಾನ್‌ ಪಟೌಡಿ. 1960 ಮತ್ತು 70ರ ದಶಕದ ಗ್ರೇಟ್‌ ಕ್ರಿಕೆಟರ್.‌ ಮೈದಾನದ ಹೊರಗೆ ಅತ್ಯಂತ ವರ್ಣರಂಜಿತ ಜೀವನ ನಡೆಸಿದ ಅವರು ಭಾರತದ ಪರ 46 ಟೆಸ್ಟ್ ಪಂದ್ಯಗಳನ್ನು ಮುನ್ನಡೆಸಿದರು. ಇನ್ನೊಬ್ಬ ಖ್ಯಾತ ನಟಿ ಶರ್ಮಿಳಾ ಟ್ಯಾಗೋರ್ ಅವರನ್ನು ವಿವಾಹವಾದ ಅವರು. ಅದಕ್ಕೂ ಮುನ್ನ ಪಟೌಡಿ, ಸಿಮಿ ಗರೆವಾಲ್ ಅವರ ಮೇಲೆ ಕಣ್ಣಿಟ್ಟಿದ್ದರು. 

Tap to resize

Latest Videos

undefined

ಕ್ರಿಕೆಟ್ ಪಂದ್ಯಗಳಿಂದ, ಹೊರಾಂಗಣ ಚಿತ್ರೀಕರಣದಿಂದ ಪ್ರಮುಖ ಕಾರ್ಯಕ್ರಮಗಳವರೆಗೆ, ಪಟೌಡಿ ಮತ್ತು ಸಿಮಿ ಗರೆವಾಲ್ ಆಗಾಗ್ಗೆ ಒಟ್ಟಿಗೆ ಕಾಣಿಸಿಕೊಂಡರು. ಸಿಮಿ ಗರೆವಾಲ್ ತನ್ನ ಕ್ಲಾಸಿ ಔಟ್‌ಲುಕ್‌ನೊಂದಿಗೆ ರಾಯಲ್ ಇಂಡಿಯನ್ ಕ್ರಿಕೆಟರ್‌ ಮನ್ಸೂರ್ ಅಲಿ ಖಾನ್ ಪಟೌಡಿಗೆ ಪರಿಪೂರ್ಣ ಫಿಟ್ ಎಂದು ಹಲವರು ನಂಬಿದ್ದರು. ಆದರೆ ನಡುವೆಯೇ ಶರ್ಮಿಳಾ ಕಾಣಿಸಿಕೊಂಡರು. ಅವರು ಬಂದ ನಂತರ ಸೀನೇ ಬದಲಾಯಿತು. ಈ ವಿಷಯವನ್ನು ಹೇಳಲು ಸಿಮಿ ಗರೆವಾಲ್ ಅಪಾರ್ಟ್ಮೆಂಟ್‌ಗೆ ಪಟೌಡಿ ಭೇಟಿ ನೀಡಿದರಂತೆ. ಸಿಮಿ ಅವರಿಗೆ ಕುಡಿಯಲು ನಿಂಬೆ ಪಾನಕ ಕೊಟ್ಟರು. ಆದರೆ ಪಟೌಡಿ, "ಸಾರಿ, ನಮ್ಮ ನಡುವೆ ಇದೆಲ್ಲ ಮುಗಿದಿದೆ, ನಾನು ಬೇರೊಬ್ಬಳನ್ನು ನೋಡಿಕೊಂಡಿದ್ದೇನೆ" ಎಂದಿದ್ದರಂತೆ 

ಇದರಿಂದ ಸಿಮಿ ಗರೆವಾಲ್‌ಗೆ ಹೃದಯ ಒಡೆಯಿತು. ಆದರೆ ಅವರು ಸೀನ್‌ ಕ್ರಿಯೇಟ್‌ ಮಾಡಲಿಲ್ಲ. ಪಟೌಡಿ ಹೊರಟಾಗ ಅವರನ್ನು ಬೀಳ್ಕೊಡಲು ಅವರ ಜೊತೆ ಲಿಫ್ಟ್‌ ವರೆಗೂ ಬಂದರು. ಬರಬೇಡ ಎಂದು ಮನ್ಸೂರ್ ಅಲಿ ಖಾನ್ ಪಟೌಡಿ ಹೇಳಿದರೂ. ಆದರೆ ಅವರು ಬಂದರು. ಅಲ್ಲಿ ಶರ್ಮಿಳಾ ಟ್ಯಾಗೋರ್, ಲಿಫ್ಟ್ ಬಳಿ ಮನ್ಸೂರ್‌ಗಾಗಿ ಕಾಯುತ್ತಿದ್ದರು.

ನಂತರ ಸಿಮಿ ಗರೆವಾಲ್‌ ಕೊಂಚ ಸಮಯದ ಬಳಿಕ ಉದ್ಯಮಿ ರತನ್‌ ಟಾಟಾ ಅವರನ್ನು ಭೇಟಿಯಾದರು. ಪರಿಚಯ ಪ್ರಣಯಕ್ಕೆ ತಿರುಗಿತು. ಇವರ ಬಾಂಧವ್ಯ ಬಹುಕಾಲ ಬಾಳಿತು. ಇವರೂ ಮದುವೆಯಾಗಬಹುದು ಎಂಬ ಗಾಸಿಪ್‌ ಇತ್ತು. ಆದರೆ ರತನ್‌ ಟಾಟಾಗೆ ದಾಂಪತ್ಯ ಎಂದರೆ ಏನೋ ಭಯ. ಆತಂಕ. ಆಗಷ್ಟೇ ಅವರು ಅಮೆರಿಕದಿಂದ ಬಂದಿದ್ದರು. ಅಲ್ಲೂ ಅವರಿಗೆ ಒಂದು ಭಗ್ನಪ್ರೇಮ ಉಂಟಾಗಿತ್ತು. 

"ರತನ್ ಟಾಟಾ ಪರ್ಫೆಕ್ಟ್ ಮ್ಯಾನ್. ರತನ್ ಮತ್ತು ನಾನು ಬಹಳ ಹಿಂದೆ ಡೇಟಿಂಗ್ ಮಾಡುತ್ತಿದ್ದೆವು. ಜೊತೆಗೆ ಅವರ ಸೆನ್ಸ್ ಆಫ್ ಹ್ಯೂಮರ್ ತುಂಬಾನೆ ಚೆನ್ನಾಗಿತ್ತು. ಅಷ್ಟೇ ಅಲ್ಲ, ರತನ್ ತುಂಬಾನೆ ವಿನಮ್ರ ಮತ್ತು ಸಂಭಾವಿತ ವ್ಯಕ್ತಿ. ಹಣ ಎಂದಿಗೂ ಅವರಿಗೆ ಮುಖ್ಯ ಆಗಿರಲಿಲ್ಲ. ಅವರು ವಿದೇಶದಲ್ಲಿರುವಾಗ ಆಗಿರುತ್ತಿದ್ದಷ್ಟು ರಿಲ್ಯಾಕ್ಸ್ ಆಗಿ ಭಾರತದಲ್ಲಿ ಇರಲಿಲ್ಲ" ಎಂದು ನಟಿ ಸಿಮಿ ಸಂದರ್ಶನವೊಂದರಲ್ಲಿ ತಿಳಿಸಿದ್ದರು.

ಸೌಂದರ್ಯ ನಿರ್ಮಿಸಿದ ಒಂದೇ ಒಂದು ಸಿನಿಮಾ : ತಂದೆಗಾಗಿ ಸಮರ್ಪಣೆ, 2 ರಾಷ್ಟ್ರಪ್ರಶಸ್ತಿ ಗೆದ್ದ ಆ ಸಿನಿಮಾ ಯಾವುದು?
 

ಫಿರೋಜ್ ಖಾನ್ ಅವರೊಂದಿಗೆ 'ಟಾರ್ಜಾನ್ ಗೋಸ್ ಟು ಇಂಡಿಯಾ' (Tarzan goies to India) ಚಿತ್ರದ ಮೂಲಕ ಸಿನಿಮಾ ಲೋಕಕ್ಕೆ ಪಾದಾರ್ಪಣೆ ಮಾಡಿದ ಸಿಮಿ ಗರೆವೆಲ್ ಕೇವಲ 17 ನೇ ವಯಸ್ಸಿನಲ್ಲಿ ತಮ್ಮ ಮೊದಲ ಸೀರಿಯಸ್ ರಿಲೇಶನ್ ಶಿಪ್ ಹೊಂದಿದ್ದರು. ಇಂಗ್ಲೆಂಡಿನಲ್ಲಿ ನೆರೆಮನೆಯವನಾಗಿದ್ದ ಜಾಮ್ ನಗರದ ಮಹಾರಾಜ ಶತ್ರುಸಲ್ಯಸಿನ್ಹಜಿಯನ್ನು ಸಿಮಿ ಪ್ರೀತಿಸುತ್ತಿದ್ದರು. ಆದರೆ, ಮೂರು ವರ್ಷಗಳ ಡೇಟಿಂಗ್ ನಂತರ, ಈ ಜೋಡಿ ಬೇರ್ಪಟ್ಟರು.

ಇಷ್ಟೆಲ್ಲಾ ಹೈ ಪ್ರೊಫೈಲ್ ವ್ಯಕ್ತಿಗಳ ಜೊತೆಗೆ ರಿಲೇಶನ್‌ಶಿಪ್‌ನಲ್ಲಿ ಇದ್ದ ನಂತರ, ಸಿಮಿ ಗರೇವಾಲ್, ತಮ್ಮ 27 ನೇ ವಯಸ್ಸಿನಲ್ಲಿ 1970 ರಲ್ಲಿ ದೆಹಲಿಯ ಶ್ರೇಷ್ಠ ಚುನ್ನಮಾಲ್ ಕುಟುಂಬದ ಸದಸ್ಯರಾಗಿದ್ದ ರವಿ ಮೋಹನ್ ಅವರನ್ನು ವಿವಾಹವಾದರು. ಆದರೆ ಈ ಸಂಬಂಧ ಕೂಡ ಹೆಚ್ಚು ಸಮಯ ಉಳಿಯಲಿಲ್ಲ. ಈ ದಂಪತಿಗಳು 1979 ರಲ್ಲಿ ವಿಚ್ಛೇದನ ಪಡೆದರು.
ಐಶ್ ಬಾಳಲ್ಲಿ ಬಿರುಗಾಳಿ ಎಬ್ಬಿಸಿದ್ದು ಈ ನಟಿ…! ಕುತೂಹಲ ಕೆರಳಿಸಿದ ರೆಡ್ಡಿಟ್ ಪೋಸ್ಟ್
 

click me!