
ಬೆಂಗಳೂರು(ಮಾ.05) ಸಿನಿಮಾದಲ್ಲಿ ರೊಮ್ಯಾನ್ಸ್ ಪ್ರಧಾನ. ಕ್ರೈಂ ಥ್ರಿಲ್ಲರ್ ಕತೆ ಆಗಿರಲಿ, ಇತಿಹಾಸವೇ ಆಗಿರಲಿ, ಆದರಲ್ಲೊಂದು ಪ್ರೀತಿ, ರೊಮ್ಯಾನ್ಸ್ ಇದ್ದೇ ಇರುತ್ತೆ. ಕೆಲ ಚಿತ್ರಗಳು ಆರಂಭದಿಂದ ಅಂತ್ಯದವರೆಗ ರೊಮ್ಯಾನ್ಸ್. 90ರ ದಶಕಗಲ್ಲಿ ಬಾಲಿವುಡ್, ಸ್ಯಾಂಡಲ್‌ವುಡ್ ಸೇರಿದಂತೆ ಹಲಲವು ಚಿತ್ರರಂಗಗಳು ಲವ್ ಸ್ಟೋರ್, ರೊಮ್ಯಾನ್ಸ್ ಸ್ಟೋರಿ ಮೂಲಕ ಭಾರಿ ಜನಪ್ರಿಯತೆ ಗಳಿಸಿದೆ. ಆದರೆ ಇದೀಗ ಕನ್ನಡ ಸೇರಿದಂತೆ ಸೌತ್ ಸ್ಟಾರ್ಸ್ ರೊಮ್ಯಾನ್ಸ್ ಸಿನಿಮಾದಿಂದ ದೂರ ಉಳಿಯುತ್ತಿದ್ದಾರೆ. ಇದು ಖ್ಯಾತ ಸಿನಿಮಾ ನಿರ್ದೇಶಕ, ಪ್ರೀತಿ ಪ್ರೇಮ, ರೊಮ್ಯಾನ್ಸ್ ಚಿತ್ರಗಳ ಮೂಲಕ ಜನರ ಮನಸ್ಸು ಗೆದ್ದಿರುವ ಗೌತಮ್ ವಾಸುದೇವ್ ಮೆನನ್ ಹೇಳಿದ್ದಾರೆ. ಅಷ್ಟಕ್ಕೂ ನಟರು ಇದೀಗ ರೊಮ್ಯಾನ್ಸ್ ಸಿನಿಮಾದಿಂದ ದೂರ ಉಳಿಯುತ್ತಿರುವುದೇಕೆ?
ಬೆಂಗಳೂರಿನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್‌ನಲ್ಲಿ ಮಾತನಾಡಿದ ಗೌತಮ್ ವಾಸುದೇವ್ ಮೆನನ್ ಸದ್ಯ ಸಿನಿಮಾ ನಟರ ಆದ್ಯತೆ ಹಾಗೂ ಕರಿಯರ್ ಕುರಿತ ದೃಷ್ಠಿಕೋನ ಮಾತನಾಡಿದ್ದಾರೆ. ಪ್ರಮುಖವಾಗಿ ದಕ್ಷಿಣ ಭಾರತದ ಸ್ಟಾರ್ ನಟರು ರೊಮ್ಯಾನ್ಸ್ ಸಿನಿಮಾ ಒಪ್ಪಿಕೊಳ್ಳುವುದಿಲ್ಲ ಎಂದಿದ್ದಾರೆ. ಕನ್ನಡ, ತಮಿಳು, ತೆಲುಗು ಸೇರಿದಂತೆ ದಕ್ಷಿಣ ಭಾರತದ ಪ್ರಮುಖ ನಟರ ಬಳಿ ಸಿನಿಮಾ ಕತೆ ಹೇಳಿದ ಕೂಡಲೆ ಇದು ಯಾವ ರೀತಿ ಸಿನಿಮಾ ಎಂದು ಮೊದಲು ಕೇಳುತ್ತಾರೆ. ರೊಮ್ಯಾನ್ಸ್ ಸಿನಿಮಾ ಎಂದ ತಕ್ಷಣ ಮುಂದೆ ಚರ್ಚೆ ನಡೆಯುವುದಿಲ್ಲ. ಡೇಟ್ ಮುಂದೂಡುತ್ತಾರೆ. ಭೇಟಿಗೆ ನಿರಾಕರಿಸುತ್ತಿದ್ದಾರೆ ಎಂದು ಗೌತಮ್ ವಾಸುದೇವ್ ಮೆನನ್ ಹೇಳಿದ್ದಾರೆ.
ಬಾಲಿವುಡ್ ಬಾಕ್ಸ್ ಅಫೀಸ್‌ನಲ್ಲಿ ದೀಪಿಕಾ ಹಿಂದಿಕ್ಕಿ ದಾಖಲೆ ಬರೆದ ರಶ್ಮಿಕಾ ಮಂದಣ್ಣ
ದಕ್ಷಿಣ ಭಾರತದ ಸ್ಟಾರ್ ನಟರು ಇದೀಗ ಸಿನಿಮಾವನ್ನು ಲಾರ್ಜರ್ ದೃಷ್ಟಿಕೋನದಲ್ಲಿ ನೋಡುತ್ತಿದ್ದಾರೆ. ಪ್ರೀತಿ, ಪ್ರೇಮ, ಪ್ರಣಯಗಳ ಕುರಿತ ಚಿತ್ರಗಳು ಸೀಮಿತವಾಗುತ್ತದೆ. ಹೀಗಾಗಿ ಅತ್ಯುತ್ತಮ ಕತೆ ಆಯ್ಕೆ ಮಾಡಿಕೊಳ್ಳುತ್ತಾರೆ.ಕತೆ ಉತ್ತವಾಗಿರಬೇಕು. ಅದು ಪ್ಯಾನ್ ಇಂಡಿಯಾ ಸಿನಿಮಾ ಆಗಬೇಕು. ಬಜೆಟ್ ದೊಡ್ಡಲ್ಲದಿದ್ದರೂ ಬಿಡುಗಡೆಯಾದ ಬಳಿಕ ಎಲ್ಲಾ ಭಾಷೆಗಳಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಬೇಕು ಅನ್ನೋದು ಲೆಕ್ಕಾಚಾರ. ಒಂದೇ ಭಾಷೆಯಲ್ಲಿ ಬಿಡುಗಡೆಯಾದರೂ ಭಾರತದಲ್ಲಿ ಧೂಳೆಬ್ಬಿಸಬೇಕು ಅನ್ನೋದು ಮೂಲ ಉದ್ದೇಶ. ಹೀಗಾಗಿ ಸಿನಿಮಾ ಚೌಕಟ್ಟಿಗಿಂತ ಮಿಗಿಲಾದ ಚಿತ್ರಗಳನ್ನು ನಟರು ಆಯ್ಕೆ ಮಾಡಿಕೊಳ್ಳುತ್ತಾರೆ ಅನ್ನೋದು ಗೌಮ್ ವಾಸುದೇವ್ ಮೆನನ್ ಅಭಿಪ್ರಾಯ.
ಯಶ್ ಅಭಿನಯದ ಕೆಜಿಎಫ್, ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಸೇರಿದಂತೆ ಹಲವು ಚಿತ್ರಗಳು ಕೂಡ ರೊಮ್ಯಾನ್ಸ್ ಮೀರಿದ ಚಿತ್ರಗಳು. ಪ್ರಮುಖವಾಗಿ ದೇಶಾದ್ಯಂತ ಈ ಚಿತ್ರಕ್ಕೆ ಮನ್ನಣೆ ಸಿಕ್ಕಿದೆ. ಇನ್ನು ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲೂ ಇದೀಗ ಸ್ಟಾರ್ ನಟರು ಸಂಪೂರ್ಣ ರೊಮ್ಯಾನ್ಸ್ ಸಿನಿಮಾದಿಂದ ದೂರ ಉಳಿಯುತ್ತಿದ್ದಾರೆ ಅನ್ನೋದು ಚಿತ್ರದ ಆಯ್ಕೆಯಲ್ಲೇ ಬಯಲಾಗುತ್ತಿದೆ. ಬಾಲಿವುಡ್‌ನಲ್ಲಿ ಇತ್ತೀಚೆಗೆ ಬಿಡುಗಡೆಯಾದ ಛಾವ ಸೇರಿದಂತೆ ಹಲವು ಚಿತ್ರಗಳು ಇತಿಹಾಸ, ಆತ್ಮಚರಿತ್ರೆಯನ್ನೇ ಮೂಲವಾಗಿಟ್ಟುಕೊಂಡು ಸಿನಿಮಾ ಮಾಡಿ ಗೆದ್ದಿದ್ದಾರೆ. 2025ರಲ್ಲಿ ಇದೀಗ ಕುತೂಹಲಗಳು ಹೆಚ್ಚಾಗಿದೆ. ಹಲವು ಚಿತ್ರಗಳು ಬಿಡುಗಡೆಯಾಗುತ್ತಿದೆ. ಈ ಸಿನಿಮಾಗಳು ಇದೇ ಮಾದರಿಯಲ್ಲಿದ್ದರೆ ಬಹುತೇಕ ಸ್ಟಾರ್ ನಟರು ರೊಮ್ಯಾನ್ಸ್ ಸಿನಿಮಾದಿಂದ ದೂರ ಉಳಿಯುವ ಸಾಧ್ಯತೆ ಇದೆ.
ಕನ್ನಡಿಗರಿಂದ ಟ್ರೋಲ್ ಆದ ಬೆನ್ನಲ್ಲೇ ಮೂಗಿನ ಮೇಲೆ ಹೂವಿಟ್ಟ ರಶ್ಮಿಕಾ ಮಂದಣ್ಣ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.