ಕನ್ನಡ ಚಿತ್ರರಂಗದಲ್ಲಿ 90ರ ದಶಕದಲ್ಲಿ ಬಹುಬೇಡಿಕೆ ನಟಿಯಾಗಿದ್ದ ಚಾರುಲತಾಗೆ ಇದೇನಾಯ್ತು? ಸಾಮಾಜಿಕ ಜಾಲತಾಣದಲ್ಲಿ ಬಂದು ಚಿಕ್ಕ ಮಕ್ಕಳಂತಾಡುತ್ತಿದ್ದಾರೆ.
ಬೆಂಗಳೂರು (ಜ.19): ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಅತ್ಯಂತ ಬೆಡಿಕೆಯ ನಟಿಯಾಗಿದ್ದ ಚಾರುಲತಾ ಅವರು ಇತ್ತೀಚೆಗೆ ನಟನಾ ರಂಗದಿಂದಲೇ ದೂರವಾಗಿದ್ದಾರೆ. ಇವರು ಮೂಲತಃ ಪಂಜಾಬಿಯಾಗಿದ್ದರೂ ಕನ್ನಡದಲ್ಲಿಯೇ ಅತಿಹೆಚ್ಚು ಸಿನಿಮಾ ಮಾಡಿದ್ದಾರೆ. 1997ರಿಂದ 2017ರವರೆಗೆ ಮಾತ್ರ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದು, ಈಗ ಸಿನಿಮಾದಲ್ಲಿ ಮಾತ್ರವಲ್ಲ ಯಾವುದೇ ನಟನೆಯಲ್ಲೂ ಕಾಣಸಿಗುತ್ತಿಲ್ಲ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿರುವ ಅವರು ಕನ್ನಡವನ್ನು ಬಿಡದೇ ಸಣ್ಣ ಪುಟ್ಟ ರೀಲ್ಸ್‌ಗಳನ್ನು ಮಾಡುತ್ತಾ ಅಭಿಮಾನಿಗಳಿಗೆ ತಮ್ಮ ಇರುವಿಕೆಯನ್ನು ತೋರಿಸುತ್ತಿದ್ದಾರೆ.'
ನಟಿ ಚಾರುಲತಾ ಅವರು ಮೂಲ ಪಂಜಾಬಿಯಾದರೂ ಕೇರಳದಲ್ಲಿ ಬೆಳೆದಿದ್ದಾರೆ. ಆದರೆ, ಅವರು ಮೊದಲು ಕನ್ನಡದ ವಿ. ಮನೋಹರ್ ನಿರ್ದೇಶನದ 'ಓ ಮಲ್ಲಿಗೆ' ಸಿನಿಮಾ ಮೂಲಕ ಚಿತ್ರರಂಗವನ್ನು ಪ್ರವೇಶ ಮಾಡಿದರು. ಇದರ ನಂತರ 1997ರಿಂದ 2000 ಇಸವಿವರೆಗೆ ದಕ್ಷಿಣ ಭಾರತ ಚಿತ್ರ ರಂಗದ ಬಹುಬೇಡಿಕೆ ನಟಿಯಾಗಿದ್ದರು. ಈ ವೇಳೆ ವರ್ಷಕ್ಕೆ ಕನಿಷ್ಠ 6-10 ಸಿನಿಮಾ ಮಾಡುತ್ತಿದ್ದ ಚಾರುಲತಾ ನಂತರ ಸಿನಿಮಾ ಅವಕಾಶಗಳನ್ನು ಕಡಿಮೆ ಮಾಡಿದರು. ಇನ್ನು 2000 ಇಸವಿಯ ನಂತರ ಕನ್ನಡ ಚಿತ್ರರಂಗ ಹೊರತಾಗಿ ತಮಿಳು ಹಾಗೂ ಮಲೆಯಾಳಂನಲ್ಲಿ ತಮ್ಮ ಎರಡನೇ ಇನ್ನಿಂಗ್ಸ್ ಆರಂಭಿಸಿದರು.
ಮಾಡೆಲಿಂಗ್‌ಗಾಗಿ ಮಗುವನ್ನೇ ತೆಗೆಸಿದ ಮಹಿಮಾ; ಅಪ್ಪ ಹುಟ್ತಾರಂತ ನಿರೀಕ್ಷಿಸಿದ್ದ ಗೌತಮ್ ದಿವಾನ್‌ಗೆ ಶಾಕ್!
ಇದಾದ ನಂತರ ಬರೋಬ್ಬರಿ 4 ವರ್ಷಗಳ ಬಳಿಕ 2004ರಲ್ಲಿ ಕನ್ನಡಕ್ಕೆ 'ನೀಲಾಂಬರಿ'ಯಾಗಿ ಆಗಮಿಸಿದ ಚಾರುಲತಾ 2017ರವರೆಗೆ ಕೇವಲ 5 ಚಿತ್ರಗಳಲ್ಲಿ ಮಾತ್ರ ನಟನೆ ಮಾಡಿದ್ದಾರೆ. ಹಾಗಂತ ಅನ್ಯ ಭಾಷೆಗಳಲ್ಲಿಯೂ ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ಆದರೆ, 2017ರಲ್ಲಿ ನಟ ದರ್ಶನ್ ನಟನೆಯ ಚಕ್ರವರ್ತಿ ಸಿನಿಮಾದಲ್ಲಿ ಸಹನಟಿಯಾಗಿ ನಟಿಸಿದ ಚಾರುಲತಾ ಮತ್ತೆ ಯಾವುದೇ ತೆರೆಗಳಲ್ಲಿ ಕಾಣಿಸುತ್ತಿಲ್ಲ. ಆದರೆ, ಅವರನ್ನು ನೋಡೋದು ಹೇಗೆ ಎನ್ನುವ ಅಭಿಮಾನಿಗಳಿಗೆ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಸಿಗುತ್ತಿದ್ದಾರೆ. ನೀವು ಮಾಡುವ ಕಮೆಂಟ್‌ಗೂ ಅವರು ರಿಪ್ಲೈ ಮಾಡುತ್ತಿದ್ದಾರೆ.
ತೆಲುಗು,ತಮಿಳು ತದನಂತರ ಮಲಯಾಳಂ ಸಿನಿಮಾಗಳಲ್ಲಿ ಕೆಲಸ ಮಾಡಿದ ಚಾರುಲತಾ ಅವರು ಸ್ವತಃ ನೀಡಿದ ಸಂದರ್ಶನದಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಸಾಕಾಗಿದೆ. ಈಗ ನಾನು ಆರ್ಥಿಕವಾಗಿಯೂ ಸದೃಢವಾಗಿದ್ದೇನೆ. ಇನ್ನು ಮುಂದೆ ಸಿನಿಮಾರಂಗದ ಅವಶ್ಯಕತೆ ನನಗಿಲ್ಲ ವೈಯಕ್ತಿಕ ಬದುಕಿನತ್ತ ನಾನು ಗಮನ ಹರಿಸಬೇಕೆಂಬ ಹೇಳಿಕೆ ನೀಡಿ ಸಿನಿಮಾ ರಂಗದಿಂದ ಕಣ್ಮರೆಯಾದರು. ಅನಂತರ ಕರ್ನಾಟಕ ಹಾಗೂ ಕೇರಳವನ್ನು ತೊರೆದು ದೆಹಲಿಗೆ ಹೋಗಿ ಅಲ್ಲಿ ಸ್ವಂತ ಬಿಸಿನೆಸ್ ಶುರು ಮಾಡಿದ ಚಾರುಲತಾ ಅವರು ತಮ್ಮ ತಂದೆ ಅಮೆರಿಕದಲ್ಲಿ ನೆಲೆಸಿದ್ದ ಕಾರಣ ಅಲ್ಲಿಗೆ ತೆರಳಿ ವರ್ಷಗಳ ಕಾಲ ಅಮೆರಿಕದಲ್ಲಿ ಬಿಸಿನೆಸ್ ನೋಡಿಕೊಂಡಿದ್ದರು. ಪುನಃ ಕೆಲ ಕಾರಣಗಳಿಂದಾಗಿ ಮತ್ತೆ ಕರ್ನಾಟಕಕ್ಕೆ ಕಂಬ್ಯಾಕ್ ಮಾಡಿದರು. ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಕಾಣುತ್ತಿದ್ದಾರೆ.
ರಾಮಾಯಣದ ಸೀತಾ ಪಾತ್ರಧಾರಿ ದೀಪಿಕಾ ಚಿಖಾಲಿಯಾ ಹಿಂದೆ B ಗ್ರೇಡ್ ಸಿನಿಮಾದಲ್ಲೂ ನಟಿಸಿದ್ದರು!
ಚಾರುಲತಾ ಅವರು ಸಾಮಾಜಿಕ ಜಾಲತಾಣದಲ್ಲಿ ಹಿಂದಿ, ತೆಲುಗು, ತಮಿಳು ಹಾಗೂ ಕನ್ನಡ ಭಾಷೆಗಳಿಗೆ ಸಂಬಂಧಿಸಿದ ಹಾಡು ಮತ್ತು ವೈರಲ್ ಆಡಿಯೋಗಳಿಗೆ ರೀಲ್ಸ್ ಮಾಡುತ್ತಿದ್ದಾರೆ. ಅದರಲ್ಲಿಯೂ ಹೆಚ್ಚಾಗಿ ಕನ್ನಡ ರೀಲ್ಸ್ ಮಾಡುತ್ತಿದ್ದಾರೆ. ಮೇಡಂ ನೀವು ಎಲ್ಲಿದ್ದೀರಿ? ಸಿನಿಮಾ ಯಾಕೆ ಮಾಡುತ್ತಿಲ್ಲ ಎಂದು ಅಭಿಮಾನಿಗಳು ಪ್ರಶ್ನೆಗಳ ಸುರಿಮಳೆಗೈದರೂ ಅವರು ಮಾತ್ರ ಸ್ಮೈಲಿಗಳ ಮೂಲಕ ರಿಯಾಕ್ಟ್ ಮಾಡುತ್ತಾರೆ. ಅದರ ಹೊರತಾಗಿ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಇನ್ನು ಚಾರುಲತಾ ಅವರ ಮದುವೆ ಕುರಿತಾದ ಯಾವುದೇ ಅಸಲಿ ಮಾಹಿತಿ ಲಭ್ಯವಿಲ್ಲ. ಈ ನಟಿ ಮತ್ತೆ ಸಿನಿಮಾ ರಂಗಕ್ಕೆ ಕಂಬ್ಯಾಕ್ ಮಾಡುತ್ತಾರಾ ಕಾದು ನೋಡಬೇಕಾಗಿದೆ.