ರಣಬೀರ್ ಕಪೂರ್ ಇನ್ನೊಬ್ಬಳ ಜೊತೆ ಮಲಗಿರೋ ಸುದ್ದಿ ಕೇಳಿ ಅವರ ಕೆನ್ನೆಗೆ ಹೊಡೆದು ಕೊನೆಗೆ ಬಿಕ್ಕಿ ಬಿಕ್ಕಿ ಅತ್ರಂತೆ ರಶ್ಮಿಕಾ ಮಂದಣ್ಣ: ನಟಿ ಹೇಳಿದ್ದೇನು?
ರಣಬೀರ್ ಕಪೂರ್ ಇನ್ನೊಬ್ಬಳ ಜೊತೆ ಮಲಗಿ ಸುದ್ದಿ ಕೇಳಿದ ರಶ್ಮಿಕಾ ಮಂದಣ್ಣ, ರಣಬೀರ್ ಕಪೂರ್ ಕೆನ್ನೆಗೆ ಜೋರಾಗಿ ಹೊಡೆದು, ನಂತರ ಹೀಗೆ ಹೊಡೆದಿದ್ದಕ್ಕೆ ಪಶ್ಚಾತ್ತಾಪ ಪಟ್ಟು ಬಿಕ್ಕಿ ಬಿಕ್ಕಿ ಅತ್ತರಂತೆ. ಈ ವಿಷಯವನ್ನು ರಶ್ಮಿಕಾ ಮಂದಣ್ಣ ಇದೀಗ ರಿವೀಲ್ ಮಾಡಿದ್ದಾರೆ. ಅಷ್ಟಕ್ಕೂ ಹೀಗೆ ರಶ್ಮಿಕಾ, ರಣಬೀರ್ ಕಪೂರ್ ಕೆನ್ನೆಗೆ ಹೊಡೆದದ್ದು ಅನಿಮಲ್ ಚಿತ್ರದಲ್ಲಿ. ಹೊಡೆದದ್ದು ಚಿತ್ರದ ಉದ್ದೇಶಕ್ಕಾದರೂ, ಯಾಕೋ ನಟಿಗೆ ತುಂಬಾ ನೋವಾಯಿತಂತೆ. ಇದನ್ನು ಸಹಿಸಿಕೊಳ್ಳಲು ಆಗದೇ ಸಿಕ್ಕಾಪಟ್ಟೆ ಅತ್ತರಂತೆ.
ಅಂದಹಾಗೆ, ಅನಿಮಲ್ ಚಿತ್ರದಲ್ಲಿ ರಣಬೀರ್ ಮತ್ತು ರಶ್ಮಿಕಾ ಗಂಡ-ಹೆಂಡತಿ. ಇದರಲ್ಲಿ ರಶ್ಮಿಕಾ ಗೀತಾಂಜಲಿ ಆಗಿ ನಟಿಸಿದ್ದರೆ, ರಣಬೀರ್ ಕಪೂರ್ ರಣವಿಜಯ್ ಆಗಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಎಲ್ಲರಿಗೂ ತಿಳಿದಿರುವಂತೆ ಹೆಣ್ಣಿನ ಮೇಲಿನ ದೌರ್ಜನ್ಯಕ್ಕೆ ಮಿತಿಯೇ ಇಲ್ಲ. ಮಹಿಳೆಯರ ಮೇಲೆ ಮಿತಿಮೀರಿದ ದೌರ್ಜನ್ಯ, ಮೂರು ಪತ್ನಿಯರ ಮೇಲೆ ನಡೆಸುವ ಅತ್ಯಾಚಾರ, ಮಹಿಳೆಯನ್ನು ಕಾಮದ ವಸ್ತು ಎಂದು ಅಂದುಕೊಳ್ಳುವುದು, ಬೂಟನ್ನು ನೆಕ್ಕು ಎಂದು ಪತ್ನಿಗೆ ನಾಯಕ ಹೇಳುವುದು... ಇವೆಲ್ಲವೂ ಮಾಮೂಲಾಗಿದೆ. ಇಂಥ ಸಂದರ್ಭದಲ್ಲಿ ರಣವಿಜಯ್ ನಟಿ ತೃಪ್ತಿ ಡಿಮ್ರಿ ಜೊತೆ ಮಲಗುವ ದೃಶ್ಯವಿದೆ. ಇದರಲ್ಲಿ ರಣಬೀರ್ ಮತ್ತು ತೃಪ್ತಿ ಡಿಮ್ರಿ ಇಬ್ಬರೂ ಸಂಪೂರ್ಣ ಬೆತ್ತಲಾಗಿ ನಟಿಸಿದ್ದಾರೆ. ಜೋಯಾಳ ಉದ್ದೇಶಗಳ ಬಗ್ಗೆ ತಿಳಿದುಕೊಳ್ಳಲು ಆಕೆಯ ಜೊತೆ ಮಲಗುವುದು ಈ ದೃಶ್ಯದ ಕಥೆ. ಹೀಗೆ ಮಾಡಿದ ಬಳಿಕ, ರಣಬೀರ್ ಅಂದರೆ ರಣವಿಜಯ್ ತನ್ನ ಪತ್ನಿ ಗೀತಾಂಜಲಿಗೆ ವಿಷಯ ತಿಳಿಸುತ್ತಾನೆ. ತಾನು ಅವಳ ಜೊತೆ ಯಾಕೆ ಮಲಗಿದ್ದೆ ಎನ್ನುವುದನ್ನು ತಿಳಿಸುತ್ತಾನೆ.
ಅನಿಮಲ್ ನಿರ್ದೇಶಕ ಹೊಟ್ಟೆಗೆ ಏನ್ ತಿಂತಾರೋ ಗೊತ್ತಿಲ್ಲ: ಹಸಿಬಿಸಿ ದೃಶ್ಯದ ಬಳಿಕ ರಶ್ಮಿಕಾ ಹೇಳಿದ್ದೇನು?
ನಿಜ ಜೀವನದಲ್ಲಿ ಈ ಚಿತ್ರತಾರೆಯರಿಗೆ ಏನು ಅನ್ನಿಸುತ್ತದೆಯೋ ಗೊತ್ತಿಲ್ಲ. ಆದರೆ ಚಿತ್ರದಲ್ಲಿ ಗೀತಾಂಜಲಿ ಪಾತ್ರಧಾರಿ ಸಾಮಾನ್ಯ ಮಹಿಳೆಯಾಗಿರುವ ಕಾರಣ, ತನ್ನ ಪತಿ ಬೇರೊಬ್ಬಳ ಜೊತೆ ಮಲಗಿರುವುದನ್ನು ಕೇಳಿ ಶಾಕ್ ಆಗುತ್ತದೆ. ಆಗ ಅವಳು ಅವನಿಗೆ ಹೊಡೆಯುತ್ತಾಳೆ. ಹೀಗೆ ಹೊಡೆದದ್ದು ಚಿತ್ರದ ದೃಶ್ಯಕ್ಕೆ ಅನುಗುಣವಾಗಿಯಾದರೂ ಹೀಗೆ ಹೊಡೆದ ಮೇಲೆ ರಶ್ಮಿಕಾಗೆ ತುಂಬಾ ನೋವಾಯಿತಂತೆ. ಪಿಂಕ್‌ವಿಲ್ಲಾ ವೆಬ್ ಪೋರ್ಟಲ್‌ಗೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಷಯವನ್ನು ತಿಳಿಸಿದ್ದಾರೆ. ರಣಬೀರ್ ಕಪೂರ್ ಕೆನ್ನೆಗೆ ಹೊಡೆಯುವ ಸೀನ್ ಮುಗಿದ ಬಳಿಕ ತಾವು ತುಂಬಾ ಅತ್ತಿರುವುದಾಗಿ ನಟಿ ಹೇಳಿದ್ದಾರೆ.
ಅಷ್ಟಕ್ಕೂ ಹೀಗೊಂದು ದೃಶ್ಯ ಇತ್ತು ಎಂದು ತಮಗೆ ತಿಳಿದಿರಲಿಲ್ಲ ಎಂದು ನಟಿ ಹೇಳಿದ್ದಾರೆ. ಇಡೀ ಚಿತ್ರೀಕರಣ ಒಂದು ಅನುಕ್ರಮ ಘಟನೆಗಳನ್ನು ಆಧರಿಸಿತ್ತು. ಮುಂದೆ ಯಾವ ದೃಶ್ಯವಿದೆ, ನಾನು ಏನು ಮಾಡಲಿದ್ದೇನೆ ಎನ್ನುವುದೂ ನನಗೂ ಗೊತ್ತಿರಲಿಲ್ಲ. ನಿರ್ದೇಶಕರು ಹೇಳುತ್ತಿದ್ದಂತೆಯೇ ಮಾಡುತ್ತಾ ಹೋಗುವುದು ಅಷ್ಟೇ ಆಗಿತ್ತು. ರಣಬೀರ್ ಅವರಿಗೆ ಹೊಡೆಯುವ ದೃಶ್ಯ ಬಂದಾಗ ನಾನೇನು ಮಾಡುತ್ತಿದ್ದೇನೆ ಎಂದು ತಿಳಿದರಲಿಲ್ಲ. ಇದು ಸಾಧ್ಯವೇ ಇಲ್ಲ ಎಂದಾಗ, ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಧೈರ್ಯ ತುಂಬಿದರು. ನಂತರ ನಾನು ಅವರಿಗೆ ಕಪಾಳಮೋಕ್ಷ ಮಾಡಿದೆ. ಚಿತ್ರೀಕರಣದ ಬಳಿಕ ಬಿಕ್ಕಿ ಬಿಕ್ಕಿ ಅತ್ತೆ ಎಂದಿದ್ದಾರೆ. ರಣಬೀರ್ ಕಪೂರ್ ಬಳಿ ಹೋಗಿ ನೀವು ಆರಾಮವಾಗಿದ್ದೀರಾ ಎಂದೆಲ್ಲ ಕೇಳಿದೆ. ಅರ್ಧ ದಿನ ನಾನು ಇದೇ ರೀತಿ ರಣಬೀರ್ ಕಪೂರ್ ಬಳಿ ಹೋಗಿ ಕೇಳುತ್ತಿದ್ದೆ. ಆ ಕ್ಷಣದಲ್ಲಿ ಸಿನಿಮಾ ದೃಶ್ಯವಾಗಿರುವುದರಿಂದ ಹೊಡೆದೆ. ನಾನು ಈ ಸಿನಿಮಾ ಮತ್ತು ಈ ಸೀಕ್ವೆನ್ಸ್ ಮಾಡಿದ್ದಕ್ಕೆ ಖುಷಿಯಿದೆ. ಆದರೆ, ನಾನು ಈ ರೀತಿ ಮಾಡಿದೆ ಎಂದು ನೆನಪಿಸಿಕೊಂಡಾಗ ಆಶ್ಚರ್ಯವಾಗುತ್ತದೆ ಎಂದು ರಶ್ಮಿಕಾ ಹೇಳಿದ್ದಾರೆ.
'ಅನಿಮಲ್' ಯಶಸ್ಸು ಡೇಂಜರಸ್ ಎಂದ ಜಾವೇದ್ ಅಖ್ತರ್! ನೀವು ಕಲಾವಿದನೇ ಅಲ್ಲ ಎಂದು ನಿರ್ದೇಶಕ ಗರಂ