ಮದುವೆಯಾಗಿದ್ದರೂ ಕೆಲವೊಂದು ನಟ-ನಟಿಯರು ಬೇರೊಬ್ಬ ನಟ-ನಟಿಯರ ಜೊತೆ ಸಂಬಂಧ ಹೊಂದಿದ್ದರು/ಹೊಂದಿದ್ದಾರೆ. ಅಂಥ ಕೆಲವು ಸೌತ್ ತಾರೆಯರು ಯಾರು?
ಸಿನಿ ಜಗತ್ತಿನಲ್ಲಿ ಅನೇಕ ಮಂದಿಯ ಜೊತೆ ಡೇಟಿಂಗ್, (Dating) ಮದುವೆ, ವಿಚ್ಛೇದನ, ಡಿವೋರ್ಸ್ ಕೊಡದೇ ಇನ್ನೊಂದು ಮದುವೆ ಇವೆಲ್ಲವೂ ಮಾಮೂಲು. ಸಂಬಂಧ ಒಬ್ಬರ ಜೊತೆ ಬೆಳೆಸಿ ಮದುವೆ ಇನ್ನೊಬ್ಬರ ಜೊತೆ ಆಗುವುದೂ ಸಾಮಾನ್ಯವಾದರೆ, ಇದಾಗಲೇ ಮದುವೆಯಾದವರ ಜೊತೆಗೆ ಡೇಟಿಂಗ್ ಮಾಡುವುದೂ ಮಾಮೂಲು ಎನ್ನಿಸಿಬಿಟ್ಟಿದೆ. ಕೆಲವೊಮ್ಮೆ ಸುಳ್ಳು ಸುದ್ದಿಗಳು ಸೆಲೆಬ್ರಿಟಿಗಳ ವಿರುದ್ಧ ಹರಡಿದರೆ, ಹಲವು ಸಲ ಇದು ನಿಜವೂ ಆಗಿರುತ್ತದೆ. ಸಿನಿಮಾದಲ್ಲಿ ನಟಿಸುವಾಗಲೇ ನಟಿಯರ ಜೊತೆ ಪ್ರೀತಿಯಲ್ಲಿ ಬೀಳೋದು ಕೂಡ ಹಿಂದೆಯೂ ಇತ್ತು, ಈಗಲೂ ಇದೆ. ಆದರೆ ಕೆಲವರು ದಾಂಪತ್ಯ ಜೀವನಕ್ಕೆ ಕಾಲಿಟ್ಟರೆ, ಇನ್ನು ಹಲವರು ಡೇಟಿಂಗ್ನಲ್ಲಿಯೇ ಜೀವನ ಕಳೆಯುತ್ತಾರೆ, ಹಲವೊಮ್ಮೆ ಕೈಕೊಟ್ಟು ಮತ್ತೊಬ್ಬರನ್ನು ವರಿಸುತ್ತಾರೆ. ಸಂಬಂಧ ಒಬ್ಬರ ಜೊತೆ ಬೆಳೆಸಿ ಮದುವೆ ಇನ್ನೊಬ್ಬರ ಜೊತೆ ಆದ ಬಾಲಿವುಡ್ ನಟಿಯರಾದ ಕರೀನಾ ಕಪೂರ್ ಸೈಫ್ ಅಲಿ ಖಾನ್, ದೀಪಿಕಾ ಪಡುಕೋಣೆ, ಬಿಪಾಶಾ ಬಸು, ಅನುಷ್ಕಾ ಶರ್ಮಾ, ಐಶ್ವರ್ಯಾ ರೈ, ಪ್ರಿಯಾಂಕಾ ಚೋಪ್ರಾ (Priyanka Chopra), ಶಿಲ್ಪಾ ಶೆಟ್ಟಿ, ಕರಿಷ್ಮಾ ಕಪೂರ್, ಕತ್ರಿನಾ ಕೈಫ್ (Katrina Kaif) ಬಗ್ಗೆ ಇದಾಗಲೇ ಭಾರಿ ಸುದ್ದಿಯಾಗಿದೆ. ಆದರೆ ಇಲ್ಲೀಗ ಹೇಳಹೊರಟಿರುವುದು ಮದುವೆಯಾದ ಮೇಲೂ ಬೇರೊಬ್ಬರ ಜೊತೆ ಸಂಬಂಧ ಹೊಂದಿದ್ದ ಅಥವಾ ಹೊಂದಿರೋ ದಕ್ಷಿಣದ ಸ್ಟಾರ್ಸ್ (South Stars) ಕುರಿತು.
ಹಾಗಿದ್ದರೆ ಮದುವೆಯಾದ ಮೇಲೂ ಸಂಬಂಧ ಹೊಂದಿರುವ ಸೌತ್ ನಟ ನಟಿಯರು ಯಾರು ಎಂದು ಕೇಳುವ ಕುತೂಹಲ ಅಲ್ಲವೇ? ಈ ಪಟ್ಟಿಯಲ್ಲಿ ಮೊದಲಿಗೆ ಕಾಣಿಸಿಕೊಳ್ಳುವ ಹೆಸರು, ಅಕ್ಕಿನೇನಿ ನಾಗಾರ್ಜುನ ಅವರು. ತೆಲುಗಿನ ಪ್ರೇಕ್ಷಕರ ಮನಗೆದ್ದಿರೋ ನಾಗಾರ್ಜುನ್, ತಮ್ಮ ಚಿತ್ರಗಳ ಮೂಲಕ ಅಭಿಮಾನಿ ಬಳಗ ಹೆಚ್ಚಿಸಿಕೊಂಡವರು. ಉದ್ಯಮಿಯಾಗಿಯೂ ಯಶಸ್ವಿಯಾಗಿದರುವ ಇವರ ಹೆಸರು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ರಾಜಕೀಯ ಇಷ್ಟವಿಲ್ಲ ಎಂದಿದ್ದ ನಟ, 2024ರ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ ಎಂದೇ ಚರ್ಚಿಸಲಾಗುತ್ತಿದೆ. ಈ ನಟ ಬಾಲಿವುಡ್ನ ಜನಪ್ರಿಯ ನಟಿ ಟಬು ಅವರೊಂದಿಗೆ ಅಫೇರ್ ಹೊಂದಿದ್ದಾರೆ ಎನ್ನುವ ಸುದ್ದಿ ಕೂಡ ಟಾಲಿವುಡ್ ಅಂಗಳದಲ್ಲಿ ಹೊಸತೇನಲ್ಲ. ಇವರು ಮೊದಲ ಹೆಂಡತಿಗೆ ವಿಚ್ಛೇದನ ನೀಡಿ ನಟಿ ಅಮಲಾ ಅವರನ್ನು ಮದುವೆಯಾಗಿದ್ದರು. ಬಳಿಕ ಇವರ ಹೆಸರು ಟಬು ಜೊತೆ ಕೇಳಿ ಬಂದಿತ್ತು. ಅವರ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ ಎನ್ನಲಾಗಿದೆ.
ನಯನತಾರಾ (Nayanatara)
ಸೌತ್ ಲೇಡಿ ಸೂಪರ್ ಸ್ಟಾರ್ ಎಂದೇ ಚಿರಪರಿಚಿತರಾಗಿರುವವರು ನಯನತಾರಾ. ಇವರು ತಮ್ಮ ಮದುವೆಗೂ ಮುನ್ನ, ಇದಾಗಲೇ ಮದುವೆಯಾಗಿದ್ದ ಡಾನ್ಸ್ ಕೊರಿಯೋಗ್ರಫರ್, ನಟ ಪ್ರಭುದೇವ ಜೊತೆ ಸಂಬಂಧ ಹೊಂದಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದೆ. ಇದೇ ಕಾರಣಕ್ಕಾಗಿಯೇ ಪ್ರಭುದೇವ್ (Prabhudev) ತನ್ನ ಮೊದಲ ಪತ್ನಿಗೆ ವಿಚ್ಛೇದನ ನೀಡಿದ್ದಾರೆ ಎನ್ನಲಾಗ್ತಿದೆ. ಆದರೆ ನಂತರ ಅದೇನಾಯಿತೋ ಗೊತ್ತಿಲ್ಲ, ಸಂಬಂಧ ಮುರಿದುಬಿತ್ತು. ನಂತರ ನಯನತಾರಾ ಅವರು ನಿರ್ದೇಶಕ ವಿಘ್ನೇಶ್ ಶಿವನ್ ಅವರನ್ನು ವಿವಾಹವಾಗಿದ್ದಾರೆ. ಕಳೆದ ಅಕ್ಟೋಬರ್ನಲ್ಲಿ ಮದುವೆಯಾಗಿದೆ ಈ ಜೋಡಿ. ಸದ್ಯ ನಯನತಾರಾ ಸಿನಿಮಾಗೆ ಬ್ರೇಕ್ ಕೊಡುತ್ತಾರೆ ಎನ್ನೋ ಸುದ್ದಿನೂ ಹರಿದಾಡುತ್ತಿದೆ.
ಸಂಬಂಧ ಇವ್ರ ಜೊತೆ, ಮದ್ವೆ ಅವ್ರ ಜೊತೆ, ಬಾಲಿವುಡ್ನ 9 ನಟಿಮಣಿಯರು ಇವ್ರೇ ನೋಡಿ!
ಧನುಷ್ (Dhanush), ಮೀನಾಕ್ಷಿ ಶೇಷಾದ್ರಿ
ಇನ್ನು, ಟಾಲಿವುಡ್ ಖ್ಯಾತ ನಟ ಧನುಷ್ ಅವರು, ರಜನಿಕಾಂತ್ ಪುತ್ರಿ ಐಶ್ವರ್ಯಾ ಅವರನ್ನು ವಿವಾಹವಾಗಿದ್ದಾರೆ. ಆದರೆ ಧನುಷ್ ಹೆಸರು ಶ್ರುತಿ ಹಾಸನ್ ಜೊತೆ ಕೇಳಿಬಂದಿತ್ತು. ಧನುಷ್ ಪತ್ನಿ ಕೂಡ ಈ ವಿಷಯವನ್ನು ಬಹಿರಂಗ ಪಡಿಸಲಿಲ್ಲ. ಆದರೆ ಧನುಷ್ ಅವರಿಂದ ಬೇರ್ಪಟ್ಟು ಜೀವನ ಸಾಗಿಸುತ್ತಿದ್ದಾರೆ. ಇನ್ನು 80 -90ರ ದಶಕದಲ್ಲಿ ಬಾಲಿವುಡ್ ಆಳಿದ್ದ ನಟಿ, ನೃತ್ಯಗಾತಿ ಮೀನಾಕ್ಷಿ ಶೇಷಾದ್ರಿ (Meenakshi Sheshadri) ಅವರು ಕೂಡ ಈ ಕುಖ್ಯಾತಿ ಪಡೆದಿದ್ದಾರೆ. ಇವರ ಹೆಸರು ಗಾಯಕ ಕುಮಾರ್ ಸಾನು ಜೊತೆ ಸೇರಿಕೊಂಡಿತ್ತು. ಕೆಲ ಕಾರಣದಿಂದ ಇಬ್ಬರ ನಡುವೆ ಬ್ರೇಕಪ್ ಆಗಿದೆ ಎನ್ನಲಾಗಿದ್ದು, ಆ ನಂತರ ಕುಮಾರ್ ಸಾನು ರೀಟಾ ಭಟ್ಟಾಚಾರ್ಯ ಅವರನ್ನ ವಿವಾಹವಾದರು.
Rakhi Sawant ಪತಿ ಜೊತೆ ಅಕ್ರಮ ಸಂಬಂಧ ಹೊಂದಿರೋ '99%' ಸುಂದರಿ ಯಾರು?
ಕಮಲ ಹಾಸನ್ (Kamala Hassan)
ಇನ್ನು ಕಮಲ್ ಹಾಸನ್ ಯಾರಿಗೆ ಗೊತ್ತಿಲ್ಲ? ಕನ್ನಡವೂ ಸೇರಿ ಬಹುಭಾಷೆಗಳಲ್ಲಿ ನಟಿಸಿರುವ ಈ ನಟ ರಾಜಕೀಯವಾಗಿಯೂ ಗುರುತಿಸಿಕೊಂಡಿದ್ದಾರೆ. ಇದಾಗಲೇ ಎರಡು ಮದುವೆಯಾಗಿರುವ ಇವರು, 2ನೇ ಪತ್ನಿ ಸಾರಿಕಾ ಅವರೊಂದಿಗೆ 16 ವರ್ಷಗಳಿಂದ ಸಂಸಾರ ಮಾಡಿದ್ದರು. ಸಾರಿಕಾ ಜೊತೆಗಿದ್ದಾಗಲೂ ಕಮಲ್ ಹಾಸನ್ ಅವರ ಹೆಸರು ನಟಿ ಗೌತಮಿ ಜೊತೆ ಥಳುಕು ಹಾಕಿಕೊಂಡಿತ್ತು. ಆದರೆ ಇವರಿಬ್ಬರ ಸಂಬಂಧ ಹೆಚ್ಚು ದಿನ ಉಳಿಯಲಿಲ್ಲ. ಈ ವಿಷಯ ತಿಳಿದ ಸಾರಿಕಾ ಅವರು ಕಮಲ್ ಹಾಸನ್ ಬಿಟ್ಟು ಹೋಗಲು ನಿರ್ಧರಿಸಿದ್ದರು ಎನ್ನುವ ಮಾತೂ ಇದೆ.