ಸೆಲ್ಫಿಗೆ ಒತ್ತಾಯಿಸಿ ಉದ್ಧವ್‌ ಠಾಕ್ರೆ ಬಣದ ಶಾಸಕನ ಪುತ್ರನಿಂದ ಸೋನು ನಿಗಮ್ ಹಾಗೂ ತಂಡದ ಮೇಲೆ ಹಲ್ಲೆ: ಕೇಸ್‌ ದಾಖಲು

By BK AshwinFirst Published Feb 21, 2023, 8:08 AM IST
Highlights

ಆಗ ಆ ಹುಡುಗನೇ ತಳ್ಳಿದ್ದು, ಹರಿಪ್ರಕಾಶ್ ಅವರನ್ನು ಬೀಳುವಂತೆ ಮಾಡಿದನು. ಕೋಪದ ಭರದಲ್ಲಿ ಹುಡುಗ ನನ್ನನ್ನೂ ತಳ್ಳಿದ್ದು, ಹಾಗಾಗಿ ನಾನು ಮೆಟ್ಟಿಲುಗಳ ಮೇಲೆ ಜಾರಿದೆ ಎಂದು ಸೋನು ನಿಗಮ್‌ ದೂರಿನಲ್ಲಿ ತಿಳಿಸಿದ್ದಾರೆ. 

ಮುಂಬೈ (ಫೆಬ್ರವರಿ 21, 2023): ಖ್ಯಾತ ಗಾಯಕ ಸೋನು ನಿಗಮ್ ಮತ್ತು ಅವರ ತಂಡದ ಮೇಲೆ ಇತ್ತೀಚೆಗೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಮಹಾರಾಷ್ಟ್ರ ರಾಜಧಾನಿ ಮುಂಬೈನ ಚೆಂಬೂರಿನಲ್ಲಿ ಚೆಂಬೂರಿನಲ್ಲಿ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ಗಾಯಕನ ಮೇಲೆ ಅಮಾನುಷವಾಗಿ ಕೈ ಮಾಡಲಾಗಿದೆ ಎಂಬ ವಿಡಿಯೋ ಕ್ಲಿಪ್‌ ವೈರಲ್‌ ಆಗಿದೆ. ಸಂಗೀತ ಕಾರ್ಯಕ್ರಮ ಮುಗಿಸಿ ಸೋನು ನಿಗಮ್‌ ಸ್ಟೇಜ್‌ನಿಂದ ಹೊರಗೆ ಬರುತ್ತಿದ್ದಂತೆ ಈ ಘಟನೆ ನಡೆದಿದೆ. ಸೋಮವಾರ ರಾತ್ರಿ ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್‌ ಆಗಿದೆ. 

ಸೋನು ನಿಗಮ್ ಮತ್ತು ಅವರ ಅಂಗರಕ್ಷಕರು ಗಲಾಟೆಯ ಸಮಯದಲ್ಲಿ ಗಾಯಗೊಂಡಿದ್ದಾರೆ ಎಂದು ಈ ವಿಡಿಯೋ ತೋರಿಸುತ್ತದೆ. ಉದ್ಧವ್‌ ಠಾಕ್ರೆ ಬಣದ ಶಾಸಕ ಪ್ರಕಾಶ್ ಫತೇರ್‌ಪೇಕರ್ ಅವರ ಪುತ್ರ ಸೋನು ನಿಗಮ್‌ ಅವರ ಅಂಗರಕ್ಷಕರನ್ನು ತಳ್ಳಿದ್ದಾರೆ ಎಂದು ವರದಿಯಾಗಿದೆ. ಫತೇರ್‌ಪೇಕರ್ ಅವರ ಮಗ ಮತ್ತು ಸೋದರಳಿಯ ಪದ್ಮಶ್ರೀ ಪುರಸ್ಕೃತರೊಂದಿಗೆ ಸೆಲ್ಫಿ ಕ್ಲಿಕ್ಕಿಸಲು ಪ್ರಯತ್ನಿಸುತ್ತಿದ್ದರು ಮತ್ತು ನಂತರ ಅವರ ಮ್ಯಾನೇಜರ್ ಸಾಯಿರಾ ಅವರೊಂದಿಗೆ ಅನುಚಿತವಾಗಿ ವರ್ತಿಸಿದರು. ಅವರು ಸ್ಟೇಜ್‌ನಿಂದ ಕೆಳಕ್ಕೆ ಬರುತ್ತಿದ್ದಂತೆ ಅವರನ್ನು ಮೆಟ್ಟಿಲುಗಳ ಮೇಲೆ ತಳ್ಳಿದರು ಎಂಬುದನ್ನು ವಿಡಿಯೋ ತೋರಿಸುತ್ತದೆ.

Latest Videos

ಇದನ್ನು ಓದಿ: ಕ್ರಿಕೆಟಿಗ ಪೃಥ್ವಿ ಶಾ ಹಾಗೂ ಅಭಿಮಾನಿಗಳ ನಡುವೆ ಮಾರಾಮಾರಿ, ಕಾರು ಪುಡಿ ಪುಡಿ!



Singer Sonu Nigam who raised his voice about Azan Loudspeakers attacked by Janab Uddhav Thackeray MLA Prakash Phaterpekar and his goons in music event at Chembur. Sonu has been taken to the hospital nearby. pic.twitter.com/32eIPQtdyM

— Sameet Thakkar (@thakkar_sameet)

ಘಟನೆಯ ನಂತರ ಗಾಯಕ ಸೋನು ನಿಗಮ್ ಮುಂಬೈನ ಚೆಂಬೂರ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದು, ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿದ್ದಾರೆ. ಶಾಸಕರ ಮಗನನ್ನು ಹೆಸರಿಸಿ ತನ್ನ ತಂಡದ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಗಾಯಕ ಸೋನು ನಿಗಮ್‌ ಪೊಲೀಸ್‌ ಠಾಣೆಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಈ ಹಿನ್ನೆಲೆ ಮುಂಬೈ ಪೊಲೀಸರು ಗಾಯಗೊಳಿಸುವುದು, ತಪ್ಪು ಸಂಯಮ ಮತ್ತು ಇತರ ಆರೋಪಗಳಿಗಾಗಿ ವ್ಯಕ್ತಿಯೊಬ್ಬನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಗಾಯಕ ಸೋನು ನಿಗಮ್ ಅವರ ದೂರಿನ ಆಧಾರದ ಮೇಲೆ ಐಪಿಸಿ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವ ಶಿಕ್ಷೆ), 341 (ತಪ್ಪು ಸಂಯಮ), ಮತ್ತು 337 (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕೃತ್ಯದಿಂದ ನೋವುಂಟುಮಾಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ವಿವರ..

ಚೆಂಬೂರ್ ಫೆಸ್ಟಿವಲ್‌ ತಂಡವು ಲೈವ್‌ ಕನ್ಸರ್ಟ್‌ ಕಾರ್ಯಕ್ರಮಕ್ಕಾಗಿ ತಮ್ಮ ಕಚೇರಿಯನ್ನು ಸಂಪರ್ಕಿಸಿತ್ತು. ಬಳಿಕ, ಫೆಬ್ರವರಿ 20 ರಂದು ಸಂಜೆ 7 ಗಂಟೆಗೆ ಈ ಕಾರ್ಯಕ್ರಮಕ್ಕಾಗಿ ಚೆಂಬೂರ್ ಜಿಮ್ಖಾನಾ ತಲುಪಿದೆವು. ಸುಮಾರು 10 ಗಂಟೆಯವರೆಗೂ ಕಾರ್ಯಕ್ರಮ ನಡೆದು ನಿಗದಿತ ಸಮಯಕ್ಕೆ ಮುಕ್ತಾಯವಾಯಿತು.

ಇದನ್ನೂ ಓದಿ: ಹಿಂದಿ ಹೇರಿಕೆಯಿಂದ ದೇಶದಲ್ಲಿ ಬಿರುಕು: ಸೋನು ನಿಗಮ್‌

"ಕಾರ್ಯಕ್ರಮ ಮುಗಿದ ನಂತರ, ನನ್ನ ಸಹೋದ್ಯೋಗಿ ಹರಿಪ್ರಕಾಶ್, ರಬ್ಬಾನಿ ಖಾನ್, ಸಾಯಿರಾ ಮಕಾನಿ, ನಾವೆಲ್ಲರೂ ವೇದಿಕೆಯಿಂದ ಇಳಿಯುತ್ತಿದ್ದಾಗ, ಇದ್ದಕ್ಕಿದ್ದಂತೆ ಒಬ್ಬ ಹುಡುಗ ಹಿಂದಿನಿಂದ ಬಂದು ನನ್ನನ್ನು ಹಿಡಿದನು. ಆಗ ಹರಿಪ್ರಕಾಶ್ ಆ ಹುಡುಗನನ್ನು ಆ ಸ್ಥಳದಿಂದ ಹಿಂದಕ್ಕೆ ಸರಿಸಲು ಪ್ರಯತ್ನಿದರು.  ಆಗ ಆ ಹುಡುಗನೇ ತಳ್ಳಿದ್ದು, ಹರಿಪ್ರಕಾಶ್ ಅವರನ್ನು ಬೀಳುವಂತೆ ಮಾಡಿದನು. ಕೋಪದ ಭರದಲ್ಲಿ ಹುಡುಗ ನನ್ನನ್ನೂ ತಳ್ಳಿದ್ದು, ಹಾಗಾಗಿ ನಾನು ಮೆಟ್ಟಿಲುಗಳ ಮೇಲೆ ಜಾರಿದೆ’’ ಎಂದು ಸೋನು ನಿಗಮ್‌ ದೂರಿನಲ್ಲಿ ಆರೋಪಿಸಿದ್ದಾರೆ. 

ಅಲ್ಲದೆ, ರಬ್ಬಾನಿ ಖಾನ್ ಅವರು ನನಗೆ ಸಹಾಯ ಮಾಡಲು ಮುಂದಾದಾಗ, ಕೋಪದ ಭರದಲ್ಲಿ ಹುಡುಗ ಅವರನ್ನು ತಳ್ಳಿ ಮೆಟ್ಟಿಲುಗಳಿಂದ ಕೆಳಗೆ ಬೀಳುವಂತೆ ಮಾಡಿದನು" ಎಂದೂ ಗಾಯಕ ತಿಳಿಸಿದ್ದಾರೆ. ಆ ಹುಡುಗ ಶಾಸಕ ಪ್ರಕಾಶ್ ಫತೇರ್‌ಪೇಕರ್ ಅವರ ಪುತ್ರ ಎಂದೂ ಗಾಯಕ ಸೋನುನಿಗಮ್‌ ಮುಂಬೈ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. 

click me!