ಹೃತಿಕ್ ರೋಷನ್ or ದಿಲ್ಜಿತ್ ದೋಸಾಂಜ್ ಇಬ್ಬರಲ್ಲಿ ಯಾರು ಇಷ್ಟ? ಅಭಿಮಾನಿ ಪ್ರಶ್ನೆಗೆ ಕಂಗನಾ ಉತ್ತರ ವೈರಲ್

Published : Feb 20, 2023, 05:48 PM IST
ಹೃತಿಕ್ ರೋಷನ್  or ದಿಲ್ಜಿತ್ ದೋಸಾಂಜ್ ಇಬ್ಬರಲ್ಲಿ ಯಾರು ಇಷ್ಟ? ಅಭಿಮಾನಿ ಪ್ರಶ್ನೆಗೆ ಕಂಗನಾ ಉತ್ತರ ವೈರಲ್

ಸಾರಾಂಶ

ಹೃತಿಕ್ ರೋಷನ್  or ದಿಲ್ಜಿತ್ ದೋಸಾಂಜ್ ಈ ಇ್ಬಬರಲ್ಲಿ ನೆಚ್ಚಿನ ಸ್ಟಾರ್ ಎಂದು ಕೇಳಿದ ಪ್ರಶ್ನೆಗೆ ಬಾಲಿವುಡ್ ನಟಿ ಕಂಗನಾ ರಣಾವತ್ ಕೊಟ್ಟ ರಿಯಾಕ್ಷನ್ ವೈರಲ್ ಆಗಿದೆ. 

ಬಾಲಿವುಡ್ ಸ್ಟಾರ್ ನಟಿ ಕಂಗನಾ ರಣಾವತ್ ಸದಾ ಅಭಿಮಾನಿಗಳನ್ನು ಗಮನ ಸೆಳೆಯುತ್ತಿರುತ್ತಾರೆ. ಸದಾ ಒಂದಲ್ಲೊಂದು ಹೇಳಿಕೆ ನೀಡುವ ಮೂಲಕ ಸದ್ದು ಮಾಡುತ್ತಲೇ ಇರುತ್ತಾರೆ. ಕಂಗನಾ ಸದ್ಯ ಅಭಿಮಾನಿಗಳ ಪ್ರಶ್ನೆಗೆ ಉತ್ತರ ನೀಡುತ್ತಿದ್ದಾರೆ. ಟ್ವಿಟ್ಟರ್ ನಲ್ಲಿ ಮತ್ತೆ ಸಕ್ರೀಯರಾಗಿರುವ ಕಂಗನಾ ಆಸ್ಕ್ ಮಿ ಎನಿಥಿಂಗ್ ಸೆಷನ್ ನಡೆಸಿದ್ದಾರೆ. ಕಂಗನಾ ಅವರಿಗೆ ಅನೇಕ ಪ್ರಶ್ನೆಗಳು ಹರಿದು ಬಂದಿವೆ. ಅಭಿಮಾನಿಗಳ ಆಯ್ದೆ ಕೆಲವು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಮೊದಲ ಬಾರಿಗೆ ಆಸ್ಕ್ ಮಿ ಎನಿಥಿಂಗ್ ಸೆಷನ್ ಮಾಡುತ್ತಿರುವುದಾಗಿ ಕಂಗನಾ ಹೇಳಿದ್ದಾರೆ. ಚಿತ್ರೀಕರಣದ ಬಿಡುವಿನ ವೇಳೆ ಅಭಿಮಾನಿಗಳ ಜೊತೆ ಚಾಟ್ ಮಾಡಿದ್ದಾರೆ.

ಅಭಿಮಾನಿಯೊಬ್ಬ ಕಂಗನಾಗೆ ಹೃತಿಕ್ ರೋಷನ್ ಮತ್ತು  ದಿಲ್ಜಿತ್ ದೋಸಾಂಜ್  ಯಾರು ನಿಮ್ಮ ಫೇವರಿಟ್ ಎಂದು ಕೇಳಿದ್ದಾರೆ. ಅಭಿಮಾನಿಗಳು ಕೇಳಿದ ಕ್ರೇಜಿ ಪ್ರಶ್ನೆಗೆ ಕಂಗನಾ ನೀಡಿದ ಉತ್ತರ ವೈರಲ್ ಆಗಿದೆ. 'ಒಬ್ಬರು ಆಕ್ಷನ್ ಮಾಡುತ್ತಾರೆ. ಮತ್ತೊಬ್ಬರು ಹಾಡಿನ ವಿಡಿಯೋಗಳನ್ನು ಮಾಡುತ್ತಾರೆ ಎಂದು ನಾನು ಭಾವಿಸುತ್ತೇನೆ.  ಪ್ರಮಾಣಿಕವಾಗಿ ನಾನು ಹೇಳುತ್ತೇನೆ ಅವರು ನಟಿಸಿದ್ದನ್ನು ನಾನು ನೋಡಿಲ್ಲ. ಅವರ ನಟನೆ ನೋಡಿದಾಗ ಮಾತ್ರ ಹೇಳಬಲ್ಲೆ. ಹಾಗೇನಾದರೂ ಆದರೆ ನನಗೆ ತಿಳಿಸಿ' ಎಂದು ಹೇಳಿದ್ದಾರೆ. 

ಕಂಗನಾ ಉತ್ತರ ಅಭಿಮಾನಿಗಳ ಹೃದಯ ಗೆದ್ದಿದೆ. ಸಖತ್ ರಿಯಾಕ್ಷನ್ ಎಂದು ಹೇಳುತ್ತಿದ್ದಾರೆ. ಅಂದಹಾಗೆ ಕಂಗನಾ ಮತ್ತು ಹೃತಿಕ್ ರೋಷನ್ ಡೇಟಿಂಗ್, ಕಿತ್ತಾಟದ ವಿಚಾರ ಎಲ್ಲರಿಗೂ ಗೊತ್ತಿರುವುದೆ. 2016 ಮತ್ತು 17ರಲ್ಲಿ ಇಬ್ಬರೂ ದೊಡ್ಡ ಮಟ್ಟದಲ್ಲಿ ಕಿತ್ತಾಡಿದ್ದರು. ಇಬ್ಬರ ಕಿತ್ತಾಟ ಕೋರ್ಟ್ ಮೆಟ್ಟಿಲೇರಿತ್ತು. ಹೃತಿಕ್ ವಿರುದ್ಧ ಕಂಗನಾ ಸಾಲು ಸಾಲು ಆರೋಪಗಳನ್ನು ಮಾಡಿದ್ದರು. ಆದರೆ ಹೃತಿಕ್ ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿದ್ದರು. ಇಬ್ಬರ ಕಾನೂನು ಸಮರ ಇನ್ನೂ ಮುಂದುವರೆದಿದೆ. 

ಅತಿಯಾಗಿ ಪ್ರತಿಕ್ರಿಯಿಸುವ ಅಗತ್ಯವಿಲ್ಲ; ಧರ್ಮದ ಬಗ್ಗೆ ಮಾತನಾಡಿದ್ದ ರಾಜಮೌಳಿಗೆ ಕಂಗನಾ ಬೆಂಬಲ

ಮತ್ತೋರ್ವ ಅಭಿಮಾನಿ ಕಂಗನಾ ಅವರ ಅತ್ಯಂತ ಕಷ್ಟದ ಸಮಯದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. 'ನಾನು ಚಿಕ್ಕವಳಿದ್ದಾಗ ಮನೆ ತೊರೆದಿದ್ದೇನೆ, ನಂತರ ನನ್ನನ್ನು ತೀವ್ರ ಮಾನಸಿಕ, ದೈಹಿಕ ಮತ್ತು ಭಾವನಾತ್ಮಕ ನೋವಿಗೆ ಒಳಪಡಿಸಿದ ವ್ಯಕ್ತಿಯನ್ನು ನಾನು ಭೇಟಿಯಾದೆ. ಬಳಿಕ ನಾನು ಗೆದ್ದೆ' ಎಂದು ಹೇಳಿದ್ದಾರೆ. ಮತ್ತೋರ್ವ ಅಭಿಮಾನಿ  ಸತ್ಯ ಅಥವಾ ಪ್ರೀತಿ ಯಾವುದನ್ನು ಆಯ್ಕೆ ಮಾಡುತ್ತೀರಾ ಎಂದು ಕಂಗನಾಗೆ ಕೇಳದರು. ಇದಕ್ಕೆ ಕ್ವೀನ್ ನಟಿ 'ಸತ್ಯ ... ನೀವು ಪ್ರೀತಿಯನ್ನು ಆರಿಸುವುದಿಲ್ಲ, ಪ್ರೀತಿ ನಿಮ್ಮನ್ನು ಆಯ್ಕೆ ಮಾಡುತ್ತದೆ, ಪ್ರೀತಿ ಸೂರ್ಯನಂತೆ ಅದು ನಿಮ್ಮ ಮೇಲೆ ಬೀಳುತ್ತದೆ' ಎಂದು ಹೇಳಿದ್ದಾರೆ. ಅನೇಕ ಇಂಟ್ರಸ್ಟೆಂಗ್ ಪ್ರಶ್ನೆಗಳಿಗೆ ಕಂಗನಾ ಉತ್ತರ ನೀಡಿದ್ದಾರೆ.

ಕ್ಲಾಸ್ ಬಂಕ್ ಮಾಡಿ ಎಲ್ಲಿಗೆ ಹೋಗ್ತಿದ್ರು ಕಂಗನಾ? ಫೋಟೋ ಹಂಚಿಕೊಂಡು ಬಾಲ್ಯ ನೆನೆದ ನಟಿ

ಕಂಗನಾ ಬಳಿ ಇರುವ ಸಿನಿಮಾಗಳು

ಕಂಗನಾ ಸದ್ಯ ಎಮರ್ಜೆನ್ಸಿ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಈ ಸಿನಿಮಾದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಟನೆ ಜೊತೆಗೆ ನಿರ್ದೇಶನ ಕೂಡ ಮಾಡಿದ್ದಾರೆ. ಈ ಸಿನಿಮಾದಲ್ಲಿ ಅನುಪಮ್ ಖೇರ್, ಮಿಲಿಂದ್ ಸೋಮನ್ ಸೇರಿದಂತೆ ಅನೇಕರಿದ್ದಾರೆ. ತೇಜಸ್ ಸಿನಿಮಾ ಕೂಡ ಮಾಡುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಸಹ ಬಹುತೇಕ ಮುಗಿಸಿದ್ದಾರೆ ಕಂಗನಾ. ಕೊನೆಯದಾಗಿ ಕಂಗನಾ ಧಾಖಡ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಆದರೆ ಆ ಸಿನಿಮಾ ಹೀನಾಯ ಸೋಲು ಕಂಡಿತ್ತು. ಹಾಗಾಗಿ ಮುಂದಿನ ಸಿನಿಮಾಗಳ ಗೆಲುವು ಅನಿವಾರ್ಯವಾಗಿದೆ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?
ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?