ಇಸ್ಲಾಮ್​ ಸ್ವೀಕರಿಸುವೆ... ವಿದಾಯದ ನುಡಿ ಬರೆದು ಕಣ್ಣೀರಿಟ್ಟ ಮತ್ತೋರ್ವ ಖ್ಯಾತ ನಟಿ

By Suvarna News  |  First Published Feb 20, 2023, 5:13 PM IST

ಪಾಕಿಸ್ತಾನದ ಸುಪ್ರಸಿದ್ಧ ನಟಿ, ರೂಪದರ್ಶಿ ಇಸ್ಲಾಂ ಧರ್ಮವನ್ನು ಸಂಪೂರ್ಣವಾಗಿ ಸ್ವೀಕರಿಸುವುದಾಗಿ ಹೇಳಿಕೊಂಡು ಸಿನಿ ರಂಗಕ್ಕೆ ಶಾಶ್ವತ ವಿದಾಯ ಹೇಳಿದ್ದಾರೆ. ಇವರು ಬರೆದಿರುವ ವಿದಾಯದ ಪತ್ರದಲ್ಲಿ ಏನಿದೆ?
 


ಮುಂಬೈ: ಚಲನಚಿತ್ರ ಪ್ರಪಂಚದ ಹೊಳಪು ಮತ್ತು ಗ್ಲಾಮರಸ್​ ಲುಕ್​  ಜನರನ್ನು ತನ್ನತ್ತ ಸೆಳೆಯುತ್ತದೆ. ಒಮ್ಮೆ ಈ ಪ್ರಪಂಚದಲ್ಲಿ ಉತ್ತುಂಗಕ್ಕೆ ಏರಿದರೆ ಅವರ ಜೀವನದ ಹಾದಿಯೇ ಬದಲಾಗಿ ಹೋಗುತ್ತದೆ. ಆದರೆ ಎಲ್ಲವೂ ಜನರ ಕಣ್ಣಿಗೆ ಕಾಣುವಂತೆ ಇರುವುದಿಲ್ಲ. ಕೆಲವು ನಟ ನಟಿಯರ ಜೀವನ ಪರದೆ ಮೇಲಿನ ಹೊಳಪು ಆಗಿರುವುದಿಲ್ಲ. ಜನರ ಕಣ್ಣಿಗೆ ಕಾಣುವುದೇ ಒಂದಾದರೆ, ನಿಜ ಜೀವನದಲ್ಲಿ ಆಗುವುದೇ ಬೇರೆ. ಚಿತ್ರರಂಗದ (Film industry) ಉತ್ತುಂಗದಲ್ಲಿ ಇರುವಾಗಲೇ ಕೆಲ ನಟಿಯರು ಚಿತ್ರರಂಗ ಬಿಡುವ ಪರಿಸ್ಥಿತಿ ಇದೆ. ಹೆಣ್ಣುಮಕ್ಕಳ ಸ್ವಾತಂತ್ರ್ಯದ ಹಕ್ಕಿನ ಬಗ್ಗೆ ಎಷ್ಟೇ ಹೋರಾಟ, ಎಷ್ಟೇ ಚರ್ಚೆಗಳು ನಡೆದರೂ ಒಂದು ಹಂತದಲ್ಲಿ ಆಕೆ ಸೋಲು ಒಪ್ಪಿಕೊಳ್ಳಲೇಬೇಕು. ಕುಟುಂಬಕ್ಕಾಗಿ ತ್ಯಾಗಿಯಾಗಲೇಬೇಕು. ವ್ಯವಸ್ಥೆಗಳ ಸುಳಿಯಲ್ಲಿ ಸಿಲುಕಿ ತನ್ನೆಲ್ಲಾ ನೋವನ್ನು ಮರೆಮಾಚಿಕೊಂಡು ಮೌನವಾಗಿ ಕಣ್ಣೀರು ಹಾಕಲೇಬೇಕು.

ಇಂಥದ್ದೇ ಸಾಲಿಗೆ ಇದಾಗಲೇ ಕೆಲವು ನಟಿಯರ ಸೇರ್ಪಡೆಯಾಗಿದೆ. ಇತ್ತೀಚಿನ ಉದಾಹರಣೆಗಳನ್ನು ನೀಡುವುದಾದರೆ,  ದಂಗಲ್ ಚಿತ್ರದ ನಂತರ ನಟಿ ಝೈರಾ ವಾಸಿಂ (Zaira Wasim) ಮತ್ತು ಸನಾ ಖಾನ್ (Sana Khan). ಚಿತ್ರರಂಗದ ಉತ್ತುಂಗದಲ್ಲಿ ಇರುವಾಗಲೇ ಇವರು ಕೌಟುಂಬಿಕ ಕಾರಣಗಳಿಂದ ಬಣ್ಣದ ಬದುಕಿಗೆ ವಿದಾಯ ಹೇಳಿದ್ದಾರೆ. ಇದೀಗ ಇವರ ಸಾಲಿಗೆ ನಿಲ್ಲುತ್ತಿದ್ದಾರೆ ಮತ್ತೋರ್ವ ತಾರೆ ಅನಮ್ ಫಯಾಜ್. ಪಾಕಿಸ್ತಾನದ ಖ್ಯಾತ ನಟಿ ಅನಮ್ ಫಯಾಜ್ ಅವರು ಚಿತ್ರರಂಗವನ್ನು ತೊರೆಯಲು ನಿರ್ಧರಿಸಿದ್ದಾರೆ.

Tap to resize

Latest Videos

Tunisha Sharma: 'ಲವ್​ ಜಿಹಾದ್'​ ಕೇಸ್​ಗೆ ಭಾರಿ ಟ್ವಿಸ್ಟ್: ನಟನ ವಿರುದ್ಧ ​524 ಪುಟಗಳ ಚಾರ್ಜ್ ಶೀಟ್

ನಟಿ ಅನಮ್ ಫಯಾಜ್ (Anam Faiz) ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಅನ್ನು ಹಂಚಿಕೊಳ್ಳುವ ಮೂಲಕ ಇದನ್ನು ಘೋಷಿಸಿದ್ದಾರೆ, ಕಣ್ಣೀರಿನ ವಿದಾಯ ನುಡಿಗಳನ್ನು ಬರೆದಿದ್ದಾರೆ. ಚಿತ್ರರಂಗಕ್ಕೆ ಶಾಶ್ವತವಾಗಿ ವಿದಾಯ ಹೇಳುತ್ತಿದ್ದೇನೆ ಎಂದು ಕಣ್ಣೀರು ಹಾಕಿದ್ದಾರೆ.  ಇನ್‌ಸ್ಟಾಗ್ರಾಮ್‌ನಲ್ಲಿ ಇದನ್ನು ಘೋಷಿಸಿರುವ ನಟಿ,  'ಇದನ್ನು ಬರೆಯಲು ನನಗೆ ತುಂಬಾ ಕಷ್ಟವಾಗಿದೆ. ಏಕೆಂದರೆ ನನ್ನ ವೃತ್ತಿಜೀವನದಲ್ಲಿ ನೀವೆಲ್ಲರೂ ನನಗೆ ಸಾಕಷ್ಟು ಬೆಂಬಲ ನೀಡಿದ್ದೀರಿ. ಆದರೆ ನಾನು ಚಿತ್ರರಂಗವನ್ನು ತೊರೆಯಲೇಬೇಕಿದೆ.  ಇಸ್ಲಾಮಿಕ್ ಮಾರ್ಗಗಳನ್ನು ಸಂಪೂರ್ಣವಾಗಿ ಸ್ವೀಕರಿಸಲು ನಿರ್ಧರಿಸಿರುವ ಕಾರಣ, ಚಿತ್ರರಂಗಕ್ಕೆ ವಿದಾಯ ಹೇಳುತ್ತಿದ್ದೇನೆ' ಎಂದಿದ್ದಾರೆ.


 
ಬುರ್ಖಾ ಧರಿಸಿ ಇನ್​ಸ್ಟಾಗ್ರಾಮ್​ನಲ್ಲಿ (Instagram) ಶೇರ್​ ಮಾಡಿಕೊಂಡಿರುವ ನಟಿ, 'ನಾನು ಇಸ್ಲಾಂ ಧರ್ಮದ ಮಾರ್ಗವನ್ನು ಅನುಸರಿಸಲು ಸಂಪೂರ್ಣವಾಗಿ ನಿರ್ಧರಿಸಿದ್ದೇನೆ. (ಹಿಜಾಬ್​ ಧರಿಸಿರುವ ಫೋಟೋವನ್ನು ಉಲ್ಲೇಖಿಸುತ್ತಾ...) ಡಿಜಿಟಲ್ ಯುಗದಲ್ಲಿ ಅದನ್ನು ನೀವು ನೋಡಲು ಸಾಧ್ಯವಾಗಿದೆ. ನನ್ನ ಇಸ್ಲಾಮಿಕ್ ಜೀವನಶೈಲಿಯ ಒಂದು ನೋಟ ಇದಾಗಿದೆ. ಚಿತ್ರರಂಗ ಶಾಶ್ವತವಾಗಿ ತೊರೆಯುತ್ತಿದ್ದೇನೆ, ವಿದಾಯ ಹೇಳುತ್ತಿದ್ದೇನೆ.  ನಿಮ್ಮೆಲ್ಲರ ಪ್ರಾರ್ಥನೆಯಲ್ಲಿ ನನ್ನನ್ನು ಸ್ಮರಿಸಬೇಕಾಗಿ ವಿನಂತಿ. ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು ಎಂದಿದ್ದಾರೆ. ಅಷ್ಟೇ ಅಲ್ಲ, ಇಸ್ಲಾಂ ಧರ್ಮವನ್ನು ಸಂಪೂರ್ಣವಾಗಿ ಅಳವಡಿಸಿಕೊಂಡ ಪರಿಣಾಮ ಅನಮ್ ಅವರ ಜೀವನಶೈಲಿಯ ಮೇಲೂ ಕಾಣಿಸಿಕೊಳ್ಳಲಾರಂಭಿಸಿದೆ. ಒಂದು ಕಾಲದಲ್ಲಿ ಬೋಲ್ಡ್ ಮತ್ತು ಗ್ಲಾಮರಸ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಆನಮ್ ಈಗ ಹಿಜಾಬ್‌ನಲ್ಲಿ ಮಾತ್ರ ಕಾಣಿಸಿಕೊಳ್ಳಲು ಇದೇ ಕಾರಣ. ಅನಮ್ ಎರಡು ದಿನಗಳ ಹಿಂದೆ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದರು, ಅದರಲ್ಲಿ ಅವರು ಹಿಜಾಬ್‌ನಲ್ಲಿ ಮಾತ್ರ ಕಾಣಿಸಿಕೊಂಡಿದ್ದಾರೆ.

ಹೃದಯಾಘಾತಕ್ಕೆ ಜೀವ ತೊರೆದ ಸೌತ್‌ ಇಂಡಸ್ಟ್ರಿಯ ಕಣ್ಮಣಿಗಳಿವರು

31 ವರ್ಷದ ಅನಮ್ ಫಯಾಜ್ ಅವರು 25 ಡಿಸೆಂಬರ್ 1991 ರಂದು ಕರಾಚಿಯಲ್ಲಿ ಜನಿಸಿದರು. ಇವರು  ಪಾಕಿಸ್ತಾನದ ಪ್ರಸಿದ್ಧ ಟಿವಿ ನಟಿ ಮತ್ತು ರೂಪದರ್ಶಿ (Model). ಚಿಕ್ಕ ವಯಸ್ಸಿನಿಂದಲೇ ಮಾಡೆಲಿಂಗ್ ಜಗತ್ತಿಗೆ ಕಾಲಿಟ್ಟವರು. ಅನಮ್ ಇಷ್ಕ್ ಇಬಾದತ್, ಪರ್ವರೀಶ್, ಅಹ್ಮದ್ ಹಬೀಬ್ ಕಿ ಬೇಟಿಯಾನ್ ಮುಂತಾದ ಅನೇಕ ಟಿವಿ ಶೋಗಳಲ್ಲಿ ಕೆಲಸ ಮಾಡಿದ್ದಾರೆ.  2016 ರಲ್ಲಿ ಅಸದ್ ಅನ್ವರ್ ಅವರನ್ನು ವಿವಾಹವಾದರು. ಇವರಿಗೆ ಒಬ್ಬ ಮಗನೂ ಇದ್ದಾನೆ.

click me!