ಮಗನಿಗೆ Vayu ಎಂದು ಹೆಸರಿಟ್ಟ ಸೋನಂ ಕಪೂರ್; ಹಿಂದಿರುವ ಕಾರಣ ತಿಳಿಸಿದ ಕಪೂರ್ ಕುಟುಂಬ!

By Vaishnavi ChandrashekarFirst Published Sep 21, 2022, 11:34 AM IST
Highlights

ಮಗನ 1 ತಿಂಗಳ ಹುಟ್ಟುಹಬ್ಬ ಆಚರಿಸಿದ ಸೋನಂ ಕಪೂರ್. ಬಾಸ್‌ ಬೇಬಿಗೆ ಹೆಸರು ಕೊಟ್ಟ ಕಪೂರ್ ಕುಟುಂಬ...

ಬಾಲಿವುಡ್ ಸ್ಟೈಲ್ ಡೀವಾ ಸೋನಂ ಕಪೂರ್ (Sonam Kapoor) ಮತ್ತು ಉದ್ಯಮಿ ಆನಂದ್ ಅಹುಜಾ (Anand ahuja) ಆಗಸ್ಟ್‌ 20ರಂದು ಕುಟುಂಬಕ್ಕೆ ಗಂಡು ಮಗುವನ್ನು ಬರ ಮಾಡಿಕೊಂಡರು. ಸೋಷಿಯಲ್ ಮೀಡಿಯಾದಿಂದ ಪುತ್ರನನ್ನು ದೂರ ಇಡುವ ನಿರ್ಧಾರ ಮಾಡಿರುವ ಕಪೂರ್ ಕುಟುಂಬ ಸೆಪ್ಟೆಂಬರ್ 20ರಂದು ನಾಮಕರಣ ಮತ್ತು 1 ತಿಂಗಳ ಬರ್ತಡೇ ಆಚರಣೆ ಮಾಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಮಗನ ಹೆಸರು ಜೊತೆಗೆ ಅದರ ಅರ್ಥವನ್ನು ಜನರೊಂದಿಗೆ ಹಂಚಿಕೊಂಡಿದ್ದಾರೆ. 

ಪುತ್ರನ ಹೆಸರು:

'ನಮ್ಮ ಬದುಕಿಗೆ ಹೊಸ ಅರ್ಥವನ್ನು ತುಂಬಿದ ಶಕ್ತಿಯ ಉತ್ಸಾಹದಲ್ಲಿ...ಅಗಾಧವಾದ ಧೈರ್ಯ ಮತ್ತು ಶಕ್ತಿಯನ್ನು ಒಳಗೊಂಡಿರುವ ಹನುಮಂತ ಮತ್ತು ಭೀಮನ ಆತ್ಮದಲ್ಲಿ...ಪವಿತ್ರವಾದ, ಜೀವ ನೀಡುವ ಮತ್ತು ಶಾಶ್ವತವಾಗಿ ನಮ್ಮದಾಗಿರುವ ಎಲ್ಲದರ ಉತ್ಸಾಹದಲ್ಲಿ, ನಾವು ನಮ್ಮ ಮಗನಿಗೆ ವಾಯು ಕಪೂರ್ ಅಹುಜಾಗೆ ಎಂದು ನಾಮಕರಣ ಮಾಡುತ್ತೇವೆ. ನಿಮ್ಮ ಆಶೀರ್ವಾದವನ್ನು ಬಯಸುತ್ತೇವೆ' ಎಂದು ಸೋನಂ ಬರೆದುಕೊಂಡಿದ್ದಾರೆ.

ಸಾಮಾನ್ಯವಾಗಿ ಸೆಲೆಬ್ರಿಟಿ ಮಕ್ಕಳ ಹೆಸರು ವಿಭಿನ್ನವಾಗಿರುತ್ತದೆ. ಕಪೂರ್ ಕುಟುಂಬದವರು  ಹೆಸರಿಟ್ಟಿರುವು ಅಚ್ಚರಿ ವಿಷಯ. ಹೀಗಾಗಿ ಹೆಸರಿನ ಅರ್ಥವನ್ನು ಜನರಿಗೆ ತಿಳಿಸಿದ್ದಾರೆ. 'ಹಿಂದೂ ಧರ್ಮಗ್ರಂಥಗಳಲ್ಲಿ ವಾಯುವು ಪಂಚ ತತ್ವಗಳಲ್ಲಿ ಒಂದು. ಆತ ಉಸಿರಾಟದ ದೇವರು, ಹನುಮಾನ್, ಭೀಮ್ ಮತ್ತು ಮಾಧವರ ಆಧ್ಯಾತ್ಮಿಕ ತಂದೆ. ಆತ ನಂಬಲಾಗದಷ್ಟು ಶಕ್ತಿಶಾಲಿ ಗಾಳಿಯ ಅಧಿಪತಿ. ವಾಯು ಅಂದ್ರೆ ಪ್ರಾಣ,ವಿಶ್ವದಲ್ಲಿ ಜೀವನ ಮತ್ತು ಬುದ್ಧಿವಂತಿಕೆಯ ಮಾರ್ಗದರ್ಶಿ ಶಕ್ತಿ. ಪ್ರಾಣ, ಇಂದ್ರ, ಶಿವ ಮತ್ತು ಕಾಳಿಯ ಎಲ್ಲಾ ದೇವತೆಗಳು ವಾಯುವಿಗೆ ಸಂಬಂಧಿಸಿವೆ.ಅವನು ಕೆಟ್ಟದ್ದನ್ನು ನಾಶಪಡಿಸುವಷ್ಟು ಸುಲಭವಾಗಿ ಜೀವಿಗಳನ್ನು ಉಳಿಸುತ್ತಾನೆ. ವಾಯುವನ್ನು ವೀರ, ಧೈರ್ಯಶಾಲಿ ಮತ್ತು ಮೋಡಿಮಾಡುವ ಸುಂದರ ಎಂದು ಹೇಳಲಾಗುತ್ತದೆ.ವಾಯು ಮತ್ತು ನಮಗೆ ನೀವು ನಿಮ್ಮ ನಿರಂತರ ಶುಭಾಶಯಗಳು ಮತ್ತು ಆಶೀರ್ವಾದಗಳನ್ನು ಕೊಡಬೇಕು. ಧನ್ಯವಾದಗಳು' ಎಂದು ಸೋನಂ ಬರೆದುಕೊಂಡಿದ್ದಾರೆ.

1 ಟ್ರೈಮಿಸ್ಟರ್‌ನಲ್ಲಿ ಕೊರೋನಾ,ಕೇರ್ ಮಾಡದೆ ಚೆನ್ನಾಗಿ ತಿನ್ನಿ: ಬ್ಯಾಗಿನಲ್ಲಿರುವ ಸತ್ಯ ಬಿಚ್ಚಿಟ್ಟ ಸೋನಂ ಕಪೂರ್

ಮಗನ ಮೊದಲ ತಿಂಗಳು ಹುಟ್ಟುಹಬ್ಬವನ್ನು ಕಪೂರ್ ಕುಟುಂಬಸ್ಥರು ಅದ್ಧೂರಿಯಾಗಿ ಆಚರಣೆ ಮಾಡಿದ್ದಾರೆ. ಬಾಸ್ ಬೇಬಿ ಥೀಮ್ ಕೇಕ್ ಕಟ್ ಮಾಡಿಸಿದ್ದಾರೆ. ಕೇಕ್ ನೋಡಲು ಅದ್ಭುತವಾಗಿದ್ದು ಕ್ರಿಯೇಟಿವ್ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ನಾಮಕರಣ ಸಮಾರಂಭಕ್ಕೆ ಆನಂದ್, ಸೋನಂ ಮತ್ತು ವಾಯು ಹಳದಿ ಬಣ್ಣದ ಡಿಸೈನರ್ ಡ್ರೆಸ್ ಧರಿಸಿದ್ದಾರೆ. ಅನಂದ್ ಸೋನಂಗೆ ಮುತ್ತಿಡುತ್ತಿದ್ದರೆ ಸೋನಂ ಮಗುವಿನ ಮುಖ ನೋಡುತ್ತಿದ್ದಾರೆ.

ಮಲ್ಲಿಗೆ ಹೂವ ಮುಡಿಲು ಹಣೆಗೆ ಕುಂಕುಮ ಇಟ್ಟಿರುವ ಸೋನಂ ನಮ್ಮ ಹುಟ್ಟು ನಮ್ಮ ಹೆಮ್ಮೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಸ್ಟಾರ್ ನಟ-ನಟಿಯರು ಕಾಮೆಂಟ್‌ನಲ್ಲಿ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಮಗನಿಗೆ ಡಿಫರೆಂಟ್ ಆಗಿರುವ ಹೆಸರನ್ನು ಆಯ್ಕೆ ಮಾಡಿರುವುದಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. 

 

ಮಗ ಫೋಟೋ:

ಈ ಹಿಂದೆ Vogueಗೆ ನೀಡಿದ ಸಂದರ್ಶನದಲ್ಲಿ ಸೋನಂ ಮಕ್ಕಳ ಮುಖವನ್ನು ಯಾಕೆ ಸೋಷಿಯಲ್ ಮೀಡಿಯಾದಲ್ಲಿ ರಿವೀಲ್ ಮಾಡಬಾರದು ಅವರನ್ನು ಇದರಿಂದ ಯಾಕೆ ದೂರ ಇಡಬೇಕ ಅಂದುಕೊಂಡಿದ್ದಾರೆ ಎಂದು ಹೇಳಿದ್ದರು. ಕರೀನಾ ಕಪೂರ್ ರೀತಿ ಕ್ಯಾಮೆರಾ ಪ್ಯಾಪರಾಜಿಗಳನ್ನು ಫೇಸ್ ಮಾಡಲಿ ಎಂದು ಬಿಡುತ್ತೀರಾ ಅಥವಾ ಅನುಷ್ಕಾ ವಿರಾಟ್ ರೀತಿ ದೂರ ಉಳಿಸುತ್ತೀರಾ ಎಂದು ಪ್ರಶ್ನೆ ಮಾಡಲಾಗಿತ್ತು. ನಮ್ಮ ತಾಯಿ ನಮ್ಮನ್ನು ಕ್ಯಾಮೆರಾ ಮತ್ತು ಮೀಡಿಯಾದಿಂದ ದೂರ ಉಳಿಸಿದ್ದರು. ಆಗ ಸೋಷಿಯಲ್ ಮೀಡಿಯಾ ಇರಲಿಲ್ಲ ಹೀಗಾಗಿ ಸೆಲೆಬ್ರಿಟಿಗಳ ಮಕ್ಕಳು ಹೇಗಿರುತ್ತಿದ್ದರು ಎಂದು ಜನರಿಗೆ ಗೊತ್ತಿರಲಿಲ್ಲ ಆದರೆ ಈಗ ಎಲ್ಲಿ ನೋಡಿದರೂ ಯಾವ ಬಳಿ ನೋಡಿದ್ದರೂ ಫೋನ್‌ ಇರುತ್ತೆ ಈ ಸಮಯದಲ್ಲಿ ತಡೆಯುವುದಕ್ಕೆ ಆಗುವುದಿಲ್ಲ. ಸಮಯ ಸಂದರ್ಭ ನೋಡಿಕೊಂಡು ನಾನು ಫೋಟೋ ಹಂಚಿಕೊಳ್ಳುವೆ ಆದರೆ ಎಲ್ಲರಂತೆ ಕಾಮನ್ ವ್ಯಕ್ತಿಯನ್ನು ಬೆಳೆಯಬೇಕು ಅನ್ನೋ ಆಸೆ ಇದೆ ಎಂದಿದ್ದರು ಸೋನಂ.

click me!