
ಹಿಂದಿ ಜನಪ್ರಿಯ ಹಾಸ್ಯ ಕಲಾವಿದ ರಾಜು ಶ್ರೀವಾಸ್ತವ ಇಂದು ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆಸ್ಪತ್ರೆ ಡೆಲ್ಲಿಯಲ್ಲಿ ನಿಧನರಾಗಿದ್ದಾರೆ. ಆಗಸ್ಟ್ 10ರಂದು ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ ಸುಸ್ತಾಗಿದೆ ಎಂದು ಕುಳಿತಿಕೊಳ್ಳಲು ಹೋದಾಗ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಆದರೆ ಹೃದಯಘಾತವಾಗಿದೆ ಎಂದು ತಿಳಿದು ಬಂದಿತ್ತು. ಹೃದಯಘಾತದಿಂದ ಆಸ್ಪತ್ರೆಗೆ ದಾಖಲಾದವರು ಸುಮಾರು ಒಂದು ತಿಂಗಳು 11 ದಿನಗಳಿಂದ ಐಸಿಯುನಲ್ಲಿದ್ದರು. ರಾಜು ಶ್ರೀವಾಸ್ತವ ಅಗಲಿರುವ ವಿಚಾರ ತಿಳಿದು ಗಣ್ಯರು ಸಂತಾಪ ಸೂಚಿಸಿದ್ದಾರೆ.
'ಸ್ಟ್ಯಾಂಡಪ್ ಕಾಮಿಕ್ ರಾಜು ಶ್ರೀವಾಸ್ತವ (Raju Srivatsav death) ಜಿಮ್‌ನಲ್ಲಿ ಥ್ರೆಡ್‌ಮಿಲ್‌ನಲ್ಲಿ ಓಡುವಾಗ ಕುಸಿದು ಬಿದ್ದಿದ್ದಾರೆ. ಹೃದಯಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದರು' ಎಂದು ಈ ಹಿಂದೆ ರಾಜು ಆಪ್ತರು ತಿಳಿಸಿದ್ದರು. ರಾಜು ಆರೋಗ್ಯ ಸ್ಥಿತಿ ಗಂಭೀರ, ಅಗಲಿದ್ದಾರೆ ಎಂದೆಲ್ಲಾ ಸುದ್ದಿ ಹರಿದಾಡುತ್ತಿತ್ತು ಆದರೆ ಅದೆಲ್ಲವೂ ಸುಳ್ಳು ಎಂದು ಕುಟುಂಬಸ್ಥರು ಪದೇ ಪದೇ ಸ್ಪಷ್ಟ ಪಡಿಸುತ್ತಿದ್ದರು. ಹೃದಯಘಾತದಿಂದ angioplasty ಮಾಡಿಸಿಕೊಂಡ ರಾಜು ವೆಂಟಿಲೇಟರ್‌ನಲ್ಲಿದ್ದರು. ಈ ಸಮಯದಲ್ಲಿ ಅವರ ಮೆದುಳು ಊದುವುದಕ್ಕೆ ಶುರುವಾಗಿತ್ತು ಎಂದು ಅದರ ಚಿಕಿತ್ಸೆ ಕೂಡ ಶುರು ಮಾಡಲಾಗಿತ್ತು. ರಾಜು ಅಂತಿಮ ದರ್ಶನ ಮತ್ತು ಅಂತ್ಯಕ್ರಿಯೆ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ.
ಗಜೋಧರ ಪಾತ್ರದಲ್ಲಿ ರಾಜು:
ಗಜೋಧರ ಪಾತ್ರದ ಮೂಲಕ ರಾಜು ಶ್ರೀವಾಸ್ತವ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದ್ದರು. ಮನಸ್ಸಿನಿಂದ ನಗುವಂತೆ ಮಾಡುತ್ತಿದ್ದ ಕಾರಣ ಜನರಗೆ ಬಲು ಬೇಗ ಹತ್ತಿರವಾದರು. ಅವಾರ್ಡ್ ಕಾರ್ಯಕ್ರಮದಲ್ಲಿ ರಾಜು ಮಾಡಿದ ಸಣ್ಣದೊಂದು ಕಾಮಿಡಿ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ತಂದುಕೊಟ್ಟಿತ್ತು.
ಪ್ರಾಣಿಗಳ ಮಿಮಿಕ್ರಿ:
ಸ್ಟ್ಯಾಂಡಪ್ ಕಾಮಿಡಿ ಮಾಡುವಾಗ ರಾಜು ವೇದಿಕೆಯಿಂದಲೇ ತಮ್ಮ ಸುತ್ತಲಿರುವ ಜನರನ್ನು ಗಮನಿಸಿ ಕಾಮಿಡಿ ಮಾಡುತ್ತಿದ್ದರು. ಮಾತನಾಡುತ್ತಲೇ ಕಾಮಿಡಿ ಮಾಡುತ್ತಿದ್ದ ಕಾರಣ ಜನರಿಗೆ ಸಖತ್ ಇಷ್ಟವಾಗುತ್ತಿತ್ತು. ಒಂದು ಖಾಸಗಿ ಕಾರ್ಯಕ್ರಮದಲ್ಲಿ ಪ್ರಾಣಿಗಳನ್ನು ಮಿಮಿಕ್ರಿ ಮಾಡಿದ್ದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಅಗಿತ್ತು. ಬೀದಿ ನಾಯಿ ಮತ್ತು ಹಸುಗಳನ್ನು ಬಲು ಸುಲಭವಾಗಿ ಮಿಮಿಕ್ರಿ ಮಾಡುತ್ತಿದ್ದರು.
ಮದುವೆಗೂ ರಾಜು ಬೇಕು:
ಸಣ್ಣ ಪುಟ್ಟ ಮದುವೆ ಕಾರ್ಯಕ್ರಮಗಳಲ್ಲಿ ರಾಜು ಹಾಸ್ಯ ಮಾಡುತ್ತಿದ್ದರು. ಮದುವೆಗೆ ಬಂದ ಜನರು ಮಧು-ವರರನ್ನು ಮಾತನಾಡಿಸುವ ಬದಲು ರಾಜು ಮಾತುಗಳನ್ನು ಕೇಳಿಸಿಕೊಂಡು ಕೂರುತ್ತಿದ್ದರು. ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಚ್‌ನಲ್ಲಿ ಮದುವೆ ಮನೆಯಲ್ಲಿ ಜನರು ಹೇಗಿರುತ್ತಾರೆಂದು ಮಾಡಿದ ಹಾಸ್ಯ ಸೂಪರ್ ಹಿಟ್ ಆಯ್ತು. ಈ ಕಾರ್ಯಕ್ರಮದ ಮೂಲಕ ದಕ್ಷಿಣ ಭಾರತದಲ್ಲೂ ಅಭಿಮಾನಿಗಳನ್ನು ಸಂಪಾದನೆ ಮಾಡಿದ್ದರು.
ಯಾವ ಸ್ಟಾರ್ ಬೇಕು:
ರಾಜು ಕಾಮಿಡಿ ಮತ್ತು ಪ್ರಾಣಿ ಮಿಮಿಕ್ರಿಗೆ ಮಾತ್ರ ಸೀಮಿತವಾಗಿರಲಿಲ್ಲ. ಬಾಲಿವುಡ್‌ನ ಟಾಪ್ ಸ್ಟಾರ್‌ಗಳನ್ನು ಮಿಮಿಕ್ರಿ ಮಾಡುತ್ತಿದ್ದರು. ಅದರಲ್ಲೂ ರಾಜ್‌ಕುಮಾರ್ ಮತ್ತು ಅಮಿತಾಭ್ ಬಚ್ಚನ್ ಮಿಮಿಕ್ರಿ ಮಾಡುವುದರಲ್ಲಿ ಫೇಮಸ್ ಆಗಿದ್ದರು. ಕಾರ್ಯಕ್ರಮಕ್ಕೆ ಬಂದ ಅತಿಥಿಗಳನ್ನು ಕೇಳುತ್ತಿದ್ದರು ನಿಮಗೆ ಯಾವ ಸ್ಟಾರ್ ಬೇಕು ಹೇಳಿ ಮಿಮಿಕ್ರಿ ಮಾಡ್ತೀನಿ ಎಂದು.
ರಾಜು ಪರ್ಸನಲ್ ಲೈಫ್:
1993ರ ಜುಲೈ 1ರಂದು ರಾಜು ಶ್ರೀವಾಸ್ತವ್ ಮತ್ತು ಶಿಖಾ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ, ಅಂತರಾ ಮತ್ತು ಆಯುಷ್ಮಾನ್. 2010ರಲ್ಲಿ ರಾಜುಗೆ ಪಾಕಿಸ್ತಾನದಿಂದ ಜೀವನ ಬೆದರಿಕೆ ಕರೆಗಳು ಬರುತ್ತಿದ್ದವು. ಅಂಡರ್‌ವರ್ಲ್ಡ್ ಡಾನ್ ದಾವೂದ್ ಇಬ್ರಾಹಿಂ ಮತ್ತು ಪಾಕಿಸ್ತಾನದ ಬಗ್ಗೆ ಕೀಳಾಗಿ ಮಾತನಾಡಬಾರದು ಎಂದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.