ಕನ್ಯೆಯಾಗಿ ಇಟ್ಟುಕೊಂಡ ಸೇಡನ್ನು ಮದುವೆಯಾಗಿ ತೀರಿಸಿಕೊಂಡ ಸೋನಾಕ್ಷಿ; ಗಂಡನ ಗತಿ ಹರೋಹರ

By Mahmad Rafik  |  First Published Oct 7, 2024, 4:30 PM IST

ನಟಿ ಸೋನಾಕ್ಷಿ ಸಿನ್ಹಾ ಅವರು ಪತಿ ಹಾಗೂ ನಟ ಜಹೀರ್ ಇಕ್ಬಾಲ್‌ಗೆ ಪ್ರಾಂಕ್ ಮಾಡಿರುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಹಳೆಯ ಪ್ರಾಂಕ್‌ಗೆ ಸೇಡು ತೀರಿಸಿಕೊಂಡಿದ್ದಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.


ಮುಂಬೈ: ಬಾಲಿವುಡ್‌ ಟ್ರೆಂಡಿಂಗ್ ಕಪಲ್ ಆಗಿರುವ ನಟ ಜಹೀರ್ ಇಕ್ಬಾಲ್ ಮತ್ತು ನಟಿ ಸೋನಾಕ್ಷಿ ಸಿನ್ಹಾ ಏನೇ ಮಾಡಿದರೂ ಸುದ್ದಿಯಾಗುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಜಹೀರ್-ಸೋನಾಕ್ಷಿ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಸಿನಿಮಾಗಳಿಂದ ಬ್ರೇಕ್ ತೆಗೆದುಕೊಂಡಿರುವ ಸೋನಾಕ್ಷಿ ಸಿನ್ಹ ಮತ್ತು ಜಹೀರ್ ಸುಂದರ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. ಜೊತೆಯಾಗಿ ಕಳೆದ ಸುಂದರ ಕ್ಷಣದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಇಬ್ಬರು ಹಂಚಿಕೊಳ್ಳುತ್ತಿರುತ್ತಾರೆ. ಭಾನುವಾರ ಗಂಡ ಜಹೀರ್‌ಗೆ ಪ್ರಾಂಕ್ ಮಾಡಿರುವ ವಿಡಿಯೋವನ್ನು ಹಂಚಿಕೊಂಡಿರುವ ಸೋನಾಕ್ಷಿ ಸಿನ್ಹಾ, ಇದು ರಿವೇಂಜ್ ಬಾಬಾ ಎಂದು ಬರೆದುಕೊಂಡಿದ್ದಾರೆ. 

ಬಾತ್‌ರೂಮ್‌ನಿಂದ ಹೊರ ಬರುವ ಸೋನಾಕ್ಷಿಗೆ ಜಹೀರ್ ಹೆದರಿಸಲು ಪ್ರಯತ್ನಿಸಿದ ವಿಡಿಯೋ ವೈರಲ್ ಆಗಿತ್ತು. ನಂತರ ಮದುವೆಗೂ ಮುನ್ನ ಹೋಟೆಲ್ ಕೋಣೆಯೊಂದರಲ್ಲಿ ಸೋನಾಕ್ಷಿ ಸಿನ್ಹಾಗೆ ಪ್ರಾಂಕ್ ಮಾಡಿ ಜಹೀರ್ ಹೆದರಿಸಿದ್ದರು. ಅಂದಿನ ರಿವೇಂಜ್‌ನ್ನು ಇದೀಗ ಸೋನಾಕ್ಷಿ ತೀರಿಸಿಕೊಂಡಿದ್ದಾರೆ. ಈ ಫನ್ನಿ ವಿಡಿಯೋಗೆ ಅಭಿಮಾನಿಗಳು ತಮಾಷೆಯಾಗಿ ಕಮೆಂಟ್ ಮಾಡುತ್ತಿದ್ದಾರೆ. ಪತ್ನಿಯಿಂದ ಎಂದಿಗೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಪತ್ನಿ ಪ್ರತಿಯೊಂದು ವಿಷಯಗಳನ್ನು ನೆನಪಿನಲ್ಲಿಟ್ಟುಕೊಂಡಿರುತ್ತಾಳೆ ಎಂಬುವುದಕ್ಕೆ ಇದುವೇ ಸಾಕ್ಷಿ ಅಂತಾನೂ ಕಮೆಂಟ್ ಮಾಡಿದ್ದಾರೆ. 

Tap to resize

Latest Videos

undefined

ವೈರಲ್ ವಿಡಿಯೋದಲ್ಲಿ ಏನಿದೆ? 
ಜಹೀರ್ ಇಕ್ಬಾಲ್ ಕೋಣೆಯಿಂದ ಹೊರಗಡೆ ಬರುತ್ತಿರುತ್ತಾರೆ. ಬಾಗಿಲು ಬಳಿ ನಿಂತಿರುವ ಸೋನಾಕ್ಷಿ ಜೋರಾಗಿ ಕಿರುಚುವ ಮೂಲಕ ಪತಿಯನ್ನು ಹೆದರಿಸುತ್ತಾರೆ. ಜೋರಾದ ಧ್ವನಿ ಕೇಳಿ ಜಹೀರ್ ಕೂಡ ಒಂದು ಕ್ಷಣ ಹೆದರಿಕೊಳ್ಳುತ್ತಾರೆ. ನಂತರ ಮೊಬೈಲ್ ಮುಂದೆ ಬಂದು ನಗುತ್ತಾರೆ. ಹಿಂದಿನಿಂದ ಓಡುತ್ತಾ ಬರುವ ಸೋನಾಕ್ಷಿ ಗಂಡನನ್ನು ತಬ್ಬಿಕೊಂಡು ಮುದ್ದಿಸುತ್ತಾರೆ. 

ಅಮ್ಮನ ಪ್ರೀತಿ, ಕೈತುತ್ತಿಗೆ ಬೆಲೆ ಕಟ್ಟೋಕಾಗುತ್ತಾ? ಸೋನಾಕ್ಷಿ ಅಮ್ಮನೂ ನಮ್ಮ ನಿಮ್ಮ ಅಮ್ಮನಂತೆ ನೋಡಿ

ಹಳೆ ವಿಡಿಯೋದಲ್ಲಿ ಏನಿತ್ತು? 
ಸೋನಾಕ್ಷಿ ಸಿನ್ಹಾ ಬ್ಯಾಗ್‌ನಲ್ಲಿ ಏನೋ ಹುಡುಕುತ್ತಿರುತ್ತಾರೆ. ಆಗ ಸ್ನೇಹಿತರಿಗೆ ನಿಮ್ಮ ಬಳಿಯಲ್ಲಿ ಇದೆಯಾ ಅಥವಾ ಎಲ್ಲಿಯಾದರೂ ನೋಡಿದ್ದೀರಾ ಎಂದು ಕೇಳುತ್ತಾರೆ. ಸ್ನೇಹಿತರು ಕಬರ್ಡ್‌ನಲ್ಲಿ ಇರಬಹುದು ನೋಡು ಅಂತಾರೆ. ಕಬರ್ಡ್ ತೆರೆದಾಗ ಒಳಗೆ ಅವಿತಿದ್ದ ಜಹೀರ್ ಜೋರು ಧ್ವನಿ ಮಾಡಿ ಹೆದರಿಸುತ್ತಾರೆ. ಒಂದು ಕ್ಷಣ ಸೋನಾಕ್ಷಿ ಸಿನ್ಹಾ ಹೆದರಿಕೊಳ್ಳುತ್ತಾರೆ. ಈ ವೇಳೆ ಅಲ್ಲಿದ್ದ ಎಲ್ಲರೂ ಜೋರಾಗಿ ನಗುತ್ತಾರೆ. ಕೂಡಲೇ ಜಹೀರ್‌ಗೆ ಒದ್ದು, ಕಬರ್ಡ್‌ ಒಳಗೆ ತಳ್ಳಿ ಸೋನಾಕ್ಷಿ ಸಿನ್ಹಾ ಬಾಗಿಲು ಹಾಕುತ್ತಾರೆ. ಈ ಘಟನೆಗೆ ಸೋನಾಕ್ಷಿ ಸಿನ್ಹಾ ರಿವೇಂಜ್ ತೆಗೆದುಕೊಂಡಿದ್ದಾರೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.

 
 
 
 
 
 
 
 
 
 
 
 
 
 
 

A post shared by Sonakshi Sinha (@aslisona)

ಪ್ರೇಮ ಬಂಧನದಲ್ಲಿ ಸಿಲುಕಿದ ಏಳು ವರ್ಷಕ್ಕೆ ಮದುವೆ 
 ಸೋನಾಕ್ಷಿ ಸಿನ್ಹಾ-ಜಹೀರ್ ಇಕ್ಬಾಲ್‌ ಮದುವೆ ಮುಂಬೈನಲ್ಲಿ ನಡೆದಿತ್ತು. ಇನ್ಸ್ಟಾಗ್ರಾಮ್‌ನಲ್ಲಿ ಮದುವೆಯ ಫೋಟೋಗಳನ್ನು ಹಂಚಿಕೊಂಡಿದ್ದ ಜೋಡಿ, ‘7 ವರ್ಷದ ಹಿಂದ ಇಬ್ಬರ ಕಣ್ಣುಗಳಲ್ಲೂ ಕಂಡ ಪವಿತ್ರ ಪ್ರೀತಿ ನಿಮ್ಮಿಬ್ಬರನ್ನು ಸೋಲು ಗೆಲುವಿನ ಹಾದಿಯಲ್ಲಿ ನಡೆಸಿಕೊಂಡು ಇಲ್ಲಿಯವರೆಗೆ ಕರೆತಂದಿದೆ. ಇಬ್ಬರ ಕುಟುಂಬ ಹಾಗೂ ದೇವರುಗಳ ಆಶೀರ್ವಾದದೊಂದಿಗೆ ನಾವೀಗ ಪತಿ-ಪತ್ನಿಯಾಗಿದ್ದೇವೆ’ ಎಂದು ಬರೆದುಕೊಂಡಿದ್ದರು. 

ಗಂಡನಿಗೆ ಒದ್ದು ಕಬರ್ಡ್‌ನಲ್ಲಿ ಕೂಡಿ ಹಾಕಿದ ಸೋನಾಕ್ಷಿ ಸಿನ್ಹಾ - ವಿಡಿಯೋ ನೋಡಿ

click me!