ನನ್ನ ಪತ್ನಿ ಫೇಮಸ್ ನಟಿಯಾಗಿದ್ರೂ ಸೂಪರ್ ಸ್ಟಾರ್‌ನ ಹಾಸಿಗೆ ಬಿಸಿ ಮಾಡ್ತಿದ್ಳು: ಖ್ಯಾತ ಕ್ರೀಡಾಪಟು

By Mahmad Rafik  |  First Published Oct 6, 2024, 4:37 PM IST

ಖ್ಯಾತ ಬಾಕ್ಸರ್ ತನ್ನ ಪತ್ನಿ ಸೂಪರ್ ಸ್ಟಾರ್ ಜೊತೆ ಸಂಬಂಧ ಹೊಂದಿದ್ದಳು ಎಂಬ ವಿಷಯವನ್ನು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ.  ಪತಿಯ ಆರೋಪದಲ್ಲಿ ಕೆಲವು ಸತ್ಯ. ಒಂದಿಷ್ಟು ಸುಳ್ಳು ಇದೆ ಎಂದು ನಟಿ ಸ್ಪಷ್ಟನೆ ನೀಡಿದ್ದಾರೆ.


ಮುಂಬೈ: ಜಗತ್ತಿನ ಸಕ್ಸಸ್‌ಫುಲ್ ನಟರಲ್ಲಿ ಈ ಇವರ ಹೆಸರು ಸಹ ಬರುತ್ತದೆ. ಆದ್ರೆ ಈ ನಟನ ವೃತ್ತಿ ಬದುಕಿಗಿಂತ ಖಾಸಗಿ ಜೀವನವೇ ಹೆಚ್ಚು ಸುದ್ದಿಯಲ್ಲಿರುತ್ತದೆ. ನಟನ ರಿಲೇಶನ್‌ಶಿಪ್ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತವೆ. ಖ್ಯಾತ ಬಾಕ್ಸರ್ ಪತ್ನಿಯೊಂದಿಗಿನ ರಹಸ್ಯ ಸಂಬಂಧ ಬಯಲಾಗಿತ್ತು. ಈ ಬಗ್ಗೆ ಖ್ಯಾತ ಬಾಕ್ಸರ್ ತಮ್ಮ ಬಯೋಗ್ರಾಫಿಯಲ್ಲಿ ಹೇಳಿಕೊಂಡಿದ್ದಾರೆ. ನಟಿಯರ ಜೊತೆಗಿನ ಸಂಬಂಧದಿಂದಾಗಿ ಸುದ್ದಿಯುಲ್ಲಿರುವ ನಟನ ಹೆಸರು ಬ್ರಾಡ್ ಪಿಟ್ (Brad Pitt). ಹಾಲಿವುಡ್‌ನಲ್ಲಿ ನಟ ಹಾಗೂ ನಿರ್ಮಾಪಕನಾಗಿರುವ ಬ್ರಾಡ್‌ ಪಿಟ್ ಎರಡು ಮದುವೆಯಾಗಿದ್ದು, ಇಬ್ಬರಿಂದಲೂ ಡಿವೋರ್ಸ್ ಪಡೆದುಕೊಂಡಿದ್ದಾರೆ. ಜೆನಿಫರ್ ಎನಿಸ್ಟನ್ ಮತ್ತು ಎಂಜೆಲಿನಾ ಜೊಲಿ ಇಬ್ಬರಿಂದಲೂ ಬ್ರಾಡ್ ಫಿಟ್ ಪ್ರತ್ಯೇಕವಾಗಿದ್ದಾರೆ. 

ಖ್ಯಾತ ಬಾಕ್ಸರ್ ಮೈಕ್ ಟೈಸನ್ ಅವರ ಪತ್ನಿ, ಹಾಲಿವುಡ್ ನಟಿ ರಾಬಿನ್ ಗಿವೆನ್ಸ್ ಜೊತೆ ಬ್ರಾಡ್ ಫಿಟ್ ಸಂಬಂಧ ಹೊಂದಿದ್ದರು. ಈ ಬಗ್ಗೆ ಮೈಕ್ ಟೈಸನ್ ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಆದ್ರೆ ಮಾಜಿ ಪತಿಯ ಈ ಆರೋಪವನ್ನು ರಾಬಿನ್ ಗಿವೆನ್ಸ್ ತಳ್ಳಿ ಹಾಕಿದ್ದಾರೆ. 

Tap to resize

Latest Videos

ಖ್ಯಾತ ಬಾಕ್ಸರ್ ಮೈಕ್ಸ್ ಟೈಸನ್ 1988ರಲ್ಲಿ ನಟಿ ರಾಬಿನ್ಸ್ ಗಿವೆನ್ಸ್ ಅವರನ್ನು ಮದುವೆಯಾಗಿದ್ದರು. ಆದರೆ ಒಂದೇ ವರ್ಷಕ್ಕೆ ಇಬ್ಬರ ದಾಂಪತ್ಯ ಜೀವನ ಕೊನೆಗೊಂಡಿತ್ತು. ಡಿವೋರ್ಸ್ ಪಡೆಯುವ ಸಂದರ್ಭದಲ್ಲಿ ಒಬ್ಬರ ಮೇಲೊಬ್ಬರು ಗಂಭೀರ ಆರೋಪಗಳನ್ನು ಮಾಡಿದ್ದರು. ಹಲವು ವರ್ಷಗಳ ನಂತರ ಟೈಸನ್ ತಮ್ಮ ಜೀವನಚರಿತ್ರೆ 'Undisputed Truth' ಪುಸ್ತಕದಲ್ಲಿ ಗಿವೆನ್ಸ್ ಜೊತೆಗಿನ ವೈವಾಹಿಕ ಜೀವನದ ಬಗ್ಗೆಯೂ ಹಲವು ವಿಷಯಗಳನ್ನು ಹೇಳಿಕೊಂಡಿದ್ದರು.

ಬ್ರಾಡ್ ಪಿಟ್ ಮತ್ತು ರಾಬಿನ್ ಗಿವೆನ್ಸ್ ಕಾರ್‌ನಲ್ಲಿ ಜೊತೆಯಾಗಿರೋದನ್ನು ನೋಡಿದೆ. ಒಮ್ಮೆ ಇಬ್ಬರು ಹಾಸಿಗೆಯಲ್ಲಿದ್ದಾಗಲೇ ರೆಡ್‌ ಹ್ಯಾಂಡ್‌ ಆಗಿ ಹಿಡಿದಿದ್ದೇನೆ. ಅಂದು ಬ್ರಾಡ್‌ ಪಿಟ್ ಮೇಲೆ ಹಲ್ಲೆ ನಡೆಸದಂತೆ ಮನವಿ ಮಾಡಿಕೊಂಡಿದ್ದನು ಎಂಬ ವಿಷಯವನ್ನು 'Undisputed Truth' ಪುಸ್ತಕದಲ್ಲಿ ಹೇಳಿದ್ದಾರೆ. 

ರಾಬಿನ್ ಗಿವೆನ್ಸ್ ಜೊತೆ ಸಿಕ್ಕಾಗ ಬ್ರಾಡ್ ಪಿಟ್, ನನ್ನನ್ನು ಸಾಯಿಸಬೇಡಾ ಎಂದು ಕೇಳಿಕೊಳ್ಳುತ್ತಿದ್ದನು. ಅಂದು ಆತನ ಮುಖದಲ್ಲ ಸಾವಿನ ಭಯ ಕಾಣಿಸುತ್ತಿತ್ತು. ಆ ಸಮಯದಲ್ಲಿ ಬ್ರಾಡ್ ಪಿಟ್ ಮದ್ಯದ ನಶೆಯಲ್ಲಿದ್ದನು ಎಂಬ ವಿಚಾರವನ್ನು ಮೈಕ್ ಟೈಸನ್ ತಿಳಿಸಿದ್ದಾರೆ. 

ಇದಾದ ಬಳಿಕ ಮೈಕ್ ಟೈಸನ್, In Depth With Graham Bensinger ಎಂಬ ಟಿವಿ ಶೋನಲ್ಲಿಯೂ ಈ ಬಗ್ಗೆ ಹೇಳಿಕೊಂಡಿದ್ದರು. ರಾಬಿನ್ ಗಿವೆನ್ಸ್ ಮತ್ತು ಬ್ರಾಡ್ ಪಿಟ್ ಇಬ್ಬರನ್ನು ಬೆಡ್‌ನಲ್ಲಿಯೇ ಹಿಡಿದಾಗ ನಾನು ತುಂಬಾ ಕೋಪಗೊಂಡಿದ್ದೆ. ನಮ್ಮದು ಡಿವೋರ್ಸ್ ಕೇಸ್ ನಡೆಯುತ್ತಿತ್ತು. ಆಗ ರಾಬಿನ್ ಗಿವೆನ್ಸ್ ಪ್ರತಿದಿನ ಬ್ರಾಡ್‌ ಪಿಟ್‌ನ ಹಾಸಿಗೆ ಬಿಸಿ ಮಾಡಲು ತೆರಳುತ್ತಿದ್ದಳು. ಆ ದಿನ ಅವರಿಬ್ಬರ ಜೊತೆಯಲ್ಲಿ ಜೋರಾಗಿಯೇ ಜಗಳ ಆಗಿತ್ತು. ಬ್ರಾಡ್ ನನಗಿತ್ತು ಮೊದಲೇ ಮನೆಗೆ ಬರುತ್ತಿದ್ದನು ಎಂದಿದ್ದಾರೆ. 

ಒಂದಲ್ಲ, ಎರಡಲ್ಲ ಬರೋಬ್ಬರಿ 14 ಸೋಲು ಕಂಡ ಖ್ಯಾತ ನಟಿಗೆ ಮರುಜನ್ಮ ನೀಡಿದ್ದು ಒಟಿಟಿ

ಇತ್ತ ರಾಬಿನ್ ಗಿವೆನ್ಸ್ ತಮ್ಮ ವಿರುದ್ಧ ಟೈಸನ್ ಮಾಡಿದ ಎಲ್ಲಾ ಆರೋಪಗಳು ಸತ್ಯಕ್ಕೆ ದೂರವಾದದ್ದು ಎಂದಿದ್ದಾರೆ. "Watch What Happened Live Video by Andy Cohen" ಎಂಬ ಚಾಟ್ ಶೋದಲ್ಲಿ ಮಾತನಾಡಿದ್ದು, ನಾನು ಮೈಕ್ ಟೈಸನ್ ಪುಸ್ತಕವನ್ನು ಓದಿಲ್ಲ. ಟೈಸನ್ ಹೇಳಿರುವ ಕಾರ್ ವಿಷಯ ಸತ್ಯ. ಆದರೆ ಬ್ರಾಡ್ ಪಿಟ್ ಜೊತೆ ಹಾಸಿಗೆಯಲ್ಲಿ ನನ್ನ ಹಿಡಿದರು ಎಂಬುವುದು ಸುಳ್ಳು. ಆ ರೀತಿ ಏನು ನಡೆದಿಲ್ಲ ಎಂದಿ ರಾಬಿನ್ ಗಿವೆನ್ಸ್ ಸ್ಪಷ್ಟನೆ ನೀಡಿದ್ದಾರೆ. 

ಒಮ್ಮೆ ಯಾವುದೇ ಸಿನಿಮಾಗೆ ಸಂಬಂಧಿಸಿದಂತೆ ಬ್ರಾಡ್ ಪಿಟ್ ಜೊತೆ ನಾನು ಕಾರ್‌ನಲ್ಲಿ ಹೋಗಿ ಹಿಂದಿರುಗಿ ಬರುವಾಗ ಮೈಕ್ ಟೈಸನ್ ನಮ್ಮನ್ನು ನೋಡಿದ್ದರು. ಪಿಟ್‌  ಹೊಡೆಯಬೇಡಿ ಎಂದು ಕೇಳಿದ್ದರ ಬಗ್ಗೆ ರಾಬಿನ್ ಗಿವೆನ್ಸ್ ನಕ್ಕು ಸುಮ್ಮನಾದರು. ಬ್ರ್ಯಾಡ್ ಪಿಟ್ ಅವರಿಗೆ ಅವರದ್ದೇ ಆದ ಸ್ವ್ಯಾಗ್ ಇದೆ. ನಾನು ಮತ್ತು ಬ್ರಾಡ್ ಕೆಲ ದಿನ ಡೇಟಿಂಗ್ ಮಾಡಿದ್ದು ನಿಜ. ಚೀಟಿಂಗ್ ಮಾಡಿದ್ದೇನ ಅನ್ನೋದು ಆರೋಪ ಸುಳ್ಳು ಎಂದು ಹೇಳಿದ್ದಾರೆ.

20 ಕೋಟಿ ಗಳಿಸಲು ಸಹ ವಿಫಲವಾದ 200 ಕೋಟಿಯ ಚಿತ್ರ- ದೊಡ್ಡ ದೊಡ್ಡ ಸ್ಟಾರ್‌ಗಳಿದ್ರೂ ಹೀನಾಯ ಸೋಲು!

 
 
 
 
 
 
 
 
 
 
 
 
 
 
 

A post shared by Robin Givens (@robingivens)

click me!