ಬಾಲಿವುಡ್‌ನ ಖ್ಯಾತ ನಟಿಯ ಗಂಡನಿಗೆ ಪ್ರತಿ ಬಟ್ಟೆಗೂ ಮ್ಯಾಚಿಂಗ್ ಇನ್ನರ್‌ವೇರ್f ಬೇಕಂತೆ. ನಟಿಯ ಪತಿ ಈ ಬಗ್ಗೆ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಮುಂಬೈ: ಸಾಮಾನ್ಯವಾಗಿ ಮಹಿಳೆಯರು ಫ್ಯಾಶನ್ (Woman Fashion) ಬಗ್ಗೆ ಹೆಚ್ಚು ಗಮನ ನೀಡ್ತಾರೆ. ಅಡಿಯಿಂದ ಮುಡಿಯವರೆಗೂ ತಾವು ಧರಿಸುವ ಬಟ್ಟೆ, ಆಭರಣ, ಚಪ್ಪಲಿ, ಬಳೆ, ಬಿಂದಿ ಎಲ್ಲವೂ ಒಂದಕ್ಕೊಂದು ಮ್ಯಾಚಿಂಗ್ ಆಗಬೇಕು ಎಂದು ಬಯಸುತ್ತಾರೆ. ಎಲ್ಲಿಗಾದ್ರೂ ತೆರಳಬೇಕಾದರೂ ರೆಡಿಯಾಗಲು ಗಂಟೆ ಗಂಟೆಗಟ್ಟಲೇ ಸಮಯ ಮೀಸಲಿಡುತ್ತಾರೆ. ಹಾಗಾಗಿ ಮಹಿಳೆಯರನ್ನು ಸೌಂದರ್ಯ ದೇವತೆಗಳೆಂದು ಕರೆಯಲಾಗುತ್ತದೆ. ಪುರುಷರ (Men Fashion) ವಿಚಾರಕ್ಕೆ ಬಂದರೆ ಬಹುತೇಕರು ಸೌಂದರ್ಯ ಹಾಗೂ ಧರಿಸುವ ಬಟ್ಟೆ ಬಗ್ಗೆ ಅಷ್ಟು ಗಮನ ನೀಡಲ್ಲ. ಆದರೆ ಕೆಲ ವರ್ಗದ ಜನರು ನಾವು ಏನು ಮತ್ತು ಹೇಗೆ ಧರಿಸುತ್ತಿದ್ದೇವೆ? ತಮ್ಮ ಹೇರ್‌ಸ್ಟೈಲ್ ಬಗ್ಗೆಯೂ ತುಂಬಾನೇ ಕಾಳಜಿ ತೆಗೆದುಕೊಳ್ಳುತ್ತಾರೆ. ಬಾಲಿವುಡ್‌ನ ಖ್ಯಾತ ನಟಿಯ ಗಂಡನಿಗೆ ಪ್ರತಿ ಬಟ್ಟೆಗೂ ಮ್ಯಾಚಿಂಗ್ ಇನ್ನರ್‌ವೇರ್ ಬೇಕಂತೆ.
ಹೌದು, ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ (Sonakshi Sinha) ಪತಿ ಜಹೀರ್ ಇಕ್ಬಾಲ್ (Zaheer Iqbal) ತಮ್ಮ ಪ್ರತಿ ಕಾಸ್ಟೂಮ್‌ಗೆ ಮ್ಯಾಚಿಂಗ್ ಅಂಡರ್‌ವೇರ್ ಧರಿಸುತ್ತಾರೆ. ಹಾಗಂತ ಜಹೀರ್ ಇಕ್ಬಾಲ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಇದೀಗ ಸಂದರ್ಶನದ ವಿಡಿಯೋ ಕ್ಲಿಪ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸೋನಾಕ್ಷಿ ಮತ್ತು ಜಹೀರ್ ಮದುವೆ ಬಳಿಕ ಇಬ್ಬರ ಕುರಿತ ವಿಡಿಯೋ ತುಣುಕಗಳು ಸಾಮಾಜಿಕ ಜಾಲತಾಣದಲ್ಲಿ ಮುನ್ನಲೆಗೆ ಬರುತ್ತಿವೆ.
undefined
ಕಪಿಲ್ ಪ್ರಶ್ನೆಗೆ ಹೌದು ಎಂದ ಜಹೀರ್ ಇಕ್ಬಾಲ್!
ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಡಬಲ್ ಎಕ್ಸ್ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದರು. ಚಿತ್ರದ ಪ್ರಮೋಷನ್‌ಗಾಗಿ ಇಬ್ಬರು ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಪಿಲ್ ಶರ್ಮಾ ನಿರೂಪಣೆಯ ಕಾಮಿಡಿ ಶೋಗೆ ಆಗಮಿಸಿದ್ದರು. ಈ ವೇಳೆ ಕಪಿಲ್ ತಮ್ಮ ಶೋಗೆ ಆಗಮಿಸಿದ ಸ್ಟಾರ್‌ಗಳ ಕುರಿತು ಹರಿದಾಡುತ್ತಿರುವ ಗಾಸಿಪ್ ಬಗ್ಗೆ ಪ್ರಶ್ನೆ ಕೇಳುತ್ತಾರೆ. ಜಹೀರ್ ಇಕ್ಬಾಲ್ ಬಟ್ಟೆ ಖರೀದಿಗೂ ಮೊದಲು ಅಂಡರ್‌ವೇರ್ ಖರೀದಿ ಮಾಡ್ತಾರಂತೆ. ಆನಂತರ ಅದಕ್ಕೆ ಮ್ಯಾಚಿಂಗ್ ಆಗುವ ಶರ್ಟ್, ಪ್ಯಾಂಟ್ ತೆಗೆದುಕೊಳ್ತಾರಂತೆ. ಇದು ನಿಜಾನಾ ಎಂದು ನೇರವಾಗಿಯೇ ಪ್ರಶ್ನೆ ಕೇಳಿದ್ದರು.
ಗಂಡನಿಗೆ ಒದ್ದು ಕಬರ್ಡ್‌ನಲ್ಲಿ ಕೂಡಿ ಹಾಕಿದ ಸೋನಾಕ್ಷಿ ಸಿನ್ಹಾ - ವಿಡಿಯೋ ನೋಡಿ
ಕಪಿಲ್ ಪ್ರಶ್ನೆಗೆ ಉತ್ತರಿಸಿದ ಸ್ವಲ್ಪ ಮುಜುಗರಕ್ಕೊಳಗಾಗದ ಜಹೀರ್, ಹೌದು ಇದು ನಿಜ. ನನ್ನ ಎಲ್ಲಾ ಬಟ್ಟೆಗಳಿಗೂ ಮ್ಯಾಚಿಂಗ್ ಇನ್ನರ್‌ವೇರ್‌ಗಳಿವೆ. ನಾನು ಅದೇ ರೀತಿಯಲ್ಲಿ ಧರಿಸುತ್ತೇನೆ ಎಂದು ಹೇಳಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಎಲ್ಲರೂ ಜೋರಾಗಿ ನಕ್ಕಿದ್ದರು.
ಕರಣ್‌ಗೂ ಬೇಕಂತೆ ಬಣ್ಣ ಬಣ್ಣದ ಚಡ್ಡಿಗಳು
ಬಾಲಿವುಡ್ ಖ್ಯಾತ ನಿರ್ದೇಶಕ ಕರಣ್ ಜೋಹರ್ ಅವರಿಗೆ ಬಣ್ಣ ಬಣ್ಣದ ಚಡ್ಡಿಗಳು ಧರಿಸಲು ಇಷ್ಟ ಎಂದು ಹೇಳಿಕೊಂಡಿದ್ದಾರೆ. ಕಪಿಲ್ ಶರ್ಮಾ ಶೋದಲ್ಲಿಯೇ ಈ ಮಾತನ್ನು ರಿವೀಲ್ ಮಾಡಿದ್ದರು. ಇದು ಒಳಗಿನ ಮಾತು, ಆದರೂ ನೀವು ಕೇಳುತ್ತಿದ್ದೀರಿ ಅಲ್ಲವಾ? ಹಾಗಾಗಿ ಹೇಳುತ್ತಿದ್ದೇನೆ ಎಂದಿದ್ದರು. ಶೂಟಿಂಗ್‌ಗಾಗಿ ಹೊರಗೆ ಹೋದ್ರೆ ನಾನು ಅಷ್ಟು ದಿನಕ್ಕೆ ಬೇಕಾಗುವಷ್ಟು ಅಂಡರ್‌ವೇರ್ ತೆಗೆದುಕೊಂಡು ಹೋಗುತ್ತೇನೆ. ಒಮ್ಮೆ ಧರಿಸಿದನ್ನು ಮತ್ತೆ ಹಾಕಿಕೊಳ್ಳಲ್ಲ. ಶೂಟಿಂಗ್ ಬ್ಯುಸಿಯಲ್ಲಿ ಅದನ್ನು ತೊಳೆಯಲು ಸಮಯ ಇರಲ್ಲ ಎಂದು ಎಲ್ಲರ ಹುಬ್ಬೇರುವಂತೆ ಕಪಿಲ್ ಪ್ರಶ್ನೆಗಳಿಗೆ ಕರಣ್ ಜೋಹರ ಉತ್ತರಿಸಿದ್ದರು.
ಅಪ್ಪ ಆಸ್ಪತ್ರೆಯಲ್ಲಿ, ಈಜುಕೊಳದಲ್ಲಿ ಪತಿ ಜೊತೆ ವಿಹರಿಸಿದ ಸೋನಾಕ್ಷಿ ಸಿನ್ಹಾ