ಅನಂತ್ ಅಂಬಾನಿ ಮದ್ವೆ ಸಂಭ್ರಮ ಮುಗಿಯೋ ತರ ಕಾಣ್ತಿಲ್ಲ, ಅಂಬಾನಿ ಮಗಳಿಗೆ ಕೂತರೆ ಏಳಕ್ಕೂ ಆಗ್ತಿಲ್ಲ!

By Roopa Hegde  |  First Published Jul 4, 2024, 11:15 AM IST

ಮುಖೇಶ್ ಅಂಬಾನಿ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಎಂಟು ದಿನಗಳ ಮೊದಲೇ ಮನೆ ತುಂಬ ಜನ, ದಿನಪೂರ್ತಿ ಕಾರ್ಯಕ್ರಮ. ಇದ್ರಿಂದ ಅಂಬಾನಿ ಮಗಳು ಶ್ವೇತಾ ಸುಸ್ತಾದಂತೆ ಕಾಣ್ತಿದ್ದಾರೆ.
 


ಉದ್ಯಮಿ ಮುಖೇಶ್ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ ಮದುವೆಗೆ  ನಾಲ್ಕೈದು ತಿಂಗಳಿಂದ್ಲೇ ತಯಾರಿ ನಡೆದಿದೆ. ಮದುವೆಗೆ ಹತ್ತು ದಿನ ಇರುವಾಗ್ಲೇ ಒಂದಾದ್ಮೇಲೆ ಒಂದು ಕಾರ್ಯಕ್ರಮ ಶುರುವಾಗಿದೆ. ಅನಂತ್ ಅಂಬಾನಿ ಮದುವೆ ಖುಷಿಯಲ್ಲಿ ಅತ್ತಿಂದಿತ್ತ ಓಡಾಡಿಯೇ ಸಹೋದರಿ ಇಶಾ ಅಂಬಾನಿ ಸುಸ್ತಾದಂತಿದೆ. ಮೇಕಪ್ ಹಾಕಿಕೊಂಡು, ಇಬ್ಬರು ಅವಳಿ ಮಕ್ಕಳನ್ನು ಸಂಭಾಳಿಸ್ತಾ ಇಶಾ ಬೆವರಿಳಿತಿದ್ದಾರೆ. ಕೂತ್ರೆ ನಿಲ್ಲೋದು ಕಷ್ಟ, ನಿಂತ್ರ ಕುಳಿತುಕೊಳ್ಳೋದು ಕಷ್ಟ ಎನ್ನುವ ಸ್ಥಿತಿ ಇದೆ. ಇದನ್ನು ನಾವು ಹೇಳ್ತಿಲ್ಲ. ಈ ವಿಡಿಯೋ ಹೇಳ್ತಿದೆ.

ಅನಂತ್ ಅಂಬಾನಿ (Anant Ambani) ಮದುವೆಗೆ ಇನ್ನು ಎಂಟು ದಿನವಿದೆ. ಮಂಗಳವಾರ ಸಾಮೂಹಿಕ ಮದುವೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಬುಧವಾರ ಮಾಮೇರು (Mameru) ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಸಾಮೂಹಿಕ ಮದುವೆ (Marriage) ಕಾರ್ಯಕ್ರಮದಲ್ಲೂ ಇಶಾ ಅಂಬಾನಿ ಕುಟುಂಬ ಪಾಲ್ಗೊಂಡಿತ್ತು. ಮಾಮೇರು ಕಾರ್ಯಕ್ರಮದಲ್ಲೂ ಅಂಬಾನಿ ಕುಟುಂಬದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು. ಸಾಮಾಜಿಕ ಜಾಲತಾಣದಲ್ಲಿ ಅನಂತ್ ಅಂಬಾನಿ ಮದುವೆ ಪೂರ್ವ ಕಾರ್ಯಕ್ರಮದ ವಿಡಿಯೋಗಳೇ ಹರಿದಾಡ್ತಿವೆ. ಅತಿಥಿಗಳು ಹಾಗೂ ವಿಧಿ – ವಿಧಾನಗಳ ವಿಡಿಯೋ ಹರಿದಾಡ್ತಾನೆ ಇದೆ. ಈ ಮಧ್ಯೆ ಗಮನ ಸೆಳೆದಿದ್ದು ಇಶಾ ಅಂಬಾನಿಯ ಒಂದು ವಿಡಿಯೋ. 

Tap to resize

Latest Videos

ಸೊಸೆ ಶ್ಲೋಕಾ ಇದ್ದಾಗಲೇ ಮಗಳಿಗೆ ನೀತಾ ಅಂಬಾನಿ ಆದ್ಯತೆ, ಎಲ್ಲ ಅತ್ತೆಯಂದಿರೂ ಒಂದೇ ಎಂದ ನೆಟ್ಟಿಗರು!

ಅಂಬಾನಿ ಮನೆಯಲ್ಲಿ ಮಾಮೇರು ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ. ಸಮಾರಂಭದಲ್ಲಿ ಡೊಳ್ಳಿನ ಶಬ್ಧ ಎಲ್ಲರನ್ನು ಕುಣಿಸಿದ್ದು ಸುಳ್ಳಲ್ಲ. ಡೊಳ್ಳಿನ ಶಬ್ಧ ಕೇಳ್ತಿದ್ದಂತೆ ಮಗುವಿನ ಜೊತೆ ಅಲ್ಲಿಗೆ ಬಂದ ಇಶಾ ಅಂಬಾನಿ, ಕೆಳಗೆ ಕುಳಿತು ಸ್ಟೆಪ್ ಹಾಕುವ ಪ್ರಯತ್ನ ಮಾಡಿದ್ದಾರೆ. ಮಗುವಿಗೆ ಡಾನ್ಸ್ ಮಾಡಿಸೋ ಪ್ರಯತ್ನ ಮಾಡಿದ್ದಾರೆ. ಈ ಸಮಯದಲ್ಲಿ ಇಶಾ ಅಂಬಾನಿ ಇಬ್ಬರು ಮಕ್ಕಳು, ಆಕಾಶ್ ಅಂಬಾನಿ, ಶ್ಲೋಕಾ ಮೆಹ್ತಾ ಹಾಗೂ ಅವರ ಇಬ್ಬರು ಮಕ್ಕಳು, ಮುಖೇಶ್ ಅಂಬಾನಿ ಅಲ್ಲಿ ಉಪಸ್ಥಿತರಿದ್ದರು. ಮಗನ ಜೊತೆ ಕುಳಿತಿದ್ದ ಇಶಾ ಅಂಬಾನಿಗೆ ಕೊನೆಯಲ್ಲಿ ಎದ್ದು ನಿಲ್ಲೋದು ಕಷ್ಟವಾಗುತ್ತೆ. ಅವರು ಆಕಾಶ್ ಅಂಬಾನಿಯನ್ನು ಕೂಗ್ತಾರೆ. ಆದ್ರೆ ಆಕಾಶ್ ಡಾನ್ಸ್ ಮಾಡೋದ್ರಲ್ಲಿ ಬ್ಯುಸಿ ಇರ್ತಾರೆ. ಮತ್ತೆ ಆಕಾಶ್ ಕೈ ಎಳೆದ ಇಶಾ, ಸಹಾಯ ಮಾಡುವಂತೆ ಕೇಳ್ತಾರೆ. ಆಕಾಶ್ ಕೈ ಕೊಟ್ತಿದ್ದಂತೆ ಇಶಾ ಎದ್ದು ನಿಲ್ತಾರೆ. ಈ ವಿಡಿಯೋ ನೋಡಿದ ನೆಟ್ಟಿಗರು, ಈಗ್ಲೇ ಇಶಾ ಜೋಶ್ ಕಡಿಮೆಯಾಯ್ತಾ, ಇಶಾ ಫುಲ್ ಸುಸ್ತಾದ್ರಾ ಇಲ್ಲ ಆಗ್ಲೇ ಕಾಲು, ಸೊಂಟ ನೋವು ಶುರುವಾಗಿದ್ಯಾ ಎಂದು ಪ್ರಶ್ನೆ ಕೇಳೋಕೆ ಶುರು ಮಾಡಿದ್ದಾರೆ. 

ಇಬ್ಬರು ಮಕ್ಕಳ ತಾಯಿ ಇಶಾ ಅಂಬಾನಿ. 2022ರಲ್ಲಿ ಇಶಾ ಅವಳಿ ಮಕ್ಕಳ ತಾಯಿಯಾಗಿದ್ದಾರೆ. ಕೃಷ್ಣ ಮತ್ತು ಆದಿಯಾ ಎಂದು ಮಕ್ಕಳಿಗೆ ನಾಮಕರಣ ಮಾಡಿದ್ದಾರೆ. ತಾವೆಲ್ಲಿಗೆ ಹೋದ್ರೂ ಇಶಾ ಮಕ್ಕಳನ್ನು ಕರೆದುಕೊಂಡು ಬರ್ತಾರೆ. ಈಗಿನ್ನೂ ಮದುವೆ ಸಮಾರಂಭ ಶುರುವಾಗಿದೆ. ಇನ್ನೂ ಎಂಟು ದಿನ ಓಡಾಟ ಇದ್ದಿದ್ದೆ. ಈಗ್ಲೇ ಹೀಗೆ ಮಾಡಿದ್ರೆ ಹೇಗಮ್ಮ ಅನ್ನೋದು ಅವರ ಮಾತು. ಚೆನ್ನಾಗಿ ಡ್ರೆಸ್ ಮಾಡ್ಕೊಂಡು ಅತ್ತಿಂತಿದ್ದ ಓಡಾಡಿದ್ರೆ ಸುಸ್ತಾಗುತ್ತೆ ಎಂದಾದ್ರೆ ಇನ್ನು ಎಲ್ಲ ಕೆಲಸ ಮಾಡ್ಕೊಂಡು ಮದುವೆ ಮಾಡುವ ಸಾಮಾನ್ಯ ಜನರ ಸ್ಥಿತಿ ಹೇಗೆ ಎನ್ನುತ್ತಿದ್ದಾರೆ ನೆಟ್ಟಿಗರು. 

ಬಂಗಾರ, ಬೆಳ್ಳಿ, ಬಟ್ಟೆ, ದಿನಸಿ.. 52 ಬಡ ಜೋಡಿಗೆ ಸಾಮೂಹಿಕ ವಿವಾಹ ಮಾಡಿಸಿದ ಅಂಬಾನಿ ಕುಟುಂಬ ಕೊಟ್ಟ ಉಡುಗೊರೆಗಳೇನು?

ಅನಂತ್ ಅಂಬಾನಿ ಮದುವೆ ಸಮಾರಂಭದಲ್ಲೂ ಎಲ್ಲರನ್ನು ಸೆಳೆದಿದ್ದು ಇಶಾ ಮಕ್ಕಳು. ಮುಖೇಶ್ ಅಂಬಾನಿ ಕೂಡ ಮೊಮ್ಮಕ್ಕಳನ್ನು ಎತ್ತಿಕೊಂಡು ಅವರ ಜೊತೆ ಹೆಜ್ಜೆ ಹಾಕುವ ಪ್ರಯತ್ನ ಮಾಡಿದ್ದಾರೆ. ಅಂಬಾನಿ ಕುಟುಂಬದ ಮುದ್ದಿನ ಮಗಳು ಇಶಾ. ಈಗ ಮುಖೇಶ್ ಅಂಬಾನಿ, ಇಶಾ ಅಂಬಾನಿ ಮಗಳನ್ನು ತುಂಬಾ ಪ್ರೀತಿ ಮಾಡುವಂತೆ ಕಾಡುತ್ತೆ. ಮದುವೆ ಸಮಾರಂಭದ ಬ್ಯುಸಿಯಲ್ಲೂ ಅವರು ಮೊಮ್ಮಗಳನ್ನು ಎತ್ತಿಕೊಂಡು, ಆಕೆಗೆ ಡೊಳ್ಳು ಕುಣಿತವನ್ನು ತೋರಿಸ್ತಿದ್ದ ವಿಡಿಯೋ ಎಲ್ಲರ ಮನಸ್ಸು ಕದ್ದಿದ್ದು ಸುಳ್ಳಲ್ಲ. 

click me!