ನಟಿ ಸಮಂತಾ ಸ್ಟಂಟ್ ನೋಡಿ ಫ್ಯಾನ್ಸ್ ಹೌಹಾರಿದ್ದಾರೆ. ಬಳುಕುವ ಬಳ್ಳಿಂತೆ ಬೆಂಡಾಗಿದ್ದಾರೆ. ಇದರ ಜೊತೆಗೆ ತಮ್ಮ ಫಿಟ್ನೆಸ್ ಹಾಗೂ ಸೌಂದರ್ಯವನ್ನು ಪ್ರದರ್ಶಿಸಿದ್ದಾರೆ. ಸಮಂತಾ ವಿಡಿಯೋ ನೋಡಿ ಫ್ಯಾನ್ಸ್ ಡಬಲ್ ಖುಷಿಯಲ್ಲಿದ್ದಾರೆ.
ಹೈದರಾಬಾದ್(ಜು.03) ನಟಿ ಸಮಂತಾ ಆರೋಗ್ಯ ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಇದೀಗ ಸಮಂತಾ ಆ್ಯಕ್ರೋಬ್ಯಾಟಿಕ್ ಸ್ಟಂಟ್ ಮೂಲಕ ಅಭಿಮಾನಿಗಳಿಗೆ ಮಹತ್ವದ ಅಪ್‌ಡೇಟ್ ನೀಡಿದ್ದಾರೆ. ಬಳುಕುವ ಬಳ್ಳಿಯಂತೆ ಬೆಂಡಾಗಿ ಸಮಂತಾ ಸ್ಟಂಟ್ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಶೀಘ್ರದಲ್ಲೇ ಸಮಂತಾ ಅಭಿನಯದ ವೆಬ್ ಸೀರಿಸ್ ಬಿಡುಗಡೆಯಾಗಲಿದೆ. ಸಮಂತಾ ತೆರೆ ಮೇಲೆ ನೋಡಲು ಕಾತರಗೊಂಡಿರುವ ಅಭಿಮಾನಿಗಳು ಇದೀಗ ಸ್ಟಂಟ್ ನೋಡಿ ಮತ್ತಷ್ಟು ಖುಷಿಯಾಗಿದ್ದರೆ. ಸಮಂತಾ ಮತ್ತೆ ಬಿಗ್ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುವ ಸೂಚನೆ ಇದು ಎಂದು ಅಭಿಮಾನಿಗಳ ಅಭಿಪ್ರಾಯಪಟ್ಟಿದ್ದಾರೆ.
ನಟಿ ಸಮಂತಾ ಆರೋಗ್ಯ ಸಮಸ್ಯೆಯಿಂದ ನಟನೆಯಿಂದ ದೂರ ಉಳಿದಿದ್ದರು. ಆದರೆ ನಟಿ ಯಾವತ್ತೂ ಜಿಮ್ ವರ್ಕೌಟ್‌ನಿಂದ ದೂರ ಉಳಿದಿಲ್ಲ. ಹಲವು ಸವಾಲು ಎದುರಿಸಿದ ಸಮಂತಾ ಮಾನಸಿಕವಾಗಿ ಹಾಗೂ ದೈಹಿಕವಾಗಿ ಗಟ್ಟಿಯಾಗಿದ್ದಾರೆ. ಇದೀಗ ತಮ್ಮ ದೈಹಿಕ ವ್ಯಾಯಾಮದ ಮೂಲಕ ಮತ್ತಷ್ಟು ಫಿಟ್ ಆಗಿದ್ದಾರೆ. ಸಮಂತಾ ಫಿಟ್ನೆಸ್ ವ್ಯಾಯಾಮ ನೋಡಿದ ಅಭಿಮಾನಿಗಳು ಮುಂದಿನ ಚಿತ್ರಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.
ಮೆರೂನ್ ಡ್ರೆಸ್‌ನಲ್ಲಿ ಸಮಂತಾ ಹಾಟ್ ಲುಕ್, ಆರೋಗ್ಯ ಕೈ ಕೊಟ್ರೂ ಸಖತ್ ಫಿಟ್‌ನೆಸ್ ಅಂತಿದ್ದಾರೆ ಫ್ಯಾನ್ಸ್
ಸಮಂತಾ ರುತ್ ಪ್ರಭು ಸಿನಿಮಾದಿಂದ ಬ್ರೇಕ್ ಪಡೆದರೂ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದರು. ಫೋಟೋ, ವಿಡಿಯೋ, ಪಾಡ್‌ಕಾಸ್ಟ್ ಸೇರಿದಂತೆ ಹಲವು ವಿಚಾರಗಳನ್ನು ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಕ್ಷಣಕ್ಷಣದ ಅಪ್‌ಡೇಟ್ ನೀಡುತ್ತಾ ಬಂದಿದ್ದಾರೆ. ಇದೀಗ ಸ್ಟಂಟ್ ವಿಡಿಯೋ ಹರಿದಾಡುತ್ತಿದ್ದಂತೆ ಸಮಂತಾ ಸಿನಿಮಾಗೆ ವಾಪಸ್ ಬರಲಿದ್ದಾರೆ ಅನ್ನೋ ನಿರೀಕ್ಷೆಗಳು ಹೆಚ್ಚಾಗಿದೆ.
ಹಾಗಂತ ಆ್ಯಕ್ರೋಬ್ಯಾಟಿಕ್ ಸ್ಟಂಟ್ ಮಾಡುತ್ತಿರುವುದು ಇದೇ ಮೊದಲಲ್ಲ. ಹಲವು ಬಾರಿ ಜಿಮ್ ವರ್ಕೌಟ್ ವೇಳೆ ಸಮಂತಾ ಈ ರೀತಿ ಸ್ಟಂಟ್ ಮಾಡಿದ್ದಾರೆ. ಇಷ್ಟೇ ಅಲ್ಲ ಈ ಕುರಿತ ವಿಡಿಯೋವನ್ನು ಖುದ್ದಾಗಿ ಹಂಚಿಕೊಂಡಿದ್ದರು. ವಿಚ್ಛೇದನ ಬಳಿಕ ನಟಿ ಸಮಂತಾ ಮೆಂಟಲ್ ಹಾಗೂ ಫಿಸಿಕಲ್ ಫಿಟ್ನೆಸ್‌ಗೆ ಹೆಚ್ಚಿನ ಗಮನ ನೀಡಿದ್ದಾರೆ.
Samantha performing intense movements pic.twitter.com/M4dPBkPogu
— CRUSH SLOT (@CrushSlot)
ಇತ್ತೀಚೆಗೆ ಸಮಂತಾ ರುತ್ ಪ್ರಭು ವಿವಾಹದ ವೇಳೆ ತಾನು ಧರಿಸಿದ್ದ ಗೌನ್ ಅನ್ನು ಮರು ವಿನ್ಯಾಸ ಮಾಡಿ ಗಮನಸೆಳೆದಿದ್ದರು. 2017ರಲ್ಲಿ ನಾಗ ಚೈತನ್ಯ ಅವರನ್ನು ಸಮಂತಾ ಮದುವೆ ಆಗಿದ್ದರು. ಆದರೆ 2021ಕ್ಕೆ ಈ ಜೋಡಿ ಬೇರ್ಪಟ್ಟಿತು. ಅದಾಗಿ ವರ್ಷಗಳ ಬಳಿಕ ಸಮಂತಾ ಮದುವೆ ಗೌನ್ ಅನ್ನೇ ಮರು ವಿನ್ಯಾಸ ಮಾಡಿ ಬಳಸಲು ಮುಂದಾಗಿದ್ದರು.
ಅಂದು 500 ರೂ. ಸಂಬಳಕ್ಕಾಗಿ ದುಡಿದಿದ್ದ ಸಮಂತಾ, ಈಗ ಒಂದು ಸಿನಿಮಾಕ್ಕೆ 4ಕೋಟಿ ಪಡೆಯುವ ಟಾಪ್ ನಟಿ
‘ಆ ಗೌನ್ ಹಿಂದೆ ಸಾಕಷ್ಟು ಜನರ ಪರಿಶ್ರಮ ಇದೆ. ಬಹಳ ಸೊಗಸಾಗಿ ಗೌನ್ ವಿನ್ಯಾಸ ಮಾಡಿದ್ದಾರೆ. ಯಾವುದೋ ಕಾರಣಕ್ಕೆ ಅದನ್ನು ಮೂಲೆಗೆಸೆಯುವುದರಲ್ಲಿ ಅರ್ಥವಿಲ್ಲ. ಬದಲಿಗೆ ಅದಕ್ಕೊಂದು ಹೊಸ ರೂಪ ಕೊಡೋಣ. ಹಳೆ ನೆನಪುಗಳಿಂತಲೂ ಹೊಸ ಹೊಸ ನೆನಪುಗಳನ್ನು ಕಲೆ ಹಾಕೋಣ. ಹೊಸ ದಾರಿ ಹಿಡಿದು ನಡೆಯೋಣ. ಯಾವತ್ತೂ ಹೇಳುವುದಕ್ಕೆ ಹೊಸ ಕಥೆಗಳಿರಬೇಕು.’ ಎಂದಿದ್ದರು.