ಇವತ್ತು ರಾತ್ರಿಯ ಮಜಾ... ಎನ್ನುತ್ತಲೇ ಸೋನಾಕ್ಷಿ ಸಿನ್ಹಾ ಕ್ಯಾಟ್​ ವಾಕ್​! ಸೈಜ್​ ತಲೆ ಕೆಡಿಸಿಕೊಂಡ ಫ್ಯಾನ್ಸ್​

By Suchethana D  |  First Published Jul 28, 2024, 12:20 PM IST

ಸ್ಲಿಟೆಡ್​ ಡ್ರೆಸ್​ನಲ್ಲಿ ನಟಿ ಸೋನಾಕ್ಷಿ ಸಿನ್ಹಾ ಕ್ಯಾಟ್​ ವಾಕ್​ ಮಾಡಿದ್ರೆ ಕಮೆಂಟಿಗರು ಈ ರೀತಿ ಬಾಡಿ ಷೇಮಿಂಗ್​ ಮಾಡೋದಾ? 
 


ಆಜ್​ ಕೀ ರಾತ್​ ಮಜಾ ಹುಸನ್​ ಕಾ... ಹಾಡು ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ಭಾರಿ ವೈರಲ್​ ಆಗುತ್ತಿದೆ. ಇಂದು ರಾತ್ರಿ ಆನಂದಿಸಿ... ಎನ್ನುವ ಅರ್ಥ ಕೊಡುವ ಈ ಹಾಡು ಇದೇ ಆಗಸ್ಟ್​ 15ರಂದು ಬಿಡುಗಡೆಯಾಗಲಿರುವ ಸ್ಟ್ರೀಟ್​-2 ಚಿತ್ರದ್ದು. ತಮನ್ನಾ ಭಾಟಿಯಾ, ಶ್ರದ್ಧಾ ಕಪೂರ್​, ರಾಜ್​ಕುಮಾರ್​ ರಾವ್​, ವರುಣ್ ಧವನ್​ ಮುಂತಾದವರು  ನಟಿಸಿರುವ ಈ ಚಿತ್ರದಲ್ಲಿ  ತಮನ್ನಾ ಮೈ ಚಳಿ ಬಿಟ್ಟು ಹಾಟ್​ ಆಗಿ ಕಾಣಿಸಿಕೊಂಡು ಈ ಹಾಡಿಗೆ ನರ್ತಿಸಿದ್ದಾರೆ. ಇದೀಗ ಇದೇ ಹಾಡಿನ ಹಿನ್ನೆಲೆಯಲ್ಲಿ, ಸದ್ಯ ಭಾರಿ ಸುದ್ದಿಯಲ್ಲಿರುವ ನಟಿ ಸೋನಾಕ್ಷಿ ಸಿನ್ಹಾ ಕ್ಯಾಟ್​ ವಾಕ್​ ವೈರಲ್​ ಆಗಿದೆ. ಸ್ಲಿಟ್​ ಡ್ರೆಸ್​ ತೊಟ್ಟು ಹಾಟ್​ ಆಗಿ ಕಾಣಿಸಿಕೊಂಡಿರುವ ನಟಿ ಸೋನಾಕ್ಷಿ ಕ್ಯೂಟ್​ ಆಗಿ ಕ್ಯಾಟ್​ ವಾಕ್​  ಮಾಡಿದ್ರೆ, ಈಕೆಯ ಫ್ಯಾನ್ಸ್​ ನಟಿಯ ಸೈಜ್​ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ತುಂಬಾ ದಪ್ಪಗಾಗಿ ಬಿಟ್ಟಿದ್ರಿ ಮೇಡಂ, ಸ್ವಲ್ಪ ಸಣ್ಣಗಾಗಿ ಎಂದು ಹೇಳುತ್ತಿದ್ದಾರೆ. ಇನ್ನು ಕೆಲವರು ಮದುವೆಯಾದ ಮೇಲೆ ನಟಿ ಇನ್ನಷ್ಟು ಹಾಟ್​ ಆಗಿದ್ದಾಳೆ ಎಂದಿದ್ದರೆ, ಮತ್ತೆ ಕೆಲವರು ನೋಡೋಣ ಎಷ್ಟು ದಿನ ಎಂದು ನಟಿಯ ಕಾಲೆಳೆಯುತ್ತಿದ್ದಾರೆ.

ಅಂದಹಾಗೆ, ಈಚೆಗಷ್ಟೇ ಮದುವೆಯಾಗಿರುವ ನಟಿ  ಸೋನಾಕ್ಷಿ ಸಿನ್ಹಾ ಮತ್ತು  ಜಹೀರ್ ಇಕ್ಬಾಲ್ ಮದುವೆಯ ಲೈಫ್​ ಎಂಜಾಯ್ ಮಾಡುತ್ತಿದ್ದಾರೆ. ಆದರೂ ಹಿಂದೂ-ಮುಸ್ಲಿಂ ಮದುವೆಯಾದ್ದರಿಂದ ಜೊತೆಗೆ ಅಪ್ಪನಿಗೆ ತಿಳಿಸದೇ ನಟಿ ಮದುವೆಯಾಗಿದ್ದರಿಂದಲೂ ಇವರ ಬಗ್ಗೆ ಇನ್ನೂ ಸುದ್ದಿಯಾಗುತ್ತಲೇ ಇದೆ. ಹೋದಲ್ಲಿ, ಬಂದಲ್ಲಿ ಇವರ ಮೇಲೆ ಕ್ಯಾಮೆರಾ ಕಣ್ಣು ನೆಟ್ಟಿರುತ್ತದೆ. ಅಷ್ಟಕ್ಕೂ ಇವರೇನೂ ದಿಢೀರ್‌ ಮದುವೆಯಾಗಿದ್ದಲ್ಲ. ಆರೇಳು ವರ್ಷ ಒಟ್ಟಿಗೇ ಇದ್ದು, ಡೇಟಿಂಗ್‌ ಮಾಡಿದ ಬಳಿಕ ಮದುವೆಯಾಗಿದ್ದಾರೆ. ಇವರು ಡೇಟಿಂಗ್‌ ಮಾಡುತ್ತಿದ್ದ ವಿಷಯ ಅಷ್ಟೊಂದು ಬೆಳಕಿಗೆ ಬಂದಿರದ ಹಿನ್ನೆಲೆಯಲ್ಲಿ ಮದುವೆಯಾದ ಮೇಲೆ ದಿಢೀರನೆ ಸಾಕಷ್ಟು ಚರ್ಚೆಗಳಿಗೆ ಗ್ರಾಸವಾಗಿದೆ. ಈ ಮದುವೆ ಲವ್‌ ಜಿಹಾದ್‌ ಎನ್ನುವ ಮಟ್ಟಕ್ಕೂ ಚರ್ಚೆಯಾಗಿ ಬಿಟ್ಟಿತು. ಸಾಲದು ಎನ್ನುವುದಕ್ಕೆ ಸೋನಾಕ್ಷಿ ತಮ್ಮ ತಂದೆಗೇ ತಿಳಿಸದೇ ಈ ಮದುವೆಯಾಗಿರುವುದು ಮತ್ತಷ್ಟು ವಿವಾದಕ್ಕೆ ಈಡಾಗಿತ್ತು. ಈಗ ಎಲ್ಲವೂ ಒಂದು ಹಂತಕ್ಕೆ ಬಂದಿದ್ದು, ಇವರಿಬ್ಬರ ಬಗ್ಗೆ ಗಾಸಿಪ್​ ತಣ್ಣಗಾಗುತ್ತಿದೆ.

Tap to resize

Latest Videos

ಸುಂದರ ಕಾಲಿದ್ದರೆ ನಟ ಸಾಕಿಬ್​ ಸಲೀಂನನ್ನು ಇಂಪ್ರೆಸ್​ ಮಾಡ್ಬೋದು! ಸೋನಾಕ್ಷಿ ಮಾತು ಸಕತ್​ ಟ್ರೋಲ್​

ಇದರ ನಡುವೆಯೇ ಸೋನಾಕ್ಷಿ ತಮ್ಮ ಮುಂಬರುವ ಚಿತ್ರ ಕಕುಡಾದ ಪ್ರಚಾರದಲ್ಲಿ ಬಿಜಿಯಾಗಿದ್ದಾರೆ. ಆದಿತ್ಯ ಸರ್ಪೋತದಾರ್ ನಿರ್ದೇಶನದ ಈ ಚಿತ್ರವು ಹಾರರ್​ ಹಾಗೂ ಹಾಸ್ಯ ಮಿಶ್ರಿತವಾಗಿರುವುದಾಗಿ ಹೇಳಲಾಗಿದೆ. ರಿತೇಶ್ ದೇಶ್‌ಮುಖ್, ಸೋನಾಕ್ಷಿ ಸಿನ್ಹಾ ಮತ್ತು ಸಾಕಿಬ್ ಸಲೀಮ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಮದುವೆಯಾಗಲು ಬಯಸುವ ಯುವ ಜೋಡಿಗಳಾದ ಇಂದಿರಾ (ಸೋನಾಕ್ಷಿ ಸಿನ್ಹಾ) ಮತ್ತು ಸನ್ನಿ (ಸಾಕಿಬ್ ಸಲೀಂ) ಹಲವಾರು  ಅಡೆತಡೆಗಳನ್ನು ಎದುರಿಸುತ್ತಾರೆ.  ಸಂಪ್ರದಾಯಕ್ಕೆ ಅಂಟಿಕೊಂಡಿರುವ ಇಂದಿರಾ ಅವರ ತಂದೆಗೆ ಇಂಗ್ಲಿಷ್ ಮಾತನಾಡುವ ಅಳಿಯ ಬೇಕು. ಸನ್ನಿ ಭಾಷಾ ಪರೀಕ್ಷೆಯಲ್ಲಿ ವಿಫಲವಾದಾಗ, ಅವನು ಮತ್ತು ಇಂದಿರಾ ಓಡಿಹೋಗಲು ನಿರ್ಧರಿಸುತ್ತಾರೆ.  ಆದರೆ ವಿಧಿಯಾಟ ಬೇರೆಯಾಗುತ್ತದೆ. ಮುಂದೇನಾಗುತ್ತದೆ ಎನ್ನುವ ಚಿತ್ರ ಇದಾಗಿದೆ.

ಇದೀಗ ನಟಿಯ ಹಾಟ್​ ಅವತಾರಕ್ಕೆ ಬಗೆಬಗೆ ಕಮೆಂಟ್ಸ್​ ಸುರಿಮಳೆಯಾಗುತ್ತಿದೆ. ಅದಕ್ಕೆ ಕಾರಣವೂ ಇದೆ. ನಟಿ ಎಂದರೆ ಮೈನಸ್​ ಸೈಜೇ ಇರಬೇಕು, ದೇಹದ ಅಂಗಾಂಗಗಳು ಇಷ್ಟೇ ಸೈಜ್​ ಇರಬೇಕು ಎನ್ನುವ ಸಿದ್ಧಸೂತ್ರವೇ ಹುಟ್ಟಿಕೊಂಡಿದೆ. ತೆಳ್ಳಗೆ-ಬೆಳ್ಳಗೆ ಇದ್ದರಷ್ಟೇ ಸೌಂದರ್ಯ, ನಟಿಯಾದವಳಿಗೆ ಇದೇ ಮಾನದಂಡ ಎನ್ನುವ ಸೂತ್ರಗಳನ್ನು ಅಭಿಮಾನಿಗಳು ಮಾಡಿಕೊಂಡು ಬಿಟ್ಟಿದ್ದಾರೆ. ಇದೇ ಕಾರಣಕ್ಕೆ ಹಲವು ಖ್ಯಾತನಾಮ ನಟಿಯರೂ ಬಾಡಿ ಷೇಮಿಂಗ್​ ಎದುರಿಸಿದ್ದು ಇದೆ. ಸೋನಾಕ್ಷಿ ಕೂಡ ಸ್ವಲ್ಪ ದಪ್ಪ ಆಗಿರುವ ಹಿನ್ನೆಲೆಯಲ್ಲಿ ಒಂದು ರೀತಿಯಲ್ಲಿ ಬಾಡಿ ಷೇಮಿಂಗ್​ ನಡೆಯುತ್ತಿದೆ. ನಟನೆಯನ್ನು ಬಿಟ್ಟು ಸೈಜ್​ ಬಗ್ಗೆ ತಲೆ ಕೆಡಿಸಿಕೊಳ್ಳುವವರು ಹೆಚ್ಚಾಗುತ್ತಿದ್ದಾರೆ. 
 

ಸ್ನಾನದ ವಿಡಿಯೋ ಲೀಕ್​ ಆಗಿದ್ದು ಹೇಗೆ? ಕೊನೆಗೂ ಮೌನ ಮುರಿದ ನಟಿ ಊರ್ವಶಿ ರೌಟೇಲಾ

click me!