ಹೇಮಾ ಮಾಲಿನಿ ಮತ್ತು ಧರ್ಮೇಂದ್ರ ಅವರ ದಾಂಪತ್ಯ ಜೀವನಕ್ಕೆ 43 ವರ್ಷಗಳಾಗಿವೆ. ಈ ಸಮಯದಲ್ಲಿ ಅವರ ಬದುಕಿನ ಕೆಲವು ಇಂಟರೆಸ್ಟಿಂಗ್ ವಿಷಯಗಳು ಈಗ ಬಹಿರಂಗಗೊಂಡಿದೆ.
ಬಾಲಿವುಡ್‌ನ ಡ್ರೀಮ್ಗರ್ಲ್ ಎಂದಾಕ್ಷಣ ನೆನಪಿಗೆ ಬರುವುದು ನಟಿ ಹೇಮಾ ಮಾಲಿನಿ. ಸಂಸದೆಯಾಗಿ, ನಟಿಯಾಗಿ ಹೇಮಾ ಮಾಲಿನಿ ಅವರದ್ದು ಬಹುದೊಡ್ಡ ಪಾತ್ರ. ಇವರು ತಮ್ಮ ಚಲನಚಿತ್ರಗಳ ಹೊರತಾಗಿ ಆಕರ್ಷಕ ನೋಟಕ್ಕೆ ಹೆಸರುವಾಸಿಯಾಗಿದ್ದಾರೆ. ಇವರ 'ಡ್ರೀಮ್ ಗರ್ಲ್' (Dream Girl) ಪಟ್ಟಕ್ಕೆ ಬಹುಶಃ ಯಾರೂ ಏರಿಲ್ಲ ಎಂದರೆ ತಪ್ಪಾಗಲಿಕ್ಕಿಲ್ಲ. ವಯಸ್ಸು 74 ಆದರೂ ಇಂದಿಗೂ ಚಾರ್ಮ್ ಉಳಿಸಿಕೊಂಡಿದ್ದಾರೆ ನಟಿ. 1968ರಲ್ಲಿ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದ ನಟಿ, ಬಾಲಿವುಡ್‌ನಲ್ಲಿ 'ಸಪ್ನೋ ಕಾ ಸೌದಾಗರ್' ಚಿತ್ರದ ಮೂಲಕ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಅದರ ನಂತರ, 'ಸೀತಾ ಔರ್ ಗೀತಾ', 'ಶೋಲೆ', 'ಸತ್ತೆ ಪೆ ಸತ್ತಾ', 'ಧರ್ಮಾತ್ಮ', 'ಬಾಘವಾನ್' ನಲ್ಲಿ ಕಾಣಿಸಿಕೊಂಡರು ಮತ್ತು ಅನೇಕ ಚಲನಚಿತ್ರಗಳಲ್ಲಿ ಕೆಲಸ ಮಾಡಿದರು. 50ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿರುವ ಹೇಮಾ ಮಾಲಿನಿ ಅವರು ಹಲವಾರು ಬ್ಲಾಕ್ಬಸ್ಟರ್ ಚಿತ್ರಗಳನ್ನು ನೀಡಿದ್ದಾರೆ.
ಇಂದು ಹೇಮಾ ಮಾಲಿನಿ ಲಕ್ಷಾಂತರ ಹೃದಯಗಳನ್ನು ಆಳುತ್ತಿದ್ದಾರೆ. ಆದರೆ ಅವರ ಹೃದಯ ಯಾವಾಗಲೂ ಬಾಲಿವುಡ್‌ನ ಧರ್ಮೇಂದ್ರ ಅವರಿಗಾಗಿ ಮಾತ್ರ ಮಿಡಿಯುತ್ತದೆ. ಹೇಮಾ ಮಾಲಿನಿ 1980 ರಲ್ಲಿ ಧರ್ಮೇಂದ್ರ (Dharmendra) ಅವರನ್ನು ವಿವಾಹವಾದರು. ಕಳೆದ ವರ್ಷ ಮೇ 2ರಂದು 43 ವಸಂತಗಳ ದಾಂಪತ್ಯ ಜೀವನವನ್ನು ಮುಗಿಸಿದ್ದಾರೆ. ಧರ್ಮೇಂದ್ರ ಮತ್ತು ಹೇಮಾ ಮಾಲಿನಿ ಜೊತೆಗೆ, ಅವರಿಗೆ ಇಬ್ಬರು ಹೆಣ್ಣುಮಕ್ಕಳು ಇಶಾ ಡಿಯೋಲ್ ಮತ್ತು ಅಹಾನಾ ಡಿಯೋಲ್ ಇದ್ದಾರೆ. ಇದೀಗ ನಟಿ ಹೇಮಾಮಾಲಿನಿಯವರ ರೋಚಕ ಘಟನೆಯೊಂದು ಮುನ್ನೆಲೆಗೆ ಬಂದಿದೆ. ಅದೇನೆಂದರೆ, ಅಸಲಿಗೆ ಹೇಮಾ ಅವರನ್ನು ಮದುವೆಯಾಗುವ ಮೊದಲು, ಧರ್ಮೇಂದ್ರ ಪ್ರಕಾಶ್ ಕೌರ್ ಎಂಬುವವರನ್ನು ಮದುವೆಯಾಗಿದ್ದರು. ಈ ದಾಂಪತ್ಯದಿಂದ ಅವರಿಗೆ ಸನ್ನಿ ಡಿಯೋಲ್ ಮತ್ತು ಬಾಬಿ ಡಿಯೋಲ್ ಎಂಬ ಪುತ್ರರು ಮತ್ತು ವಿಜಿತಾ ಡಿಯೋಲ್ ಮತ್ತು ಅಜಿತಾ ಡಿಯೋಲ್ ಎಂಬ ಇಬ್ಬರು ಪುತ್ರಿಯರು ಇದ್ದಾರೆ. ಆದರೆ ಮೊದಲ ಪತ್ನಿಗೆ ವಿಚ್ಛೇದನ ನೀಡದೇ ಧಮೇಂದ್ರ ಅವರು ಹೇಮಾ ಮಾಲಿನಿಯನ್ನು ಮದುವೆಯಾಗಿದ್ದರು.
DHOOM: ಬಿಕಿನಿ ಧರಿಸಲು ಅಮ್ಮನ ಪರ್ಮಿಷನ್ ಕೇಳಿದ್ದ ಇಶಾ- ಹೇಮಾಮಾಲಿನಿ ಹೇಳಿದ್ದೇನು?
ಹೇಮಾ ಮಾಲಿನಿ (Hema Malini) ಅವರ ಜೀವನಚರಿತ್ರೆ 'ಹೇಮಾ ಮಾಲಿನಿ: ಬಿಯಾಂಡ್ ದಿ ಡ್ರೀಮ್ ಗರ್ಲ್'ನಲ್ಲಿ, ಅವರ ಜೀವನದ ಬಗ್ಗೆ ರಾಮ್ ಕಮಲ್ ಮುಖರ್ಜಿ ವಿವರಿಸಿದ್ದಾರೆ. ನಟಿಯ ಜೀವನಕ್ಕೆ ಸಂಬಂಧಿಸಿದ ಅನೇಕ ಘಟನೆಗಳನ್ನು ವಿವರಿಸಲಾಗಿದೆ. ಇವುಗಳಲ್ಲಿ ಒಂದು ಹೇಮಾ ಮಾಲಿನಿ ಮೊದಲ ಗರ್ಭಧಾರಣೆಗೆ ಸಂಬಂಧಿಸಿದೆ. ರಾಮ್ ಕಮಲ್ ಮುಖರ್ಜಿ ಅವರೊಂದಿಗಿನ ಸಂಭಾಷಣೆಯಲ್ಲಿ, ಹೇಮಾ ಅವರು ಮೊದಲ ಬಾರಿಗೆ ಗರ್ಭಿಣಿಯಾಗಿದ್ದಾಗ ನಡೆದ ಘಟನೆಯನ್ನು ಪ್ರಸ್ತಾಪಿಸಿದ್ದರು. ಅದೇನೆಂದರೆ, ಅವರ ಅತ್ತೆ ಸತ್ವಂತ್ ಕೌರ್ ಯಾರಿಗೂ ತಿಳಿಸದೆ ಹೇಮಾ ಮಾಲಿನಿಯರನ್ನು ಭೇಟಿ ಮಾಡಲು ಡಬ್ಬಿಂಗ್ ಸ್ಟುಡಿಯೋಗೆ ಹೋದ ಘಟನೆ ಇದಾಗಿದೆ.
ಈ ಘಟನೆಯನ್ನು ನೆನಪಿಸಿಕೊಂಡ ಹೇಮಾ ಮಾಲಿನಿ, 'ಧರಮ್‌ಜಿ ಅವರ ತಾಯಿ ಸತ್ವಂತ್ ಕೌರ್ ತುಂಬಾ ಕರುಣಾಮಯಿ ಮತ್ತು ಪ್ರೀತಿಯ ತಾಯಿಯಾಗಿದ್ದರು. ನನ್ನ ಮೊದಲ ಗರ್ಭಧಾರಣೆ (Pregnancy) ಸಂದರ್ಭದಲ್ಲಿ ಅಂದರೆ ಇಶಾಳನ್ನು ಗರ್ಭಧರಿಸಿದಾಗ ಈ ಬಗ್ಗೆ ಅವರಿಗೆ ತಿಳಿಯಿತು. ಅವರು ಯಾರಿಗೂ ಹೇಳದೇ ಜುಹುದಲ್ಲಿನ ಡಬ್ಬಿಂಗ್ ಸ್ಟುಡಿಯೊದಲ್ಲಿ ನನ್ನನ್ನು ಭೇಟಿಯಾಗಲು ಹೇಗೆ ಬಂದರು. ಅವರನ್ನು ನೋಡಿ ನನಗೆ ಸಿಕ್ಕಾಪಟ್ಟೆ ಅಚ್ಚರಿಯಾಯಿತು. ಈ ವಿಚಾರವನ್ನು ಮನೆಯಲ್ಲಿ ಯಾರಿಗೂ ಹೇಳಿರಲಿಲ್ಲ. ಅವರು ತಲುಪಿದ ತಕ್ಷಣ, ನಾನು ಅವಳ ಪಾದಗಳನ್ನು ಮುಟ್ಟಿದ್ದೆ. ಆಗ ಅವರು ನನ್ನನ್ನು ತಬ್ಬಿಕೊಂಡು, 'ಮಗಳೇ ಯಾವಾಗಲೂ ಸಂತೋಷವಾಗಿರಿ' ಎಂದು ಹೇಳಿದರು. ಅವರು ನನ್ನೊಂದಿಗೆ ಸಂತೋಷವಾಗಿರುವುದಕ್ಕೆ ನನಗೆ ಸಂತೋಷವಾಯಿತು ಎಂದಿದ್ದರು ಎಂಬುದಾಗಿ ಮುಖರ್ಜಿ ವಿವರಿಸಿದ್ದಾರೆ.
ನನಗೆ ಮಕ್ಕಳು ಬೇಕು... ಆದರೆ... ದಾಂಪತ್ಯದ ರಹಸ್ಯ ಹೇಳಿದ ನಟಿ ಪೂಜಾ ಭಟ್
ಕುತೂಹಲದ ಸಂಗತಿ ಎಂದರೆ, ಮದುವೆ ಬಳಿಕ ಪ್ರಕಾಶ್ ಕೌರ್ (Prakash Kaur) ಹಾಗೂ ಹೇಮಾ ಇಬ್ಬರೂ ಇದೂವರೆಗೂ ಪರಸ್ಪರ ಮುಖಾಮುಖಿಯಾಗಿಲ್ಲ. ಇಲ್ಲಿಯವರೆಗೆ ಇಬ್ಬರೂ ಒಬ್ಬರ ಮನೆಗೆ ಒಬ್ಬರು ಬಂದಿಲ್ಲ. ಒಬ್ಬರ ಮುಖ ಒಬ್ಬರು ನೋಡಿಲ್ಲ. ರಾಮ್ ಕಮಲ್ ಮುಖರ್ಜಿ ಅವರ ಪ್ರಕಾರ, ಸಾಮಾಜಿಕ ಸಮಾರಂಭವೊಂದರಲ್ಲಿ ಹೇಮಾ ಮಾಲಿನಿ ಹಾಗೂ ಪ್ರಕಾಶ್ ಕೌರ್ ಭೇಟಿಯಾಗಿದ್ದರಂತೆ. ಹೇಮಾ ಧರ್ಮೇಂದ್ರನನ್ನು ಮದುವೆಯಾಗುವ ಮೊದಲು ಹಲವು ಬಾರಿ ಪ್ರಕಾಶ್ ಕೌರ್ ಅವರನ್ನು ಭೇಟಿಯಾಗಿದ್ದರಂತೆ. ಮದುವೆಯ ನಂತರ ಹೇಮಾ ಮಾಲಿನಿ ಧರ್ಮೇಂದ್ರ ಅವರ ಮೊದಲ ಪತ್ನಿಯ ಫ್ಯಾಮಿಲಿಯಿಂದ ದೂರವಿರಲು ನಿರ್ಧರಿಸಿದ್ದರಂತೆ.