ಅಮೆರಿಕ: ಮೋದಿ ಸ್ವಾಗತಕ್ಕೆ ಚೈಯಾ ಚೈಯಾ ಹಾಡು, ನಟ ಶಾರುಖ್​ ಹೇಳಿದ್ದೇನು?

By Suvarna News  |  First Published Jun 26, 2023, 4:17 PM IST

ಪ್ರಧಾನಿ ನರೇಂದ್ರ  ಮೋದಿಯವರು ಅಮೆರಿಕಕ್ಕೆ ಹೋದ ಸಂದರ್ಭದಲ್ಲಿ ಚೈಯಾ ಚೈಯಾ ಹಾಡಿನ ಮೂಲಕ ಸ್ವಾಗತ ಕೋರಲಾಯಿತು. ಅದಕ್ಕೆ ಶಾರುಖ್​ ಹೇಳಿದ್ದೇನು?
 


ಪ್ರಧಾನಿ ನರೇಂದ್ರ  ಮೋದಿಯವರು (PM Narendra Modi) ಅಮೆರಿಕ ಮತ್ತು ಈಜಿಪ್ಟ್​ ದೇಶಗಳಿಗೆ ಐದು ದಿನಗಳ ಭೇಟಿ ನೀಡಿ ಭಾರತಕ್ಕೆ ವಾಪಸ್​ ಆಗಿದ್ದಾರೆ. ಆದರೆ ವಿಶ್ವದ ದೊಡ್ಡಣ್ಣ ಎಂದೇ ಕರೆಸಿಕೊಂಡಿರುವ ಅಮೆರಿಕದಲ್ಲಿ ಹಾಗೂ ಈಜಿಪ್ಟ್​ ದೇಶಗಳಲ್ಲಿ ಪ್ರಧಾನಿ ಮೋದಿಯವರಿಗೆ ಸಿಕ್ಕಿರುವ ಅಭೂತಪೂರ್ವ ಸ್ವಾಗತ ಬಹುಶಃ ಯಾವ ಪ್ರಧಾನಿಗೂ ವಿದೇಶಗಳಲ್ಲಿ ಸಿಕ್ಕಿರಲಿಲ್ಲ. ಮೋದಿಯವರು ಯಾವುದೇ ದೇಶಕ್ಕೆ ಭೇಟಿ ಕೊಟ್ಟರೂ ಅಲ್ಲಿಯ ಅನಿವಾಸಿ ಭಾರತೀಯರು ಇವರನ್ನು ಸ್ವಾಗತಿಸುವ ಪರಿಗೆ ಅಲ್ಲಿಯ ದೇಶಿವಾಸಿಗಳೇ ಬೆಕ್ಕಸಬೆರಗಾಗುವುದು ಇದೆ. ಭಾರತದಲ್ಲಿಯೇ ವಾಸಿಸುವ ಭಾರತೀಯರು ತಮ್ಮ ಸಂಪ್ರದಾಯವನ್ನು ಮರೆಯುತ್ತಿರುವ ಈ ಕಾಲದಲ್ಲಿ ಅನಿವಾಸಿ ಭಾರತೀಯರು ಭಾರತೀಯ ಸಂಪ್ರದಾಯದಂತೆ ನರೇಂದ್ರ ಮೋದಿಯವರನ್ನು ಸ್ವಾಗತಿಸುತ್ತಾರೆ. ಅದೇ ರೀತಿ ಅಮೆರಿಕ ಮತ್ತು ಈಜಿಪ್ಟ್​ನಲ್ಲಿಯೂ ನಡೆದಿದೆ. ಅದರಲ್ಲಿಯೂ ವಿಶೇಷವಾಗಿ ಬಾಲಿವುಡ್​ (Bollywood) ಹಾಡುಗಳ ಗಾಯನವೋ ಇಲ್ಲವೇ ನೃತ್ಯವೋ ಸ್ವಾಗತದ ಪ್ರಮುಖ ಅಂಗವಾಗಿರುತ್ತದೆ.

ಅದೇ ರೀತಿ ಪ್ರಧಾನಿ ನರೇಂದ್ರ  ಮೋದಿಯವರು ಅಮೆರಿಕದ ಶ್ವೇತಭವನಕ್ಕೆ (Whitehouse) ಭೇಟಿ ಕೊಟ್ಟ ಸಂದರ್ಭದಲ್ಲಿ ಅವರಿಗೆ ವಿಶೇಷವಾಗಿ ಸ್ವಾಗತ ಸಿಕ್ಕಿದ್ದು ಬಾಲಿವುಡ್​ನ ಪ್ರಸಿದ್ಧ ಶಾರುಖ್​ ಖಾನ್​ ಅಭಿಯನದ ಚೈಯ್ಯಾ ಚೈಯ್ಯಾ ಹಾಡಿನಿಂದ. ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದ ಹೆಸರಾಂತ ಕ್ಯಾಪೆಲ್ಲಾ ಗ್ರೂಪ್, ಪೆನ್ ಮಸಾಲಾ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆಗಮನದ ಮೊದಲು ಶ್ವೇತಭವನದಲ್ಲಿ ಈ ಹಾಡನ್ನು ಹಾಡಿದರು.  ದಕ್ಷಿಣ ಏಷ್ಯಾದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಒಳಗೊಂಡ ಗುಂಪು, ಮೋದಿಯವರಿಗೆ ವಿದ್ಯುಕ್ತ ಸ್ವಾಗತವನ್ನು ಕೋರಲು ಈ ಹಾಡನ್ನು ಆಯ್ದುಕೊಂಡಿದ್ದರು.  ಶಾರುಖ್ ಖಾನ್ ಅಭಿನಯದ 1998 ರ ಚಿತ್ರ 'ದಿಲ್ ಸೇ...' ಚಿತ್ರದ   'ಚೈಯ್ಯಾ ಚೈಯಾ' ಹಾಡು ಅಮೆರಿಕದಲ್ಲಿ ಮೊಳಗಿತು.  ಇದರ ಜೊತೆಗೆ ಇನ್ನೂ ಕೆಲವು ಬಾಲಿವುಡ್​ ಹಾಡುಗಳನ್ನು ಅವರು ಹಾಡಿ ರಂಜಿಸಿದರು.

Tap to resize

Latest Videos

ಅತ್ತೆ ತೊಡೆ ಮೇಲೆ ಶಾರುಖ್‌: ಪತಿ ಮೇಲೆ ಕಾಲಿಟ್ಟು ಕೂತ ಗೌರಿ- ಇದೆಂಥ ಸಂಸ್ಕಾರ ಎಂದ ನೆಟ್ಟಿಗರು!

 ಭಾರತದ ಪ್ರಧಾನಿಯೊಬ್ಬರು ವಿದೇಶಕ್ಕೆ ಹೋದಾಗ ಅದರಲ್ಲಿಯೂ ಅಮೆರಿಕದಲ್ಲಿ ತಮ್ಮ ಚಿತ್ರದ ಹಾಡಿನ ಮೂಲಕ ಸ್ವಾಗತ ಕೋರಿದ್ದನ್ನು ನಟ ಶಾರುಖ್​ ಖಾನ್​ ಶ್ಲಾಘಿಸಿದ್ದಾರೆ. ತಾವೂ ಆ ಸಂದರ್ಭದಲ್ಲಿ ಅಲ್ಲಿ ಇರಬೇಕಿತ್ತು ಎಂಬ ಇಂಗಿತವನ್ನು ಅವರು ವ್ಯಕ್ತಪಡಿಸಿದ್ದಾರೆ. ತಮ್ಮ ಅಭಿಮಾನಿಗಳೊಂದಿಗೆ ಸಂಪರ್ಕಿಸಲು ಆಸ್ಕ್​ ಮಿ ಅನಿಥಿಂಗ್​ (Ask me anything) ಎಂಬ ಸೆಷನ್​ ಅನ್ನು ಟ್ವಿಟರ್​ನಲ್ಲಿ ಕೆಲ ಪ್ರಾರಂಭಿಸಿದ್ದಾರೆ. 

ಆ ಸೆಷನ್​ನಲ್ಲಿ ನಟ ಅಮೆರಿಕದ ಕುರಿತು ಪ್ರಸ್ತಾಪಿಸಿದ್ದಾರೆ.  ಟ್ವಿಟ್ಟರ್‌ನಲ್ಲಿ ಆಸ್ಕ್ ಮಿ ಎನಿಥಿಂಗ್ ಸೆಷನ್‌ನಲ್ಲಿ, ಎಸ್‌ಆರ್‌ಕೆ ಅವರ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಶಾರುಖ್​ (Shahrukh Khan) ಉತ್ತರಿಸಿದರು.  'ಸರ್ ಚೈಯಾ ಚೈಯ್ಯಾ ಹಾಡಿನ ಮೂಲಕ ಅಮೆರಿಕದಲ್ಲಿ  ಮೋದಿಜಿಯನ್ನು ಸ್ವಾಗತಿಸಲಾಯಿತು.  ನೀವು ಏನು ಹೇಳಲು ಬಯಸುತ್ತೀರಿ. ಈ ಬಗ್ಗೆ?' ಎಂದು ಕೇಳಿದಾಗ ಶಾರುಖ್​ ಖಾನ್​,  'ನಾನೂ ಅಲ್ಲಿ ಇರಬೇಕಿತ್ತು ಎನಿಸುತ್ತಿದೆ. ಅಲ್ಲಿದ್ದರೆ ನಾನು ಆ ಹಾಡಿಗೆ ನೃತ್ಯ ಮಾಡುತ್ತಿದ್ದೆ. ಆದರೆ ಏನು ಮಾಡುವುದು... ಚೈಯಾ ಚೈಯಾ ಡಾನ್ಸ್​ ಮಾಡಲು ರೈಲನ್ನು ಒಳಗೆ ಬಿಡುತ್ತಿರಲಿಲ್ಲಾ ಅನ್ನಿಸುತ್ತದೆ' ಎಂದು ತಮಾಷೆ ಮಾಡಿದ್ದಾರೆ.  ಇದನ್ನು ಕೇಳಿದ ಫ್ಯಾನ್ಸ್​ ನಗೆಗಡಲಿನಲ್ಲಿ ತೇಲುತ್ತಿದ್ದಾರೆ. 

ದಿನಕ್ಕೆ 100 ಸಿಗರೇಟ್​- ಕ್ಯಾನ್ಸರ್​ ಹೊಗೆಯಿಂದ ಸುತ್ತುವರಿದಿದ್ದೇನೆ: ಶಾರುಖ್​ ಖಾನ್​!

ಇನ್ನು ದಿಲ್​ ಸೇ (Dil Se) ಚಿತ್ರದ ಬಗ್ಗೆ ಹೇಳುವುದಾದರೆ, 1998 ರ ಭಾರತೀಯ ಹಿಂದಿ ಭಾಷೆಯ ರೋಮ್ಯಾಂಟಿಕ್ ಥ್ರಿಲ್ಲರ್ ಚಲನಚಿತ್ರವಾಗಿದ್ದು, ಇದನ್ನು ರಾಮ್ ಗೋಪಾಲ್ ವರ್ಮಾ ಮತ್ತು ಶೇಖರ್ ಕಪೂರ್ ಅವರೊಂದಿಗೆ ಮಣಿರತ್ನಂ ಬರೆದು ನಿರ್ದೇಶಿಸಿದ್ದಾರೆ. ಅಸ್ಸಾಂನಲ್ಲಿನ ದಂಗೆಯ ಹಿನ್ನೆಲೆಯ ವಿರುದ್ಧದ ಚಿತ್ರ ಇದಾಗಿದೆ. ಚಿತ್ರದಲ್ಲಿ  ಶಾರುಖ್ ಖಾನ್ ಜೊತೆ ಮನಿಶಾ ಕೊಯಿರಾಲಾ ನಟಿಸಿದರೆ , ಪ್ರೀತಿ ಜಿಂಟಾ ಪೋಷಕ ಪಾತ್ರದಲ್ಲಿ ಚಲನಚಿತ್ರಕ್ಕೆ ಪದಾರ್ಪಣೆ ಮಾಡಿದ್ದಾರೆ.

Wish I was there to dance to it….but they wouldn’t allow a train inside I guess??!!! https://t.co/jjsUexZXCH

— Shah Rukh Khan (@iamsrk)
click me!