ನಾನು ಸೆಕ್ಸಿನೇ ಎನ್ನುತ್ತಾ 'ನೈಟ್ ಮ್ಯಾನೇಜರ್' ಕುರಿತು ವಿವರಿಸಿದ ನಟಿ Sobhita Dhulipala

Published : Jun 26, 2023, 04:43 PM IST
 ನಾನು ಸೆಕ್ಸಿನೇ ಎನ್ನುತ್ತಾ 'ನೈಟ್ ಮ್ಯಾನೇಜರ್' ಕುರಿತು ವಿವರಿಸಿದ ನಟಿ  Sobhita Dhulipala

ಸಾರಾಂಶ

'ನೈಟ್ ಮ್ಯಾನೇಜರ್' ವೆಬ್​ಸೀರೀಸ್​ನಲ್ಲಿ ನಟಿಸುತ್ತಿರುವ ನಟಿ ಶೋಭಿತಾ ಧೂಲಿಪಾಲ ತಮ್ಮ ಸೆಕ್ಸಿ ಇಮೇಜ್​ ಬಗ್ಗೆ ಹೇಳಿದ್ದೇನು?   

ಪೊನ್ನಿಯಿನ್ ಸೆಲ್ವನ್ 2 ಸಿನಿಮಾದ ಮೂಲಕ ಸದ್ದು ಮಾಡಿದ್ದ ನಟಿ ಶೋಭಿತಾ ಧೂಲಿಪಾಲ ಈ ಹಿಂದೆ ಡೇಟಿಂಗ್  ವಿಚಾರವಾಗಿ ಸಾಕಷ್ಟು ಸುದ್ದಿಯಾಗಿದ್ದರು. ಅದರಲ್ಲೂ ನಟ ನಾಗ ಚೈತನ್ಯ (Naga Chaitanya) ಜೊತೆ ಡೇಟಿಂಗ್ ಮಾಡುತ್ತಿರುವ ವಿಚಾರ ಹಲವು ಅನುಮಾನಗಳನ್ನೂ ಮೂಡಿಸಿತ್ತು. ಸಮಂತಾ (Samantha) ಜೊತೆಗಿನ ಬಾಂಧವ್ಯ ಕಡಿದುಕೊಂಡ ನಂತರ ನಾಗ ಚೈತನ್ಯ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದ್ದು, ಈ ವೇಳೆಯಲ್ಲಿ ಗೆಳೆತನಕ್ಕೆ ಸಿಕ್ಕವರೇ ಶೋಭಿತಾ ಎಂದು ಹೇಳಲಾಗುತ್ತಿದೆ.  ಶೋಭಿತಾ ಜೊತೆ ಪ್ರೀತಿಯಲ್ಲಿ ಬಿದ್ದಾರೆ ಎನ್ನುವ ಸುದ್ದಿ ಕಳೆದ ಕೆಲವು ತಿಂಗಳಿಂದ ಹರಿದಾಡುತ್ತಿದೆ. ಇಬ್ಬರೂ ಆಗಾಗ ಪ್ರವಾಸ, ಔಟಿಂಗ್ ಅಂತ ಸುತ್ತಾಡುತ್ತಿದ್ದಾರೆ ಎನ್ನಲಾಗಿದೆ. ಒಂದೆರಡು ಬಾರಿ ಕ್ಯಾಮರಾ ಕಣ್ಣಿಗೂ ಸೆರೆಯಾಗಿದ್ದರು. ಆಗ ನಾಗಚೈತನ್ಯ ಅವರಿಗೆ  ಸೀಕ್ರೆಟ್ ಕ್ರಶ್​ ಯಾರು ಎಂದು ಕೇಳಿದಾಗ ಹಲವರು ಶೋಭಿತಾ ಹೆಸರು ಹೇಳಬಹುದು ಎಂದುಕೊಂಡಿದ್ದರು. ಇಂತಿಪ್ಪ ಶೋಭಿತಾ ಈಗ ತಮ್ಮ ಜೀವನದ ಕೆಲವೊಂದು ವಿಷಯಗಳನ್ನು ಶೇರ್​ ಮಾಡಿಕೊಂಡಿದ್ದಾರೆ. 

ಮಿಸ್ ಇಂಡಿಯಾ ಅರ್ಥ್ (Miss India Earth) ಕಿರೀಟವನ್ನು ಅಲಂಕರಿಸಿದ್ದಾ ಶೋಭಿತಾ,  ಹಿಂದಿ, ಮಲಯಾಳಂ, ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಹಲವು  ವೆಬ್ ಸರಣಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ನಟನೆಯ ಬಗ್ಗೆ  ಪ್ರಶಂಸೆಯ ವಿಮರ್ಶೆಗಳನ್ನು ಪಡೆಯುತ್ತಿದ್ದಾರೆ. ಮೇಡ್ ಇನ್ ಹೆವನ್ ಎಂಬ ವೆಬ್ ಸೀರೀಸ್‌ನಲ್ಲಿ  ಶೋಭಿತಾ ನಟಿಸಿದ್ದರು. ಇದು ಕೂಡ ಸಾಕಷ್ಟು ಒಳ್ಳೆಯ ವಿಮರ್ಶೆ ಪಡೆದುಕೊಂಡಿತ್ತು. ಇದಾದ ಬಳಿಕ ಈಚೆಗೆ ನಟಿ,  ದಿ ನೈಟ್ ಮ್ಯಾನೇಜರ್ ಸರಣಿಯಲ್ಲಿ ಕಾಣಿಸಿಕೊಂಡಿದ್ದರು. ಇದರಲ್ಲಿ ಆದಿತ್ಯ ರಾಯ್ ಕಪೂರ್ ಮತ್ತು ಅನಿಲ್ ಕಪೂರ್ ಕೂಡ ನಟಿಸಿದ್ದಾರೆ.

Shobhita Dhulipala: ನಾಗಚೈತನ್ಯ ಜೊತೆ ಡೇಟಿಂಗ್​ ರೂಮರ್ ಮಧ್ಯೆಯೇ ಕನಸಿನ ಹುಡುಗ ಹೀಗಿರಬೇಕೆಂದ ನಟಿ

ಈಗ ಈ ವೆಬ್​ ಸರಣಿಯ ಕುರಿತು ಹೇಳಿಕೊಂಡಿರುವ ನಟಿ ಶೋಭಿತಾ, ತಮ್ಮನ್ನು ಎಲ್ಲರೂ ಸೆಕ್ಸಿ ಪಾತ್ರದಲ್ಲಿಯೇ  ನೋಡಲು ಇಷ್ಟ ಪಡುತ್ತಾರೆ ಎಂದು ಖುಷಿಯ ಜೊತೆ ಬೇಸರವನ್ನೂ ವ್ಯಕ್ತಪಡಿಸಿದ್ದಾರೆ. ಪ್ರಮುಖ ಮನರಂಜನಾ ಪೋರ್ಟಲ್‌ಗೆ ನೀಡಿದ ಸಂದರ್ಶನದಲ್ಲಿ ನಟಿ,  ದಿ ನೈಟ್ ಮ್ಯಾನೇಜರ್‌ನಲ್ಲಿ ತಮ್ಮ ಪಾತ್ರವನ್ನು  ವಿವರಿಸುತ್ತಾ, ಈ ವೆಬ್​ ಸೀರಿಸ್​ನಲ್ಲಿ ನನ್ನ ಪಾತ್ರ ಸೀಮಿತವಾಗಿದೆ. ಆದರೆ ಪ್ರೇಕ್ಷಕರು ನನ್ನನ್ನು ಸೆಕ್ಸಿ ಇಮೇಜ್​ನಲ್ಲಿಯೇ (Sexy image) ನೋಡಲು ಬಯಸುತ್ತಾರೆ. ನಾನು ಸೆಕ್ಸಿ ಎನ್ನುವುದು ನಿಜ. ಅದು ನನಗೆ ನ್ಯಾಚುರಲ್​ ಆಗಿ ಬಂದಿದೆ. ಹಾಗೆಂದು ಬರೀ ಸೆಕ್ಸಿ ಪಾತ್ರಗಳನ್ನು ಮಾಡುವುದು ನನಗೆ ಇಷ್ಟವಿಲ್ಲ ಎಂದಿದ್ದಾರೆ.

ನಟಿ ಸೆಕ್ಸಿಯಾಗಿದ್ದ ಮಾತ್ರಕ್ಕೆ ಅಂಥದ್ದೇ ಪಾತ್ರ ಕೊಡುವುದು ಸರಿಯಲ್ಲ ಎಂದು ಹೇಳಿರುವ ಶೋಭಿತಾ, ತಾವು ಎಲ್ಲಾ  ರೀತಿಯ ಪಾತ್ರಗಳನ್ನು ಮಾಡಲು ಇಷ್ಟಪಡುವುದಾಗಿ ಹೇಳಿದ್ದಾರೆ. ನಾನು ಚಿತ್ರರಂಗದ ಹಿನ್ನೆಲೆಯಿಂದ ಬಂದವಳಲ್ಲ, ಚಿತ್ರರಂಗಕ್ಕೆ ಬರುವ ಮುನ್ನ ಸಾಮಾನ್ಯ ಸುತ್ತಿನ ಆಡಿಷನ್‌ಗಳು (Audition) ಎಲ್ಲವನ್ನೂ ದಾಟಿ ಬಂದಿದ್ದೇನೆ. ಇವೆಲ್ಲವೂ ಒಂದು ರೀತಿಯಲ್ಲಿ ಯುದ್ಧ ಎನಿಸುತ್ತದೆ. ಜಾಹೀರಾತಿನಲ್ಲಿಯೂ ನಟಿಸಲು ಅವಕಾಶ ಸಿಕ್ಕರೂ ಅದು ನ್ಯಾಯಯುತವಾಗಿರಲಿಲ್ಲ. ಸೆಕ್ಸಿ ಎನ್ನುವ ಕಾರಣಕ್ಕೆ ಅದರ ಪ್ರಯೋಜನ ಪಡೆದುಕೊಳ್ಳುವುದು ಸರಿಯಲ್ಲ. ಗ್ಲಾಮರ್​ಗಿಂತ  ನನ್ನ ನಟನಾ ಕೌಶಲ್ಯದ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಿದೆ ಎಂದರು. 

ವಯಸ್ಸಿನ ಗುಟ್ಟು ತಿಳಿಸಿ ಹುಬ್ಬೇರಿಸುವಂತೆ ಮಾಡಿದ ಮಾಜಿ ಪೋರ್ನ್​ ಸ್ಟಾರ್​ ಸನ್ನಿ ಲಿಯೋನ್​

ಇತ್ತೀಚೆಗೆ ನಟಿ ಶೋಭಿತಾ ಧೂಲಿಪಾಲ (Shobhita Dhulipala) ಮದುವೆ ವಿಷಯದಲ್ಲಿ ಸುದ್ದಿಯಾಗಿದ್ದರು.  ಮೊದಲ ಬಾರಿಗೆ ಮದುವೆ ಬಗ್ಗೆ ಮಾತಾಡಿದ ನಟಿ ಶೋಭಿತಾ, ಮದುವೆ ಆಗುವ ಹುಡುಗ ಹೇಗಿರಬೇಕು ಎಂದು ಹೇಳಿದ್ದರು. ದಿ ನೈಟ್ ಮ್ಯಾನೇಜರ್ 2 ಸಿನಿಮಾದ ಪ್ರಚಾರದ ವೇಳೆ ನಟಿ ತಮ್ಮ ಕನಸಿನ ರಾಜಕುಮಾರನ ಕುರಿತು ಮಾಹಿತಿ ಶೇರ್​ ಮಾಡಿಕೊಂಡಿದ್ದರು.  ತಮ್ಮ ಭಾವಿ ಪತಿ ಹೇಗಿರಬೇಕು ಎಂಬ ಬಗ್ಗೆ ಮಾತಾಡಿದ್ದು, ಶೋಭಿತಾ ಧೂಲಿಪಾಲ ಶೀಘ್ರದಲ್ಲೇ ಮದುವೆ ಆಗಲಿದ್ದಾರಾ ಎನ್ನುವ ಪ್ರಶ್ನೆ ಎದ್ದಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?