ಅಜಾತಶತ್ರು ಎಸ್‌ಪಿ ಬಾಲಸುಬ್ರಹ್ಮಣ್ಯಂ ಪ್ರತಿಮೆಗೆ ವಿರೋಧ; 'ಹೀಗೂ ಉಂಟೇ ಮನುಷ್ಯರ ಜಗತ್ತು?' ಅಂತಿರೋ ನೆಟ್ಟಿಗರು!

Published : Dec 04, 2025, 01:20 PM IST
SP Balasubrahmanyam

ಸಾರಾಂಶ

ಡಾ ಎಸ್‌ಪಿ ಬಾಲಸುಬ್ರಹ್ಮಣ್ಯಂ (SP Balasubrahmanyam) ಅವರು ಭಾರತ ಕಂಡ ಅತ್ಯುತ್ತಮ ಗಾಯಕರಲ್ಲಿ ಒಬ್ಬರು. ಅವರು ಹಾಡಿರುವಷ್ಟು ಹಾಡುಗಳನ್ನು ಜಗತ್ತಿನ ಯಾವುದೇ ಗಾಯಕರು ಹಾಡಿಲ್ಲ. ಹಾಡುಗಳ ವಿಷಯದಲ್ಲಿ ಎಸ್‌ಪಿಬಿ ಅವರದ್ದು ಗಿನ್ನಿಸ್ ದಾಖಲೆ. ಈ ಸ್ಟೋರಿ ನೋಡಿ..

ಗಾಯಕ ಡಾ ಎಸ್‌ಪಿ ಬಾಲಸುಬ್ರಹ್ಣಣ್ಯಂಗೆ ಅವಮಾನ?

ಡಾ ಎಸ್‌ಪಿ ಬಾಲಸುಬ್ರಹ್ಮಣ್ಯಂ (SP Balasubrahmanyam) ಅವರು ಭಾರತ ಕಂಡ ಅತ್ಯುತ್ತಮ ಗಾಯಕರಲ್ಲಿ ಒಬ್ಬರು. ಅವರು ಹಾಡಿರುವಷ್ಟು ಹಾಡುಗಳನ್ನು ಜಗತ್ತಿನ ಯಾವುದೇ ಗಾಯಕರು ಹಾಡಿಲ್ಲ. ಹಾಡುಗಳ ವಿಷಯದಲ್ಲಿ ಎಸ್‌ಪಿಬಿ ಅವರದ್ದು ಗಿನ್ನಿಸ್ ದಾಖಲೆ. ಲಕ್ಷಕ್ಕೆ ಹತ್ತಿರ ಎನ್ನುವಷ್ಟು ಹಾಡುಗಳನ್ನು ಹಲವಾರು ಭಾಷೆಗಳಲ್ಲಿ ಹಾಡಿರುವ ಅಪ್ರತಿಮ ಹಿನ್ನೆಲೆ ಗಾಯಕ ಬಾಲಸುಬ್ರಹ್ಮಣ್ಯಂ ಅವರನ್ನು ಎಲ್ಲ ಭಾಷಿಕರೂ ಗೌರವಿಸುತ್ತಿದ್ದರು. ರಾಜ್ಯ, ಭಾಷೆಯ ಗಡಿಗಳನ್ನು ಮೀರಿ ಪದ್ಮಭೂಷಣ ಡಾ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರು ಸಕಲರ ಪ್ರೀತಿ ಪಾತ್ರರಾದವರು.

ಗಾಯಕ ಎಸ್‌ಪಿಬಿ ಅವರು 'ಅಜಾತ ಶತ್ರು' ಎನಿಸಿಕೊಂಡವರು ಎಂಬುದು ಎಲ್ಲರಿಗೂ ಗೊತ್ತು. ಅಂತಹ ಎಸ್‌ಪಿಬಿ ಅವರನ್ನು ಕೋವಿಡ್ ಅವರನ್ನು ಅಕಾಲಿಕವಾಗಿ ಬಲಿ ಪಡೆಯಿತು. ಅಭಿಮಾನಿಗಳು ಸೂಕ್ತ ವಿದಾಯವನ್ನು ಸಹ ಡಾ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ನೀಡಲಾಗಲಿಲ್ಲ. ಅದೇ ಕಾರಣಕ್ಕೆ ಇತ್ತೀಚೆಗೆ ತೆಲಂಗಾಣ ಸರ್ಕಾರ ಬಾಲಸುಬ್ರಹ್ಮಣ್ಯಂ ಅವರ ಪ್ರತಿಮೆಯೊಂದನ್ನು ಸ್ಥಾಪಿಸಿ ಗೌರವಿಸಿತು. ಆದರೆ ಅದಕ್ಕೂ ಕೆಲವರು ವಿರೋಧ ವ್ಯಕ್ತಪಡಿಸಿದ್ದು, ಪ್ರತಿಭಟನೆ ನಡೆಸಿದ್ದಾರೆ. ಈ ದುರಂತ ಘಟನೆ ಇದೀಗ ವೈರಲ್ ಆಗಿದೆ.

ರವೀಂದ್ರ ಭಾರತಿ ಎದುರು ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರ ಪ್ರತಿಮೆಗೆ ವಿರೋಧ!

ತೆಲಂಗಾಣ ಸರ್ಕಾರವು ಹೈದರಾಬಾದ್‌ನ ಜನಪ್ರಿಯ ಸಾಂಸ್ಕೃತಿಕ ಕೇಂದ್ರವಾಗಿರುವ ರವೀಂದ್ರ ಭಾರತಿ ಎದುರು ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರ ಪ್ರತಿಮೆ ಸ್ಥಾಪಿಸಿ ಪೂಜೆಗೆ ಮುಂದಾಗಿದೆ. ಆದರೆ ಅದನ್ನು ವಿರೋಧಿಸಿ ಕೆಲವರು ಅದೇ ಪ್ರತಿಮೆಯ ಎದುರು ಪ್ರತಿಭಟನೆ ಮಾಡಿದ್ದಾರೆ. ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದ ಎಸ್‌ಪಿಬಿ ಅವರ ಹತ್ತಿರದ ಸಂಬಂಧಿ ಮೇಲೆ ಸಹ ಪ್ರತಿಭಟನಾಕಾರರು ಏರು ಧ್ವನಿಯಲ್ಲಿ ಜಗಳ ಮಾಡಿದ್ದಾರೆ. ಆ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ತಮ್ಮನ್ನು ತಾವು ಸಾಮಾಜಿಕ ಕಾರ್ಯಕರ್ತ ಎಂದು ಹೇಳಿಕೊಂಡಿರುವ ಪೃಥ್ವಿರಾಜ್ ಯಾದವ್ (Prithviraj Yadav) ಎಂಬುವರು, ರವೀಂದ್ರ ಭಾರತಿ ಎದುರು ಎಸ್‌ಪಿ ಬಾಲಸುಬ್ರಹ್ಮಣ್ಯಂ ಪ್ರತಿಮೆ ಸ್ಥಾಪಿಸಲು ವಿರೋಧಿಸಿದ್ದಾರೆ. ಬಾಲಸುಬ್ರಹ್ಮಣ್ಯಂ ಅವರು ಆಂಧ್ರ ಪ್ರದೇಶ ರಾಜ್ಯಕ್ಕೆ ಸೇರಿದ ಕಲಾವಿದ ಅವರ ಪ್ರತಿಮೆಯನ್ನು ಹೈದರಾಬಾದ್‌ನ ಪ್ರಮುಖ ಕಲಾ ಕೇಂದ್ರದ ಮುಂದೆ ಸ್ಥಾಪಿಸುವುದು ಅನಾವಶ್ಯಕ. ತೆಲಂಗಾಣದ ಕಲಾವಿದರಾದ ಗದರ್, ಅಂದೆ ಶ್ರೀ ಅವರುಗಳ ಪ್ರತಿಮೆಗಳನ್ನು ಸ್ಥಾಪಿಸಿ ಎಂದು ಅವರು ಒತ್ತಾಯಿಸಿದ್ದಾರೆ.

ಪೃಥ್ವಿರಾಜ್ ಯಾದವ್ ಕಿರಿಕ್!?

ಬಾಲಸುಬ್ರಹ್ಮಣ್ಯಂ ಅವರ ಹತ್ತಿರದ ಸಂಬಂಧಿ, ಖ್ಯಾತ ನಟ ಶುಭಲೇಖ ಸುಧಾಕರ್ ಅವರು ಈ ವೇಳೆ ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ಮಾಡಿದರು. ಬಾಲಸುಬ್ರಹ್ಮಣ್ಯಂ ಅವರು ತೆಲುಗು ಭಾಷೆಗೆ, ಕಲೆಗೆ ನೀಡಿರುವ ಕೊಡುಗೆಯನ್ನು ವಿವರಿಸುವ ಯತ್ನ ಮಾಡಿದರು. ಆಗ ಪೃಥ್ವಿರಾಜ್ ಯಾದವ್, 'ನನಗೆ ಬಾಲಸುಬ್ರಹ್ಮಣ್ಯಂ ಯಾರೆಂಬುದು ಗೊತ್ತಿಲ್ಲ' ಎಂದು ವಿತಂಡ ವಾದ ಮಾಡಿದರು. ಕೊನೆಗೆ ಸುಧಾಕರ್ ಅವರು ಅಲ್ಲಿಂದ ಬೇಸರದಿಂದ ತೆರಳಿದರು.

ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಬಹಳಷ್ಟು ಜನರು ಸಾಮಾಜಿಕ ಕಾರ್ಯಕರ್ತ ಪೃಥ್ವಿರಾಜ್ ಅವರ ಈ ಕೆಟ್ಟ ವರ್ತನೆಯನ್ನು ವಿರೋಧಿಸಿದ್ದಾರೆ. 'ಗಾಯಕ ಡಾ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರು ತೆಲುಗು ರಾಜ್ಯಗಳ ಹೆಮ್ಮೆಯ ಪುತ್ರ. ಅವರು ತೆಲುಗು ಭಾಷೆಗೆ, ತೆಲುಗು ಕಲಾ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರವಾದದ್ದು. ಅವರು ಗೊತ್ತಿಲ್ಲ ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ಹೇಳಿರುವುದು ಅವರ ಅಹಂಕಾರವನ್ನು ಅಥವಾ ಅಜ್ಞಾನವನ್ನು ಪ್ರದರ್ಶಿಸಿದೆ' ಎಂದು ಬಹಳಷ್ಟು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಖಂಡ 2 ಪ್ರೀಮಿಯರ್ ಶೋಗಳು ರದ್ದು, ನಿರ್ಮಾಪಕರಿಗೆ ಸಂಕಷ್ಟ.. ಬಾಲಯ್ಯ ಸಿನಿಮಾ ರಿಲೀಸ್ ಕಥೆಯೇನು?
ಮೋಹನ್ ಬಾಬು ಮಾಡಿದ ಸಣ್ಣ ತಪ್ಪಿನಿಂದ ಸೌಂದರ್ಯ ಪ್ರಾಣ ಕಳೆದುಕೊಂಡ್ರಾ? ನಿರ್ದೇಶಕರು ಹೇಳಿದ ಸತ್ಯವೇನು?