ನಾನು ಯಾವುದೇ ತಪ್ಪು ಮಾಡಿಲ್ಲ; ನಾಗ ಚೈತನ್ಯ ಜೊತೆ ಡೇಟಿಂಗ್ ವದಂತಿಗೆ ಕೊನೆಗೂ ಮೌನ ಮುರಿದ ನಟಿ ಶೋಭಿತಾ

Published : May 09, 2023, 10:26 AM IST
ನಾನು ಯಾವುದೇ ತಪ್ಪು ಮಾಡಿಲ್ಲ; ನಾಗ ಚೈತನ್ಯ ಜೊತೆ ಡೇಟಿಂಗ್ ವದಂತಿಗೆ ಕೊನೆಗೂ ಮೌನ ಮುರಿದ ನಟಿ ಶೋಭಿತಾ

ಸಾರಾಂಶ

ನಾಗ ಚೈತನ್ಯ ಜೊತೆ ಡೇಟಿಂಗ್ ವದಂತಿಗೆ ಕೊನೆಗೂ ನಟಿ ಶೋಭಿತಾ  ಮೌನ ಮುರಿದಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದ್ದಾರೆ. 

ತೆಲುಗು ಸ್ಟಾರ್ ನಾಗ ಚೈತನ್ಯ ಮತ್ತು ಸಮಂತಾ ರುತ್ ಪ್ರಭು ಬೇರೆಯಾಗಿ ವರ್ಷದ ಮೇಲಾದರೂ ಇಬ್ಬರ ವಿಚ್ಛೇದನ ಸುದ್ದಿ ಈಗಲೂ ಸದ್ದು ಮಾಡುತ್ತಿದೆ. ಇಬ್ಬರೂ ತಮ್ಮ ಜೀವನದಲ್ಲಿ ಮುಂದೆ ಸಾಗಿದ್ದಾರೆ. ಆದರೂ ಕೆಲವು ವಿಚಾರಗಳು ಅವರನ್ನು ಬಿಟ್ಟುಬಿಡದೆ ಹಿಂಬಾಲಿಸುತ್ತಿವೆ. ಸಮಂತಾ ಅವರಿಂದ ನಾಗ ಚೈತನ್ಯ ದೂರ ಆದ ಬಳಿಕ ಮತ್ತೋರ್ವ ನಟಿ ಶಭಿತಾ ಧೂಳಿಪಾಲ ಜೊತೆ ಡೇಟಿಂಗ್‌ನಲ್ಲಿದ್ದಾರೆ ಎನ್ನುವ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ನಾಗ ಚೈತನ್ಯ ಮತ್ತು ಶೋಭಿತಾ ಇಬ್ಬರೂ ಪ್ರೀತಿಸುತ್ತಿದ್ದಾರೆ. ಹಾಗಾಗಿಯೇ ಸಮಂತಾ ಅವರಿಂದ ದೂರ ಆಗಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಈ ಬಗ್ಗೆ ಶೋಭಿತಾ ಕೊನೆಗೂ ಮೌನ ಮುರಿದಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ನಟಿ ಶೋಭಿತಾ ಡೇಟಿಂಗ್ ವದಂತಿಗೆ ಪ್ರತಿಕ್ರಿಯೆ ನೀಡಿದ್ದಾರೆ ಎನ್ನಲಾಗಿದೆ. 

ಫಿಲ್ಮಿಬೀಟ್ ವರದಿ ಪ್ರಕಾರ ನಟಿ ಶೋಭಿತಾ ಸಿನಿಮಾಗಳಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ. ನಾನು ಕ್ಲಾಸಿಕಲ್ ಡಾನ್ಸರ್. ನಾನು ಡಾನ್ಸ್ ತುಂಬಾ ಇಷ್ಟಪಡುತ್ತೇನೆ. ಮಣಿರತ್ನಂ ಅವರ ಚಿತ್ರದಲ್ಲಿ ಎ ಆರ್ ರೆಹಮಾನ್ ಅವರ ಹಾಡಿಗೆ ನೃತ್ಯಮಾಡಿರುವುದು ನನಗೆ ದೊಡ್ಡ ವಿಷಯವಾಗಿದೆ. ನಾನು ಈಗ ಕೆಲಸದ ಮೇಲೆ ಕೇಂದ್ರೀಕರಿಸಿದ್ದೇನೆ. ಅರ್ಥವಿಲ್ಲದ ಮಾತನಾಡುವ ಜನರಿಗೆ ನಾನು ಉತ್ತರಿಸುವ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ನಾನು ಯಾವುದೇ ತಪ್ಪು ಮಾಡದಿರುವಾಗ ನಾನ್ಯಾಕೆ ಪ್ರತಿಕ್ರಿಯೆ ನೀಡಬೇಕು, ಸ್ಪಷ್ಟನೆ ಕೊಡಬೇಕು' ಎಂದು ಹೇಳಿದ್ದಾರೆ. 

ಆಕೆ ಎಲ್ಲಾ ಸಂತೋಷಕ್ಕೂ ಅರ್ಹ; ಮಾಜಿ ಪತ್ನಿ ಸಮಂತಾ ಬಗ್ಗೆ ನಾಗ ಚೈತನ್ಯ ಮಾತು

'ಜನರು ಅರ್ಧಂಬರ್ಧ ಜ್ಞಾನದಿಂದ ಬರೆಯುವ ವಿಷಯಗಳಿಗೆ ಉತ್ತರಿಸುವ ಅಥವಾ ಸ್ಪಷ್ಟಪಡಿಸುವ ಬದಲು ಜೀವನದ ಮೇಲೆ ಕೇಂದ್ರೀಕರಿಸಬೇಕು, ಸುಧಾರಿಸಬೇಕು, ಶಾಂತವಾಗಿರಬೇಕು ಮತ್ತು ಒಳ್ಳೆಯ ವ್ಯಕ್ತಿಯಾಗಲು ಪ್ರಯತ್ನಿಸಬೇಕು' ಎಂದು ಶೋಭಿತಾ ಹೇಳಿದ್ದಾರೆ ಎಂದು ವರದಿಯಾಗಿದೆ. 

ನಾಗ ಚೈತನ್ಯ ಮತ್ತು ಶೋಭಿತಾ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇಬ್ಬರೂ ಪ್ರವಾಸಕ್ಕೆ ತೆರಳಿರುವ ಫೋಟೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಇಬ್ಬರೂ ಒಟ್ಟಿಗೆ ಸಮಯ ಕಳೆಯುತ್ತಿದ್ದಾರೆ, ಒಬ್ಬರಿಗೊಬ್ಬರು ಅರ್ಥಮಾಡಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಕಳೆದ ಕೆಲವು ತಿಂಗಳಿಂದ ವೈರಲ್ ಆಗಿತ್ತು. ಇದೀಗ ಶೋಭಿತಾ ಪ್ರತಿಕ್ರಿಯೆ ನೀಡಿರುವ ಮೂಲಕ ವದಂತಿಗೆ ಬ್ರೇಕ್ ಹಾಕುವ ಪ್ರಯತ್ನ ಮಾಡಿದ್ದಾರೆ.

ಗರ್ಲ್‌ಫ್ರೆಂಡ್ ಜೊತೆ ಲಂಡನ್ ಹೋಟೆಲ್‌ನಲ್ಲಿ ತಗಲಾಕೊಂಡಿದ್ದ ನಾಗಚೈತನ್ಯ: ಫೋಟೋ ಡಿಲೀಟ್

ಶೋಭಿತಾ ಸದ್ಯ ಪೊನ್ನಿಯಿನ್ ಸೆಲ್ವನ್-2 ಸಕ್ಸಸ್‌ನ ಖುಷಿಯಲ್ಲಿದ್ದಾರೆ. ಇನ್ನು ಕೆಲವು ಸಿನಿಮಾಗಳು ಶೋಭಿತಾ ಕೈಯಲ್ಲಿವೆ. ಇನ್ನೂ ನಾಗ ಚೈತನ್ಯ ಸದ್ಯ ಕಸ್ಟಡಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಎದುರು ನೋಡುತ್ತಿದ್ದಾರೆ.   

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?