ಯಾವಾಗ್ಲೂ ಸುಳ್ಳು ಹೇಳೋದೇ ಆಯ್ತು: ಮಾಂಸಾಹಾರ ಮುಟ್ಟಲ್ಲ ಎಂದು ತಿಂದು ತಗಲಾಕೊಂಡ ರಶ್ಮಿಕಾಗೆ ನೆಟ್ಟಿಗರ ತರಾಟೆ

By Suvarna News  |  First Published May 9, 2023, 9:58 AM IST

ಮಾಂಸಾಹಾರ ಮುಟ್ಟಲ್ಲ ಎಂದಿದ್ದ ರಶ್ಮಿಕಾ ಈಗ ತಿಂದು ತಗಲಾಕೊಂಡಿದ್ದಾರೆ. ಯಾವಾಗ್ಲೂ ಸುಳ್ಳು ಹೇಳ್ತಾರೆ ಎಂದು ನೆಟ್ಟಿಗರ ತರಾಟೆ ತೆಗೆದುಕೊಂಡಿದ್ದಾರೆ. 


ಬಹುಭಾಷ ನಟಿ ರಶ್ಮಿಕಾ ಮಂದಣ್ಣ ಒಂದಲ್ಲೊಂದು ಕಾರಣಕ್ಕೆ ಟ್ರೋಲ್ ಆಗುತ್ತಲೇ ಇರುತ್ತಾರೆ. ರಶ್ಮಿಕಾಗೆ ದೊಡ್ಡ ಅಭಿಮಾನಿ ಬಳಗವಿದ್ದರೂ ಟ್ರೋಲ್ ಮಾಡುವವರ ಸಂಖ್ಯೆ ಕೂಡ ಜಾಸ್ತಿ ಇದೆ. ಟ್ರೋಲ್, ತರಾಟೆ ಎಲ್ಲಾ ಸೆಲೆಬ್ರಿಟಿಗಳಿಗೆ ಸಾಮಾನ್ಯವಾಗಿದೆ. ಅದರೆ ಕೆಲವೊಮ್ಮೆ ಅತಿಯಾಗಿ ಸೆಲೆಬ್ರಿಟಿಗಳು ತಲೆಕೆಡಿಸಿಕೊಂಡಿದ್ದು ಇದೆ. ಸಿಕ್ಕಾಪಟ್ಟೆ ಟ್ರೋಲ್ ಆದ ನಟಿಯರಲ್ಲಿ ರಶ್ಮಿಕಾ ಕೂಡ ಒಬ್ಬರು. ಎಷ್ಟೇ ಟ್ರೋಲ್ ಆದರೂ ತನ್ನ ಖ್ಯಾತಿ ಕುಗ್ಗಿಸಿಕೊಂಡಿಲ್ಲ. ಬಾಲಿವುಡ್‌ನಲ್ಲೂ ಸಿಕ್ಕಾಪಟ್ಟೆ ಫೇಮಸ್ ರಶ್ಮಿಕಾ. ಹಲವು ಪ್ರತಿಷ್ಠಿತ ಬ್ರ್ಯಾಂಡ್​ಗಳಿಗೆ ರಶ್ಮಿಕಾ ರಾಯಭಾರಿ ಆಗಿದ್ದಾರೆ. ಇದೀಗ ರಶ್ಮಿಕಾ ಮಾಂಸಾಹಾರ ಬಿಟ್ಬಿದ್ದೇನೆಂದು ಮತ್ತೆ ನಾನ್ ವೆಜ್ ತಿನ್ನುವ ಮೂಲಕ ಟ್ರೋಲಿಗರ ಬಾಯಿಗೆ ಆಹಾರವಾಗಿದ್ದಾರೆ. 

ಚಿಕನ್​ ಬರ್ಗರ್​ ಜಾಹೀರಾತಿನಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ನಾನ್​-ವೆಜ್​ ತಿನ್ನಲ್ಲ, ಬಿಟ್ಟಿದ್ದೀನಿ ಎಂದು ಹೇಳಿಕೊಂಡಿದ್ದರು. ಇದೀಗ ಜಾಹೀರಾತಿನಲ್ಲಿ ನಾನ್ ವೆಜ್ ತಿನ್ನುವುದನ್ನು ನೋಡಿ ರಶ್ಮಿಕಾ ಅವರನ್ನು ತರಾಟೆ ತೆಗೆದುಕೊಂಡಿದ್ದಾರೆ. ರಶ್ಮಿಕಾ ಅವರ ಜಾಹೀರಾತು ಅಭಿಮಾನಿಗಳಿಗೆ ಇಷ್ಟಲಾಗಿಲ್ಲ. ರಶ್ಮಿಕಾ ಅವರ ಹಳೆಯ ವಿಡಿಯೋ ವೈರಲ್ ಮಾಡಿ ನೆಟ್ಟಿಗರು ಅಸಮಾಧಾನ ಹೊರಹಾಕುತ್ತಿದ್ದಾರೆ. 'ಮೊದಲು ಅಭಿಮಾನಿಗಳನ್ನು ಮೂರ್ಖರನ್ನಾಗಿ ಮಾಡುವುದನ್ನು ಬಿಡಿ' ಎಂದು ಹೇಲುತ್ತಿದ್ದಾರೆ. ರಶ್ಮಿಕಾ ಜಾಹೀರಾತಿನಲ್ಲಿ ಚಿಕನ್ ಬರ್ಗನ್ ತಿನ್ನುವುದೀಗ ನೆಟ್ಟಿಗರನ್ನು ಗೊಂದಲಕ್ಕೀಡುಮಾಡಿದೆ. 'ಅವತ್ತು ಹಾಗೆ ಹೇಳಿ ಈಗ ಬರ್ಗರ್ ತಿಂದು ಸುಳ್ಳು ಹೇಳುತ್ತಿದ್ದೀರಾ' ಎಂದು ಕೇಳುತ್ತಿದ್ದಾರೆ. ಮತ್ತೋರ್ವ ಕಾಮೆಂಟ್ ಮಾಡಿ 'ನಾವು ಕನ್ನಡಿಗರು ಅವಳನ್ನು ಏಕೆ ಇಷ್ಟಪಡುವುದಿಲ್ಲ ಎಂದು ಈಗ ಅರ್ಥ ಆಯ್ತಾ. ಅವಳು ತನ್ನ ಮಾತನ್ನು ಅನೇಕ ಬಾರಿ ಬದಲಾಯಿಸುತ್ತಾಳೆ' ಎಂದು ಹೇಳಿದ್ದಾರೆ. 

ತನ್ನ ಫೇವರೆಟ್ ಕ್ರಿಕೆಟರ್ ಹಾಗೂ IPL ತಂಡ ಯಾವುದೆಂದು ಬಹಿರಂಗ ಪಡಿಸಿದ ರಶ್ಮಿಕಾ ಮಂದಣ್ಣ

Tap to resize

Latest Videos

ಈ ಬಗ್ಗೆ ಗರಿಮಾ ಎನ್ನುವ ಪ್ರೋಫೈಲ್‌ನಲ್ಲಿ ರಶ್ಮಿಕಾ ಅವರಿಗೆ ವಿಡಿಯೋ ಮೂಲಕ ಪ್ರಶ್ನೆ ಮಾಡಿದ್ದಾರೆ. ‘ರಶ್ಮಿಕಾ ಮಂದಣ್ಣ ಅವರು ಜಾಹೀರಾತಿನಲ್ಲಿ ನಾನ್​-ವೆಜ್​ ತಿನ್ನುತ್ತಿದ್ದಾರೆ. ಆದರೆ ಈ ಮೊದಲು ತಮ್ಮನ್ನು ತಾವು ಸಸ್ಯಾಹಾರಿ ಎಂದು ಹೇಳಿಕೊಂಡಿದ್ದರು. ಜನರಿಗೆ ಇದು ಇಷ್ಟ ಆಗಿಲ್ಲ. ನಮ್ಮನ್ನು ಮೂರ್ಖರನ್ನಾಗಿಸೋದು ನಿಲ್ಲಿಸಿ. ಜನರ ಪ್ರತಿಕ್ರಿಯೆ​ ನೋಡಿದ ಜಾಹೀರಾತಿನ ಕಾಮೆಂಟ್​ ಆಯ್ಕೆಯನ್ನೇ ನಿಷ್ಕ್ರಿಯಗೊಳಿಸಲಾಗಿದೆ’ ಎಂದು ವಿಡಿಯೋ ಶೇರ್ ಮಾಡಿದ್ದಾರೆ. 

ಕೆಲವರು ರಶ್ಮಿಕಾ ಪರ ಮಾತನಾಡುತ್ತಿದ್ದಾರೆ. ಜಾಹೀರಾತಿನಲ್ಲಿ ಕಾಣಿಸಿಕೊಂಡ ಮಾತ್ರಕ್ಕೆ ಆ ವಸ್ತುಗಳನ್ನು ಬಳಸುವುದಿಲ್ಲ. ಕೇವರ ಪ್ರಚಾರ ರಾಯಭಾರಿಗಳಾಗಿರುತ್ತಾರೆ ಅಷ್ಟೆ ಎಂದು ಹೇಳುತ್ತಿದ್ದಾರೆ. ರಶ್ಮಿಕಾ ಪಾಸಿಟಿವ್ ಅಥವಾ ನೆಗೆಟಿವ್ ಸದಾ ಸುದ್ದಿಯಲ್ಲಿರುತ್ತಾರೆ. ಟ್ರೋಲ್ ಗಳ ಜೊತೆಗೆ ಸಿನಿಮಾ ಕೂಡ ಕೈತುಂಬಾ ಇದೆ. ಸೌತ್ ಮತ್ತು ಬಾಲಿವುಡ್ ಎರಡು ಕಡೆ ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ.

ರಶ್ಮಿಕಾ ಭುಜದ ಮೇಲೆ ತಲೆ ಇಟ್ಟಿರುವ ವ್ಯಕ್ತಿ ಯಾರು? 'ನಾನು ಕೆಲವು ದಿನ ಸಿಗಲ್ಲ' ಎಂದಿದ್ದೇಕೆ ಕಿರಿಕ್ ಸುಂದರಿ?

ಸದ್ಯ ರಶ್ಮಿಕಾ ತೆಲುಗಿನಲ್ಲಿ ಪುಷ್ಪ-2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ರೈನ್‌ಬೋ ಸಿನಿಮಾ ಕೂಡ ಅವರ ಕೈಯಲ್ಲಿದೆ. ಇನ್ನೂ ಹಿಂದಿಯಲ್ಲಿ ಅನಿಮಲ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಮತ್ತೊಂದು ಸಿನಿಮಾಗೆ ಸಹಿ ಮಾಡಿದ್ದಾರೆ ಎನ್ನುವ ಸುದ್ದಿ ಕೂಡ ಇದೆ.  ಈ ಎಲ್ಲಾ ಸಿನಿಮಾಗಳ ನಡುವೆಯೂ ರಶ್ಮಿಕಾ ನಾನ್ ವೆಬ್ ವಿವಾದಕ್ಕೆ ಪ್ರತಿಕ್ರಿಯೆ ನೀಡುತ್ತಾರಾ ಕಾದುನೋಡಬೇಕಿದೆ.   

click me!