ನಟ ಧನುಷ್​ ಜತೆ ನನ್​ ಗಂಡ ಒಂದೇ ರೂಮ್​ನಲ್ಲಿ... ಎಂದಿದ್ದ ಗಾಯಕಿ ಸುಚಿತ್ರಾ ಈಗ ಏನ್​ ಹೇಳ್ತಿದ್ದಾರೆ?

By Suchethana D  |  First Published Aug 15, 2024, 6:30 PM IST

ಸ್ಟ್ಯಾಂಡ್​ ಅಪ್​ ಕಮೀಡಿಯನ್​ ಕಾರ್ತಿಕ್​ ಕುಮಾರ್​ ಸಲಿಂಗಕಾಮಿ, ಅವರಿಗೆ ನಟ ಧನುಷ್​ ಜೊತೆ ಸಂಬಂಧವಿದೆ ಎಂದು ಆರೋಪಿಸಿದ್ದ ಗಾಯಕಿ ಸುಚಿತ್ರಾ ಇದೀಗ ಸಾರ್ವಜನಿಕವಾಗಿ ಕ್ಷಮೆ ಕೋರಿ ಹೇಳಿದ್ದೇನು? 
 


ಸ್ಟ್ಯಾಂಡ್​ ಅಪ್​ ಕಮೀಡಿಯನ್​ ಕಾರ್ತಿಕ್​ ಕುಮಾರ್​ ಪತ್ನಿ ಗಾಯಕಿ ಸುಚಿತ್ರಾ ಅವರ ಹೆಸರು ಕೆಲ ವರ್ಷಗಳ ಹಿಂದೆ ಭರ್ಜರಿ ಸದ್ದು ಮಾಡುತ್ತಲೇ ಇದೆ.  ಇದಕ್ಕೆ ಕಾರಣ, ಸುಚೀ ಲೀಕ್ಸ್ (suchi leaks) ಹೆಸರಿನಲ್ಲಿ,  ಕೆಲ ವರ್ಷಗಳ ಹಿಂದೆ ನಟ ಧನುಷ್, ಸಂಗೀತ ನಿರ್ದೇಶಕ ಅನಿರುದ್ಧ್​ ರವಿಚಂದರ್, ಆಂಡ್ರಿಯಾ, ಸಂಚಿತಾ ಶೆಟ್ಟಿ ಸೇರಿದಂತೆ ಹಲವು ತಾರೆಗಳ ಖಾಸಗಿ ವಿಡಿಯೋ, ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಇದೇ ಸಂದರ್ಭದಲ್ಲಿ ಕಾರ್ತಿಕ್ ಕುಮಾರ್ ಮತ್ತು ಧನುಷ್ ಅವರ ವೈಯಕ್ತಿಕ ಫೋಟೋಗಳನ್ನು ಸುಚಿಲೀಕ್ಸ್ ಹೆಸರಿನಲ್ಲಿ ಬಿಡುಗಡೆಯಾಗಿತ್ತು. ಇದೀಗ ಮತ್ತೆ ಅದೇ ವಿಷಯವಾಗಿ ಸುಚಿತ್ರಾ ಮಾತನಾಡಿದ್ದು ಹಲ್​ಚಲ್​ ಸೃಷ್ಟಿಸಿದ್ದರು.  ಅದಾದ ಬಳಿಕ, ಅವರು ತಮ್ಮ ಮಾಜಿ ಪತಿ ಕಾರ್ತಿಕ್​ ಕುಮಾರ್​ ಒಬ್ಬ ಸಲಿಂಗಕಾಮಿ ಎಂದಿದ್ದರು. 'ಯಾರಿ ನೀ ಮೋಹಿನಿ' ಚಿತ್ರದ ನಂತರ ಧನುಷ್ ಹಾಗೂ ತಮ್ಮ ಮಾಜಿ ಪತಿ ಕಾರ್ತಿಕ್ ಕುಮಾರ್ ಜೊತೆ ಆತ್ಮೀಯ ಸ್ನೇಹಿತರಾಗಿದ್ದರು. ಇವರಿಬ್ಬರೂ ಒಂದೇ ರೂಮಿನಲ್ಲಿ ಏನು ಮಾಡುತ್ತಿದ್ದರು ಎನ್ನುವುದನ್ನು ಪ್ರಶ್ನಿಸಬೇಕಿದೆ. ಇಬ್ಬರೂ ಸಿನಿಮಾ ಬಿಟ್ಟು ಬೇರೆ ಏನೇನೊ ಮಾಡುತ್ತಿದ್ದರು ಎಂದು ಹೇಳಿದ್ದರು. ಈ ಹೇಳಿಕೆ ನೀಡಿ ಹಲವು ತಿಂಗಳು ಕಳೆದಿದ್ದು, ಇದೀಗ ನಟಿ ತಮ್ಮ ಹೇಳಿಕೆಗೆ ಕ್ಷಮೆ ಕೋರಿದ್ದಾರೆ!  ಅಷ್ಟಕ್ಕೂ ಅವರು ಕ್ಷಮೆ ಏನು ಸುಮ್ಮನೇ ಕೋರಲಿಲ್ಲ. ಕಾರ್ತಿಕ್​ ಅವರು ತಮ್ಮ ಮಾಜಿ ಪತ್ನಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ ಹಿನ್ನೆಲೆಯಲ್ಲಿ ಈಗ ಕ್ಷಮೆ ಕೋರಿದ್ದಾರೆ. 

ಅವರ ವೃತ್ತಿ ಜೀವನ ಹಾಳು ಮಾಡುವ ಉದ್ದೇಶ ನನ್ನದಲ್ಲ. ದಯವಿಟ್ಟು ನನ್ನನ್ನು ಕ್ಷಮಿಸಿ. ಕಾರ್ತಿಕ್​ ನನ್ನ ವಿರುದ್ಧ ದೂರು ಕೊಟ್ಟಿದ್ದಾರೆ. ಇದರಿಂದ ನನಗೆ ಬರುತ್ತಿರುವ ಕರೆಗಳಿಗೆ ಉತ್ತರಿಸುವುದೇ ಕಷ್ಟವಾಗಿದೆ. ತುಂಬಾ ತೊಂದರೆಯಾಗುತ್ತಿದೆ ಎಂದಿರುವ ಗಾಯಕಿ, ನಾನು ಆ ರೀತಿ ಮಾತನಾಡಿದ್ದು ತಪ್ಪು. ಬಹಿರಂಗವಾಗಿ ಕ್ಷಮೆ ಕೋರುತ್ತೇನೆ ಎಂದಿದ್ದಾರೆ. ಹೀಗೆ ಹೇಳಿ ವಿಡಿಯೋ ಅಪ್​ಲೋಡ್​  ಮಾಡಿದ್ದ ಸುಚಿತ್ರಾ ವಿಚಿತ್ರ ಎಂಬಂತೆ ಅದನ್ನು ಕೆಲವೇ ಗಂಟೆಗಳಲ್ಲಿ ಡಿಲೀಟ್​ ಮಾಡಿದ್ದಾರೆ! 

Tap to resize

Latest Videos

undefined

ಗರ್ಭಿಣಿ ದೀಪಿಕಾಗೆ ಇದೆಂಥ ಅಗ್ನಿಪರೀಕ್ಷೆನಪ್ಪಾ? ಯಾವ ಹೆಣ್ಣಿಗೂ ಇಂಥ ಸ್ಥಿತಿ ಬರಬಾರದು ಅಂತಿರೋ ಫ್ಯಾನ್ಸ್​

ಅಷ್ಟಕ್ಕೂ ತಮ್ಮ ಮಾಜಿ ಪತಿ ಮತ್ತು ನಟ ಧನುಷ್​ ಕುರಿತು ಸುಚಿತ್ರಾ ಭಯಾನಕ ಸ್ಟೇಟ್​ಮೆಂಟ್​  ಕೊಟ್ಟಿದ್ದರು. ಒಮ್ಮೆ ಸುಮಾರು  ಬೆಳಗಿನ  ಮೂರು ಗಂಟೆಗೆ ಕಾರ್ತಿಕ್​ ಮನೆಗೆ ಬಂದಿದ್ದರು. ಅವರ  ಕಾಲು ನಡುಗುತ್ತಿತ್ತು. ಸಿಗರೇಟ್ ಸೇದುತ್ತಿದ್ದ. ಆಗಲೇ, ಧನುಷ್ ಕಾರ್ತಿಕ್‌ಗೆ ಅಸಹ್ಯಕರ ಮೆಸೇಜ್‌ಗಳನ್ನು ಕಳುಹಿಸಿದ್ದ. ಅದರಿಂದ ಅವರು ಸಲಿಂಗಕಾಮಿ ಎನ್ನುವುದು ತಿಳಿಯುತ್ತದೆ ಎಂದಿದ್ದಾರೆ. ಕಾರ್ತಿಕ್​  100% ಸಲಿಂಗಕಾಮಿ. ಯಾರಿಗೂ ತಿಳಿಯದಂತೆ ಸಲಿಂಗಕಾಮಿಯಾಗಿ ವಿಭಿನ್ನ ಜೀವನ ನಡೆಸುತ್ತಿದ್ದರು. ಮದುವೆಯಾದ 10 ವರ್ಷಗಳ ನಂತರ ನಾನು ಅದನ್ನು ಅರಿತುಕೊಂಡೆ. ಮಕ್ಕಳಾಗಿಲ್ಲ ಎಂದು  ವೈದ್ಯರ ಬಳಿ ಹೋದಾಗ ನನಗೆ ಅರಿವಾಯಿತು. ಅವರು ಪುರುಷರೊಂದಿಗೆ ಸುತ್ತಾಡುತ್ತಿದ್ದರು, ಧನುಷ್​ ಜೊತೆ ಇರುತ್ತಿದ್ದರು ಎಂದಿದ್ದಾರೆ.

ತಮಿಳು ನಟ ಧನುಷ್ ಹಾಗೂ ರಜನಿಕಾಂತ್ ಪುತ್ರಿ ಐಶ್ವರ್ಯ ಡಿವೋರ್ಸ್ ಕೋರಿ ಕೋರ್ಟ್ ಮೆಟ್ಟಿಲೇರಿದ ಸಂದರ್ಭದಲ್ಲಿ ಈ ವಿಷಯವನ್ನು ಅವರು ಹೇಳಿದ್ದರು.  18 ವರ್ಷಗಳ ಕಾಲ ಒಟ್ಟಿಗೆ ಜೀವನ ಸಾಗಿಸಿದ ದಂಪತಿ ದೂರವಾಗಿದ್ದಾರೆ.  ಆ ಸಂದರ್ಭದಲ್ಲಿ ಮಾತನಾಡಿದ್ದ  ಗಾಯಕಿ ಸುಚಿತ್ರಾ ಅವರು ಈ ವಿಷಯ ಕೆದಕಿದ್ದರು. ಆದರೆ ಇದಕ್ಕೆ ಪ್ರತಿಕ್ರಿಯೆ ಕೊಟ್ಟಿದ್ದ ಕಾರ್ತಿಕ್​  ಕುಮಾರ್​ ಅವರು, ನನ್ನ ಮಾಜಿ ಪತ್ನಿ, ಗಾಯಕಿ ಸುಚಿತ್ರಾ  ಆರೋಪಿಸಿದಂತೆ ನಾನು ಸಲಿಂಗಕಾಮಿಯಾಗಿದ್ದರೆ, ಅದನ್ನು ಹೆಮ್ಮೆಯಿಂದ ಸ್ವೀಕರಿಸುತ್ತೇನೆ ಎಂದಿದ್ದರು. ಅದಾದ ಬಳಿಕ ಅವರು ಮಾಜಿ ಪತ್ನಿ ವಿರುದ್ಧ ದೂರು ದಾಖಲು ಮಾಡಿದ್ದರು. ಅದರ ಬೆನ್ನಲ್ಲೇ ಈ ಕ್ಷಮೆ ಕೋರಿಕೆಯಾಗಿದೆ. 
 

ಮನೆಯಲ್ಲಿ ಬಿದ್ದಿರು... ಊಂ ಆಂಟವಾ ಐಟಂ ಸಾಂಗ್​ ಮಾಡಿದ್ರೆ ಅಷ್ಟೇ.. ಸಮಂತಾಗೆ ಬೆದರಿಕೆ ಬಂದಿತ್ತಂತೆ!

click me!