ಅನಂತ್​ ಅಂಬಾನಿ- ರಾಧಿಕಾ ಮರ್ಚೆಂಟ್​ ಸ್ನೇಹದ ದೊಡ್ಡ ಸೀಕ್ರೇಟ್​ ರಿವೀಲ್​ ಮಾಡಿದ ನರ್ಸ್​

By Suchethana D  |  First Published Aug 15, 2024, 5:31 PM IST

ಅನಂತ್​ ಅಂಬಾನಿ ಮತ್ತು ರಾಧಿಕಾ ಮದುವೆಯಾಗಿ ಒಂದು ತಿಂಗಳು ಕಳೆದಿದ್ದು, ಈಗ ಇವರಿಬ್ಬರ ಸ್ನೇಹದ ಕುರಿತು ಅನಂತ್​ ಅವರನ್ನು ಬಹುವರ್ಷ ನೋಡಿಕೊಳ್ಳುತ್ತಿದ್ದ ನಾನಿ ಏನು ಹೇಳಿದ್ದಾರೆ ಕೇಳಿ...
 


ಅನಂತ್​ ಅಂಬಾನಿ- ರಾಧಿಕಾ ಮರ್ಚೆಂಟ್​ ಮದುವೆಯಾಗಿ ತಿಂಗಳು ಕಳೆದಿದೆ. ಅವರಿಬ್ಬರೂ ಹನಿಮೂನ್​ ಮೂಡ್​ನಲ್ಲಿ ಇದ್ದರೂ ಅವರ ಮದುವೆಗೆ ಹಾಗೂ ಹನಿಮೂನ್​ಗೆ ಸಂಬಂಧಿಸಿದಂತೆ ಕೆಲವು ಅಪ್​ಡೇಟ್ಸ್​ಗಳು, ವಿಡಿಯೋ, ಫೋಟೋಗಳು ಸೋಷಿಯಲ್​  ಮೀಡಿಯಾದಲ್ಲಿ ಹರಿದಾಡುತ್ತಲೇ ಇರುತ್ತವೆ. ಇದೀಗ ಅನಂತ್​ ಅಂಬಾನಿ ಅವರ ನಾನಿ  ನರ್ಸ್​ ಆಗಿರೋ ಲಲಿತಾ ಡಿ'ಸಿಲ್ವಾ ಅವರು ಇವರಿಬ್ಬರ ಸ್ನೇಹದ ಗುಟ್ಟೊಂದನ್ನು ರಟ್ಟು ಮಾಡಿದ್ದಾರೆ. ಅಷ್ಟಕ್ಕೂ, ನೀತಾ ಮತ್ತು ಮುಕೇಶ್​ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಅವರಿಗೆ ದಾದಿಯಾಗಿ ಕೆಲಸ ಮಾಡಿದ ಮತ್ತು ಇತ್ತೀಚೆಗೆ ಅವರ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದರು ನರ್ಸ್ ಲಲಿತಾ ಡಿ ಸಿಲ್ವಾ.  ಅವರು ಅಂಬಾನಿ ಕುಟುಂಬಕ್ಕಾಗಿ 11 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ.  ಅನಂತ್ ಮದುವೆಗೆ ಬಂದಿದ್ದ ಇವರು, ಅನಂತ್​, ನಾನು ನೋಡಿಕೊಳ್ಳಲು ಪ್ರಾರಂಭಿಸಿದ ಮೊದಲ ಮಗು. ಅವನ ಮದುವೆಗೆ ಹಾಜರಾಗುವುದು ನಂಬಲಾಗದ ಭಾವನೆ, ನನಗೆ ಹೇಗೆ ಅನಿಸಿತು ಎಂದು ಹೇಳಲು ಸಾಧ್ಯವಿಲ್ಲ. ಅವನು ಒಳ್ಳೆಯ ಮಗು, ಅವನು ಈಗಲೂ ಹಾಗೆಯೇ ಇದ್ದಾನೆ ಎಂದು ಹೇಳಿದ್ದರು.  

ಲಲಿತಾ ಡಿ'ಸಿಲ್ವಾ ಅವರು, ಕರೀನಾ ಕಪೂರ್ ಖಾನ್ ಅವರ ಮಗ ತೈಮೂರ್‌ಗೆ ದಾದಿಯಾಗಿಯೂ ಇವರು ಕೆಲಸ ಮಾಡಿದ್ದಾರೆ.  ಪ್ರಸ್ತುತ ನಟ ರಾಮ್ ಚರಣ್ ಮತ್ತು ಅವರ ಪತ್ನಿ ಉಪಾಸನಾ ಅವರ ಮಗಳು ಕ್ಲಿನ್ ಕಾರಾ ಅವರನ್ನು ನೋಡಿಕೊಳ್ಳುತ್ತಿದ್ದಾರೆ. ಆದರೆ ಅಂಬಾನಿ ಕುಟುಂಬ ತಮ್ಮ ಟಚ್​ನಲ್ಲಿ ಇಂದಿಗೂ ಇದೆ ಎಂದಿದ್ದಾರೆ ಲಲಿತಾ. ಅವರು ಇಲ್ಲಿಯವರೆಗೆ ನನ್ನೊಂದಿಗೆ ತುಂಬಾ ಸಂಪರ್ಕದಲ್ಲಿದ್ದಾರೆ. ಇದು ದೇವರ ಆಶೀರ್ವಾದ. ಅನಂತ್ ಮಾತ್ರವಲ್ಲ, ನಾನು ಇಶಾ ಮತ್ತು ಆಕಾಶ್ ಅವರನ್ನೂ ನೋಡಿಕೊಂಡೆ. ನೀತಾ ಭಾಭಿ ಎಂದು ನಾನು ನೀತಾ ಅಂಬಾನಿಯನ್ನು ಕರೆಯುತ್ತಿದ್ದೆ, ಈಗ ನಾನು ಅವರನ್ನು ಮೇಡಂ ಎಂದು ಕರೆಯುತ್ತೇನೆ. ಅವರದು ಶ್ರೀಮಂತ ಕುಟುಂಬ, ಆದರೆ ಇನ್ನೂ ನನ್ನನ್ನು ಮರೆತಿಲ್ಲ ಎಂದಿದ್ದಾರೆ.

Tap to resize

Latest Videos

undefined

'ಗೌರಿ' ನೋಡಲು ಬಂದ ನಿವೇದಿತಾ: ಅಂಗಡಿ ಮುಚ್ಕೊಳಮ್ಮಾ ಅಂತೆಲ್ಲಾ ಹೇಳೋದಾ ನೆಟ್ಟಿಗರು?

 ಇದೀಗ ಇವರೇ ಅನಂತ್​ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್​ ವಿಷಯವನ್ನು ಹೇಳಿದ್ದಾರೆ. ಅಷ್ಟಕ್ಕೂ ಇವರಿಬ್ಬರೂ ಮದುವೆಯಾಗುತ್ತಾರೆ ಎಂದು ಸುದ್ದಿ ತಿಳಿದಾಗಿನಿಂದಲೂ ಇವರಿಬ್ಬರೂ ಬಾಲ್ಯದ ಸ್ನೇಹಿತರು ಎಂದೇ ಹೇಳಲಾಗುತ್ತಿದೆ. ಬಹುತೇಕ ಎಲ್ಲಾ ಮಾಧ್ಯಮಗಳಲ್ಲಿ, ಸೋಷಿಯಲ್​ ಮೀಡಿಯಾಗಳಲ್ಲಿ ಹೀಗೆಯೇ ಉಲ್ಲೇಖಿಸಲಾಗುತ್ತದೆ. ಆದರೆ, ನಾನಿ ಅವರು ಸತ್ಯವನ್ನು ರಿವೀಲ್​ ಮಾಡಿದ್ದಾರೆ. ಅನಿಲ್​  ಮತ್ತು ರಾಧಿಕಾ ಕೆಲ ವರ್ಷಗಳಿಂದ ಪರಿಚಯವಷ್ಟೇ. ಅವರು ಬಾಲ್ಯದ ಸ್ನೇಹಿತರಲ್ಲ ಎನ್ನುವ ಮೂಲಕ ಈ ಸುದ್ದಿಗೆ ತೆರೆ ಎಳೆದಿದ್ದಾರೆ. ಆದರೆ ಅನಂತ್​ ಸಹೋದರ ಆಕಾಶ್​ ಅಂಬಾನಿ ಮತ್ತು ಅವರ ಪತ್ನಿ ಶ್ಲೋಕಾ ಅಂಬಾನಿ ಬಾಲ್ಯದ ಸ್ನೇಹಿತರು ಎಂದು ಹೇಳಿದ್ದಾರೆ. ಅಂದಹಾಗೆ ಇವರಿಬ್ಬರೂ 2019ರಲ್ಲಿ ವಿವಾಹವಾಗಿದ್ದಾರೆ.

ಇನ್ನು ಅನಂತ್​ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್​ ವಿಷಯಕ್ಕೆ ಬರುವುದಾದರೆ, ಮುಂಬೈನಲ್ಲಿ ಅದ್ಧೂರಿಯಾಗಿ ಮದುವೆ ಬಳಿಕ ಪ್ಯಾರೀಸ್‌ ಒಲಂಪಿಕ್ಸ್ ನಲ್ಲಿ ಕಾಣಿಸಿಕೊಂಡಿದ್ದ   ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಹನಿಮೂನ್‌ಗಾಗಿ ಕೋಸ್ಟರಿಕಾಗೆ ಪ್ರಯಾಣ ಬೆಳಸಿದ್ದಾರೆ. ಮಧ್ಯ ಅಮೆರಿಕಾದಲ್ಲಿ ಇರುವ ಕೋಸ್ಟರಿಕಾದಲ್ಲಿ ಅವರು ತಮ್ಮ ಮಧುಚಂದ್ರಕ್ಕೆ ಫೋರ್ ಸೀಸನ್ಸ್ ರೆಸಾರ್ಟ್ ಕಾಸಾ ಲಾಸ್ ಓಲಾಸ್ ವನ್ನು ಬುಕ್ ಮಾಡಿದ್ದಾರೆ. ಆಗಸ್ಟ್ 1 ರಂದು ಆಗಮಿಸಿದ ನೂತನ ದಂಪತಿ ತಮಗೆ ಬೇಕಾದ, ತಮ್ಮ ಅಭಿರುಚಿಗೆ ಬೇಕಾದ ಜಾಗವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಓಲಾಸ್ ಎಂದು ಕರೆಯಲ್ಪಡುವ ಐಷಾರಾಮಿ ಫೋರ್ ಸೀಸನ್ಸ್ ರೆಸಾರ್ಟ್‌ನಲ್ಲಿ  ಅನಂತ್ -ರಾಧಿಕಾ  ಸಮಯವನ್ನು ಕಳೆಯುತ್ತಿದ್ದಾರೆ.
 

ಗರ್ಭಿಣಿ ದೀಪಿಕಾಗೆ ಇದೆಂಥ ಅಗ್ನಿಪರೀಕ್ಷೆನಪ್ಪಾ? ಯಾವ ಹೆಣ್ಣಿಗೂ ಇಂಥ ಸ್ಥಿತಿ ಬರಬಾರದು ಅಂತಿರೋ ಫ್ಯಾನ್ಸ್​

click me!