ಪುಷ್ಪಾ ಸಿನಿಮಾದ ಊ ಆಂಟಾವಾ ಐಟಂ ಸಾಂಗ್ ಸಮಂತಾ ರುತ್ ಪ್ರಭು ಅವರಿಗೆ ಭರ್ಜರಿ ಬ್ರೇಕ್ ನೀಡಿದ್ದು ನಿಜವಾದರೂ ಇದಕ್ಕೆ ಒಪ್ಪಿಕೊಳ್ಳದಂತೆ ಬೆದರಿಕೆ ಬಂದಿತ್ತಂತೆ. ನಟಿ ಹೇಳಿದ್ದೇನು?
ಚಿತ್ರರಂಗದ ಖ್ಯಾತ ನಟಿ ಸಮಂತಾ ರುತ್ ಪ್ರಭು ಎಂದಾಕ್ಷಣ ಸಿನಿ ಪ್ರಿಯರ ನೆನಪಿಗೆ ಬರುವುದು ಊ ಅಂತವಾ ಮಾವಾ ಹಾಡು. ಇದು ಅಷ್ಟರ ಮಟ್ಟಿಗೆ ಕ್ರೇಜ್ ಸೃಷ್ಟಿಸಿತ್ತು. ಈಗಲೂ ಈ ಹಾಡು ಹಚ್ಚ ಹಸಿರಾಗಿಯೇ ಇದೆ. ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ 'ಪುಷ್ಪ ದಿ ರೈಸ್' ಚಿತ್ರದಲ್ಲಿ ಈ ಐಟಂ ಸಾಂಗ್ ಮಾಡಿದ್ದರು ಸಮಂತಾ. ಆದರೆ ಈ ಐಟಂ ಸಾಂಗ್ ಮಾಡುವ ಮುನ್ನ ನಟಿ ಅನುಭವಿಸಿದ್ದು ಅಷ್ಟಿಷ್ಟಲ್ಲ, ಇದಕ್ಕೆ ಒಂದೇ ಒಂದು ಕಾರಣ, ನಟಿಗೆ ಆಗಷ್ಟೇ ಡಿವೋರ್ಸ್ ಆಗಿದ್ದಕ್ಕೆ! ಹೌದು. ನಟಿ ಸಮಂತಾ ಮತ್ತು ನಟ ನಾಗ ಚೈತನ್ಯ ಅವರ ಮದುವೆ, ವಿಚ್ಛೇದನ ವಿಷಯ ಬಹು ಚರ್ಚಿತವಾದದ್ದು. ಬಹು ವರ್ಷಗಳು ಪ್ರೀತಿಸಿ ಮದುವೆಯಾದ ಜೋಡಿ 2021ರಲ್ಲಿ ವಿಚ್ಛೇದನ ಪಡೆದುಕೊಂಡು ಅಭಿಮಾನಿ ವರ್ಗಕ್ಕೆ ಬಹು ದೊಡ್ಡ ಶಾಕ್ ಕೊಟ್ಟಿತ್ತು.
ಅದಾದ ಬಳಿಕ ಇಬ್ಬರೂ ತಮ್ಮ ತಮ್ಮ ಲೈಫ್ನಲ್ಲಿ ಮುಂದುವರೆದಿದ್ದಾರೆ. ಡಿವೋರ್ಸ್ ಆದ ಕೆಲವೇ ದಿನಗಳಲ್ಲಿ ಐಟಂ ಸಾಂಗ್ಗೆ ಸಮಂತಾಗೆ ಕರೆ ಬಂದಿತ್ತು. ಆದರೆ ಈಗಷ್ಟೇ ಡಿವೋರ್ಸ್ ಆಗಿದೆ, ಐಟಂ ಸಾಂಗ್ ಮಾಡಬೇಕು, ಮನೆಯಲ್ಲಿ ಸುಮ್ಮನೇ ಕೂತಿರು ಅಂತೆಲ್ಲಾ ಹೇಳಲಾಗಿತ್ತಂತೆ ನಟಿಗೆ. ಈ ಕುರಿತು ಅವರೇ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ಅಷ್ಟಕ್ಕೂ ಹೀಗೆ ಹೇಳಿದವರು ಖುದ್ದು ಸಮಂತಾ ತವರು ಮನೆಯವರು ಮಾತ್ರವಲ್ಲದೇ ಬಹುತೇಕ ಎಲ್ಲಾ ಫ್ರೆಂಡ್ಸ್ಗಳು! 'ಹೂ ಅಂಟವಾ..' ಐಟಂ ಸಾಂಗ್ಗೆ ನನಗೆ ಆಫರ್ ಬಂದಿತ್ತು. ಆದರೆ ಆಗಷ್ಟೇ ನಾಗ ಚೈತನ್ಯ ಜೊತೆ ಡಿವೋರ್ಸ್ ಆಗಿತ್ತು. ನನಗೆ ಆಫರ್ ಬಂದದ್ದು ಐಟಂ ಸಾಂಗ್ ಎಂದು ಗೊತ್ತಾಗುತ್ತಿದ್ದಮತೆಯೇ ನನ್ನ ಕುಟುಂಬದವರು, ನನ್ನ ಫ್ರೆಂಡ್ಸ್ ಎಲ್ಲರೂ ಕಾಲ್ ಮಾಡಿ ಒಪ್ಪಿಕೊಳ್ಳಲೇಬೇಡ ಎಂದರು. ಮನೆಯವರು ಕೂಡ ಸುಮ್ಮನೇ ಬಾಯಿಮುಚ್ಚಿಕೊಂಡು ಮನೆಯಲ್ಲಿ ಇರು, ಇದಕ್ಕೆಲ್ಲಾ ಒಪ್ಪಿಕೊಳ್ಳಬೇಡ ಎಂದಿದ್ದರು. ಇದರ ಬದಲು ಬೇಕಿದ್ದರೆ ಯಾವುದಾದ್ರೂ ಸಿನಿಮಾ ಒಪ್ಪಿಕೋ ಎಂದಿದ್ದರು. ಆದರೆ ಆ ಮಾತುಗಳನ್ನು ನಾನು ಕೇಳಲಿಲ್ಲ ಎಂದಿದ್ದಾರೆ ನಟಿ ಸಮಂತಾ.
ಪ್ರಕಾಶ್ ರಾಜ್ ಜೊತೆ ಕೆಲಸ ಮಾಡುವ ಅನುಭವ ಹೇಗಿರತ್ತೆ? ಪ್ರಿಯಾಮಣಿ ಓಪನ್ ಮಾತಿದು...
ನಾನ್ಯಾಕೆ ಅವರ ಮಾತನ್ನು ಕೇಳಬೇಕಿತ್ತು ಹೇಳಿ? ಡಿವೋರ್ಸ್ ಕೊಟ್ಟು ನಾನೇನು ತಪ್ಪು ಮಾಡಿದ್ನಾ? ನಟಿಯಾದರೂ ವೈವಾಹಿಕ ಜೀವನಕ್ಕೆ 100 ಪರ್ಸೆಂಟ್ ಮುಡುಪಾಗಿಟ್ಟಿದ್ದೆ. ಆದರೆ ಅದು ವರ್ಕ್ಔಟ್ ಆಗಲಿಲ್ಲ. ಬೇರೆಯಾದ್ವೆ. ನಾನೇನೂ ತಪ್ಪು ಮಾಡಿಲ್ಲವಲ್ಲ, ಮತ್ಯಾಕೆ ಮನೆಯಲ್ಲಿ ಬಚ್ಚಿಟ್ಟುಕೊಳ್ಳಬೇಕು ಎನ್ನಿಸಿತು. ಹೀಗೆ ಮಾಡಿದ್ದೇ ಆದಲ್ಲಿ ನಾನು ಮಾಡದ ತಪ್ಪಿಗಾಗಿ ನನ್ನನ್ನು ತಪ್ಪಿಸ್ಥಳು ಎಂದು ಎನಿಸಿಕೊಳ್ಳಬೇಕಿತ್ತು. ಅದಕ್ಕಾಗಿ ನಾನು ಈ ಐಟಂ ಸಾಂಗ್ಗೆ ಒಪ್ಪಿಕೊಂಡೆ ಎಂದಿದ್ದಾರೆ ನಟಿ. ಮೂರು ನಿಮಿಷಗಳ ಈ ಸಾಂಗ್ಗೆ ನಟಿ ಐದು ಕೋಟಿ ರೂಪಾಯಿ ಪಡೆದಿದ್ದಾರೆ ಎನ್ನಲಾಗುತ್ತಿದೆ.
ಮೊನ್ನೆ ಮೊನ್ನೆ ನಾಗ ಚೈತನ್ಯ ಅವರು ನಟಿ ಶೋಭಿತಾ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡರೆ. ಸಮಂತಾ ಮಯೋಸೈಟಿಸ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದು ಇದಕ್ಕೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಮಯೋಸೈಟಿಸ್ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿರುವ ನಟಿ ಸಮಂತಾ ರುತ್ ಪ್ರಭು ಆರೋಗ್ಯದ ವಿಷಯದಲ್ಲಿ ಜನರಿಗೆ ಟಿಪ್ಸ್ ಕೊಡಲು ಹೋಗಿ ಪೇಚಿಗೆ ಕೂಡ ಸಿಲುಕಿದ್ದಾರೆ. ಈ ರೀತಿ ಟಿಪ್ಸ್ ನೀಡುವ ಮೂಲಕ ಜನರ ಜೀವದ ಜೊತೆ ಚೆಲ್ಲಾಟ ಆಡಿರುವ ನಟಿಯನ್ನು ಜೈಲಿಗೆ ಹಾಕುವಂತೆ ಖ್ಯಾತ ವೈದ್ಯ ಡಾಕ್ಟರ್ ಸೈರಿಕ್ ಅಬ್ಬಿ ಫಿಲಿಪ್ಸ್ ಹೇಳಿದ್ದು, ಈ ವಿಚಾರ ಕೆಲ ತಿಂಗಳುಗಳಿಂದ ಭಾರಿ ಹಲ್ಚಲ್ ಸೃಷ್ಟಿಸುತ್ತಿದೆ.
ಗರ್ಭಿಣಿ ದೀಪಿಕಾಗೆ ಇದೆಂಥ ಅಗ್ನಿಪರೀಕ್ಷೆನಪ್ಪಾ? ಯಾವ ಹೆಣ್ಣಿಗೂ ಇಂಥ ಸ್ಥಿತಿ ಬರಬಾರದು ಅಂತಿರೋ ಫ್ಯಾನ್ಸ್