ಕ್ಲಾಸ್ ತಗೊಂಡ್ರಾ ಸೋನು ನಿಗಮ್‌ಗೆ, ಆಶಾ ಭೋಂಸ್ಲೆಗೆ ಪಾದ ಪೂಜೆ ಮಾಡಿದ್ದು ಸರಿನಾ...?

By Shriram Bhat  |  First Published Jun 29, 2024, 3:10 PM IST

ಸೋನು ನಿಗಮ್ ಅವರು ಮಾಡಿರುವ ಈ ಕಾರ್ಯವನ್ನು ಹಲವರು ಮೆಚ್ಚಿ ತಲೆದೂಗಿದ್ದಾರೆ. 'ಹಿರಿಯ ಗಾಯಕಿ, ಗುರು ಸಮಾನರಾದ ಆಶಾ ಭೋಸ್ಲೆ ಅವರಿಗೆ ಅವರಿಗಿಂತ ಕಿರಿಯರು ತೋರಬಹುದಾದ ಅತ್ಯಂತ ಉತ್ತಮ ಗೌರವ ಇದು' ಎಂದಿದ್ದಾರೆ..


ಪದ್ಮವಿಭೂಷಣ ಪ್ರಶಸ್ತಿ ವಿಜೇತೆ ಭಾರತದ ಖ್ಯಾತ ಗಾಯಕಿ ಆಶಾ ಭೋಸ್ಲೇ (Asha Bhosle) ಅವರ ಪಾದ ತೊಳೆದು ಪೂಜೆ ಮಾಡಿದ್ದಾರೆ ಗಾಯಕ ಸೋನು ನಿಗಮ್. ಸ್ವರಸ್ವಾಮಿನಿ ಆಶಾ ಕಾರ್ಯಕ್ರಮದ ನಿಮಿತ್ತ ಗಾಯಕಿ ಆಶಾ ಭೋಸ್ಲೇ ಅವರಿಗೆ ಪ್ರಶಸ್ತಿ ನೀಡುವ ಸಮಾರಂಭ ಏರ್ಪಡಿಸಲಾಗಿತ್ತು. ಅಲ್ಲಿ ಖ್ಯಾತ ಗಾಯಕ ಸೋನು ನಿಗಮ್ (Sonu Nigam) ಅವರು ತಮ್ಮ ಗುರು ಸಮಾನರಾದ ಹಿರಿಯ ಗಾಯಕಿ ಆಶಾ ಭೋಸ್ಲೆ ಅವರ ಪಾದ ತೊಳೆದು ಭಕ್ತಿ ಪೂರ್ವಕವಾಗಿ ಪೂಜೆ ಸಲ್ಲಿಸಿದ್ದಾರೆ. 

ಈ ವೇಳೆ ಗಾಯಕ ಸೋನು ನಿಗಮ್ 'ಇವತ್ತಿನ ಕಾಲಮಾನದಲ್ಲಿ , ಸಾಮಾಜಿಕ ಜಾಲತಾಣಗಳಲ್ಲಿ ಸಂಗೀತ ಕಲಿಸುವವರು, ಸಂಗೀತ ಕಲಿಯುವವರು ಅಸಂಖ್ಯಾತರಿದ್ದಾರೆ. ಆದರೆ ಈ ತಂತ್ರಜ್ಞಾನದಲ್ಲಿ ಇಲ್ಲದ ಆ ಕಾಲಘಟ್ಟದಲ್ಲಿ ಜಗತ್ತಿಗೆ  ಸಂಗೀತವನ್ನು ಕೇಳಿಸಿದವರು , ಸಂಗೀತ ಕಲಿಸಿದವರು ಲತಾ-ಆಶಾ ಸಹೋದರಿಯರು…. ನೀವು ಕೊಟ್ಟ ನೆಮ್ಮದಿಯ ಕ್ಷಣಗಳಿಗೆ ಅನಂತಾನಂತ ಧನ್ಯವಾದಗಳು. ನಿಮ್ಮ ಪಾದಗಳಿಗೆ ಪೂಜೆ ಸಲ್ಲಿಸುವುದರ ಮೂಲಕ ನನಗೆ ನಿಮ್ಮ ಮೇಲಿರುವ ಪ್ರೀತಿ -ಗೌರವಗಳನ್ನು ವ್ಯಕ್ತಪಡಿಸುತ್ತಿದ್ದೇನೆ'- ಎಂದು ಸೋನು ನಿಗಮ್ ಹೇಳಿದ್ದಾರೆ.

Tap to resize

Latest Videos

ಗಂಡ-ಹೆಂಡತಿ ಮಧ್ಯೆ 'ಅದು' ಆಗ್ತಿಲ್ಲ ಅಂದ್ರೆ ಒಟ್ಟಿಗೇ ಒಂದೇ ಮನೇಲಿ ಯಾಕೆ ಇರ್ಬೇಕು; ಚಂದನ್ ಶೆಟ್ಟಿ

ಸೋನು ನಿಗಮ್ ಅವರು ಮಾಡಿರುವ ಈ ಕಾರ್ಯವನ್ನು ಹಲವರು ಮೆಚ್ಚಿ ತಲೆದೂಗಿದ್ದಾರೆ. 'ಹಿರಿಯ ಗಾಯಕಿ, ಗುರು ಸಮಾನರಾದ ಆಶಾ ಭೋಸ್ಲೆ ಅವರಿಗೆ ಅವರಿಗಿಂತ ಕಿರಿಯರು ತೋರಬಹುದಾದ ಅತ್ಯಂತ ಉತ್ತಮ ಗೌರವ ಇದು' ಎಂದಿದ್ದಾರೆ ಹಲವರು. ಆದರೆ, ಸೋಷಿಯಲ್ ಮೀಡಿಯಾ, ಸಮಾಜ ಎಂದಮೇಲೆ ಅಲ್ಲಿ ಎಲ್ಲಾ ತರದ ಜನರು ಇದ್ದೇ ಇರುತ್ತಾರೆ ಎಂಬುದಕ್ಕೆ ಸಾಕ್ಷಿ ಎಂಬಂತೆ ಕೆಲವರು ಈ ಕೆಲಸಕ್ಕೆ ಮೂಗು ಮುರಿದು, 'ಇದು ಮೂರ್ಖತನದ ಪರಮಾವಧಿ' ಎಂದಿದ್ದಾರೆ.

ಕೊಲೆಗಿಂತ ಮೊದ್ಲೇ ಮಹಾ ಅಪರಾಧ ಮಾಡಿ ಮುಗಿಸಿತ್ತಾ ದರ್ಶನ್ & ಗ್ಯಾಂಗ್? ಅಗ್ನಿ ಶ್ರೀಧರ್ ಹೇಳಿದ್ದೇನು? 

ಇನ್ನು, ಸೋನು ನಿಗಮ್ ಅವರ ಗುರು ಭಕ್ತಿಗೆ ಸಂಬಂಧಿಸಿ 'ವಿನಯ್ ಶಿವಮೊಗ್ಗ' ಎನ್ನುವವರು 
'ಕೆಲವರಿಗಿದು  ಅತಿಯಾದ ಅತಿರೇಕ. ಹಲವರಿಗಿದು ಆರಾಧನೆಯ ಪ್ರತೀಕ. 
ಆಡು ಮುಟ್ಟದ ಸೊಪ್ಪಿಲ್ಲವಂತೆ! ಆಶಾ ಹಾಡದ ಹಾಡುಗಳಿಲ್ಲವಂತೆ!!                                        
ಆಕೆ ಸಾವಿರಾರು ಹಾಡುಗಳಿಗೆ ದನಿಯಾದಳು. ಆ ಹಾಡುಗಳು  ಎಂದೂ ಸಾವಿರದ ಅಮರ ಗೀತೆಗಳಾದವು!!.  
ಸಂಗೀತವೆಂದರೆ ಅದು ಸರಸ್ವತಿಯ ಪ್ರತಿರೂಪವಂತೆ. ಸಂಗೀತವನ್ನೇ ಉಸಿರಾಗಿ ಬದುಕಿದವರು  ಗಂಧರ್ವರಂತೆ !!!! ...' 

ಇದು,  ನೆನ್ನೆ “ಸ್ವರ ಸ್ವಾಮಿನಿ “ ಆಶಾ ಭೊಂಸ್ಲೇ ಅವರ ಪಾದಪೂಜೆಯನ್ನು ನೆರವೇರಿಸಿ ಸೋನು ನಿಗಮ್ ಆಡಿದ ಭಾವುಕ ನುಡಿಗಳು, ನನಗೆ ನಿಮ್ಮ ಭಾವನೆ ಅರ್ಥವಾಗುತ್ತದೆ ಸೋನುಜಿ.  Yes ……I can relate' ಎಂದು ಕಾಮೆಂಟ್ ಬರೆದಿದ್ದಾರೆ.  

ಬುಡಕ್ಕೆ ಬೆಂಕಿ ಬಿದ್ರೆನೇ ರಾಕೆಟ್‌ ಮೇಲಕ್ಕೆ ಹಾರೋದು; KGF ರಾಕಿಂಗ್ ಸ್ಟಾರ್ ಯಶ್ ಯಾರಿಗೆ ಹೇಳಿದ್ದು?        
 
ಒಟ್ಟಿನಲ್ಲಿ, 'ಲೋಕೋಃ ಭಿನ್ನ ರುಚಿಃ' ಅಂತಾರಲ್ಲ ಹಾಗೇ, ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಅವರವರಿಗೆ ಬೇಕಾದಂತೆ ಅರ್ಥೈಸಿಕೊಳ್ಳುತ್ತಾರೆ ಎನ್ನಬಹುದು. 

 
click me!