
ಕಲಾವಿದರ ಬಗ್ಗೆ ಅದ್ರಲ್ಲೂ ಸೂಪರ್ ಸ್ಟಾರ್ ಗಳ ಜೀವನವನ್ನು ಇಣುಕಿ ನೋಡಲು ಅದೇನೋ ಸಂತೋಷ. ಅವರು ಮನೆಯಲ್ಲಿ ಹೇಗಿರ್ತಾರೆ, ಸೆಟ್ ನಲ್ಲಿ ಹೇಗಿರ್ತಾರೆ ಎಂಬುದು ಅಭಿಮಾನಿಗಳಿಗೆ ತಿಳಿದಿರೋದಿಲ್ಲ. ತೆರೆ ಮೇಲೆ ಕಾಣಿಸಿಕೊಳ್ಳುವ ಸ್ಟಾರ್ ನಟರನ್ನು ರೋಲ್ ಮಾಡೆಲ್ ಆಗಿ ಸ್ವೀಕರಿಸುವ ಅನೇಕ ಅಭಿಮಾನಿಗಳು ಅವರ ವೈಯಕ್ತಿಕ ಜೀವನ ತಿಳಿಯುವ ಆಸೆ ಹೊಂದಿರುತ್ತಾರೆ. ಈಗ ಅನೇಕ ನಟ – ನಟಿಯರು ತಮ್ಮ ವೈಯಕ್ತಿಕ ವಿಷ್ಯವನ್ನೂ ಜನರ ಮುಂದಿಡುತ್ತಿದ್ದಾರೆ. ಸೂಪರ್ ಸ್ಟಾರ್ ಶಾರುಕ್ ಖಾನ್ ಹಾಗೂ ಸಲ್ಮಾನ್ ಖಾನ್ ಅಭಿಮಾನಿಗಳ ಸಂಖ್ಯೆ ಕೋಟಿಯಲ್ಲಿದೆ. ಇಬ್ಬರು ದೇಶದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಫೇಮಸ್. ಸಾಕಷ್ಟು ಪರಿಶ್ರಮದಿಂದ ಮುಂದೆ ಬಂದ ಕಲಾವಿದರಲ್ಲಿ ಇವರೂ ಇದ್ದಾರೆ. ಇಬ್ಬರು ಸೂಪರ್‌ಸ್ಟಾರ್‌ಗಳಾಗಿದ್ದರೂ ಇಬ್ಬರೂ ಪರಸ್ಪರ ಹೇಗೆ ಭಿನ್ನರಾಗಿದ್ದಾರೆ. ಇದನ್ನು ನಟ ಗೋವಿಂದ್ ನಾಮದೇವ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಅವರಿಬ್ಬರು ಸೆಟ್ ನಲ್ಲಿ ಹೇಗಿರ್ತಾರೆ ಎಂಬುದನ್ನು ಗೋವಿಂದ್ ನಾಮದೇವ್ ಹಂಚಿಕೊಂಡಿದ್ದಾರೆ. ಶಾರುಕ್ ಖಾನ್ ವರ್ಕೋಹಾಲಿಕ್ ಆಗಿದ್ರೆ ಸಲ್ಮಾನ್ ಸೈಲೆಂಟ್ ಎನ್ನುತ್ತಾರೆ ಗೋವಿಂದ್ ನಾಮದೇವ್.
ನಟ ಗೋವಿಂದ್ ನಾಮದೇವ್ (Govind Namdev), ಶಾರುಕ್ ಖಾನ್ ಜೊತೆ ಫಿರ್ ಬಿ ದಿಲ್ ಹೇ ಹಿಂದೂಸ್ತಾನಿ ಚಿತ್ರದಲ್ಲಿ ನಟಿಸಿದ್ದಾರೆ. ಸಲ್ಮಾನ್ ಖಾನ್ (Salman Khan) ಜೊತೆ ವಾಂಟೆಡ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಫಿರ್ ಬಿ ದಿಲ್ ಹೇ ಹಿಂದೂಸ್ತಾನಿ ಚಿತ್ರ 2000ರಲ್ಲಿ ತೆರೆಗೆ ಬಂದ್ರೆ ವಾಂಟೆಡ್ 2009ರಲ್ಲಿ ಬಿಡುಗಡೆಯಾಗಿತ್ತು. ಈ ಎರಡೂ ಚಿತ್ರಗಳ ಶೂಟಿಂಗ್ ವೇಳೆ ಸ್ಟಾರ್ಸ್ ಹೇಗಿದ್ದರು ಎಂಬುದನ್ನು ಗೋವಿಂದ್ ನಾಮದೇವ್ ಹೇಳಿದ್ದಾರೆ.
ರೀಲ್ಸ್- ಯೂಟ್ಯೂಬ್ ಹಣದಿಂದ ಸಹೋದರನಿಗೆ ಮಹೇಂದ್ರ ಥಾರ್ ಕೊಡಿಸಿದ ರಚನಾ!
ವರ್ಕ್ಹೋಲಿಕ್ ಶಾರುಕ್ (Shahrukh) ಚಿಮಣಿಯಂತೆ ಹೊಗೆ ಬಿಡ್ತಾ ಕೆಲಸ ಮಾಡ್ತಾರೆ : ಶಾರುಕ್ ಖಾನ್ ಕೆಲಸದ ಬಗ್ಗೆ ಮಾತನಾಡಿದ ಗೋವಿಂದ್ ನಾಮದೇವನ್, ಅವರು ವರ್ಕ್ಹೋಲಿಕ್ ಎಂದಿದ್ದಾರೆ. ಕೆಲಸದ ಗೀಳು ಹೊಂದಿರುವ ಅನೇಕ ವ್ಯಕ್ತಿಗಳ ಬಗ್ಗೆ ನಾನು ಕೇಳಿದ್ದೆ. ಆದ್ರೆ ಈ ಚಿತ್ರದಲ್ಲಿ ಶಾರುಕ್ ಜೊತೆ ಕೆಲಸ ಮಾಡುವಾಗ ನನಗೆ ಅದರ ಅನುಭವವಾಯ್ತು. ಶಾರುಕ್ ಖಾನ್ ಕೆಲಸವನ್ನು ಅತಿಯಾಗಿ ಪ್ರೀತಿಸುತ್ತಾರೆ. ಇಡೀ ದಿನ ಅವರು ಕೆಲಸ ಮಾಡಲು ಸಿದ್ಧವಿರ್ತಾರೆ ಎನ್ನುತ್ತಾರೆ ಗೋವಿಂದ್.
ಒಂದಿಡೀದಿನ ಕೆಲಸ ಮಾಡಿದ ಅವರು ರಾತ್ರಿ ಎಲ್ಲರ ಜೊತೆ ಕುಳಿತು ಊಟ ಮಾಡ್ತಿದ್ದರು. ರಾತ್ರಿ 2 ಗಂಟೆಯವರೆಗೆ ಎಚ್ಚರವಿದ್ದ ಅವರು ಬೆಳಿಗ್ಗೆ ಕಾರ್ಯಕ್ರಮವೊಂದಕ್ಕಾಗಿ ಚೆನ್ನೈಗೆ ಹೋಗಿದ್ದರು. ಅಲ್ಲಿಂದ ಬಂದ ನಂತ್ರ ಮತ್ತೆ ಕೆಲಸ ಶುರು ಮಾಡಿದ್ದರು. ಈ ಚಿತ್ರದ ನಿರ್ಮಾಪಕರೂ ಅವರೇ ಆಗಿದ್ದ ಕಾರಣ ಕೆಲಸ ಸ್ವಲ್ಪ ಹೆಚ್ಚೇ ಇತ್ತು. ಪ್ರತಿ ಗಳಿಗೆ ಮುಂದೇನು ಮಾಡ್ಬೇಕು ಎಂದು ಆಲೋಚನೆ ಮಾಡುವ ಅವರು, ಚಿಮಣಿಯಂತೆ ಹೊಗೆ ಬಿಡ್ತಾ, ಸಿಗರೇಟು ಸೇದುತ್ತಾ ಕೆಲಸ ಮಾಡ್ತಿದ್ದರು. ಸೂಪರ್ ಸ್ಟಾರ್ ಸಾಮಾನ್ಯವಾಗಿ ಎಟಿಟ್ಯೂಡ್ ತೋರಿಸ್ತಾನೆ, ದುರಹಂಕಾರದಲ್ಲಿ ವರ್ತಿಸ್ತಾರೆ ಎಂಬ ಮಾತಿದೆ. ಆದ್ರೆ ಅದಕ್ಕೆ ಇವರು ವಿರುದ್ಧ. ಎಲ್ಲರ ಜೊತೆ ಮಾತನಾಡ್ತಾರೆ ಎಂದು ಗೋವಿಂದ್ ಹೇಳಿದ್ದಾರೆ.
ರಾಧಿಕಾ ಆಪ್ಟೆ ಪ್ರೆಗ್ನೆಂಟಾ? ಇದಕ್ಕಿದೆ ಬಲವಾದ ಕಾರಣ
ಸೈಲೆಂಟ್ ಸಲ್ಮಾನ್ : ಇನ್ನು ಸಲ್ಮಾನ್ ಖಾನ್ ಜೊತೆ ನಟಿಸಿದ ಅನುಭವವನ್ನೂ ಗೋವಿಂದ್ ಹಂಚಿಕೊಂಡಿದ್ದಾರೆ. ಶಾರುಕ್ ಖಾನ್ ಗೆ ವಿರುದ್ಧ ಸಲ್ಮಾನ್ ಖಾನ್ ಎನ್ನುತ್ತಾರೆ ಅವರು. ಸಲ್ಮಾನ್ ಸೆಟ್ ನಲ್ಲಿ ತುಂಬಾ ಸೈಲೆಂಟ್. ಅವರು ತಮ್ಮ ವೈಯಕ್ತಿಕ ವಿಷ್ಯಗಳ ಬಗ್ಗೆ ಮಾತನಾಡೋದಿಲ್ಲ. ನನ್ನ ಬಳಿ ಅವರು ಹೆಚ್ಚು ಮಾತನಾಡಿಲ್ಲ. ಅಪ್ಪ ತಪ್ಪು ಮಾಡಿದ್ರೆ ಹೇಗೆ ಶಿಕ್ಷೆ ನೀಡ್ತಿದ್ದರು ಎಂಬುದನ್ನು ಮಾತ್ರ ಹೇಳಿದ್ದರು ಎಂದಿದ್ದಾರೆ ಗೋವಿಂದ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.