ಪ್ರಸಿದ್ಧ ಗಾಯಕಿ ಶಕೀರಾ ಅವರು ಮಿಯಾಮಿಯ ನೈಟ್‌ಕ್ಲಬ್‌ನಲ್ಲಿ ಅಭಿಮಾನಿಗಳು ಅವರ ಖಾಸಗಿತನಕ್ಕೆ ಧಕ್ಕೆ ತರುವ ರೀತಿಯಲ್ಲಿ ವಿಡಿಯೋ ಮಾಡುತ್ತಿದ್ದರು, ಇದರಿಂದಾಗಿ ಶಕೀರಾ ಮುಜುಗರಕ್ಕೊಳಗಾಗಿ ವೇದಿಕೆ ತೊರೆದರು.
ತನ್ನ ಅದ್ಭುತ ನೃತ್ಯ, ಹಾಡು ಮತ್ತು ಬರಹಕ್ಕೆ ಜಗತ್ತಿನಾದ್ಯಂತ ಪ್ರಸಿದ್ಧರಾಗಿರುವ ಶಕೀರಾ (Shakira) ಅವರೊಂದಿಗೆ ಅವರ ಅಭಿಮಾನಿಗಳು ಮಾಡಬಾರದ ನಡವಳಿಕೆ ತೋರಿದ್ದಾರೆ. ಈ ಘಟನೆ ನಡೆದಿದ್ದು ಅಮೆರಿಕದ ಮಿಯಾಮಿಯ ನೈಟ್‌ಕ್ಲಬ್‌ನಲ್ಲಿ. ಇಲ್ಲಿ ಶಕೀರಾ ನೃತ್ಯ ಮಾಡುತ್ತಿದ್ದರು, ಆದರೆ ಅಭಿಮಾನಿಗಳ ವರ್ತನೆಯಿಂದ ಅವರು ವೇದಿಕೆಯಿಂದ ನಿರ್ಗಮಿಸಬೇಕಾಯಿತು.
ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದರಲ್ಲಿ ಶಕೀರಾ ಉತ್ಸಾಹದಿಂದ ವೇದಿಕೆಗೆ ಬಂದು ನೃತ್ಯ ಆರಂಭಿಸುತ್ತಿರುವುದನ್ನು ಕಾಣಬಹುದು. ವೇದಿಕೆಯ ಸಮೀಪದಲ್ಲಿದ್ದ ಜನರು ಸಹ ಅವರೊಂದಿಗೆ ನೃತ್ಯ ಮಾಡುತ್ತಾರೆ. ಈ ಮಧ್ಯೆ ಕೆಲವರ ನಡವಳಿಕೆಯಿಂದ ಶಕೀರಾ ಮುಜುಗರಕ್ಕೀಡಾಗುತ್ತಾರೆ. ಅವರು ನೃತ್ಯ ಮಾಡುತ್ತಾ ತಮ್ಮ ಪ್ರೈವೇಟ್ ಪಾರ್ಟ್ ಅನ್ನು ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಾರೆ.
undefined
ಕಷ್ಟವಿದ್ದಾಗ ಹಣಕ್ಕಾಗಿ ಪುರುಷರ ಜೊತೆ ಮಲಗುತ್ತಿದ್ದೆ ಸತ್ಯ ಬಹಿರಂಗಪಡಿಸಿದ ಬೋಲ್ಡ್ ಬೆಡಗಿ ಶರ್ಲಿನ್ ಚೋಪ್ರಾ!
ಶಕೀರಾ ಮೊದಲು ವಿಡಿಯೋ ಮಾಡದಂತೆ ಸನ್ನೆ ಮಾಡಿ ತಿಳಿಸಿದರು. ಆದರೆ ನೆರೆದಿದ್ದವರು ಅವರ ಮನವಿಗೆ ಕ್ಯಾರೇ ಅನ್ನಲಿಲ್ಲ ನಂತರ ವೇದಿಕೆ ತೊರೆದರು. ವಾಸ್ತವವಾಗಿ, ವೇದಿಕೆಗೆ ತುಂಬಾ ಹತ್ತಿರದಲ್ಲಿದ್ದ ಕೆಲವರು ಶಕೀರಾ ಅವರ ಖಾಸಗಿ ಬಟ್ಟೆ ಕಾಣುವಂತೆ ವಿಡಿಯೋ ಮಾಡುತ್ತಿದ್ದರು. ಶಕೀರಾ ಮೊದಲು ಅಂತಹ ವಿಡಿಯೋಗಳನ್ನು ಮಾಡಬೇಡಿ ಎಂದು ವಿನಂತಿಸಿದರು. ಆದರೂ ಜನರು ಕೇಳದಿದ್ದಾಗ ಕೋಪ ವ್ಯಕ್ತಪಡಿಸಿದರು. ತಮ್ಮ ಕೈಯಿಂದ ಬಟ್ಟೆಯನ್ನು ದೇಹಕ್ಕೆ ಅಂಟಿಸಿಕೊಂಡು ಪ್ರೈವೇಟ್ ಪಾರ್ಟ್ ಅನ್ನು ಮರೆಮಾಡಲು ಪ್ರಯತ್ನಿಸಿದರು. ವಿಡಿಯೋ ಮಾಡುತ್ತಿದ್ದವರು ತಮ್ಮ ನಡವಳಿಕೆಯನ್ನು ಬದಲಾಯಿಸದಿದ್ದಾಗ ಅವರು ವೇದಿಕೆಯಿಂದ ನಿರ್ಗಮಿಸಿದರು. ವಿಡಿಯೋ ವೈರಲ್ ಆದ ನಂತರ, ಶಕೀರಾ ಅವರೊಂದಿಗೆ ಅಂತಹ ಕೀಳು ನಡವಳಿಕೆ ತೋರಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಜನರು ಒತ್ತಾಯಿಸುತ್ತಿದ್ದಾರೆ.
ಇಡೀ ಭಾರತ ಮೆಚ್ಚಿದ ಕಲ್ಕಿ ಚಿತ್ರವನ್ನು ಇಷ್ಟಪಡದೆ ಅಮಿತಾಬ್ ರನ್ನು ಮಾತಲ್ಲೇ ರುಬ್ಬಿದ ಮೊಮ್ಮಕ್ಕಳು!
ಶಕೀರಾ ಯಾರು?
ಶಕೀರಾ ಅವರು ಫೆಬ್ರವರಿ 2, 1977 ರಂದು ಕೊಲಂಬಿಯಾದ ಬ್ಯಾರನ್‌ಕ್ವಿಲ್ಲಾದಲ್ಲಿ ಜನಿಸಿದರು. ಅವರು ಕೊಲಂಬಿಯಾದ ಗಾಯಕಿ, ಗೀತರಚನೆಕಾರರು, ಸಂಗೀತಗಾರರು ಮತ್ತು ನೃತ್ಯಗಾರ್ತಿ. ಅವರು ಸ್ಪ್ಯಾನಿಷ್ ಮತ್ತು ಇಂಗ್ಲಿಷ್ ಎರಡೂ ಭಾಷಾ ಮಾರುಕಟ್ಟೆಗಳಲ್ಲಿ ಯಶಸ್ವಿ ವೃತ್ತಿಜೀವನ ನಿರ್ಮಿಸಿದ್ದಾರೆ. ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರು 21 ನೇ ಶತಮಾನದ ಆರಂಭದಲ್ಲಿ ಅತ್ಯಂತ ಜನಪ್ರಿಯ ಲ್ಯಾಟಿನ್ ಅಮೇರಿಕನ್ ರೆಕಾರ್ಡಿಂಗ್ ಕಲಾವಿದರಲ್ಲಿ ಒಬ್ಬರಾಗಿದ್ದಾರೆ. ಶಕೀರಾ ಚಿಕ್ಕ ವಯಸ್ಸಿನಲ್ಲಿಯೇ ಬೆಲ್ಲಿ ಡ್ಯಾನ್ಸ್ ಮಾಡಲು ಪ್ರಾರಂಭಿಸಿದರು. 10 ನೇ ವಯಸ್ಸಿಗೆ ಅವರು ಹಾಡುಗಳನ್ನು ಬರೆಯಲು ಪ್ರಾರಂಭಿಸಿದರು. ಶಕೀರಾ ಅವರಿಗೆ "ಹಿಪ್ಸ್ ಡೋಂಟ್ ಲೈ" ಹಾಡಿನ ಮೂಲಕ ವಿಶ್ವಾದ್ಯಂತ ಖ್ಯಾತಿ ದೊರೆಯಿತು.
Shakira leaves the stage after people were filming under her dress whilst she was dancing to her new single. People are GROSS. pic.twitter.com/AxlBw6yFZL
— FEIM (@FeimM_)