ಪಾಕಿಗಳ ಬೆಂಬಲಿಸ್ತಿರೋ ನೀನು ನನ್ನ ದ್ವೇಷಕ್ಕೂ ಅರ್ಹನಲ್ಲ: ಸಲ್ಮಾನ್​ ವಿರುದ್ಧ ತಿರುಗಿಬಿದ್ದ ಗಾಯಕ ಅಭಿಜಿತ್​!

By Suvarna News  |  First Published Dec 6, 2023, 1:47 PM IST

ಪಾಕಿಗಳ ಬೆಂಬಲಿಸ್ತಿರೋ  ನೀನು ನನ್ನ ದ್ವೇಷಕ್ಕೂ ಅರ್ಹನಲ್ಲ ಎಂದು ಸಲ್ಮಾನ್​ ವಿರುದ್ಧ ತಿರುಗಿಬಿದಿದ್ದಾರೆ ಗಾಯಕ ಅಭಿಜಿತ್​ ಭಟ್ಟಾಚಾರ್ಯ
 


ಬಾಲಿವುಡ್​​ ನಟ ಸಲ್ಮಾನ್ ಹಾಗೂ ಖ್ಯಾತ ಗಾಯಕ ಅಭಿಜಿತ್​ ಅವರ ನಡುವಿನ ವೈಮಸ್ಸಿಗೆ ಬಹಳ ವರ್ಷಗಳೇ ಕಳೆದಿವೆ. ಇದಕ್ಕೆ ಮುಖ್ಯ ಕಾರಣ ಸಲ್ಮಾನ್​ ಖಾನ್​ ಅವರು ಪಾಕಿಸ್ತಾನಿಗಳ ಪರವಾಗಿದ್ದಾರೆ ಎನ್ನುವುದು ಅವರ ವಾದ. ಈ ಹಿಂದೆ ಕೂಡ ಇದೇ ವಿಷಯಕ್ಕೆ ಅಭಿಜಿತ್​ ಅವರು ಹಲವು ಬಾರಿ ಸಲ್ಮಾನ್​ ಖಾನ್​ ವಿರುದ್ಧ ಕಿಡಿ ಕಾರಿದ್ದು ಇದೆ. ಸಲ್ಮಾನ್ ಖಾನ್ ಹಾಗೂ ಅರಿಜಿತ್ ಸಿಂಗ್ ಮಧ್ಯೆ ವೈಮನಸ್ಸು ಇದ್ದು, ಅದೀಗ ಮತ್ತಷ್ಟು ವಿಕೋಪಕ್ಕೆ ಹೋಗಿದೆ.  ಇದೇ ಕಾರಣಕ್ಕೆ,  ಅರಿಜಿತ್ ಅವರನ್ನು ಕೂಡ ಸಲ್ಮಾನ್ ಖಾನ್ ದೂರ ಇಟ್ಟಿದ್ದಾರೆ.  ಈ ವಿವಾದದಿಂದಾಗಿ ಸಲ್ಮಾನ್ ಅವರು ತಮ್ಮ ಸಿನಿಮಾಗಳಲ್ಲಿ ಅರಿಜಿತ್​ಗೆ ಹಾಡಲು ಚಾನ್ಸ್ ನೀಡುತ್ತಿಲ್ಲ.  ಆದರೆ ಕೆಲ ದಿನಗಳ ಹಿಂದೆ ಇಬ್ಬರ ನಡುವಿನ ವಿವಾದ ಬಗೆಹರಿದಂತೆ ಕಂಡುಬಂದಿತ್ತು.  ಸಲ್ಮಾನ್ ಅಭಿನಯದ ‘ಟೈಗರ್ 3 ಚಿತ್ರದ ಹಾಡೊಂದನ್ನು ಅರಿಜಿತ್ ಹಾಡಿದ್ದರು. ಇದಕ್ಕೆ ಬಹಳ ಅಪಸ್ವರ ಕೇಳಿಬಂದಿತ್ತು.
 
ಇದರ ಹೊರತಾಗಿಯೂ ಸಲ್ಮಾನ್​ ವಿರುದ್ಧ ಅಭಿಜಿತ್​ ಗುಡುಗಿದ್ದಾರೆ. ಆತ ನನ್ನ ದ್ವೇಷಕ್ಕೂ ಅರ್ಹನಲ್ಲ ಎಂದಿದ್ದಾರೆ.  ಸಲ್ಮಾನ್ ಪಾಕಿಸ್ತಾನಿ ನಟರನ್ನು ಬೆಂಬಲಿಸುತ್ತಾರೆ ಎನ್ನುವುದು ಅವರ ಮಾತು. ಈ ಹಿಂದೆ ಹಿಟ್ ಆ್ಯಂಡ್ ರನ್ ಪ್ರಕರಣದಲ್ಲಿ 2015ರಲ್ಲಿ ಕೋರ್ಟ್ ತೀರ್ಪು ನೀಡಿತ್ತು. ಈ ವೇಳೆ ಅಭಿಜೀತ್ ಟ್ವೀಟ್ ಮಾಡಿದ್ದರು. ‘ನಿರಾಶ್ರಿತರು ಬೀದಿ ಬದಿಯಲ್ಲಿ ಮಲಗಬಾರದು’ ಎಂದು ಹೇಳುವ ಮೂಲಕ ಸಲ್ಮಾನ್ ಖಾನ್ ಅವರನ್ನು ವ್ಯಂಗ್ಯವಾಗಿ ಟೀಕಿಸಿದ್ದರು. ಇದೀಗ ಮತ್ತೆ ಸಲ್ಮಾನ್ ವಿರುದ್ಧ ಗುಡುಗಿದ್ದಾರೆ.

ಅಮಿತಾಭ್​ ಮೊಮ್ಮಗನ ಜೊತೆ ಡೇಟಿಂಗ್​ ಮಾಡ್ತಿರೋ ಶಾರುಖ್​ ಪುತ್ರಿ ಕೆಬಿಸಿಯಲ್ಲಿ! ಸುಹಾನಾಗೆ ಬಿಗ್​ಬಿ ಕೇಳಿದ್ದೇನು?
 
‘ಸೆಲೆಬ್ರೇನಿಯಾ ಸ್ಟುಡಿಯೋಸ್’ ಎಂಬ ಹೆಸರಿನ ಯೂಟ್ಯೂಬ್ ಚಾನೆಲ್‌ಗೆ ಅವರು ನೀಡಿದ್ದು, ಅದರಲ್ಲಿ ಸಲ್ಮಾನ್​ ಸದಾ ಪಾಕಿಸ್ತಾನಿಗಳಿಗೆ ಸಪೋರ್ಟ್​ ಮಾಡುವ ವಿಷಯ ಹೇಳಿದ್ದಅರೆ.  ಪಾಕಿಸ್ತಾನಿ ನಟರಿಗೆ ಬಾಲಿವುಡ್‌ನಲ್ಲಿ ಸಿಗುತ್ತಿರುವ ಅವಕಾಶಗಳ ಬಗ್ಗೆ ಅಭಿಜಿತ್ ಭಟ್ಟಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದು, ಪಾಕಿಸ್ತಾನ ಪದೇ ಪದೇ ಕಾಲು ಕೆರೆದುಕೊಂಡು ದಾಳಿಗೆ ಬರುತ್ತಿದೆ. ಹಾಗಿದ್ದರೂ ಪಾಕಿಸ್ತಾನದವರಿಗೆ ಅವಕಾಶ ನೀಡುವ ಕೆಲವು ನಿರ್ಮಾಪಕರನ್ನು ಅವರು ದೇಶದ್ರೋಹಿಗಳು ಎಂದು ಕರೆದಿದ್ದಾರೆ. ಇದೇ ವೇಳೆ ಸಲ್ಮಾನ್​ ಖಾನ್​ ಕೂಡ ಪಾಕಿಸ್ತಾನದ ಕಲಾವಿದರಿಗೆ ಮನ್ನಣೆ ನೀಡುತ್ತಿರುವುದ ಅಭಿಜಿತ್​ ಅವರ ಆಕ್ರೋಶಕ್ಕೆ ಕಾರಣವಾಗಿದೆ. 

Latest Videos

undefined

‘ಅವನು ನನ್ನ ದ್ವೇಷಕ್ಕೂ ಅರ್ಹನಲ್ಲ.  ಅವನು ತನ್ನನ್ನು ತಾನು ದೇವರು ಎಂದುಕೊಂಡಿದ್ದಾನೆ, ಆದರೆ ಹೀಗೆ ಮಾಡುವುದು ಸರಿಯಲ್ಲ.  ಸಲ್ಮಾನ್ ಪಾಕಿಸ್ತಾನಿ ನಟರನ್ನು ಬೆಂಬಲಿಸುತ್ತಾರೆ ಎಂದಿದ್ದಾರೆ. 

ಅಭಿಷೇಕ್​ ಜೊತೆ ವಿಚ್ಛೇದನ ಸುದ್ದಿ ಬೆನ್ನಲ್ಲೇ ಮಗಳ ಜೊತೆ ಐಶ್ವರ್ಯ ರೈ ಡ್ಯಾನ್ಸ್​ ವೈರಲ್​!
 
 

click me!